ರಾಗಿ ಅಥವಾ ಜೋಳದ ಮುದ್ದೆ ಜೊತೆ ಅದ್ದಿ ತಿನ್ನಲು ಈ ರೀತಿ ರುಚಿಕರವಾದ ಶೇಂಗಾ ಸಾರು ಮಾಡಿ ನೋಡಿ
ನೀವು ಯಾವಾಗಲೂ ಮುದ್ದೆ ಉಣ್ಣುವಾಗ ಬರಿ ಸೊಪ್‌ಸಾರು, ಉಪ್‌ಸಾರು ಇವುಗಳನ್ನಷ್ಟೇ ಟ್ರೈ ಮಾಡಿರ್ತೀರಾ. ಆದ್ರೆ ಶೇಂಗಾದಿಂದ ಮಾಡಿದ ಸಾರನ್ನು ಒಮ್ಮೆ ತಿಂದು ನೋಡಿದ್ರೆ ಅದರ ರುಚಿಗೆ ನೀವು ಮಾರು ಹೋಗ್ತೀರಾ. ಮನೆಯಲ್ಲಿ ಒಮ್ಮೆ ಈ ವಿಧಾನ ಬಳಸಿ ಶೇಂಗಾ ಸಾರು ಮಾಡಿ ನೋಡಿ.
ಜೋಳದ ಮುದ್ದೆ ಅಥವಾ ರಾಗಿ ಮುದ್ದೆ ಯಾವುದೇ ಇರಲಿ ಅದಕ್ಕೆ ನೀವು ಈ ರೀತಿ ಶೇಂಗಾ ಸಾಂಬಾರ್ ಮಾಡಿ ತಿನ್ನಬಹುದು. ಇದನ್ನು ಮಾಡಲು ಯಾವುದೇ ವಿಶೇಷ ತರಕಾರಿಗಳ ಅಗತ್ಯವಿಲ್ಲ. ಶೇಂಗಾ ಒಂದನ್ನೇ ಬಳಸಿ ಈ ಸಾರನ್ನು ಮಾಡಬಹುದು. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ನೀವು ದಿನಾ ಒಂದೇ ರೀತಿ ಸಾರು ತಿಂದು ತಿಂದು ಬೋರಾಗಿದ್ದರೆ ಈ ರೀತಿ ಸಾರು ಮಾಡಿ ತಿನ್ನಿ. ದಿನವೂ ತಿನ್ನುವ ಸಾಂಬಾರಿಗಿಂತ ಇದು ಒಂದು ಚೂರು ಭಿನ್ನ ಎನಿಸುತ್ತದೆ. ಈ ರೀತಿ ಸಾಂಬಾರ್ ಮಾಡಲು ನಿಮಗೂ ಇಷ್ಟ ಇದ್ದರೆ ನಾವು ಇಲ್ಲಿ ನೀಡಿದ ಸಾಮಗ್ರಿಗಳನ್ನು ಮೊದಲು ಒಟ್ಟುಗೂಡಿಸಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ
ಶೇಂಗಾ
ಕರಿಬೇವಿನ ಸೊಪ್ಪು
ಕೊತ್ತಂಬರಿ ಸೊಪ್ಪು
ಶುಂಠಿ
ಸಾಸಿವೆ
ಜೀರಿಗೆ
ಉಪ್ಪು
ಬೆಲ್ಲ
ಎಣ್ಣೆ ತೆಗೆದುಕೊಳ್ಳಿ
ಹುಣಸೆ ಹಣ್ಣು
ಮಾಡುವ ವಿಧಾನ
ಎಣ್ಣೆ ಮೊದಲಿಗೆ ನೀವು ಕಾಯಿತುರಿಯನ್ನು ತುರಿದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ ಹಾಗೂ ಸ್ವಲ್ಪ ಜೀರಿಗೆ ಇವೆಲ್ಲವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿ ರೆಡಿ ಮಾಡಿಟ್ಟುಕೊಂಡ ಮಿಕ್ಸ್ ಗೆ ನೀವು ಶೇಂಗಾ ಪುಡಿಯನ್ನು ಹಾಕಬೇಕು.
ಶೇಂಗಾಪುಡಿ ರೆಡಿ ಮಾಡಿ
ಶೇಂಗಾ ಪುಡಿಯನ್ನು ನೀವು ಮನೆಯಲ್ಲಿ ತಯಾರಿಸಬಹುದು. ಮೊದಲಿಗೆ ಒಂದು ತವಾದಲ್ಲಿ ಎಣ್ಣೆ ಹಾಕದೆ ಶೇಂಗಾ ಕಾಳುಗಳನ್ನು ಹುರಿದುಕೊಳ್ಳಿ. ಇದರ ಬಣ್ಣ ಬದಲಾಗಬೇಕು ಅಲ್ಲಿವರೆಗೂ ಹುರಿದುಕೊಳ್ಳಿ. ನಂತರ ಅದು ಸಿಪ್ಪೆ ಬಿಟ್ಟ ನಂತರ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನೂ ಸಹ ತರಿತರಿಯಾಗಿ ರುಬ್ಬಿಕೊಂಡರೆ ಸಾಕು. ನಂತರ ನೀವು ಮೊದಲು ಬೀಸಿಕೊಂಡ ಕಾಯಿ ತುರಿ ಮಿಶ್ರಣಕ್ಕೆ ಇದನ್ನು ಸೇರಿಸಬೇಕು. ಈಗ ಒಂದು ಸಾಂಬಾರ್ ಮಾಡುವ ಪಾತ್ರೆಯಲ್ಲಿ ಮೊದಲಿಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ ಅದಾದ ಮೇಲೆ ಕಾಯಿತುರಿ, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ.
ಇದು ಬಾಡಿದ ನಂತರ ಇದಕ್ಕೆ ಶೇಂಗಾ ಪುಡಿಯನ್ನು ಹಾಕಿ ಚೆನ್ನಾಗಿ ಎಣ್ಣೆ ಬಿಡುವವರೆಗೂ ಇದನ್ನು ಆಡಿಸುತ್ತಾ ಇರಿ. ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಇದಕ್ಕೆ ಮಿಕ್ಸ್ ಮಾಡಿಕೊಂಡು ಚೂರು ಬೆಲ್ಲ ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡರೆ ಈ ಸಾಂಬಾರ್ ರೆಡಿಯಾಗುತ್ತದೆ. ಬಸ್ಸಾರಿನ ಬದಲು ಒಮ್ಮೆ ಈ ಶೇಂಗಾ ಸಾಂಬಾರನ್ನು ಟ್ರೈ ಮಾಡಿ ನೋಡಿ. ಆಗಾಗ ಖಂಡಿತವಾಗಿಯೂ ಮಾಡಿಕೊಂಡು ತಿನ್ನೋಣ ಎನಿಸುವಂತೆ ಇದರ ರುಚಿ ಇರುತ್ತದೆ.
ಇದನ್ನೂ ಓದಿ: ಕಾಶಿ ಹಲ್ವಾದ ಟೇಸ್ಟ್‌ಗೆ ಫಿದಾ ಆಗಿದ್ದೀರಾ, ಮತ್ತೆ ಮತ್ತೆ ತಿನ್ನಬೇಕು ಅನ್ನಿಸ್ತಿದ್ಯಾ; ಸಿಂಪಲ್ ಆಗಿ ಮನೆಯಲ್ಲೇ ಮಾಡಬಹುದು ನೋಡಿ
ವಿಭಾಗ