Tuesday Motivation: ಮತ್ತೊಬ್ಬರ ಮೇಲೆ ಅಲ್ಲ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಆಗಲೇ ಗೆಲುವು ಸಾಧ್ಯ; ಜೀವನಕ್ಕೊಂದು ಸ್ಫೂರ್ತಿಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  Tuesday Motivation: ಮತ್ತೊಬ್ಬರ ಮೇಲೆ ಅಲ್ಲ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಆಗಲೇ ಗೆಲುವು ಸಾಧ್ಯ; ಜೀವನಕ್ಕೊಂದು ಸ್ಫೂರ್ತಿಮಾತು

Tuesday Motivation: ಮತ್ತೊಬ್ಬರ ಮೇಲೆ ಅಲ್ಲ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಆಗಲೇ ಗೆಲುವು ಸಾಧ್ಯ; ಜೀವನಕ್ಕೊಂದು ಸ್ಫೂರ್ತಿಮಾತು

Tuesday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಜೀವನದಲ್ಲಿ ಯಶಸ್ಸು ಗಳಿಸಬೇಕು, ಸುಖ ಸಂತೋಷ ಸುಲಭವಾಗಿ ದೊರೆಯಬೇಕು ಎಂದಾದರೆ ನಮ್ಮ ಮೇಲೆ ನಂಬಿಕೆ ಇರಬೇಕು. ಮತ್ತೊಬ್ಬರನ್ನು ನಂಬುವ ಬದಲಿಗೆ ನಮ್ಮ ಮೇಲೆ ನಂಬಿಕೆ ಇಟ್ಟು ಮಾಡುವ ಕೆಲಸಗಳಿಗೆ ಯಶಸ್ಸು ಖಂಡಿತ ದೊರೆಯುತ್ತದೆ

ಜೀವನಕ್ಕೊಂದು ಸ್ಫೂರ್ತಿಮಾತು
ಜೀವನಕ್ಕೊಂದು ಸ್ಫೂರ್ತಿಮಾತು

 ಜೀವನಕ್ಕೊಂದು ಸ್ಫೂರ್ತಿಮಾತು: ಪ್ರತಿಯೊಬ್ಬರಿಗೂ ನಂಬಿಕೆ ಬಹಳ ಅಗತ್ಯ. ನಂಬಿಕೆ ಆಧಾರದ ಮೇಲೆ ಎಷ್ಟೋ ಸಂಬಂಧಗಳು ಇನ್ನೂ ಗಟ್ಟಿಯಾಗಿವೆ. ನಂಬಿಕೆ ಇಟ್ಟುಕೊಂಡು ಕೆಲಸ ಆರಂಭಿಸಿದ ಎಷ್ಟೋ ಕೆಲಸಗಳು ಯಶಸ್ಸು ಕಂಡಿವೆ. ಮನುಷ್ಯ ಜೀವನದಲ್ಲಿ ಮೇಲೇರಬೇಕಾದರೆ ತನ್ನ ಮೇಲೆ ನಂಬಿಕೆ ಇರಬೇಕು. ಆಗ ಮಾತ್ರ ಗೆಲುವು ಸಿಗುತ್ತದೆ. ಆದರೆ ಆ ನಂಬಿಕೆ ಅನ್ನುವುದು ಮೊದಲು ನಮ್ಮ ಮೇಲೆ ಇರಬೇಕು.

ಇಂದಿನ ಸಮಾಜದಲ್ಲಿ ಹೆಚ್ಚಿನವರು ಮಾಡುವ ದೊಡ್ಡ ತಪ್ಪು ಎಂದರೆ ಇತರರನ್ನು ನಂಬುವುದು. ಯಾರಾದರೂ ಬಂದು ಏನಾದರೂ ಸಹಾಯ ಮಾಡುತ್ತಾರೆ, ಅವರು ದುಡ್ಡು ಪಡೆದ ನಂತರ ಖಂಡಿತ ವಾಪಸ್‌ ಕೊಡುತ್ತಾರೆ ಹೀಗೆ ಎಷ್ಟೋ ಜನರು ಇತರರನ್ನು ನಂಬಿ ಮೋಸ ಹೋಗುತ್ತಾರೆ, ನಿರಾಶೆಗೆ ಒಳಗಾಗುತ್ತಾರೆ. ಆದರೆ ಇದು ವಾಸ್ತವವಾಗಿ ತಪ್ಪು. ಈಗಂತೂ ಬಹಳಷ್ಟು ಜನರು ಮತ್ತೊಬ್ಬರನ್ನು ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಸಹಾಯ ಪಡೆಯುತ್ತಾರೆ. ಆದ್ದರಿಂದ ಮತ್ತೊಬ್ಬರನ್ನು ಅಷ್ಟು ಸುಲಭವಾಗಿ ನಂಬಬೇಡಿ.

ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ

ಅವಕಾಶಗಳಿಗಾಗಿ ಕಾಯಬೇಡಿ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ. ಎಲ್ಲಾ ಮಹಾನ್ ವ್ಯಕ್ತಿಗಳು ಅವರ ಬಳಿ ಕೆಲಸ ಮಾಡು ಎಲ್ಲರ ಮನಸ್ಸನ್ನೂ ಹೀಗೇ ಟ್ಯೂನ್‌ ಮಾಡಿರುತ್ತಾರೆ. ಕೆಲಸ ಮಾಡುವವರ ಮನಸ್ಥಿತಿಗೆ ಟ್ಯೂನ್ ಮಾಡುತ್ತಾರೆ. ಆದರೆ ಎಷ್ಟೋ ಜನರು ತಮ್ಮ ಯಶಸ್ಸಿಗೆ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನೀವು ಅದನ್ನು ಅರಿತುಕೊಳ್ಳುವ ಮೊದಲು ಜೀವನ ಮುಗಿದಿರುತ್ತದೆ. ನಂತರ ನೀವು ಏನು ಮಾಡಲಾಗದ ಪರಿಸ್ಥಿತಿಯಲ್ಲಿರುತ್ತೀರಿ. ಅದಕ್ಕಾಗಿಯೇ ನೀವು ನಿಮ್ಮನ್ನು ನಂಬಬೇಕು. ನಿಮಗಾಗಿ ಯಾರು ಏನು ಮಾಡಬಲ್ಲರು, ಅದರಿಂದ ನನಗೆ ಏನು ಲಾಭವಾಗುತ್ತದೆ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು.

ಜೀವನದಲ್ಲಿ ಭಯದಿಂದ ಮಾಡುವ ಯಾವುದೇ ಕೆಲಸ ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಬುದ್ಧಿವಂತಿಕೆಯಿಂದ ಮಾಡುವ ಎಲ್ಲಾ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿ ಬಾರಿಯೂ ನಾವು ನಮ್ಮನ್ನು ನಂಬುತ್ತೇವೆ, ಯಶಸ್ಸು ನಮ್ಮದೇ. ಇತರರನ್ನು ನಂಬುವುದು ನಿರಾಶೆಗೆ ಕಾರಣವಾಗುತ್ತದೆ. ನೀವು ಮತ್ತೊಬ್ಬರಿಗೆ ವ್ಯರ್ಥ ಮಾಡುವ ಪ್ರತಿ ನಿಮಿಷವನ್ನೂ ನಿಮ್ಮ ಉದ್ಧಾರಕ್ಕಾಗಿ ಬಳಸಿಕೊಂಡರೆ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ.

ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಿ

ಉದಾಹರಣೆಗೆ ನೀವು ಪ್ರಸ್ತುತ ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೆ ಏನಾದರೂ ಸಾಧಿಸಬೇಕು ಎಂದುಕೊಳ್ಳುತ್ತೀರಿ. ಆದರೆ ಅಲ್ಲಿ ನಿಮ್ಮ ಪ್ರತಿಭೆಯನ್ನು ಬಳಸಿಕೊಂಡು ತಮ್ಮನ್ನು ತಾವು ಉದ್ದಾರ ಮಾಡಿಕೊಳ್ಳುವ ಸ್ವಾರ್ಥದಿಂದ ನಿಮಗೆ ಆಮಿಷ ತೋರಿಸಿ ಅಲ್ಲೇ ಕೆಲಸ ಮಾಡುವಂತೆ ಪ್ರೇರೇಪಿಸುತ್ತಾರೆ. ಆಗ ನಿಮ್ಮ ಪ್ರತಿಭೆ ಅಲ್ಲೇ ಹುದುಗಿ ಹೋಗುತ್ತದೆ, ನಿಮ್ಮನ್ನು ನೀವು ಎಕ್ಸ್‌ಪ್ಲೋರ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಅದೆಲ್ಲದರಿಂದ ಹೊರ ಬರಬೇಕು. ನಿಮ್ಮ ಮೇಲೆ ನಿಮಗೆ ನಂಬಿಕೆ, ಧೈರ್ಯ ಇರಬೇಕು. ಆಗಲೇ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ನೀವು ಏನನ್ನಾದರೂ ಮಾಡುವ ಮುನ್ನ ಸಮಾಜ ನಿಮ್ಮನ್ನು ನೋಡಿ ನಗಬಹುದು, ಆದರೆ ನೀವು ಗೆದ್ದ ನಂತರ ಜನರು ತಮ್ಮ ವರ್ತನೆಗೆ ತಾವೇ ಪಶ್ಚಾತಾಪ ಪಡುತ್ತಾರೆ.

ಜೀವನದಲ್ಲಿ ಅಸಾಧ್ಯವಾದ ಕೆಲಸವಿಲ್ಲ. ನಂಬಿಕೆಯ ತಳಹದಿಯ ಮೇಲೆ ಕಷ್ಟಪಟ್ಟು ಮುನ್ನಡೆಯಿರಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ, ನಿಮ್ಮ ಶಕ್ತಿಯ ಬಗ್ಗೆ ನಿಮಗೆ ಅನುಮಾನವಿದ್ದರೆ ನೀವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮೊದಲು ನಿಮ್ಮನ್ನು ನೀನು ಗೆಲ್ಲಬೇಕು. ಭಯಪಡುತ್ತಾ ಕೂತರೆ ಬದುಕಲು ಸಾಧ್ಯವಿಲ್ಲ. ಪ್ರಯತ್ನ ನಿಮ್ಮದು ಫಲಾಫಲ ನನ್ನದು ಎಂದು ಶ್ರೀ ಕೃಷ್ಣ ಹೇಳಿಲ್ಲವೇ? ಜೀವನದಲ್ಲಿ ನಂಬಿಕೆ ಇಟ್ಟು ಕೆಲಸ ಆರಂಭಿಸಿ, ನಂತರ ಪ್ರಕೃತಿಯೇ ನಿಮಗೆ ಸಹಾಯ ಮಾಡುತ್ತದೆ. ನೀವು ಮುಂದೆ ಹೋಗಲು ಅದೇ ನಿಮಗೆ ದಾರಿ ತೋರಿಸುತ್ತದೆ. ವಿಜಯದ ದಾರಿ ಪ್ರಜ್ವಲಿಸುತ್ತಲೇ ಇರುತ್ತದೆ.

 

Whats_app_banner