ನೀವು ಪ್ರವಾಸ ಪ್ರಿಯರೇ? ಅಪರಿಚಿತ ಪ್ರದೇಶಗಳಿಗೆ ತೆರಳುವ ಮುನ್ನ ಈ ಟಿಪ್ಸ್‌ ಫಾಲೋ ಮಾಡೋದು ಮರಿಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಪ್ರವಾಸ ಪ್ರಿಯರೇ? ಅಪರಿಚಿತ ಪ್ರದೇಶಗಳಿಗೆ ತೆರಳುವ ಮುನ್ನ ಈ ಟಿಪ್ಸ್‌ ಫಾಲೋ ಮಾಡೋದು ಮರಿಬೇಡಿ

ನೀವು ಪ್ರವಾಸ ಪ್ರಿಯರೇ? ಅಪರಿಚಿತ ಪ್ರದೇಶಗಳಿಗೆ ತೆರಳುವ ಮುನ್ನ ಈ ಟಿಪ್ಸ್‌ ಫಾಲೋ ಮಾಡೋದು ಮರಿಬೇಡಿ

ವಿದೇಶಗಳಿಗೆ ಪ್ರಯಾಣ ಬೆಳೆಸುವುದು ಅನೇಕರ ಕನಸು. ವಿಮಾನ ಹತ್ತಿ ವಿದೇಶಕ್ಕೆ ತೆರಳಬಹುದು ಅನ್ನೋದು ಎಲ್ಲರಿಗೂ ಗೊತ್ತು. ಆದರೆ ವಿದೇಶ ಪ್ರಯಾಣಕ್ಕೆ ಕೇವಲ ಇಷ್ಟೇ ಮಾಹಿತಿ ಸಾಕಾ ಎಂದರೆ ಅದಕ್ಕುತ್ತರ ಇಲ್ಲ. ನೀವು ವಿದೇಶಿ ಪ್ರಯಾಣ ಅಥವಾ ಗೊತ್ತಿಲ್ಲದ ಸ್ಥಳಗಳಿಗೆ ತೆರಳುವಾಗ ಕೆಲವೊಂದು ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ನೀವು ಅಪಾಯಕ್ಕೆ ಸಿಲುಕುವ ಮಾತೇ ಇರೋದಿಲ್ಲ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬಿಡುವಿರದ ಕೆಲಸದ ಜಂಜಾಟದ ನಡುವೆ ಆಗಾಗ ಪ್ರವಾಸಕ್ಕೆ ಹೋಗಿ ಬರೋದು ನಿಜಕ್ಕೂ ಒಂದು ಒಳ್ಳೆಯ ಆಯ್ಕೆಯೇ ಹೌದು. ಆದರೆ ನೀವು ಪ್ರತಿ ಬಾರಿ ಒಂದೊಂದು ಕಡೆ ಪ್ರಯಾಣ ಕೈಗೊಂಡಾಗಲೂ ಹೊಸದೇನಾದರೂ ಅನುಭವ ಪಡೆದುಕೊಳ್ಳುತ್ತೀರಿ. ಹೀಗಾಗಿ ನೀವು ನಿಮ್ಮ ಬಜೆಟ್​ಗೆ ಅನುಗುಣವಾಗಿ ಯಾವುದೇ ರೀತಿಯ ತೊಂದರೆಯೂ ಉಂಟಾಗದಂತೆ ನಿಮ್ಮ ಪ್ರವಾಸವನ್ನು ಮುಂದುವರಿಸಲು ಇಲ್ಲಿ ನಿಮಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳನ್ನು ನೀವು ಪಾಲಿಸಿದಲ್ಲಿ ನಿಮಗೆ ಪ್ರವಾಸದ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗೋದಿಲ್ಲ.

ಆಫ್​ಲೈನ್​ ಮ್ಯಾಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳಿ

ನೀವು ಹೊಸ ಹೊಸ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿ ಇಂಟರ್ನೆಟ್​ ಸೌಕರ್ಯ ಇದೆಯೋ ಇಲ್ಲವೋ ಎಂಬುದರ ಬಗ್ಗೆ ನಿಮಗೆ ಖಾತರಿ ಇರೋದಿಲ್ಲ. ಹೀಗಾಗಿ ನೀವು ಆನ್​​ಲೈನ್​​ ಮ್ಯಾಪ್​ಗಳನ್ನು ನಂಬಿಕೊಂಡು ಹೋದರೆ ಕಷ್ಟವಾಗಬಹುದು. ಹೀಗಾಗಿ ನೀವು ಆಫ್​ಲೈನ್​ ಮ್ಯಾಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡಲ್ಲಿ ಇಂಟರ್ನೆಟ್​ ಸೌಲಭ್ಯ ಇಲ್ಲದ ಸ್ಥಳಗಳಲ್ಲಿಯೂ ನೀವು ದಾರಿ ತಪ್ಪುವುದಿಲ್ಲ. ಗೂಗಲ್​ ಮ್ಯಾಪ್​ನಲ್ಲಿ ಡೌನ್​ಲೋಡ್​ ಆಫ್​ಲೈನ್​ ಆಯ್ಕೆಯ ಮೇಲೆ ಕ್ಲಿಕ್​ ಮಾಡುವ ಮೂಲಕ ಈ ವೈಶಿಷ್ಟ್ಯದ ಲಾಭವನ್ನು ನೀವು ಪಡೆಯಬಹುದಾಗಿದೆ.

ಗೂಗಲ್​ ಟ್ರಾನ್ಸ್​ಲೇಟ್​ನ ಉಪಯೋಗ ಪಡೆದುಕೊಳ್ಳಿ

ಹೊಸ ದೇಶಗಳಿಗೆ ಪ್ರಯಾಣ ಬೆಳೆಸುವಾಗ ಭಾಷೆ ಸಮಸ್ಯೆ ಉಂಟಾಗುವುದು ಸರ್ವೆ ಸಾಮಾನ್ಯ. ಹೀಗಾಗಿ ನೀವು ತೆರಳಿದ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯರೊಂದಿಗೆ ಸಂವಹನ ನಡೆಸುವುದು ತುಂಬಾನೇ ಕಷ್ಟವಾಗುತ್ತದೆ.ಇಂಥ ಸಂದರ್ಭಗಳಲ್ಲಿ ನೀವು ಗೂಗಲ್​ ಟ್ರಾನ್ಸ್​ಲೇಟರ್​ ಬಳಕೆ ಮಾಡಬಹುದು. ನೀವು ಮೈಕ್ರೋಫೋನ್​ ಮೂಲಕವೇ ಟೈಪ್​ ಮಾಡಿ ಅದನ್ನು ಭಾಷಾಂತರಿಸಿಕೊಳ್ಳಬಹುದಾಗಿದೆ. ಇದರಿಂದ ಭಾಷಾ ತಡೆಗೋಡೆಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.

ಯೂನಿವರ್ಸಲ್​ ಟ್ರಾವೆಲ್​ ಅಡಾಪ್ಟರ್ ಖರೀದಿಸಿ

ಒಂದೊಂದು ದೇಶಗಳಲ್ಲಿ ಪ್ಲಗ್​ ಪಾಯಿಂಟ್​ಗಳು ಒಂದೊಂದು ರೀತಿಯಲ್ಲಿ ಇರುತ್ತದೆ. ಹೀಗಾಗಿ ನಿಮ್ಮ ಗ್ಯಾಜೆಟ್​ಗಳನ್ನು ಚಾರ್ಜ್ ಮಾಡುವುದು ಕಷ್ಟವಾಗಬಹುದು. ಇಂಥ ಸಂದರ್ಭದಲ್ಲಿ ನೀವು ಯೂನಿವರ್ಸಲ್​ ಟ್ರಾವೆಲ್​ ಅಡಾಪ್ಟರ್​​ಗಳನ್ನು ಬಳಕೆ ಮಾಡುವುದು ಉತ್ತಮ.

ವಿಮಾನ ಟಿಕೆಟ್​ ದರದಲ್ಲಿ ಉಳಿತಾಯ ಮಾಡಿ

ನೀವು ವಿದೇಶಕ್ಕೆ ಪ್ರಯಾಣ ಬೆಳೆಸುವಾಗ ನಿಮಗೆ ಹೆಚ್ಚು ಖರ್ಚು ವಿಮಾನ ಟಿಕೆಟ್​ ಬುಕ್ಕಿಂಗ್​ ಮಾಡುವಾಗ ಆಗುತ್ತದೆ. ಆದರೆ ನೀವು ವಿಮಾನದ ಟಿಕೆಟ್​ ದರದಲ್ಲಿ ಉಳಿತಾಯ ಮಾಡಲು ಅನೇಕ ಪ್ಲಾನ್​ಗಳಿವೆ .ನೀವು ಟ್ರಾವೆಲ್​ ಅಗ್ರಿಗೇಟರ್​​ನಲ್ಲಿ ಫ್ಲೈಟ್​ ಅಲರ್ಟ್ ಪಡೆದುಕೊಳ್ಳಬಹುದು. ನೀವು ಯಾವ ದಿನಾಂಕದಂದು ಯಾವ ಸ್ಥಳಕ್ಕೆ ಹೋಗಬೇಕು ಎಂಬುದರ ಬಗ್ಗೆ ಖಾತರಿಪಡಿಸಿಕೊಂಡಿದ್ದರೆ ನಿಮಗೆ ಟ್ರಾವೆಲ್​ ಅಗ್ರಿಗೇಟರ್​​ನಲ್ಲಿ ಏರ್​ಲೈನ್​ಗಳ ಟಿಕೆಟ್​ ದರದ ರಿಯಾಯಿತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಆಗ ನೀವು ಅಗ್ಗದ ವಿಮಾನದ ಟಿಕೆಟ್​ ಖರೀದಿ ಮಾಡುವ ಮೂಲಕ ಹಣ ಉಳಿಸಬಹುದು.

ಪ್ರಥಮ ಚಿಕಿತ್ಸಾ ಕಿಟ್

ಪ್ರವಾಸಕ್ಕೆ ತೆರಳುವಾಗ ಪ್ರಥಮ ಚಿಕಿತ್ಸಾ ಕಿಟ್​ ಕೂಡ ಕೊಂಡೊಯ್ಯಬೇಕು. ಇದು ನಿಮಗೆ ತುರ್ತು ಪರಿಸ್ಥಿತಿಯಲ್ಲಿ ತುಂಬಾನೇ ಸಹಾಯಕ್ಕೆ ಬರುತ್ತದೆ. ಸಣ್ಣ ಪುಟ್ಟ ಅನಾರೋಗ್ಯದ ಸಂದರ್ಭದಲ್ಲಿ ನಿಮಗೆ ವೈದ್ಯರ ಬಳಿ ಓಡಬೇಕಾಗಿ ಬರುವುದಿಲ್ಲ.

ಕಡಿಮೆ ಲಗೇಜ್​ ಇರಲಿ

ವೆಕೇಷನ್​ಗೆ ತೆರಳುವ ಸಂದರ್ಭದಲ್ಲಿ ಕೆಲವರು ರಾಶಿ ರಾಶಿ ಲಗೇಜ್​ ಕೊಂಡೊಯ್ಯುತ್ತಾರೆ. ಆದರೆ ನೀವು ಪ್ರವಾಸವನ್ನು ಚೆನ್ನಾಗಿ ಎಂಜಾಯ್​ ಮಾಡಬೇಕು ಅಂದರೆ ಸಣ್ಣ ಲಗೇಜ್​ಗಳನ್ನು ಕೊಂಡೊಯ್ಯುವುದು ಒಳ್ಳೆಯದು. ಅಲ್ಲದೇ ನೀವು ಲಗೇಜ್​ಗಳಿಗೆ ಹೆಚ್ಚುವರಿ ಹಣ ಪಾವತಿ ಮಾಡುವುದನ್ನೂ ತಪ್ಪಿಸಲು ಸಹ ಸಾಧ್ಯವಾಗುತ್ತದೆ.

ಹೆಚ್ಚುವರಿ ಫೋನ್​ ಚಾರ್ಜರ್​ ಇರಲಿ

ನಿಮ್ಮ ಫೋನ್​ಗೆ ಒಂದು ಹೆಚ್ಚುವರಿ ಚಾರ್ಜರ್​ ಕೊಂಡೊಯ್ಯುವುದನ್ನು ಮರೆಯಬೇಡಿ. ಒಂದು ಮೊಬೈಲ್​ ಚಾರ್ಜರ್​ ಹಾಳಾದಲ್ಲಿ ಇನ್ನೊಂದು ಇದೆ ಎಂಬ ಧೈರ್ಯ ಕೂಡ ನಿಮಗೆ ಇರಲಿದೆ. ಹೊಸ ಸ್ಥಳಗಳಿಗೆ ಪ್ರಯಾಣ ಬೆಳೆಸುವಾಗ ಫೋನ್​ ನಿಮ್ಮ ಆಪ್ತಮಿತ್ರವೇ ಆಗಿರುತ್ತದೆ. ಹೀಗಾಗಿ ಚಾರ್ಜರ್​ ವಿಚಾರದಲ್ಲಿ ಹೆಚ್ಚಿನ ಕಾಳಜಿ ಇರಲಿ.

Whats_app_banner