ಕನ್ನಡ ಸುದ್ದಿ  /  Lifestyle  /  Undergo Thyroid Test If You See These Changes In The Face

Thyroid Disease: ನಿರ್ಲಕ್ಷ್ಯ ಬೇಡ, ಮುಖದಲ್ಲಿ ಈ ಬದಲಾವಣೆ ಕಂಡುಬಂದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಿ

ಹೈಪೋಥೈರಾಯ್ಡಿಸಮ್ ಹೊಂದಿರುವ ಜನರ ದೇಹದಲ್ಲಿ ದ್ರವ ಸಂಗ್ರಹಗೊಳ್ಳುತ್ತದೆ. ಹೊಟ್ಟೆ ಉಬ್ಬುತ್ತದೆ. ಆಯಾಸ, ಅಸಹನೆ, ಮಾನಸಿಕ ಆತಂಕ ಹೆಚ್ಚುತ್ತದೆ. ಮುಖಭಾವದಲ್ಲಿನ ಬದಲಾವಣೆ ಕೂಡಾ ಈ ಹೈಪೋಥೈರಾಯ್ಡಿಸಮ್‌ನ ಲಕ್ಷಣ ಆಗಿರಬಹುದು.

ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಿ
ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಿ

ಜಗತ್ತಿನ ಅರ್ಧದಷ್ಟು ಮಹಿಳೆಯರನ್ನು ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ ಎಂಬ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಬೆಳಕಿಗೆ ಬರುವುದೇ ತಡವಾಗಿ. ಇದನ್ನು ನಿರ್ಲಕ್ಷಿಸುವುದು ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಕತ್ತಿನ ಮುಂಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಗೆ ಹಾನಿಯಾಗಿ ಕೆಲ ಆರೋಗ್ಯ ಅಪಾಯಗಳು ಎದುರಾಗುತ್ತವೆ. ಆರಂಭಿಕ ದಿನಗಳಲ್ಲೇ ಇದನ್ನು ಗುರುತಿಸುವುದು ಉತ್ತಮ. ಆರಂಭದಲ್ಲಿ ಕೆಲವು ರೀತಿಯ ರೋಗಲಕ್ಷಣಗಳು ಮುಖದ ಮೇಲೆ ಕಾಣಿಸಿಕೊಳ್ಳುತ್ತವೆ. ಆದರೆ ಎಲ್ಲರೂ ಅದನ್ನು ನಿರ್ಲಕ್ಷಿಸುತ್ತಾರೆ. ಹೀಗಾಗಿ ಸಮಸ್ಯೆ ಉಲ್ಬಣಗೊಳ್ಳುತ್ತದೆ.‌ ಹೀಗಾಗಿ ಈ ಸಮಸ್ಯೆಯನ್ನು ಬೇಗನೆ ಗುರುತಿಸಿ ಪರಿಹಾರ ಕಂಡುಕೊಳ್ಳಿ.

ಥೈರಾಯ್ಡ್‌ನಲ್ಲಿ ಎರಡು ವಿಧಗಳಿವೆ

1. ಹೈಪರ್ ಥೈರಾಯ್ಡಿಸಮ್

2. ಹೈಪೋಥೈರಾಯ್ಡಿಸಮ್

ಹೈಪರ್ ಥೈರಾಯ್ಡಿಸಮ್ ಹೊಂದಿರುವ ಜನರಲ್ಲಿ ಥೈರಾಯ್ಡ್ ಹಾರ್ಮೋನ್ ಹೆಚ್ಚು ಉತ್ಪಾತ್ತಿಯಾಗುತ್ತದೆ. ಇನ್ನೊಂದೆಡೆ ಹೈಪೋಥೈರಾಯ್ಡಿಸಮ್ ಎಂದರೆ ಥೈರಾಯ್ಡ್ ಹಾರ್ಮೋನ್‌ನ ಕಡಿಮೆ ಉತ್ಪಾದನೆಯಾಗಿದೆ. ಈ ಎರಡೂ ಪರಿಸ್ಥಿತಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳಲ್ಲಿ ಹೈಪೋಥೈರಾಯ್ಡಿಸಮ್ ಬಂದಾಗ ಮುಖದಲ್ಲಿ ಕೆಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ.

ಹೈಪೋಥೈರಾಯ್ಡಿಸಮ್ ಕುರಿತು ಒಂದಿಷ್ಟು ಮಾಹಿತಿ

ಮೇಯೊ ಕ್ಲಿನಿಕ್ ಪ್ರಕಾರ, ನಿಮ್ಮ ಥೈರಾಯ್ಡ್ ಗ್ರಂಥಿಯು ಕೆಲವು ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸದಿದ್ದಾಗ ಈ ಹೈಪೋಥೈರಾಯ್ಡಿಸಮ್ ಸಮಸ್ಯೆ ಉಂಟಾಗುತ್ತದೆ. ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ಬೊಜ್ಜು, ಕೀಲು ನೋವು, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ಬಳಿಕ ಇದು ದೀರ್ಘಕಾಲದ ಸಮಸ್ಯೆಯಾಗಿ ಬದಲಾಗಬಹುದು.

ಮುಖದಲ್ಲಿ ಗೋಚರಿಸುವ ಬದಲಾವಣೆಗಳು

ಹೈಪೋಥೈರಾಯ್ಡಿಸಮ್ ಹೊಂದಿರುವ ಜನರ ದೇಹದಲ್ಲಿ ದ್ರವ ಸಂಗ್ರಹಗೊಳ್ಳುತ್ತದೆ. ಹೊಟ್ಟೆ ಉಬ್ಬುತ್ತದೆ. ಆಯಾಸ, ಅಸಹನೆ, ಮಾನಸಿಕ ಆತಂಕ ಹೆಚ್ಚುತ್ತದೆ. ಮುಖಭಾವದಲ್ಲಿನ ಬದಲಾವಣೆ ಕೂಡಾ ಈ ಹೈಪೋಥೈರಾಯ್ಡಿಸಮ್‌ನ ಲಕ್ಷಣ ಆಗಿರಬಹುದು. ಮುಖವು ನಿಸ್ತೇಜವಾಗುತ್ತದೆ. ಕಣ್ಣು ಮತ್ತು ಮುಖ ಉಬ್ಬುತ್ತದೆ. ಕಣ್ಣುರೆಪ್ಪೆಗಳು ವಕ್ರವಾಗುತ್ತವೆ. ಗಂಟಲು ಗಟ್ಟಿಯಾಗುತ್ತದೆ. ಥೈರಾಯ್ಡ್ ಹಾರ್ಮೋನುಗಳ ಕಡಿಮೆ ಬಿಡುಗಡೆಯಿಂದಾಗಿ ಕಣ್ಣುರೆಪ್ಪೆಗಳ ಡ್ರೂಪಿಂಗ್ ಸಂಭವಿಸುತ್ತದೆ. ಹುಬ್ಬುಗಳು ತೆಳುವಾಗುವುದು ಕೂಡಾ ಹೈಪೋಥೈರಾಯ್ಡಿಸಮ್‌ನ ಲಕ್ಷಣವನ್ನೇ ಸೂಚಿಸುತ್ತದೆ. ಕೂದಲು ಕೂಡಾ ಉದುರುತ್ತದೆ.

ಇತರ ಲಕ್ಷಣಗಳು

- ಆಯಾಸ

- ಚಳಿ ತಡೆದುಕೊಳ್ಳಲು ಆಗದಿರುವುದು

- ಮಲಬದ್ಧತೆ

- ಒಣ ಚರ್ಮ

- ತೂಕ ಹೆಚ್ಚಳ

- ಒರಟುತನ

- ಸ್ನಾಯು ದೌರ್ಬಲ್ಯ

- ಹೆಚ್ಚಿದ ರಕ್ತದ ಕೊಲೆಸ್ಟ್ರಾಲ್ ಮಟ್ಟ

- ಸ್ನಾಯು ಸೆಳೆತ

- ಮುಟ್ಟಿನಲ್ಲಿ ಏರುಪೇರು

- ಹೃದಯ ಬಡಿತವನ್ನು ನಿಧಾನಗಳ್ಳುವುದು

- ಖಿನ್ನತೆ

- ಜ್ಞಾಪಕ ಶಕ್ತಿ ಸಮಸ್ಯೆ

ಇಷ್ಟು ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದು ಲಕ್ಷಣ ನಿಮ್ಮ ಗಮನಕ್ಕೆ ಬಂದರೂ, ತಕ್ಷಣ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈಗ ಹೆಚ್ಚಾಗಿ ಅನೇಕ ಮಹಿಳೆಯರು ಥೈರಾಯ್ಡ್ ಗ್ರಂಥಿಯ ಸಮಸ್ಯೆ ಅನುಭವಿಸುತ್ತಾರೆ. ಜೊತೆಗೆ ಪುರುಷರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಥೈರಾಯಿಡ್‌ ಸಮಸ್ಯೆಗೆ ಆಯುರ್ವೇದ ಪದ್ಧತಿಯಲ್ಲೂ ಸೂಕ್ತ ಔಷಧಗಳಿವೆ. ಆಯುರ್ವೇದ ತಜ್ಞರುಗಳು ಯಾವುದೇ ವೈದ್ಯಕೀಯ ತಪಾಸಣೆಯಿಲ್ಲದೆ ಈ ಸಮಸ್ಯೆಯನ್ನು ಪತ್ತೆಹಚ್ಚುತ್ತಾರೆ. ಹೀಗಾಗಿ ಆಯುರ್ವೇದ ಪಂಡಿತರ ಬಳಿಯೂ ನೀವು ನಿಮ್ಮನ್ನು ಪರೀಕ್ಷಿಸಿಕೊಳ್ಳಬಹುದು. ಇತ್ತೀಚೆಗೆ ಈ ಸಮಸ್ಯೆ ಹೆಚ್ಚಿರುವುದರಿಂದ ತ್ವರಿತ ಪರೀಕ್ಷೆ ಹಾಗೂ ಚಿಕಿತ್ಸೆ ತುಂಬಾ ಅಗತ್ಯ.

ವಿಭಾಗ