Kurmasana: ಬೆನ್ನು ನೋವಿನಿಂದ ಹೈರಾಣಾಗಿ ಹೋಗಿದ್ದೀರಾ? ಹಾಗಾದ್ರೆ ಕೂರ್ಮಾಸನ ಮಾಡಿ, ನಿಮ್ಮ ಸಮಸ್ಯಗೆ ಪರಿಹಾರ ಕಂಡುಕೊಳ್ಳಿ
Kurmasana: ಕೂರ್ಮಾಸನ ಹೆಸರೇ ಸೂಚಿಸುವಂತೆ ಆಮೆಯಂತೆ ಕಾಣುವ ಈ ಆಸನ ತುಂಬಾ ಪ್ರಯೋಜನಗಳನ್ನು ಹೊಂದಿದೆ. ನೀವೂ ಪ್ರತಿನಿತ್ಯ ಮನೆಯಲ್ಲಿ ಈ ಆಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಪಡೆಯಬಹುದು ಎಂಬ ವಿಚಾರವನ್ನು ನಾವಿಲ್ಲಿ ತಿಳಿಸಿದ್ದೇವೆ ಗಮನಿಸಿ. ನೀವೂ ಇದನ್ನು ಅನುಸರಿಸಿ
ಕೂರ್ಮಾಸನವನ್ನು ನೀವು ಮಾಡಬಹುದು. ಇದು ತುಂಬಾ ಸುಲಭವಲ್ಲದಿದ್ದರೂ ಪ್ರಯತ್ನ ಮಾಡಿದರೆ ಕಲಿಯಬಹುದಾದ ಆಸನವಾಗಿದೆ. ನೀವು ನಿತ್ಯವೂ ಪ್ರಯತ್ನ ಪಟ್ಟರೆ ನಿಮ್ಮ ದೇಹ ನಿಮಗೆ ಸಹಕರಿಸುತ್ತದೆ ಇಲ್ಲವಾದರೆ ಅಷ್ಟೊಂದು ಸಹಕಾರ ನೀಡುವುದಿಲ್ಲ. ಇದು ಕೇವಲ ಯೋಗಾಸನ ಮಾಡುವಾಗ ಮಾತ್ರವಲ್ಲ. ಇನ್ನಿತರ ಕೆಲಸಗಳೂ ಸಹ ಹೀಗೆ. ನೀವು ರೂಢಿಯಲ್ಲಿಟ್ಟುಕೊಂಡರೆ ಅದು ಬೇಗ ಸಾಧ್ಯವಾಗುತ್ತದೆ. ಕುಳಿತುಕೊಂಡು ಈ ಚಿತ್ರದಲ್ಲಿ ಕಾಣುವಂತೆ ಮುಂದೆ ಬಾಗಬೇಕು ಆಗ ಕೂರ್ಮಾಸನ ಆಗುತ್ತದೆ.
ಬೆನ್ನಿನ ಒತ್ತಡ ಕಡಿಮೆ ಮಾಡುತ್ತದೆ
ನೀವು ನಿತ್ಯವೂ ಯಾವುದೇ ದೈಹಿಕ ಚಟುವಟಿಕೆ ಇಲ್ಲದ ಕೆಲಸ ಮಾಡುತ್ತಿದ್ದರೆ, ಅಂದರೆ ಕುಳಿತೇ ಕೆಲಸ ಮಾಡುತ್ತಿದ್ದರೆ ಈ ಒಂದು ಆಸನವನ್ನು ಪ್ರಯತ್ನಿಸಿ. ನಿಮ್ಮ ಒತ್ತಡ ಕಡಿಮೆ ಆಗುತ್ತದೆ. ನಿಮಗೆ ಬೆನ್ನು ನೋವಿದೆ ಎಂದಾದರೆ ಅದು ಕೂಡ ಕಡಿಮೆ ಆಗುತ್ತದೆ. ದೇಹದಾದ್ಯಂತ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಸಂತಾನೋತ್ಪತ್ತಿಗೆ ಇದು ಸಹಕಾರವಾಗುತ್ತದೆ.
ದಿನವೂ ಪ್ರಯತ್ನಿಸಿ
ಕಾಲನ್ನು ಉದ್ದವಾಗಿ ಚಾಚುವುದರಿಂದ ನಿಮ್ಮ ಬೆನ್ನು ಹಾಗೂ ಕಾಲಿನ ನಡುವೆ ಎಳೆತ ಉಂಟಾಗುತ್ತದೆ. ಇದರಿಂದ ನಿಮಗೆ ಮೊದ, ಮೊದಲ ದಿನಗಳಲ್ಲಿ ತೊಂದರೆ ಆಗಬಹುದು. ಕಾಲು ಅಥವಾ ತೊಡೆ ಭಾಗದಲ್ಲಿ ಬಿರಿದಂತೆ ಅನುಭವ ಆಗಬಹುದು. ಆ ಕಾರಣಕ್ಕೆ ಒಂದೇ ದಿನಕ್ಕೆ ನೀವು ಇದನ್ನು ಸರಿಯಾಗಿ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಒಂದು ದಿನ ನೋವಾಗಿದೆ ಎಂದು ಮತ್ತೆ ಬಿಟ್ಟರೆ ಆಗುವುದಿಲ್ಲ.
ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ
ನೀವು ಉಸಿರಾಟದ ತೊಂದರೆಯನ್ನು ಅನುಭವಿಸುತ್ತ ಇದ್ದರೆ ಅದಕ್ಕೆ ಈ ಆಸನ ಪರಿಹಾರ ನೀಡುತ್ತದೆ. ನೀವು ಈ ಆಸನವನ್ನು ಮಾಡುವಾಗ ಎದೆಯ ಭಾಗ ಅಗಲವಾಗುತ್ತದೆ. ಆಗ ನಿಮ್ಮ ಉಸಿರಾಟಕ್ಕೆ ಸಹಕಾರವಾಗುತ್ತದೆ. ಎದೆ ಮತ್ತು ಪಕ್ಕೆಲುಬುಗಳನ್ನು ವಿಸ್ತಾರವಾಗಿಸಲು ಈ ಆಸನ ಉತ್ತಮವಾಗಿದೆ. ನೀವು ನಿಮ್ಮ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುತ್ತೀರಿ.
ನಿದ್ರಾಹೀನತೆಗೆ ಪರಿಹಾರ
ನರಗಳನ್ನು ವಿಶ್ರಾಂತಿ ಮಾಡುವ ಮೂಲಕ ಮತ್ತು ಮನಸ್ಸನ್ನು ಶಾಂತಗೊಳಿಸುವ ಮೂಲಕ ಇದು ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ. ನಿಮಗೆ ನಿದ್ರೆ ಬರದೇ ರಾತ್ರಿ ಇಡೀ ಹಾಸಿಗೆಯಲ್ಲೇ ಉಳ್ಳಾಡುತ್ತಿರುವಂತಾದರೆ ಈ ಆಸನವನ್ನು ಮಾಡಿ ನೋಡಿ. ಇದು ನಿಮಗೆ ಪರಿಹಾರ ನೀಡುತ್ತದೆ. ಆದಷ್ಟು ಹಸಿ ಹೊಟ್ಟೆಯಲ್ಲೇ ನೀವು ಇದನ್ನು ಮಾಡಬೇಕು. ಈಗ ನಾನು ಮಲಗುತ್ತೇನೆ. ನನಗೆ ನಿದ್ರೆ ಬರುತ್ತಿಲ್ಲ ಎಂದು ಊಟವಾದ ನಂತರದಲ್ಲಿ ಈ ಆಸನವನ್ನು ಮಾಡಕೂಡದು.
ನಿತ್ಯ ನಮಸ್ಕಾರ
ಸೂರ್ಯನಿಗೆ ನಮಸ್ಕರಿಸುವುದನ್ನು ಅಥವಾ ಪೂಜಿಸುವುದನ್ನು ಸೂರ್ಯ ನಮಸ್ಕಾರ ಎಂದು ಕರೆಯಲಾಗುತ್ತದೆ. ಈ ಯೋಗ ಮಾಡುವುದರಿಂದ ದೇಹದಲ್ಲಿರುವ ನಾನಾ ಸಮಸ್ಯೆಗಳನ್ನು ದೂರ ಮಾಡಬಹುದು. ಈ ವಿಧಾನವು ಅನಾದಿ ಕಾಲದಿಂದಲೂ ಇದೆ. ಹಿಂದೆ ಋಷಿಮುನಿಗಳು ಸಹ ಯೋಗ ಮಾಡುತ್ತಿದ್ದರು. ನಂತರದ ಪೀಳಿಗೆಯೂ ಇದನ್ನು ಅನುಸರಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಇನ್ನು ಯೋಗದ ಬಗ್ಗೆ ಮಾಹಿತಿ ಹಾಗೂ ಅದರ ಪ್ರಯೋಜನಗಳನ್ನು ನಾವು ಪಡೆಯುತ್ತಿದ್ದೇವೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದು ಸಹ ಒಂದು ಉತ್ತಮ ರೂಢಿ.
ವಿಭಾಗ