Carrot Recipe: ಕ್ಯಾರೆಟ್‌ನಿಂದ ಹೀಗೂ ವಿಭಿನ್ನ ರೆಸಿಪಿ ತಯಾರಿಸಬಹುದು...ಒಮ್ಮೆ ಟ್ರೈ ಮಾಡೇ ಬಿಡಿ, ಬಹಳ ಸಿಂಪಲ್
ಸಿಹಿ, ಹುಳಿ, ಖಾರವಾದ ರೆಸಿಪಿ ಎಂದರೆ ಯಾರೂ ಕೂಡಾ ಬೇಡ ಎನ್ನುವುದಿಲ್ಲ. ಕ್ಯಾರೆಟ್, ಕಾರ್ನ್‌ಸ್ಟಾಚ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ಒಮ್ಮೆ ಈ ರೆಸಿಪಿ ತಯಾರಿಸಿ ನೋಡಿ, ಈ ರೀತಿ ರೆಸಿಪಿಯನ್ನು ಬಹುಶ: ನೀವು ಮೊದಲು ಎಂದಿಗೂ ಟೇಸ್ಟ್ ಮಾಡಿರಲು ಸಾಧ್ಯವೇ ಇಲ್ಲ.
ಎಲ್ಲರೂ ಬಹಳ ಇಷ್ಟ ಪಟ್ಟು ತಿನ್ನುವ ತರಕಾರಿ ಎಂದರೆ ಅದು ಕ್ಯಾರೆಟ್. ಇದನ್ನು ಹಸಿಯಾಗಿಯೂ ತಿನ್ನಬಹುದು. ವಿಧ ವಿಧವಾದ ರೆಸಿಪಿ ಕೂಡಾ ಮಾಡಿ ತಿನ್ನಬಹುದು. ಅದರಲ್ಲೂ ಕ್ಯಾರೆಟ್ ಹಲ್ವಾ, ಎಲ್ಲರೂ ಹೆಚ್ಚಾಗಿ ಬಯಸುವ ರೆಸಿಪಿ.
ಆದರೆ ನೀವು ಪ್ರತಿ ಬಾರಿ ಅದೊಂದೇ ರೆಸಿಪಿ ಮಾಡುವ ಬದಲಿಗೆ ಏನಾದರೂ ಅಪರೂಪದ ರೆಸಿಪಿ ತಯಾರಿಸಿ. ಸಿಹಿ, ಹುಳಿ, ಖಾರವಾದ ರೆಸಿಪಿ ಎಂದರೆ ಯಾರೂ ಕೂಡಾ ಬೇಡ ಎನ್ನುವುದಿಲ್ಲ. ಕ್ಯಾರೆಟ್, ಕಾರ್ನ್‌ಸ್ಟಾಚ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ಒಮ್ಮೆ ಈ ರೆಸಿಪಿ ತಯಾರಿಸಿ ನೋಡಿ, ಈ ರೀತಿ ರೆಸಿಪಿಯನ್ನು ಬಹುಶ: ನೀವು ಮೊದಲು ಎಂದಿಗೂ ಟೇಸ್ಟ್ ಮಾಡಿರಲು ಸಾಧ್ಯವೇ ಇಲ್ಲ.
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್ - 200 ಗ್ರಾಂ
ಕಾರ್ನ್ ಸ್ಟಾಚ್ - 150 ಗ್ರಾಂ
ಸಕ್ಕರೆ - 1 ಚಮಚ
ಸೋಯಾಸಾಸ್ - 1 ಚಮಚ
ಅಚ್ಚ ಖಾರದ ಪುಡಿ - 1/2 ಟೀ ಸ್ಪೂನ್
ಸಕ್ಕರೆ ಪುಡಿ - 1 ಟೀ ಸ್ಪೂನ್
ಪೀ ನಟ್ ಬಟರ್ - 1 ಟೀ ಸ್ಪೂನ್
ಬಿಸಿ ಎಣ್ಣೆ - 1/2 ಸ್ಪೂನ್
ತಯಾರಿಸುವ ವಿಧಾನ
ಕ್ಯಾರೆಟ್ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ
ಸ್ವಲ್ಪ ನೀರು ಸೇರಿಸಿ 10 ನಿಮಿಷಗಳ ಕಾಲ ಕುಕ್ ಮಾಡಿ
ನಂತರ ನೀರನ್ನು ಸಂಪೂರ್ಣ ಶೋಧಿಸಿ ಕ್ಯಾರೆಟನ್ನು ಗ್ರೈಂಡ್ ಮಾಡಿ
ಕ್ಯಾರೆಟ್ ಮಿಶ್ರಣಕ್ಕೆ ಸ್ವಲ್ಪ ಕಾರ್ನ್‌ಸ್ಟಾಚ್ ಹಾಗೂ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ
ಈ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿ ಮಧ್ಯದಲ್ಲಿ ಪ್ರೆಸ್ ಮಾಡಿ
ಬಿಸಿ ನೀರಿಗೆ ಈ ಉಂಡೆಗಳನ್ನು ಸೇರಿಸಿ 5 ನಿಮಿಷ ಕುಕ್ ಮಾಡಿ ಎಲ್ಲವನ್ನೂ ಹೊರಗೆ ತೆಗೆದು ಪ್ಲೇಟ್‌ಗೆ ಜೋಡಿಸಿ
ಒಂದು ಬೌಲ್‌ಗೆ ಸೋಯಾಸಾಸ್, ಅಚ್ಚ ಖಾರದ ಪುಡಿ, ಸಕ್ಕರೆ ಪುಡಿ, ಪೀನಟ್ ಬಟರ್, ಬಿಸಿ ಎಣ್ಣೆ, ಕ್ಯಾರೆಟ್ ಬೇಯಿಸಿದ ನೀರು ಸೇರಿಸಿ ಮಿಕ್ಸ್ ಮಾಡಿ
ನೀರಿನಲ್ಲಿ ಕುಕ್ ಮಾಡಿದ ಕ್ಯಾರೆಟ್ ಪೇಡಾವನ್ನು ಈ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ 30 ನಿಮಿಷ ಬಿಡಿ
ನಂತರ ಕ್ಯಾರೆಟ್ ಪೇಡಾಗಳನ್ನು ನೀರಿನ ಮಿಶ್ರಣ ಸೋರಿಸಿ ಪ್ಲೇಟ್‌ಗೆ ಜೋಡಿಸಿ ಸರ್ವ್ ಮಾಡಿ
ಈ ವಿಭಿನ್ನವಾದ ರೆಸಿಪಿ ನಿಮಗೆ ಖಂಡಿತ ಇಷ್ಟವಾಗುತ್ತದೆ
ವಿಭಾಗ