ಏನಿದು ಹಸ್ಬೆಂಡ್‌ ಟೆಸ್ಟ್‌; ಸಾಮಾಜಿಕ ಮಾಧ್ಯಮದಲ್ಲಿ 'ಪತಿ ಪರೀಕ್ಷೆ' ವೈರಲ್ ಆಗಿದ್ದು ಯಾಕೆ?-trending news what is husband test viral on social media women testing their boyfriends tiktok relationship jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಹಸ್ಬೆಂಡ್‌ ಟೆಸ್ಟ್‌; ಸಾಮಾಜಿಕ ಮಾಧ್ಯಮದಲ್ಲಿ 'ಪತಿ ಪರೀಕ್ಷೆ' ವೈರಲ್ ಆಗಿದ್ದು ಯಾಕೆ?

ಏನಿದು ಹಸ್ಬೆಂಡ್‌ ಟೆಸ್ಟ್‌; ಸಾಮಾಜಿಕ ಮಾಧ್ಯಮದಲ್ಲಿ 'ಪತಿ ಪರೀಕ್ಷೆ' ವೈರಲ್ ಆಗಿದ್ದು ಯಾಕೆ?

ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್‌ ಆಗಿದೆ. ಇದರಲ್ಲಿ ಹೊಸ ಚಾಲೆಂಜ್‌ ಆರಂಭ ಆಗಿದೆ. ಮಹಿಳೆಯರು ತಮ್ಮ ಬಾಯ್‌ಫ್ರೆಂಡ್‌ ಜೊತೆಗಿನ ರಿಲೇಶನ್‌ಶಿಪ್‌ ಎಷ್ಟು ಗಟ್ಟಿಯಾಗಿದೆ ಎಂಬುದರ ಪರೀಕ್ಷೆಗಿಳಿದಿದ್ದಾರೆ. ಅದುವೇ ವೈರಲ್‌ ಹಸ್ಬೆಂಡ್‌ ಟೆಸ್ಟ್. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರ್ಲ ಆಗಿದ್ದು ಯಾಕೆ ಎಂದು ನೋಡೋಣ.

ಸಾಮಾಜಿಕ ಮಾಧ್ಯಮದಲ್ಲಿ 'ಪತಿ ಪರೀಕ್ಷೆ' ವೈರಲ್ ಆಗಿದ್ದು ಯಾಕೆ?
ಸಾಮಾಜಿಕ ಮಾಧ್ಯಮದಲ್ಲಿ 'ಪತಿ ಪರೀಕ್ಷೆ' ವೈರಲ್ ಆಗಿದ್ದು ಯಾಕೆ? (Piixel)

ಸೋಷಿಯಲ್‌ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡ್‌ ಆರಂಭವಾಗುತ್ತದೆ. ಅದಕ್ಕೆ ತಕ್ಕನಾಗಿ ಜನರು ಕೂಡಾ ಪ್ರತಿಕ್ರಿಯೆ ನೀಡುತ್ತಾರೆ. ಈಗೀಗ ವೈರಲ್‌ ಆಗಲು ದಿನಗಳು ಬೇಕಿಲ್ಲ. ನಿಮಿಷ, ಕ್ಷಣದ ಲೆಕ್ಕದಲ್ಲಿ ವ್ಯಕ್ತಿ ಅಥವಾ ಯಾವುದೇ ಕಾನ್ಸೆಪ್ಟ್‌ ವೈರಲ್‌ ಆಗಿಬಿಡುತ್ತದೆ. ಇದಕ್ಕೆ ಹೊಸ ಸೇರ್ಪಡೆ ‘ಹಸ್ಬೆಂಡ್‌ ಟೆಸ್ಟ್’ (Husband Test). ಹೆಣ್ಮಕ್ಕಳು ತಮ್ಮ ಬಾಯ್‌ಫ್ರೆಂಡ್‌ ಅನ್ನು ಪರೀಕ್ಷೆ ಮಾಡಲು ಈ ಹೊಸ ಚಾಲೆಂಜ್‌ ಶುರು ಮಾಡಿದ್ದಾರೆ. ತಮ್ಮ ರಿಲೇಶನ್‌ಶಿಪ್‌ ಎಷ್ಟು ಗಟ್ಟಿ ಇದೆ ಮತ್ತು ತಮ್ಮಬಾಯ್‌ಫ್ರೆಂಡ್‌ ಆ ಸಂಬಂಧದಲ್ಲಿ ಎಷ್ಟು ಆಳವಾಗಿ ಬೇರೂರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ನಾರಿಯರ ಹೊಸ ತಂತ್ರವಿದು.

ಆ ಸಂಬಂಧದ ಕುರಿತು ಬಾಯ್‌ಫ್ರೆಂಡ್‌ಗಿರುವ ಬದ್ಧತೆಯನ್ನು ಪರೀಕ್ಷಿಸುವ ಹೊಸ ಸವಾಲು ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ. ಈಗಾಗಾಲೇ ಹಲವು ನೀರೆಯರು 'ಹಸ್ಬೆಂಡ್ ಟೆಸ್ಟ್' ಮಾಡಿ ತಮ್ಮ ಬಾಯ್‌ಫ್ರೆಂಡ್‌ ಕುರಿತು ತಿಳಿದುಕೊಂಡಿದ್ದಾರೆ. ತಮ್ಮ ಜೊತೆಗಾರನ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಕುತೂಹಲದಿಂದ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್‌ ಮಾಡುತ್ತಿದ್ದಾರೆ. ವಿಶೇಷವಾಗಿ ಭಾರತದಲ್ಲಿ ಬ್ಯಾನ್‌ ಆಗಿರುವ ಟಿಕ್‌ಟಾಕ್‌ನಲ್ಲಿ ಇಂಥಾ ಪೋಸ್ಟ್ ಟ್ರೆಂಡ್‌ ಆಗುತ್ತಿದೆ. ಹಾಗಿದ್ದರೆ ಈ ಹೊಸ ಟ್ರೆಂಡ್ ಏನು? ಇದಕ್ಕೆ 'ಹಸ್ಬೆಂಡ್ ಟೆಸ್ಟ್' ಎಂಬ ಹೆಸರೇಕೆ? ತಿಳಿಯೋಣ ಬನ್ನಿ.

ಹಸ್ಬೆಂಡ್‌ ಟೆಸ್ಟ್‌ / ಪತಿ ಪರೀಕ್ಷೆ ವೈರಲ್ ಆಗಿದ್ದು ಯಾಕೆ?

ಈ ಟ್ರೆಂಡ್‌ನ ಉದ್ದೇಶ ಇಷ್ಟೇ. ಮಹಿಳೆಯರು ತಮ್ಮ ಬಾಯ್‌ ಫ್ರೆಂಡ್‌ ಜೊತೆಗೆ ಸಂಭಾಷಣೆ ನಡೆಸುವ ಸಮಯದಲ್ಲಿ ಆತನನ್ನು 'ಗಂಡ' ಅಥವಾ ಹಸ್ಬೆಂಡ್‌ ಎಂದು ಕರೆಯುತ್ತಾರೆ. ಆಗ ಅವರ ಭಾವಿ ಸಂಗಾತಿ ಅಥವಾ ಬಾಯ್‌ಫ್ರೆಂಡ್‌ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದೇ ಅವರ ಉದ್ಧೇಶ. ಅಲ್ಲದೆ ಈ ಕ್ಷಣದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.‌

ಇದನ್ನೂ ಓದಿ | ಬ್ಯೂಟಿಫುಲ್‌ ಬಾಲಿಯಲ್ಲಿ ಪತಿ ಜತೆ ನನ್ನರಸಿ ರಾಧೆ ಧಾರಾವಾಹಿ ಖ್ಯಾತಿಯ ಕೌಸ್ತುಭ ಮಣಿ ಹನಿಮೂನ್; ಹೀಗಿವೆ ಫೋಟೋಗಳು

ಒಂದು ವೇಳೆ ಬಾಯ್‌ಫ್ರೆಂಡ್‌ ಅನ್ನು 'ಗಂಡ' ಎಂದು ಕರೆದ ನಂತರವೂ ಆತ ನಗುತ್ತಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಆ ಸಂಬಂಧದ ಮೇಲೆ ಆತನಿಗಿರುವ ಬದ್ಧತೆ ಹುಡುಗಿಗೆ ತಿಳಿಯುತ್ತದೆ. ಒಂದು, ಅವನು ತನ್ನ ಗೆಳತಿಯನ್ನು ತಿದ್ದಿ ತಾನು ಗಂಡ ಅಲ್ಲ ಎನ್ನುವ ಮೂಲಕ ನಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಿದರೆ, ಅವನು ದೀರ್ಘಾವಧಿಯ ಸಂಬಂಧದಲ್ಲಿ ಉಳಿಯಲ್ಲ ಎಂದು ಸೂಚಿಸುತ್ತದೆ.

'ಪತಿ ಪರೀಕ್ಷೆ' ಟ್ರೆಂಡ್ ಶುರುವಾಗಿದ್ದು ಹೇಗೆ?

ಕೆಂಜಿ ಗ್ರೀನ್ ಎಂಬ ಮಹಿಳೆ, ತನ್ನ ಗೆಳೆಯನ ಕುರಿತು ತಿಳಿಯಲು ಉದ್ದೇಶಪೂರ್ವಕವಾಗಿ ಆತನಿಗೆ ವಿಡಿಯೋ ಕಾಲ್ ಮಾಡುತ್ತಾಳೆ. ಆತನ ಪ್ರತಿಕ್ರಿಯೆಯ ವಿಡಿಯೋವನ್ನು ಪೋಸ್ಟ್ ಮಾಡುವುದರೊಂದಿಗೆ 'ಹಸ್ಬೆಂಡ್ ಟೆಸ್ಟ್' ಟ್ರೆಂಡ್ ಪ್ರಾರಂಭವಾಯಿತು. ಆದರೆ, ಆಕೆಯ ಮೊದಲ ಪ್ರಯತ್ನ ಸಫಲ ಫಲಿತಾಂಶ ಕೊಡಲಿಲ್ಲ. ಆಕೆ ತನ್ನ ಬಾಯ್‌ಫ್ರೆಂಡ್‌ ಅನ್ನು ಗಂಡ (ಹಸ್ಬೆಂಡ್‌) ಎಂದು ಕರೆದಾಗ, ಆತ “ನಾನು ನಿನ್ನ ಗಂಡನಲ್ಲ” ಎಂದು ಪ್ರತಿಕ್ರಿಯಿಸುತ್ತಾನೆ. ಅಲ್ಲದೆ ವಿಡಿಯೋ ಕಾಲ್‌ ಕೂಡಾ ಸ್ವಿಚ್ ಆಫ್ ಮಾಡುತ್ತಾನೆ. ಈ ವಿಡಿಯೋಗ ಅನೇಕ ನೆಟಿಜನ್‌ಗಳು ಪ್ರತಿಕ್ರಿಯೆ ನೀಡಿದ್ದಾರೆ.

ಕೆಂಜಿ ಗ್ರೀನ್ ತನ್ನ ಬಾಯ್‌ಫ್ರೆಂಡ್‌ಗೆ ಆ ರಿಲೇಶನ್‌ಶಿಪ್‌ ಮೇಲೆ ಬದ್ಧತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಅನೇಕ ಜನರು ಟಿಕ್‌ಟಾಕ್‌ನಲ್ಲಿ ಇದೇ ರೀತಿಯ ವಿಡಿಯೊಗಳನ್ನು ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಹೀಗಾಗಿ 'ಹಸ್ಬೆಂಡ್ ಟೆಸ್ಟ್' ಟ್ರೆಂಡ್‌ ಆಗಿದೆ.

ಇಂಥಾ ವಿಡಿಯೋವನ್ನು ಹಲವರು ಶೇರ್‌ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ವಿರೋಧವೂ ಇದೆ. ಖಾಸಗಿ ವಿಷಯವನ್ನು ಜಗಜ್ಜಾಹಿರು ಮಾಡಬೇಕಾದ ಅನಿವಾರ್ಯವಿಲ್ಲ. ತಮ್ಮೊಳಗೆ ಚರ್ಚೆಯಾಗಬೇಕಾದ ವಿಷಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್‌ ಮಾಡಬೇಕಿಲ್ಲ ಎಂಬುದಾಗಿ ಹಲವರು ಹೇಳುತ್ತಿದ್ದಾರೆ.