ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ

ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ

Civil Services exam 2025: ನಾಗರಿಕ ಸೇವಾ ಪರೀಕ್ಷೆಯ ಅಧಿಸೂಚನೆಯನ್ನು ಯುಪಿಎಸ್ಸಿ ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ ಈ ವರ್ಷ 979 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.

ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ
ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ

UPSC Civil Services Exam (CSE): ಕೇಂದ್ರ ಲೋಕಸೇವಾ ಆಯೋಗ (UPSC) 2025ರ ಜನವರಿ 22 ರಂದು ನಾಗರಿಕ ಸೇವೆಗಳ ಪರೀಕ್ಷೆಯ (Preliminary) ಅಧಿಸೂಚನೆಯನ್ನು ಅಧಿಕೃತ ವೆಬ್​ಸೈಟ್​ನಲ್ಲಿ (upsc.gov.in) ಬಿಡುಗಡೆ ಮಾಡಿದೆ. ಈ ವರ್ಷ 979 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನವಾಗಿದೆ. 

ಯುಪಿಎಸ್ಸಿ ಅಧಿಕೃತ ವೆಬ್​ಸೈಟ್​ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಒನ್ ಟೈಮ್ ರಿಜಿಸ್ಟ್ರೇಷನ್ (OTR) ಪ್ರೊಫೈಲ್ ರಚಿಸಬೇಕಾಗುತ್ತದೆ. ಒಮ್ಮೆ ಒಟಿಆರ್ ಪ್ರೊಫೈಲ್ ರಚಿಸಿದರೆ ಅದು ಜೀವಿತಾವಧಿಯವರೆಗೆ ಮಾನ್ಯವಾಗಿರುತ್ತದೆ. ಈಗಾಗಲೇ ಪ್ರೊಫೈಲ್ ರಚಿಸಿದವರು ನೇರವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಈ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವ ಒಟ್ಟು ಹುದ್ದೆಗಳ ಪೈಕಿ 38 ಹುದ್ದೆಗಳನ್ನು ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಅರ್ಜಿ ಆರಂಭ, ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22 ಜನವರಿ 2025

ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: 02 ಫೆಬ್ರವರಿ 2025

ಅಪ್ಲಿಕೇಶನ್‌ ತಿದ್ದುಪಡಿಗೆ ಅವಕಾಶ: 12 ಫೆಬ್ರವರಿ 2025 ರಿಂದ 18 ಫೆಬ್ರವರಿ 2025

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕ: 25 ಮೇ 2025

ವೇತನ: 60000 to 80000 ರೂಪಾಯಿ (ತಿಂಗಳಿಗೆ)

ಯುಪಿಎಸ್ಸಿ ಸಿಎಸ್​​ಸಿ 2025ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಯುಪಿಎಸ್ಸಿ ಅಧಿಕೃತ ವೆಬ್‌ಸೈಟ್ upsc.gov.inಗೆ ಭೇಟಿ ನೀಡಿ.
  • ಮುಖಪುಟದಲ್ಲಿ "ಯುಪಿಎಸ್​ಸಿ ನಾಗರಿಕ ಸೇವೆಗಳ ಅಧಿಸೂಚನೆ" ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಜಾಹೀರಾತಿನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
  • ಈಗ upsconline.nic.in ನಲ್ಲಿ ಲಭ್ಯವಿರುವ “ಒಂದು ಬಾರಿ ನೋಂದಣಿ (OTR) ಮತ್ತು ಯುಪಿಎಸ್ಸಿ ಪರೀಕ್ಷೆಗಾಗಿ ಆನ್‌ಲೈನ್ ಅಪ್ಲಿಕೇಶನ್” ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • ಒಟಿಆರ್​ ಪ್ಲಾಟ್‌ಫಾರ್ಮ್ ಮೂಲಕ ನೋಂದಾಯಿಸಿಕೊಳ್ಳಿ.
  • ಯಶಸ್ವಿ ನೋಂದಣಿಯ ನಂತರ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ.
  • ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.

ವಿದ್ಯಾರ್ಹತೆ

ಈ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಯಾವುದೇ ವಿಷಯ ಅಥವಾ ವಿಭಾಗದಲ್ಲಿ ಪದವಿ ಪಾಸಾದವರು, ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸುವಾಗ ಪದವಿ ಪ್ರಮಾಣಪತ್ರ ಸಲ್ಲಿಸಬೇಕು.

ವಯೋಮಿತಿ

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ (ಆಗಸ್ಟ್ 1, 2025) ಆಗಿರಬೇಕು. ಗರಿಷ್ಠ 32 ವರ್ಷ ಮೀರಬಾರದು.
  • ಇತರೆ ಹಿಂದುಳಿದ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ.
  • ಎಸ್ಸಿ/ಎಸ್ಟಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಐದು ವರ್ಷದ ವಯಸ್ಸಿನ ಸಡಿಲಿಕೆ ಇರುತ್ತದೆ.
  • ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳು ಯುಪಿಎಸ್ಸಿ ಸಿಎಸ್ಇಗೆ 6 ಬಾರಿ ಪ್ರಯತ್ನಿಸಬಹುದು. ಒಬಿಸಿ ಅಭ್ಯರ್ಥಿಗಳು 9 ಬಾರಿ ಪರೀಕ್ಷೆ ತೆಗೆದುಕೊಳ್ಳಬಹುದು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಮಿತಿ ಇಲ್ಲ.

ಇದನ್ನೂ ಓದಿ: ಹೀರೋ ಎಕ್ಸ್‌ಟ್ರೀಮ್‌ 250ಆರ್‌ ಬೈಕ್‌ ಬುಕ್ಕಿಂಗ್‌ ಮುಂದಿನ ತಿಂಗಳು ಆರಂಭ, ಮಾರ್ಚ್‌ನಲ್ಲಿ ಡೆಲಿವರಿ, ಹೊಸ ಬೈಕ್‌ ಹೀಗಿದೆ ನೋಡಿ

ಅರ್ಜಿ ಶುಲ್ಕ

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ 2025 ರಿಜಿಸ್ಟ್ರೇಷನ್‌ ಶುಲ್ಕ ರೂಪಾಯಿ 100.

ಎಸ್ಸಿ/ಎಸ್ಟಿ/ಮಹಿಳೆಯರು/ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಸಂಪರ್ಕ: ಯಾವುದೇ ಗೊಂದಲಗಳಿಗೆ ವೈಯಕ್ತಿಕ ಭೇಟಿ ನೀಡುವುದಿದ್ದರೆ, ಕ್ಯಾಂಪಸ್​​​ನ ಗೇಟ್ 'ಸಿ' ಬಳಿಯ ಯುಪಿಎಸ್ಸಿ ಸೌಲಭ್ಯ ಕೌಂಟರ್​​ಗೆ ಭೇಟಿ ನೀಡಬಹುದು. ದೂರವಾಣಿ ಸಂಪರ್ಕ: 011-23385271/011-23381125/011-2309885.011.230.

UPSC CSE 2025 ಪರೀಕ್ಷೆಯನ್ನು ಈ ಕೆಳಗಿನ ಸೇವೆಗಳಿಗೆ ನಡೆಸಲಾಗುವುದು

  1. ಭಾರತೀಯ ಆಡಳಿತ ಸೇವೆ
  2. ಭಾರತೀಯ ವಿದೇಶಾಂಗ ಸೇವೆ
  3. ಭಾರತೀಯ ಪೊಲೀಸ್ ಸೇವೆ
  4. ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆ, ಗ್ರೂಪ್ ‘ಎ’
  5. ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆ, ಗ್ರೂಪ್ ‘ಎ’
  6. ಭಾರತೀಯ ಕಾರ್ಪೊರೇಟ್ ಕಾನೂನು ಸೇವೆ, ಗ್ರೂಪ್ ‘ಎ’
  7. ಭಾರತೀಯ ರಕ್ಷಣಾ ಖಾತೆಗಳ ಸೇವೆ, ಗ್ರೂಪ್ ‘ಎ’
  8. ಭಾರತೀಯ ರಕ್ಷಣಾ ಎಸ್ಟೇಟ್ ಸೇವೆಗಳು, ಗ್ರೂಪ್ ‘ಎ’
  9. ಭಾರತೀಯ ಮಾಹಿತಿ ಸೇವೆ, ಗ್ರೂಪ್ ‘ಎ’
  10. ಭಾರತೀಯ ಅಂಚೆ ಸೇವೆ, ಗ್ರೂಪ್ ‘ಎ’
  11. ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆಗಳು ಮತ್ತು ಹಣಕಾಸು ಸೇವೆಗಳು, ಗ್ರೂಪ್ ‘ಎ’
  12. ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಸಂಚಾರ), ಗ್ರೂಪ್ ‘ಎ’
  13. ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಸಿಬ್ಬಂದಿ), ಗ್ರೂಪ್ ‘ಎ’
  14. ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಖಾತೆಗಳು), ಗ್ರೂಪ್ ‘ಎ’
  15. ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆಗಳು, ಗ್ರೂಪ್ ‘ಎ’
  16. ಭಾರತೀಯ ಕಂದಾಯ ಸೇವೆ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ಗುಂಪು ‘ಎ’
  17. ಭಾರತೀಯ ಕಂದಾಯ ಸೇವೆ (ಆದಾಯ ತೆರಿಗೆ) ಗುಂಪು ‘ಎ’
  18. ಭಾರತೀಯ ವ್ಯಾಪಾರ ಸೇವೆ, ಗುಂಪು 'ಎ' (ಗ್ರೇಡ್ 3)
  19. ಸಶಸ್ತ್ರ ಪಡೆಗಳ ಪ್ರಧಾನ ಕಚೇರಿ ನಾಗರಿಕ ಸೇವೆ, ಗುಂಪು 'ಬಿ' (ವಿಭಾಗ ಅಧಿಕಾರಿ ದರ್ಜೆ)
  20. ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿ ನಾಗರಿಕ ಸೇವೆಗಳು (DANICS), ಗ್ರೂಪ್  ‘ಬಿ’
  21. ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿ ಪೊಲೀಸ್ ಸೇವೆ (DANIPS), ಗ್ರೂಪ್ ‘ಬಿ’
  22. ಪಾಂಡಿಚೇರಿ ನಾಗರಿಕ ಸೇವೆಗಳು (PDICS), ಗ್ರೂಪ್ ‘ಬಿ’
  23. ಪಾಂಡಿಚೇರಿ ಪೊಲೀಸ್ ಸೇವೆ (ಪಂಡಿತರು), ಗ್ರೂಪ್ 'ಬಿ'

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೆಟ್ಟ ಸಾಲಗಳ ಪರಿಣಾಮ ಏನಾಗಬಹುದು, ಇದಕ್ಕೆ ಕಡಿವಾಣ ಹಾಕುವುದು ಹೇಗೆ – ರಂಗನೋಟ ಅಂಕಣ

Whats_app_banner