ಕನ್ನಡ ಸುದ್ದಿ  /  ಜೀವನಶೈಲಿ  /  ಟ್ರಾವೆಲ್‌ ಬ್ಯಾಗ್‌ನಲ್ಲಿ ಎಲ್ಲಾ ವಸ್ತುಗಳನ್ನು ಇಡೋಕೆ ಜಾಗ ಆಗ್ತಿಲ್ವಾ? ನಾವು ಹೇಳಿದಂತೆ ಅರೇಂಜ್‌ ಮಾಡಿದ್ರೆ ಎಲ್ಲವೂ ಸುಲಭ

ಟ್ರಾವೆಲ್‌ ಬ್ಯಾಗ್‌ನಲ್ಲಿ ಎಲ್ಲಾ ವಸ್ತುಗಳನ್ನು ಇಡೋಕೆ ಜಾಗ ಆಗ್ತಿಲ್ವಾ? ನಾವು ಹೇಳಿದಂತೆ ಅರೇಂಜ್‌ ಮಾಡಿದ್ರೆ ಎಲ್ಲವೂ ಸುಲಭ

Travel Tips: ಪ್ರಯಾಣಿಸುವಾಗ ನೀರಿನ ಬಾಟಲ್‌, ಶ್ಯಾಂಪೂ, ಟೀ, ಕಾಫಿ, ಕೂಲ್‌ ಡ್ರಿಂಕ್ಸ್‌ ಹೀಗೆ ಲಿಕ್ವಿಡ್‌ ವಸ್ತುಗಳನ್ನು ಕೂಡಾ ಕೊಂಡೊಯ್ಯಬೇಕು. ಆದರೆ ಕೆಲವೊಮ್ಮೆ ಅಚಾಚುರ್ಯದಿಂದ ಬಾಟಲ್‌ ಕ್ಯಾಪ್‌ ತೆರೆದು ಎಲ್ಲವೂ ಹೊರ ಚೆಲ್ಲುತ್ತದೆ. ಆದ್ದರಿಂದ ನಿಮ್ಮ ಲಿಕ್ವಿಡ್‌ ವಸ್ತುಗಳನ್ನು ಬೇರೆ ವಸ್ತುಗಳ ಜೊತೆ ಸೇರಿಸದೆ ಪ್ರತ್ಯೇಕ ಬ್ಯಾಗ್‌ನಲ್ಲಿ ಕ್ಯಾರಿ ಮಾಡಿ.

ಟ್ರಾವೆಲ್‌ಗೆ ಬ್ಯಾಕ್‌ಪ್ಯಾಕ್‌ ಅರೇಂಜ್‌ ಮಾಡಲು ಟಿಪ್ಸ್‌
ಟ್ರಾವೆಲ್‌ಗೆ ಬ್ಯಾಕ್‌ಪ್ಯಾಕ್‌ ಅರೇಂಜ್‌ ಮಾಡಲು ಟಿಪ್ಸ್‌ (PC: Freepik)

Travel Tips: ಪ್ರತಿದಿನ ಹೊರಗಡೆ ಹೋಗುವಾಗ ಬ್ಯಾಗ್‌ನಲ್ಲಿ ವಾಟರ್‌ ಬಾಟಲ್‌, ಛತ್ರಿ, ಫೋನ್‌, ಪೆನ್‌, ಪುಸ್ತಕ ಹೀಗೆ ಬ್ಯಾಗಿನಲ್ಲಿ ಅವಶ್ಯಕ ವಸ್ತುಗಳನ್ನು ಕೊಂಡೊಯ್ಯುತ್ತೇವೆ. ಅಂತದ್ದರಲ್ಲಿ ಟ್ರಿಪ್‌ ಪ್ಲಾನ್‌ ಮಾಡುವಾಗ ಲಗ್ಗೇಜ್‌ ದುಪ್ಪಟ್ಟಾಗಿರುತ್ತದೆ. ಆದರೆ ಕೆಲವರು ಬ್ಯಾಕ್‌ಪ್ಯಾಕ್‌ನಲ್ಲಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಅರೇಂಜ್‌ ಮಾಡದೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲಾಗದೆ ಕಷ್ಟಪಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಯಾಣಕ್ಕೆ ಅವಶ್ಯಕತೆ ಇರುವ ಎಲ್ಲವನ್ನೂ ಬ್ಯಾಕ್‌ಪ್ಯಾಕ್‌ನಲ್ಲಿ ಒಮ್ಮೇಲೇ ತುರುಕಿದರೆ ಖಂಡಿತ ನೀವು ಅಂದುಕೊಂಡಂತೆ ಎಲ್ಲವನ್ನೂ ಕೊಂಡೊಯ್ಯಲಾಗುವುದಿಲ್ಲ. ಅದರ ಬದಲಿಗೆ ಒಂದೊಂದೇ ವಸ್ತುಗಳನ್ನು ಬ್ಯಾಕ್‌ಪ್ಯಾಕ್‌ನಲ್ಲಿ ಸರಿಯಾಗಿ ಅರೇಂಜ್‌ ಮಾಡಿದರೆ ನೀವು ಹೆಚ್ಚು ಸಾಮಗ್ರಿಗಳನ್ನು ಕ್ಯಾರಿ ಮಾಡಬಹುದು. ಇದಕ್ಕೆ 5 ಟಿಪ್ಸ್‌ ಇವೆ, ಗಮನಿಸಿ

ಚಿಕ್ಕ ಚಿಕ್ಕ ಪೌಚ್‌ಗಳನ್ನು ಬಳಸಿ

ನೀವು ಆಗ್ಗಾಗ್ಗೆ ಟ್ರಾವೆಲ್‌ ಮಾಡುವವರಾದರೆ ನಿಮ್ಮ ಬ್ಯಾಕ್‌ಪ್ಯಾಕ್‌ನಲ್ಲಿ ಸಣ್ಣ ಸಣ್ಣ ಪೌಚ್‌ಗಳನ್ನು ಇಡಬೇಕು. ಹಾಗೇ ಅದನ್ನು ವಿವಿಧ ಭಾಗಗಳನ್ನಾಗಿ ವಿಂಗಡಿಸಿ. ಒಂದು ಬಾತ್‌ರೂಮ್‌/ಟಾಯ್ಲೆಟ್‌ಗೆ, ಮತ್ತೊಂದು ಒಳಉಡುಪುಗಳಿಗೆ, ಜ್ಯುವೆಲರಿಗಳಿಗೆ ಹೀಗೆ ಒಂದೊಂದೇ ಡಿವೈಡ್‌ ಮಾಡಿ ಅದರ ಮೇಲೆ ಸ್ಟಿಕ್ಕರ್‌ ಅಂಟಿಸಿದರೆ ನಿಮ್ಮ ಕೆಲಸ ಸುಲಭ ಹಾಗೇ ಬ್ಯಾಕ್‌ಪ್ಯಾಕ್‌ನಲ್ಲಿ ಸರಿಯಾಗಿ ಅರೇಂಜ್‌ ಮಾಡಬಹುದು.

ಎಲೆಕ್ಟ್ರಾನಿಕ್‌ ಐಟಮ್‌ಗಳಿಗೆ ಪ್ರತ್ಯೇಕ ಕಿಟ್‌

ಪ್ರಯಾಣಿಸುವಾಗ ಮೊಬೈಲ್‌, ಚಾರ್ಚರ್‌, ಇಯರ್‌ ಪ್ಲಗ್‌, ಪವರ್‌ ಬ್ಯಾಂಕ್‌, ಟಾರ್ಚ್‌, ಬ್ಯಾಟರಿಗಳು ಹೀಗೆ ಅನೇಕ ಉಪಯುಕ್ತ ವಸ್ತುಗಳನ್ನು ಕ್ಯಾರಿ ಮಾಡಬೇಕಾಗುತ್ತದೆ. ಆದರೆ ನೀವು ಇದನ್ನೆಲ್ಲಾ ಬಟ್ಟೆಗಳ ಜೊತೆ ಅಥವಾ ಬೇರೆ ವಸ್ತುಗಳ ಜೊತೆ ಒಟ್ಟಿಗೆ ಇಟ್ಟಲ್ಲಿ ನಿಮಗೆ ಬೇಕಾದಾಗ ಸುಲಭವಾಗಿ ಕೈಗೆ ದೊರೆಯದೆ ಇರಬಹುದು. ಇದೆಲ್ಲವನ್ನೂ ತಪ್ಪಿಸಲು ಈ ವಸ್ತುಗಳಿಗಾಗೇ ಪ್ರತ್ಯೇಕ್‌ ಕಿಟ್‌ ಇರಲಿ, ಆಗ ಸುಲಭವಾಗುತ್ತದೆ.

ಬಟ್ಟೆಗಳನ್ನು ರೋಲ್‌ ಮಾಡಿ

ನಿಮ್ಮ ಬ್ಯಾಕ್‌ಪ್ಯಾಕ್‌ನಲ್ಲಿ ಹೆಚ್ಚು ಸ್ಥಳ ಬೇಕೆಂದರೆ ಬಟ್ಟೆಗಳನ್ನು ಮಡಚುವ ಬದಲಿಗೆ ಅವುಗಳನ್ನು ರೋಲ್‌ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಬಟ್ಟೆಗಳನ್ನು ಸುಲಭವಾಗಿ ಬ್ಯಾಗ್‌ನಲ್ಲಿ ಇಡಬಹುದು. ಅದನ್ನು ನೀವು ಬೇಕಾದರೆ ಸುಲಭವಾಗಿ ಹೊರಗೆ ತೆಗೆಯಬಹುದು, ಹಾಗೇ ಬ್ಯಾಗ್‌ನಲ್ಲಿ ಹೆಚ್ಚು ಜಾಗ ಉಳಿಯುತ್ತದೆ. ಪ್ಯಾಂಟ್‌, ಟೀಷರ್ಟ್‌, ಕುರ್ತಾ ಯಾವುದೇ ಇರಲಿ ಎಲ್ಲವನ್ನೂ ರೋಲ್‌ ಮಾಡಿ.

ಚಿಕ್ಕ ಚಿಕ್ಕ ಬ್ಯಾಗ್‌ಗಳು

ಟ್ರಾವೆಲ್‌ ಮಾಡುವಾಗ ಒಂದೇ ಬ್ಯಾಗನ್ನು ಜೊತೆಯಲ್ಲಿ ಕೊಂಡೊಯ್ಯುವ ಬದಲಿಗೆ ಬೇರೆ ಬೇರೆ ಚಿಕ್ಕ ಬ್ಯಾಗ್‌ಗಳನ್ನು ಕೊಂಡೊಯ್ಯುವುದು ಬೆಸ್ಟ್.‌ ಇದರಿಂದ ನಿಮ್ಮ ದೇಹದ ಮೇಲೆ ಸಮಾನವಾಗಿ ತೂಕವನ್ನು ಬ್ಯಾಲೆನ್ಸ್‌ ಮಾಡಬಹುದು. ಒಂದು ಬ್ಯಾಗ್‌ ನಿಮ್ಮ ಬೆನ್ನಿನಲ್ಲಿರಲಿ ಇನ್ನೆರಡನ್ನು ಎರಡೂ ಕಡೆ ಹ್ಯಾಂಗ್‌ ಮಾಡಲು ಕೊಂಡೊಯ್ಯಿರಿ.

ಲಿಕ್ವಿಡ್‌ ವಸ್ತುಗಳು ವಾಟರ್‌ಪ್ರೂಫ್‌ ಬ್ಯಾಗಿನಲ್ಲಿರಲಿ

ಪ್ರಯಾಣಿಸುವಾಗ ನೀರಿನ ಬಾಟಲ್‌, ಶ್ಯಾಂಪೂ, ಟೀ, ಕಾಫಿ, ಕೂಲ್‌ ಡ್ರಿಂಕ್ಸ್‌ ಹೀಗೆ ಲಿಕ್ವಿಡ್‌ ವಸ್ತುಗಳನ್ನು ಕೂಡಾ ಕೊಂಡೊಯ್ಯಬೇಕು. ಆದರೆ ಕೆಲವೊಮ್ಮೆ ಅಚಾಚುರ್ಯದಿಂದ ಬಾಟಲ್‌ ಕ್ಯಾಪ್‌ ತೆರೆದು ಎಲ್ಲವೂ ಹೊರ ಚೆಲ್ಲುತ್ತದೆ. ಜೊತೆಗೆ ಇದರ ಜೊತೆ ಇಡುವ ಬೇರೆ ವಸ್ತುಗಳು ಕೂಡಾ ಹಾಳಾಗುತ್ತವೆ. ಹೀಗಾದರೆ ಪ್ರಯಾಣದ ಮೂಡೇ ಹಾಳಾಗುತ್ತದೆ. ಆದ್ದರಿಂದ ನಿಮ್ಮ ಲಿಕ್ವಿಡ್‌ ವಸ್ತುಗಳನ್ನು ಬೇರೆ ವಸ್ತುಗಳ ಜೊತೆ ಸೇರಿಸದೆ ಪ್ರತ್ಯೇಕ ಬ್ಯಾಗ್‌ನಲ್ಲಿ ಕ್ಯಾರಿ ಮಾಡಿ.

ವಿಭಾಗ