Tuesday Motivation: ಪರೀಕ್ಷೆಯಲ್ಲಿ ಫೇಲಾದರೆ ಜೀವನದಲ್ಲಿ ಸೋತಂತೆ ಅಲ್ಲ; ಈ ರಿಯಲ್ ಸ್ಟೋರಿ ಓದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tuesday Motivation: ಪರೀಕ್ಷೆಯಲ್ಲಿ ಫೇಲಾದರೆ ಜೀವನದಲ್ಲಿ ಸೋತಂತೆ ಅಲ್ಲ; ಈ ರಿಯಲ್ ಸ್ಟೋರಿ ಓದಿ

Tuesday Motivation: ಪರೀಕ್ಷೆಯಲ್ಲಿ ಫೇಲಾದರೆ ಜೀವನದಲ್ಲಿ ಸೋತಂತೆ ಅಲ್ಲ; ಈ ರಿಯಲ್ ಸ್ಟೋರಿ ಓದಿ

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ ಪರೀಕ್ಷೆಯಲ್ಲಿ ಫೇಲ್ ಆಗುವ ಭಯ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗದೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರು ನಮ್ಮ ನಡುವೆಯೇ ಇದ್ದಾರೆ.

ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರು ಇದ್ದಾರೆ
ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರು ಇದ್ದಾರೆ

12th ಫೇಲ್ ಸಿನಿಮಾ ಕೆಲ ದಿನಗಳ ಹಿಂದಷ್ಟೇ ಬಿಗಡೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಕೆಂದರೆ ಇದು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ, ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಷಿ ಅವರ ನೈಜ ಕಥೆ ಆಧಾರಿತ ಸಿನಿಮಾವಾಗಿದೆ. ನಿಜಕ್ಕೂ ಇದು ತುಂಬಾ ಸ್ಪೂರ್ತಿದಾಯಕ ಸ್ಟೋರಿ. 12ನೇ ತರಗತಿ ಅನುತ್ತೀರ್ಣರಾದವರು ಜೀವನದಲ್ಲಿ ಹೇಗೆ ಯಶಸ್ವಿಯಾದರು ಎಂಬುದಕ್ಕೆ ಇದು ನಿಜವಾದ ಕಥೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಜೀವನದಲ್ಲಿ ಯಶಸ್ಸು ಗಳಿಸಿದ ಐಪಿಎಸ್ ಅಧಿಕಾರಿಯ ನಿಜ ಜೀವನದ ಕಥೆ. ಜೀವನದಲ್ಲಿ ಸೋಲುತ್ತೇನೆ ಎಂಬ ಕಾರಣಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಾರೆ. ಆದರೆ ಮನೋಜ್ ಕುಮಾರ್ ಶರ್ಮಾ ಸೋತರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈ ಕಥೆ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. 12ನೇ ತರಗತಿಯಲ್ಲಿ ಹಿಂದಿ ಬಿಟ್ಟು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣರಾಗಿ ಇಂದು ಐಪಿಎಸ್ ಅಧಿಕಾರಿಯಾಗಿದ್ದಾರೆ. ಇದಕ್ಕೆ ಕಾರಣ ಕಠಿಣ ಪರಿಶ್ರಮ ಮತ್ತು ಪರಿಶ್ರಮ.

ಬಡತನದಲ್ಲೂ ಛಲ ಬಿಡದೆ ಓದಿ ಉನ್ನತ ಹುದ್ದೆಗೇರಿದ ಮನೋಜ್ ಕುಮಾರ್ ಶರ್ಮಾ

1977 ರಲ್ಲಿ ಜನಿಸಿದ ಮನೋಜ್ ಕುಮಾರ್ ಶರ್ಮಾ ಮಧ್ಯಪ್ರದೇಶದ ಬಿಲ್ಗಾಂವ್ ಎಂಬ ಸಣ್ಣ ಹಳ್ಳಿಯಲ್ಲಿ ಬೆಳೆದರು. ಅವರದು ಬಡ ಕುಟುಂಬ. ಮನೋಜ್ ಕುಮಾರ್ ಶರ್ಮಾ ತನ್ನ ಶಾಲಾ ದಿನಗಳಲ್ಲಿ ಸಕ್ರಿಯ ವಿದ್ಯಾರ್ಥಿಯಾಗಿರಲಿಲ್ಲ. 10ನೇ ತರಗತಿ ಉತ್ತೀರ್ಣ. ಕಠಿಣ ಪರಿಶ್ರಮದಿಂದ 11ನೇ ತರಗತಿ ಪಾಸಾಗುತ್ತಾರೆ. ಆದರೆ 12ನೇ ತರಗತಿಯಲ್ಲಿ ಹಿಂದೆ ಬಿದ್ದರು. ಹಿಂದಿ ಬಿಟ್ಟು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಾರೆ. ಆ ನಂತರ ಮರು ಪರೀಕ್ಷೆಯಲ್ಲಿ ಉಳಿದ ವಿಷಯಗಳನ್ನು ಪಾಸ್ ಮಾಡಿಕೊಳ್ಳುತ್ತಾರೆ.

ಮನೋಜ್ ಕುಮಾರ್ ತಮ್ಮ ಜೀವನದ ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸಿದ್ದಾರೆ. ಅವರೀಗ ಪರಿಶ್ರಮದಿಂದ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ವಿದ್ಯಾಭ್ಯಾಸಕ್ಕೆ ಹಣವಿಲ್ಲದ ಕಾರಣ ಟೆಂಪೋ ಡ್ರೈವರ್ ಕೆಲಸ ಮಾಡಿದ್ದಾರೆ. ಲೈಬ್ರರಿಯಲ್ಲಿ ಕೆಲಸ ಹೀಗೆ ಹತ್ತಾರು ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಣಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ರಸ್ತೆಬದಿಯಲ್ಲಿ ಭಿಕ್ಷುಕರಂತೆ ಮಲಗುತ್ತಿದ್ದರು. ನಂತರ ಅವರು ಯುಪಿಎಸ್‌ಸಿಗೆ ತಯಾರಿಯನ್ನ ಆರಂಭಿಸಿದ್ದರು.

ಮನೋಜ್ ಕುಮಾರ್ ಅವರ ಲವ್ ಸ್ಟೋರಿ ಕೂಡ ಸ್ಪೂರ್ತಿದಾಯಕವಾಗಿದೆ. ಯುಪಿಎಸ್‌ಸಿ ಕೋಚಿಂಗ್ ಸಮಯದಲ್ಲಿ ಉತ್ತರಾಖಂಡದ ಶ್ರದ್ಧಾ ಜೋಶಿ ಅವರನ್ನು ಭೇಟಿಯಾಗುತ್ತಾರೆ. ಜೋಶಿ ಈಗ ಐಆರ್‌ಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕೋಚಿಂಗ್ ಇಲ್ಲದೆಯೇ ಮನೋಜ್ ಪ್ರಿಲಿಮ್ಸ್ ತೇರ್ಗಡೆಯಾಗಿರುವುದನ್ನು ಜೋಶಿ ತಿಳಿದುಕೊಂಡಿದ್ದರು.

ನಂತರ ಇಬ್ಬರೂ ಸ್ನೇಹಿತರಾಗುತ್ತಾರೆ. ಅವರು ಪರಸ್ಪರ ಒಪ್ಪಿಗೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಮನೋಜ್ ಐಪಿಎಸ್ ಅಧಿಕಾರಿಯಾದ ನಂತರ ಇಬ್ಬರೂ ಮದುವೆಯಾದರು. ಮನೋಜ್ ಕುಮಾರ್ ಶರ್ಮಾ ಅವರ ಗ್ರಾಮವು ಮಧ್ಯಪ್ರದೇಶದ ಚಂಬಲ್ ಕಣಿವೆಯ ಸಮೀಪದಲ್ಲಿದೆ. ಅಲ್ಲಿ ಡಕಾಯಿತರಿಗೆ ಹೆಸರುವಾಸಿ. ಎಲ್ಲೋ ದೂರದ ಹಳ್ಳಿಯಲ್ಲಿ ಹುಟ್ಟಿ, ನೂರಾರು ಸವಾಲುಗಳನ್ನು ಮೆಟ್ಟಿ ನಿಂತ ಮನೋಜ್ ಕುಮಾರ್ ಶರ್ಮಾ ಅವರ ಬದುಕು ಎಲ್ಲರಿಗೂ ಆದರ್ಶ.

ಪ್ರತಿ ವಿದ್ಯಾರ್ಥಿ ಮನೋಜ್ ಕುಮಾರ್ ಅವರ ಕಥೆಯನ್ನು ತಿಳಿದಿರಬೇಕು. ಸೋತರೆ ಜೀವನ ಮುಗಿದೇ ಹೋಯಿತು ಎಂದುಕೊಳ್ಳುವ ಅನೇಕರಿಗೆ ಗೊತ್ತಿರಬೇಕು. ಪರೀಕ್ಷೆಯಲ್ಲಿ ಫೇಲ್ ಆಗುವುದು ಜೀವನದಲ್ಲಿ ಸೋತಂತೆ ಅಲ್ಲ. ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಆತ್ಮಸ್ಥೈರ್ಯ, ಪರಿಶ್ರಮ ಇದ್ದರೆ ಏನನ್ನ ಬೇಕಾದರೂ ಸಾಧಿಸಬಹುದು. ಮನೋಜ್ ಕುಮಾರ್ ಶರ್ಮಾ ಅವರ ಜೀವನವೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಗೆಲುವಿನ ಮೌಲ್ಯ ಸೋಲಿನಲ್ಲಿ ಮಾತ್ರ ಕಾಣುತ್ತದೆ. ಪರೀಕ್ಷೆಯಲ್ಲಿ ಫೇಲಾದರೆ ಧೃತಿಗೆಡದೆ ಮತ್ತೊಮ್ಮೆ ಪ್ರಯತ್ನಿಸಿ. ಆದರೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

Whats_app_banner