Tuesday Motivation: ಬದುಕಿನ ಯಶಸ್ಸಿಗೆ ಇವೇ 9 ಸರಳ ಸೂತ್ರಗಳು; ಅನುಸರಿಸಿ, ಜೀವನವನ್ನು ಅನುಭವಿಸಿ
ಬದುಕಿನಲ್ಲಿ ಯಶಸ್ಸು ಗಳಿಸಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ನಮ್ಮಲ್ಲಿರುವ ಈ ಕೆಲವು ಅಭ್ಯಾಸಗಳು ನಮ್ಮ ದಾರಿಯನ್ನು ಗೆಲುವಿಗಿಂತ ಸೋಲಿನತ್ತ ಕರೆದೊಯ್ಯುತ್ತದೆ. ಅಂತಹ ಅಭ್ಯಾಸಗಳಿಂದ ದೂರವಿದ್ದಾಗ ಮಾತ್ರ ಯಶಸ್ಸು, ನಿಮ್ಮ ಪಾಲಿಗೆ ಹುಡುಕಿಕೊಂಡು ಬರುತ್ತದೆ. ಹಾಗಾದರೆ ಯಶಸ್ಸು ಗಳಿಸಲು ನಾವು ದೂರ ಮಾಡಬೇಕಾದ ಅಭ್ಯಾಸಗಳು ಯಾವುವು ನೋಡಿ.
ಬದುಕಿನಲ್ಲಿ ನಾವು ಯಶಸ್ವೀ ವ್ಯಕ್ತಿಗಳಾದಾಗ ಮಾತ್ರ ಎಲ್ಲರೂ ನಮ್ಮನ್ನು ಮೆಚ್ಚಿ ಕೊಂಡಾಡುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸು ಬಹಳ ಮುಖ್ಯ. ಯಶಸ್ಸಿನಿಂದ ಆತ್ಮವಿಶ್ವಾಸ ದೊರೆಯುತ್ತದೆ. ಯಶಸ್ಸು ಭವಿಷ್ಯಕ್ಕೂ ಅತ್ಯಗತ್ಯ. ಯಶಸ್ಸು ಗಳಿಸಬೇಕು ಎಂಬ ಛಲವು ವ್ಯಕ್ತಿಯನ್ನು ಕಷ್ಟಪಟ್ಟು ದುಡಿಯುವಂತೆ ಪ್ರೇರೇಪಿಸುತ್ತದೆ. ಕಷ್ಟಪಟ್ಟು ದುಡಿಯುವುದರಿಂದ ಆ ವ್ಯಕ್ತಿಯ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಯಶಸ್ಸಿನಿಂದ ವ್ಯಕ್ತಿಯು ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ. ಯಶಸ್ಸು ನಮ್ಮನ್ನು ಬದುಕಿನ ಗುರಿಯತ್ತ ಸಾಗಲು ಪ್ರೇರೇಪಿಸುತ್ತದೆ. ಆದರೆ ಯಶಸ್ಸಿನತ್ತ ಸಾಗಲು ಈ ಕೆಲವು ಅಭ್ಯಾಸಗಳಿಂದ ದೂರವಿರಬೇಕು, ಈ ಅಭ್ಯಾಸಗಳಿದ್ದರೆ ನೀವೆಂದಿಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ.
ವಿಳಂಬ ಪ್ರವೃತ್ತಿ
ಆಲಸ್ಯವು ಯಶಸ್ಸಿಗೆ ಅತಿ ದೊಡ್ಡ ಶತ್ರು. ನೀವು ಯಶಸ್ವಿಯಾಗಲು ಬಯಸಿದರೆ ಯಾವುದೇ ಕೆಲಸವನ್ನಾಗಲಿ ನಾಳೆಗೆ ಮುಂದೂಡುವುದನ್ನು ನಿಲ್ಲಿಸಬೇಕು. ಬೇಕಾದರೆ ನಾಳಿನ ಕೆಲಸವನ್ನು ಈಗಲೇ ಮಾಡಿ ಮುಗಿಸಬಹುದು. ಯಾವುದೇ ಕೆಲಸದಲ್ಲಿ ನೀವು ವಿಳಂಬ ಮಾಡಿದ್ದಷ್ಟೂ ನಿಮ್ಮ ಗೆಲುವು ಕೂಡ ತಡವಾಗುತ್ತಾ ಹೋಗುತ್ತದೆ.
ನಕಾರಾತ್ಮಕ ಆಲೋಚನೆಗಳು
ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಯಶಸ್ಸಿನಿಂದ ದೂರವಿಡುತ್ತವೆ. ನಾವು ಯಶಸ್ಸು ಗಳಿಸಬೇಕು ಎಂದರೆ ಮೊದಲು ಧನಾತ್ಮಕವಾಗಿ ಯೋಚಿಸಲು ಆರಂಭಿಸಬೇಕು. ನಾವಿರಿಸಿಕೊಂಡಿರುವ ಗುರಿಗಳ ಮೇಲೆ ನಂಬಿಕೆ ಇಡಬೇಕು. ಜೀವನದಲ್ಲಿ ಯಶಸ್ವಿಯಾಗಲು ಧನಾತ್ಮಕ ಚಿಂತನೆಗಳೊಂದಿಗೆ ಮುನ್ನಡೆಯಬೇಕು. ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ಸದಾ ದೂರ ಇರಿಸಬೇಕು.
ನಿಮ್ಮ ಮೇಲೆ ನಿಮಗೆ ಅನುಮಾನ
ನಿಮ್ಮ ಮೇಲೆ ನೀವೇ ಅನುಮಾನ ಮಾಡುವುದರಿಂದ ನಿಮ್ಮಲ್ಲಿರುವ ಸಾಮರ್ಥ್ಯಗಳ ಮೇಲೆ ನಿಮಗೆ ನಂಬಿಕೆ ಕುಸಿಯುತ್ತದೆ. ನೀವು ಯಶಸ್ಸು ಗಳಿಸಲು ಬಯಸಿದರೆ ನಿಮ್ಮನ್ನು ನೀವು ಅನುಮಾನದಿಂದ ನೋಡುವುದನ್ನು ಮೊದಲು ಬಿಡಬೇಕು. ನನ್ನಿಂದ ಇದು ಸಾಧ್ಯವೇ ಎಂಬ ಭಯವನ್ನು ಬಿಟ್ಹಾಕ್ಕಿ. ನಿಮ್ಮ ಮೇಲೆ ನೀವು ನಂಬಿಕೆ ಇರಿಸಿಕೊಂಡು ಮುಂದೆ ಸಾಗುವುದು ಬಹಳ ಅವಶ್ಯ.
ಭಯ
ಭಯ ನಿಮ್ಮನ್ನು ಮುಂದೆ ಹೋಗದಂತೆ ತಡೆಯುತ್ತದೆ. ಯಶಸ್ಸು ಗಳಿಸಲು ನೀವು ಭಯವನ್ನು ಎದುರಿಸಿ ಮುಂದೆ ಸಾಗಬೇಕು. ಧೈರ್ಯದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ. ಭಯದಲ್ಲಿ ಬದುಕುವವರಿಗೆ ಗೆಲುವಿನ ರುಚಿ ಗೊತ್ತಿಲ್ಲ. ಅವರು ಇರುವಲ್ಲಿಯೇ ನಿಲ್ಲುತ್ತಾರೆ.
ಸೋಮಾರಿತನ
ಸೋಮಾರಿತನವು ನಿಮ್ಮನ್ನು ಯಶಸ್ಸಿನಿಂದ ದೂರವಿಡುತ್ತದೆ. ನೀವು ಯಶಸ್ಸು ಗಳಿಸಬೇಕು ಅಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಸೋಮಾರಿಯಾಗಿರುವವರಿಗೆ ಯಶಸ್ಸು ಸಿಗುವುದಿಲ್ಲ. ಎಂದೆಂದಿಗೂ ಕ್ರಿಯಾಶೀಲರಾಗಿರಬೇಕು.
ಅಪನಂಬಿಕೆ
ಅಪನಂಬಿಕೆಯು ಇತರರೊಂದಿಗೆ ಸಂಬಂಧ ವೃದ್ಧಿಯಾಗುವುದನ್ನು ತಡೆಯುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ನೀವು ಇತರರನ್ನು ನಂಬಬೇಕು. ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು. ಇತರರ ಅನುಭವದಿಂದ ಪಾಠ ಕಲಿಯಬೇಕು.
ವೈಫಲ್ಯಗಳು
ವೈಫಲ್ಯಕ್ಕೆ ಹೆದರಬೇಡಿ. ಗೆಲುವಿನ ಸವಿಯನ್ನು ಅನುಭವಿಸಲು ಸೋಲಿನ ರುಚಿ ಅರಿಯಬೇಕು. ಸೋಲು ಅನುಭವವನ್ನು ನೀಡುತ್ತದೆ. ನೀವು ಯಶಸ್ವಿಯಾಗಲು ಬಯಸಿದರೆ, ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ಒಮ್ಮೆ ಸೋತ ಮಾತ್ರಕ್ಕೆ ಹೆದರಿ ಹಿಂದೆ ಸರಿಯಬಾರದು.
ಅಜ್ಞಾನ
ಅಜ್ಞಾನವು ನಿಮ್ಮನ್ನು ಯಶಸ್ಸಿನಿಂದ ದೂರವಿಡುತ್ತದೆ. ನೀವು ಯಶಸ್ವಿಯಾಗಲು ಬಯಸಿದರೆ ನೀವು ಪ್ರತಿದಿನ ಕಲಿಯಬೇಕು, ಜ್ಞಾನ ಸಂಪಾದನೆ ಮಾಡಬೇಕು. ಪ್ರತಿಯೊಂದು ವಿಷಯದ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು.
ಸೋಲಿನ ಭಯ
ಸೋಲಿ ಭಯವು ನಿಮ್ಮನ್ನು ಮುಂದೆ ಸಾಗದಂತೆ ತಡೆಯುತ್ತದೆ. ಯಶಸ್ಸು ಸಾಧಿಸಲು, ನೀವು ವೈಫಲ್ಯದ ಭಯವನ್ನು ಬಿಟ್ಟು ಮುನ್ನಡೆಯಬೇಕು. ಆಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಯಾವುದೇ ಕೆಲಸದ ಆರಂಭಕ್ಕೂ ಮೊದಲೇ ಮುಂದೆ ಏನಾಗಬಹುದು, ಒಂದು ವೇಳೆ ಸೋತರೆ ಏನು ಮಾಡುವುದು ಎಂಬ ಚಿಂತೆ ದೂರ ಮಾಡಿ.
ಇತರ ವಿಷಯಗಳ ಬಗ್ಗೆ ಧ್ಯಾನಿಸಿ
ಗೊಂದಲಗಳು ನಿಮ್ಮನ್ನು ಗುರಿಗಳ ಮೇಲೆ ಕೇಂದ್ರೀಕರಿಸುವುದನ್ನು ತಡೆಯುತ್ತದೆ. ಯಶಸ್ವಿಯಾಗಲು ನೀವು ಶಾಂತವಾಗಿರಬೇಕು. ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ. ಇತರ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಡಿ.
ವಿಭಾಗ