Tuesday Motivation: ಗೆಲ್ಲದಿರುವುದು ಸೋಲಲ್ಲ ಆದರೆ ಮತ್ತೆ ಪ್ರಯತ್ನಿಸದೇ ಇರುವುದು ನಿಜವಾದ ಸೋಲು
ಕನ್ನಡ ಸುದ್ದಿ  /  ಜೀವನಶೈಲಿ  /  Tuesday Motivation: ಗೆಲ್ಲದಿರುವುದು ಸೋಲಲ್ಲ ಆದರೆ ಮತ್ತೆ ಪ್ರಯತ್ನಿಸದೇ ಇರುವುದು ನಿಜವಾದ ಸೋಲು

Tuesday Motivation: ಗೆಲ್ಲದಿರುವುದು ಸೋಲಲ್ಲ ಆದರೆ ಮತ್ತೆ ಪ್ರಯತ್ನಿಸದೇ ಇರುವುದು ನಿಜವಾದ ಸೋಲು

Tuesday Motivation: ಯಾವುದಾದರೂ ವಿಷಯದಲ್ಲಿ ಸೋತಿದ್ದೀರಿ ಅಂದ್ರೆ ಸೋಲಲ್ಲ. ಆದರೆ ಮತ್ತೆ ಪ್ರಯತ್ನ ಮಾಡದೆ ಇರುವುದೇ ನಿಜವಾದ ಸೋಲು. ಜೀವನಕ್ಕೊಂದು ಸ್ಫೂರ್ತಿದಾಯಕವಾದ ಈ ಮಾತನ್ನ ತಿಳಿಯಿರಿ.

ಗೆಲ್ಲದಿರುವುದು ಸೋಲಲ್ಲ ಆದರೆ ಮತ್ತೆ ಪ್ರಯತ್ನಿಸದೇ ಇರುವುದು ನಿಜವಾದ ಸೋಲು ಆಗಿದೆ. ಈ ಸ್ಫೂರ್ತಿದಾಯಕ ಮಾತಿ ಅರ್ಥವನ್ನು ತಿಳಿಯಿರಿ.
ಗೆಲ್ಲದಿರುವುದು ಸೋಲಲ್ಲ ಆದರೆ ಮತ್ತೆ ಪ್ರಯತ್ನಿಸದೇ ಇರುವುದು ನಿಜವಾದ ಸೋಲು ಆಗಿದೆ. ಈ ಸ್ಫೂರ್ತಿದಾಯಕ ಮಾತಿ ಅರ್ಥವನ್ನು ತಿಳಿಯಿರಿ.

Tuesday Motivation Kannada: ಜೀವನವನ್ನು ಸೋಲು-ಗೆಲುವುಗಳೊಂದಿಗೆ ನೋಡಲಾಗುತ್ತದೆ. ಆದರೆ ಇಲ್ಲಿ ವಿಜೇತರ ಮಾತುಗಳು ಹೆಚ್ಚು ಮೌಲ್ಯಯುವಾಗಿರುತ್ತದೆ. ಸೋತವರ ಅನುಭವಗಳ ಬಗ್ಗೆ ಯಾರೂ ಆಸಕ್ತಿ ತೋರುವುದಿಲ ಆದರೆ ಗೆದ್ದವನ ಮಾತಿಗಿಂತ ಸೋತವನ ಮಾತು ಸ್ಫೂರ್ತಿದಾಯಕವಾಗಿರುತ್ತದೆ. ಏಕೆಂದರೆ ಸೋತವನಿಗೆ ಸೋಲಿನ ನೋವು ಗೊತ್ತು. ಗೆದ್ದವನು ತನ್ನ ಬಗ್ಗೆ ಮಾತ್ರ ಹೇಳುತ್ತಾನೆ. ಆತ ಹೋಗಬೇಕಾದ ದಾರಿಯ ಬಗ್ಗೆ ಹೇಳುವುದಿಲ್ಲ. ಸೋತವರ ಹಾದಿಯಲ್ಲಿನ ಸಮಸ್ಯೆ, ಸವಾಲುಗಳನ್ನು ವಿವರಿಸುತ್ತಾರೆ.

ನಿಜವಾಗಿ ಜೀವನದಲ್ಲಿ ಗೆಲ್ಲುವುದಕ್ಕಿಂತ ಸೋಲು ಮುಖ್ಯ. ಗೆದ್ದಾಗ ನೀವು ಯಾರೆಂದು ಜಗತ್ತಿಗೆ ಗೊತ್ತಾಗುತ್ತದೆ. ಆದರೆ ಒಮ್ಮೆ ಸೋತರೆ ಜಗತ್ತು ಏನೆಂದು ತಿಳಿಯುತ್ತದೆ. ನಿಮ್ಮವರು ಯಾರು ಮತ್ತು ಅಪರಿಚಿತರು ಯಾರು ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ನಿಮ್ಮ ಸುತ್ತಮುತ್ತಲಿನವರ ಮಾತು ಅರ್ಥವಾಗುತ್ತದೆ. ಆದ್ದರಿಂದಲೇ ಗೆಲ್ಲಲು ಬೇಕು, ಆದರೆ ಗೆಲ್ಲಲು ಸಾಧ್ಯವಾಗದಿದ್ದಾಗ ಸೋಲಿನ ರುಚಿಯನ್ನೂ ನೋಡಬೇಕು. ಈ ಸಕಾರಾತ್ಮಕ ಭಾವನೆ ಎಲ್ಲರಲ್ಲೂ ಇರಬೇಕು.

ಅನೇಕರುು ಮಾಡುವ ದೊಡ್ಡ ತಪ್ಪು ಎಂದರೆ ಒಮ್ಮೆ ಸೋತರೆ ಜೀವನ ಮುಗಿದೇ ಹೋಯಿತು ಎಂದು ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಗೆಲುವಿನಿಂದ ಕಲಿಯುವುದಕ್ಕಿಂತ ಸೋಲಿನಿಂದ ಕಲಿಯುವುದು ಹೆಚ್ಚು ಬಲವಾಗಿರುತ್ತದೆ. ಕಲಿಯುವ ಬಯಕೆಯನ್ನು ಹೆಚ್ಚಿಸುತ್ತದೆ. ಇತರ ವಿಷಯಗಳಲ್ಲಿಯೂ ಹೇಗೆ ಜಾಗರೂಕರಾಗಿರಬೇಕು ಎಂಬುದನ್ನು ಇದು ನಮಗೆ ಕಲಿಸುತ್ತದೆ. ಆದ್ದರಿಂದಲೇ ಗೆಲ್ಲದಿರುವುದು ಸೋಲಲ್ಲ. ಮತ್ತೆ ಪ್ರಯತ್ನಿಸದಿರುವುದೇ ನಿಜವಾದ ಸೋಲು.

ನಿಮ್ಮ ಸುತ್ತಲಿನವರನ್ನು ಮೆಚ್ಚಿಸಲು ನೀವು ಗೆಲ್ಲಬೇಕು ಎಂದು ಯೋಚಿಸಬೇಡಿ. ನಿಮಗಾಗಿ ನೀವು ಹೋರಾಡಬೇಕು. ಆಗ ಮಾತ್ರ ನಿಜವಾಗಲೂ ಏನಾದರೂ ಸಾಧಿಸಿ ಮುಂದೆ ಸಾಗುತ್ತೀರಿ. ಒಮ್ಮೆ ಗೆಲ್ಲಲು ನೂರು ಬಾರಿ ಸೋಲಬೇಕಿಲ್ಲ. ಆದರೆ ನೀವು ಸೋತ ನಂತರ ಪ್ರಯತ್ನವನ್ನು ನಿಲ್ಲಿಸಬಾರದು. ಗೆಲುವಿನ ಸಿಹಿಗಿಂತ ಸೋಲಿನ ಅನುಭವಗಳೇ ಹೆಚ್ಚು. ನೀವು ಅದನ್ನು ಯಾವುದೇ ಪುಸ್ತಕದಲ್ಲಿ ಕಾಣುವುದಿಲ್ಲ. ಇದನ್ನು ನೀವೇ ಕಲಿಯಬೇಕು ಅಷ್ಟೆ.

ಗೆದ್ದಾಗ ಚಪ್ಪಾಳೆ ತಟ್ಟುವ ಕೈಗಳಿಗಿಂತ ಸೋತಾಗ ಕೈ ಹಿಡಿದವರನ್ನು ನೆನಪಿಸಿಕೊಳ್ಳಬೇಕು. ಅವರು ನಿಮ್ಮ ಜೀವನದುದ್ಧಕ್ಕೂ ನಿಮ್ಮನ್ನು ಬೆಂಬಲಿಸುತ್ತಾರೆ. ಸೋಲನ್ನು ಏಣಿಯಾಗಿ ತೆಗೆದುಕೊಂಡು ಮೇಲೆದ್ಗಾಗಲೇ ನಿಮ್ಮ ಗೆಲುವಿಗೆ ಅರ್ಥ ಬರುತ್ತದೆ. ಸೀದಾ ಕೊನೆಯ ಹಂತಕ್ಕೆ ಹೋಗಿ ಗೆದ್ದರೆ ಅದಕ್ಕೂ ಸಮಾಧಾನವಾಗುವುದಿಲ್ಲ. ಜೀವನದಲ್ಲಿ ಗೆಲ್ಲಲು ಮನಸ್ಸಿನೊಂದಿಗೆ ಯುದ್ಧ ಮಾಡಬೇಕು. ನಿಮ್ಮೂಂದಿಗೆ ನೀವು ಯುದ್ಧದಲ್ಲಿದ್ದಾಗ ಮಾತ್ರ ನೀವು ನಿಜವಾಗಿ ಹೊರಬರುತ್ತೀರಿ. ಗೆಲ್ಲುವುದು ಸುಲಭ. ಒಂದ ದಿನ ಜೀವನದಲ್ಲಿ ಸೋಲಲೇ ಬೇಕು. ಆದ್ದರಿಂದ ಗೆಲ್ಲಲು ಪ್ರಯತ್ನಿಸಿ. ಆದರೆ ನೀವು ಸೋತರೆ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇರಿ.

ತಾಳ್ಮೆ ಎಷ್ಟು ಕಹಿಯೋ ಪ್ರತಿಫಲವೂ ಅಷ್ಟೇ ಸಿಹಿಯಾಗಿರುತ್ತದೆ. ಸೋಲು ಎಷ್ಟೇ ನೋವಿನಿಂದ ಕೂಡಿದ್ದರೂ ಪರವಾಗಿಲ್ಲ. ಗೆಲುವು ಅನೇಕ ಸೋಲುಗಳನ್ನು ಮರೆಯುವಂತೆ ಮಾಡುತ್ತದೆ. ಸೋಲು ಗೆಲುವುದನ್ನು ಕಲಿಸುತ್ತದೆ. ಪ್ರಯತ್ನಪಟ್ಟರರೆ ಯಾವುದೂ ಅಸಾಧ್ಯವಾಲ್ಲ. ಗುರಿ ಸಾಧಿಸಲು ವಿಫಲವಾದರೆ ಸೋಲಲ್ಲ, ಮತ್ತೆ ಮತ್ತೆ ಪ್ರಯತ್ನ ಮಾಡದೇ ಇರುವುದು ಸೋಲು. ಗೆದ್ದಾಗ ಸಂಭ್ರಮಿಸಿದರೂ ಪರವಾಗಿಲ್ಲ ಸೋತಾಗ ಅದನ್ನು ಅರಗಿಸಿಕೊಳ್ಳಬೇಕು. ಗೆಲುವು ಮತ್ತು ಸೋಲು ಎರಡು ಕಣ್ಣುಗಳಿದ್ದಂತೆ. ಒಂದಿಲ್ಲದಿದ್ದರೆ ಬದುಕು ಸುಂದರವಾಗಿ ಕಾಣುವುದಿಲ್ಲ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner