Tuesday Motivation: ಪ್ರಕೃತಿ ಕಲಿಸುವ ಪಾಠ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವಷ್ಟು ಧೈರ್ಯ ಕೊಡುತ್ತದೆ-tuesday motivation beautiful quotes for 26th march 2024 inspirational story in kannada rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tuesday Motivation: ಪ್ರಕೃತಿ ಕಲಿಸುವ ಪಾಠ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವಷ್ಟು ಧೈರ್ಯ ಕೊಡುತ್ತದೆ

Tuesday Motivation: ಪ್ರಕೃತಿ ಕಲಿಸುವ ಪಾಠ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವಷ್ಟು ಧೈರ್ಯ ಕೊಡುತ್ತದೆ

Tuesday Motivation: ಪ್ರಕೃತಿಯು ನಮಗೆ ಎಷ್ಟೋ ವಿಚಾರಗಳನ್ನು ಹೇಳುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಒಮ್ಮೆ ನಮ್ಮನ್ನು ಪೋಷಿಸುತ್ತಿರುವ ಪ್ರಕೃತಿಯು ನಮಗೆ ಹೇಳಲು ಹೊರಟಿರುವ ವಿಚಾರಗಳನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಅರ್ಧ ಸಮಸ್ಯೆಗಳೇ ಕಳೆದಂತೆ.

ಮಂಗಳವಾರದ ಸ್ಫೂರ್ತಿಮಾತು
ಮಂಗಳವಾರದ ಸ್ಫೂರ್ತಿಮಾತು

Tuesday Motivation: ಜೀವನದಲ್ಲಿ ಕಷ್ಟಗಳು ಬಂದರೆ ಅದರಲ್ಲೇ ಕಳೆದುಹೋಗುತ್ತೇವೆ. ಆದರೆ ನಮಗೆ ಪ್ರಕೃತಿಯೇ ಸಾಕಷ್ಟು ಪರಿಹಾರಗಳನ್ನು ನೀಡುತ್ತದೆ, ಎಷ್ಟೋ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೀವನವನ್ನು ಅರ್ಥ ಮಾಡಿಸುತ್ತದೆ. ಆದರೆ ನಮಗೆ ಬಂದ ಕಷ್ಟವನ್ನು ದಾಟಿ, ಅದನ್ನು ಎದುರಿಸಿ ನಾವು ಮುಂದೆ ಹೋದರೆ ನಮಗೆ ಜೀವನದಲ್ಲಿ ಸಾಕಷ್ಟು ವಿಚಾರಗಳು ಅರ್ಥವಾಗುತ್ತದೆ.

ಒಬ್ಬ ವ್ಯಾಪಾರಿಯು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರದಲ್ಲಿರುತ್ತಾನೆ. ಕೆಲವು ದಿನಗಳಿಂದ ಆತನಿಗೆ ಸರಿಯಾಗಿ ವ್ಯಾಪಾರವಾಗಿರುವುದಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬ ಸನ್ಯಾಸಿ ಬಳಿ ಹೋಗಿ ಪರಿಷ್ಕಾರ ಕೇಳುತ್ತಾನೆ. ತನಗಿರುವ ಸಮಸ್ಯೆಯನ್ನು ಆತನ ಬಳಿ ಹೇಳಿಕೊಂಡು ಅದಕ್ಕೆ ಏನಾದರೂ ಪರಿಹಾರ ಹೇಳುವಂತೆ ಕೇಳಿಕೊಳ್ಳುತ್ತಾನೆ. ಸಂಕಟದ ಸರಮಾರೆಯಲ್ಲಿ ಬೇಯುತ್ತಿದ್ದೇನೆ. ನಾನು ಸಾಲ ಮಾಡಿದ್ದೇನೆ. ಈಗ ನನ್ನ ಬಳಿ ಯಾರೂ ಬರುತ್ತಿಲ್ಲ. ನನಗೆ ಎಲ್ಲರೂ ಬಹಳ ಸಮಸ್ಯೆ ನೀಡುತ್ತಿದ್ದಾರೆ ಎಂದು ಆ ವ್ಯಾಪಾರಿ ನೋವು ತೋಡಿಕೊಳ್ಳುತ್ತಾನೆ. ಅದರನ್ನು ಕೇಳಿದ ಸನ್ಯಾಸಿ, ನೀನು ಈ ರೀತಿ ಕಷ್ಟಪಡಲು ಕಾರಣ ನೀನು ಮಾಡಿದ ಸಾಲವಲ್ಲ, ನಿನ್ನ ಮನಸ್ಸು ಎನ್ನುತ್ತಾನೆ. ಹಾಗಾದರೆ ಅದರಿಂದ ಹೊರ ಬರಲು ಏನು ಮಾಡಬೇಕು ಎಂದು ವ್ಯಾಪಾರಿ ಕೇಳುತ್ತಾನೆ.́

ಸಮಸ್ಯೆಗಳನ್ನು ಪೋಷಿಸಬೇಡಿ

ಮೊದಲು ನಿನ್ನ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೋ. ಆಗ ಕಷ್ಟ ಸ್ವಲ್ಪವೂ ನಿನ್ನ ಬಳಿ ಸುಳಿಯುವುದಿಲ್ಲ. ಕಷ್ಟ ಬಂದಾಗ ಮನಸ್ಪೂರ್ತಿ ಅದನ್ನು ಒಪ್ಪಿಕೊಂಡರೆ ಕಷ್ಟಗಳು ನಿನ್ನಲ್ಲೇ ಉಳಿದುಕೊಳ್ಳುತ್ತವೆ. ಇಲ್ಲ ನಾನು ಇದನ್ನು ಎದುರಿಸಬೇಕು, ಕಷ್ಟಗಳನ್ನು ಎದುರಿಸಿ, ಮತ್ತೆ ನಾನು ಮೊದಲಿನಂತೆ ಆಗುತ್ತೇನೆ. ಈಗ ಈ ಕಷ್ಟಗಳನ್ನು ಎದುರಿಸಿದರೆ ಮೇಲೆ ಬರಬಹುದು. ಆಗ ನಿನ್ನನ್ನು ಬಿಟ್ಟು ಹೋದವರು ಮತ್ತೆ ನಿನ್ನ ಸುತ್ತುವರೆಯುತ್ತಾರೆ ಎಂದು ಸನ್ಯಾಸಿ ಒಂದು ಹೂವಿನ ಗಿಡವನ್ನು ತೋರಿಸುತ್ತಾನೆ.

ಬೋಗನ್‌ ವಿಲ್ಲಾ ಎಂದು ಕರೆಯಲ್ಪಡುವ ಈ ಮರ ಒಣಗಿ ಹೋಗಿದೆ. ಇದರ ಹೂವು ಎಲ್ಲರನ್ನು ಆಕರ್ಷಿಸುತ್ತದೆ. ಅದಕ್ಕೆ ನೀರು ಹಾಕದಿದ್ದರೂ, ಹಾಕಿದರೂ ಹೂವು ಬಿಡುತ್ತದೆ. ಆದರೆ ಒಂದು ವೇಳೆ ಯಾರಾದರೂ ಅದಕ್ಕೆ ನೀರು ಹಾಕಿ ಪೋಷಿಸಿದರೆ ಅದು ಇನ್ನಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಸಮಸ್ಯೆಗಳು ಕೂಡಾ ಹಾಗೆಯೇ, ನೀನು ಅದನ್ನು ಪೋಷಿಸಿದರೆ ಅದು ಇನ್ನಷ್ಟು ಹೆಚ್ಚಾಗುತ್ತದೆ, ಬೆಳೆಯುತ್ತಲೇ ಹೋಗುತ್ತದೆ. ಅದರ ಬದಲಿಗೆ ಸಮಸ್ಯೆಯನ್ನು ಎದುರಿಸಿದರೆ ಅದು ತನ್ನಷ್ಟಕ್ಕೆ ತಾನೇ ಹಿಂದೆ ಸರಿಯುತ್ತದೆ ಎನ್ನುತ್ತಾನೆ. ಸನ್ಯಾಸಿಯ ಮಾತನ್ನು ಕೇಳಿದ ವ್ಯಾಪಾರಿ, ಅವರ ಮಾತನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ.

ಪ್ರಕೃತಿ ನಮಗೆ ಅನೇಕ ಮಾರ್ಗಗಳನ್ನು ತೋರಿಸುತ್ತದೆ. ದಟ್ಟವಾದ ಹೂವುಗಳ ಸೌಂದರ್ಯವನ್ನು ನೋಡಿ ಯಾರಾದರೂ ನೀರು ಹಾಕಿದಾಗ ಆ ಬೋಗನ್ ವಿಲ್ಲಾ ಸುಂದರವಾಗುತ್ತದೆ. ಅದು ಪ್ರಕೃತಿ ನಮಗೆ ಕಲಿಸಿದ ಪಾಠ. ನೀವೂ ಜೀವನದಲ್ಲಿ ಮುನ್ನಡೆಯಿರಿ. ನಿಮ್ಮ ಸಂಕಟಗಳನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ನೀವೇ ಸರಿಯಾದ ದಾರಿ ಹುಡುಕಿ. ನೀನು ಸರಿಯಾದ ದಾರಿಯಲ್ಲಿ ಪಯಣಿಸಿದರೆ ನಿನ್ನನ್ನು ಬಿಟ್ಟು ಹೋದವರೆಲ್ಲ ನಿನ್ನ ಬಳಿಗೆ ಮರಳಿ ಬರುತ್ತಾರೆ ಎಂದು ಸಾಧು ಹೇಳಿದ ಮಾತುಗಳು ಆ ವ್ಯಾಪಾರಿಗೆ ಅರ್ಥವಾಗುತ್ತದೆ. ಅಲ್ಲಿಂದ ಮುಂದೆ ಆತನ ಜೀವನವೇ ಬದಲಾಗುತ್ತದೆ.

mysore-dasara_Entry_Point