ಕನ್ನಡ ಸುದ್ದಿ  /  Lifestyle  /  Use Of Disinfectant During Pregnancy Linked To Childhood Asthma, Eczema

ಗರ್ಭಾವಸ್ಥೆಯಲ್ಲಿ ಸೋಂಕು ನಿವಾರಕದ ಬಳಕೆಯಿಂದ ಮಗುವಿಗೆ ಬಾಲ್ಯದಲ್ಲೇ ಅಸ್ತಮಾ ಬರತ್ತೆ - ಅಧ್ಯಯನ

ಇತ್ತೀಚಿನ ಅಧ್ಯಯನವೊಂದು ಗರ್ಭಿಣಿಯರು ಸೋಂಕು ನಿವಾರಕಗಳನ್ನು ಬಳಸುವುದರಿಂದ ಅವರ ಮಕ್ಕಳಿಗೆ ಬಾಲ್ಯದಲ್ಲಿಯೇ ಅಸ್ತಮಾ ಹಾಗೂ ಅಲರ್ಜಿ ಉಂಟಾಗಲು ಕಾರಣವಾಗುತ್ತದೆ ಎಂದು ತೋರಿಸಿಕೊಟ್ಟಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇತ್ತೀಚಿನ ಅಧ್ಯಯನವೊಂದು ಗರ್ಭಿಣಿಯರು ಸೋಂಕು ನಿವಾರಕಗಳನ್ನು ಬಳಸುವುದರಿಂದ ಅವರ ಮಕ್ಕಳಿಗೆ ಬಾಲ್ಯದಲ್ಲಿಯೇ ಅಸ್ತಮಾ ಹಾಗೂ ಅಲರ್ಜಿ ಉಂಟಾಗಲು ಕಾರಣವಾಗುತ್ತದೆ ಎಂದು ತೋರಿಸಿಕೊಟ್ಟಿದೆ. ಈ ಅಧ್ಯಯನದ ಫಲಿತಾಂಶಗಳು 'ಆಕ್ಯುಪೇಷನಲ್ ಅಂಡ್ ಎನ್ವಿರಾನ್ಮೆಂಟಲ್ ಮೆಡಿಸಿನ್' ಜರ್ನಲ್‌ನಲ್ಲಿ ಪ್ರಕಟವಾಗಿವೆ.

ಟ್ರೆಂಡಿಂಗ್​ ಸುದ್ದಿ

ಸ್ಯಾನಿಟೈಜರ್​ನಂತಹ ಸೋಂಕು ನಿವಾರಕಗಳನ್ನು ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಕೇಂದ್ರಗಳಲ್ಲಿ ಆಗಾಗ್ಗೆ ಬಳಸಲಾಗುತ್ತಿತ್ತು. ಆದರೆ ಕೋವಿಡ್​ ಸಾಂಕ್ರಾಮಿಕವು ಸಾಮಾನ್ಯ ಜನರಲ್ಲಿ ಸೇರಿದಂತೆ ಎಲ್ಲೆಡೆ ಸೋಂಕು ನಿವಾರಕಗಳ ಬಳಕೆಯನ್ನು ಹೆಚ್ಚಳ ಹಾಗೂ ಅತ್ಯಗತ್ಯ ಮಾಡಿದೆ. ಕೆಲಸದ ಸ್ಥಳದಲ್ಲಿ ಹೆಚ್ಚು ಸ್ಯಾನಿಟೈಜರ್​ ಅನ್ನು ಬಳಸಲಾಗುತ್ತದೆ. ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸೋಂಕು ನಿವಾರಕಗಳನ್ನು ಬಳಸುವುದರ ಪರಿಣಾಮವನ್ನು ಅವರ ಮಕ್ಕಳು ಎದುರಿಸಬೇಕಾಗುತ್ತದೆ ಎಂಬುದನ್ನು ಅರಿಯಬೇಕಿದೆ.

ಜಪಾನ್ ಪರಿಸರ ಮತ್ತು ಮಕ್ಕಳ ಅಧ್ಯಯನದಲ್ಲಿ ಭಾಗವಹಿಸಿದ 78, 915 ತಾಯಿ-ಮಗು ಜೋಡಿಗಳ ಡೇಟಾವನ್ನು ಲೇಖಕರು ಬಳಸಿದ್ದಾರೆ. ಕೆಲಸದ ಸ್ಥಳದಲ್ಲಿ ಸೋಂಕು ನಿವಾರಕಗಳಿಗೆ ತಾಯಂದಿರು ಒಡ್ಡಿಕೊಳ್ಳುವುದು 3 ವರ್ಷ ವಯಸ್ಸಿನ ತಮ್ಮ ಮಕ್ಕಳಲ್ಲಿ ಅಲರ್ಜಿಯ ಕಾಯಿಲೆಗಳ ರೋಗನಿರ್ಣಯದ ಅಪಾಯದೊಂದಿಗೆ ಸಂಬಂಧಿಸಿದೆ ಎಂಬುದನ್ನು ಪರಿಶೀಲಿಸಿದ್ದಾರೆ.

ಸೋಂಕು ನಿವಾರಕಗಳನ್ನು ಎಂದಿಗೂ ಬಳಸದ ತಾಯಂದಿರ ಮಕ್ಕಳಿಗೆ ಹೋಲಿಸಿದರೆ, ತಾಯಂದಿರು ವಾರಕ್ಕೆ ಒಂದರಿಂದ ಆರು ಬಾರಿ ಸೋಂಕು ನಿವಾರಕಗಳನ್ನು ಬಳಸಿದ ತಾಯಂದಿರ ಮಕ್ಕಳು ಅಸ್ತಮಾ ಹಾಗೂ ಅರ್ಜಿಗೆ ಅಲರ್ಜಿಗೆ ತುತ್ತಾಗುತ್ತಾರೆ ಎಂಬುದು ತಿಳಿದು ಬಂದಿದೆ.

ಸೋಂಕು ನಿವಾರಕಗಳಿಗೆ ಪ್ರಸವಪೂರ್ವ ಒಡ್ಡಿಕೊಳ್ಳುವಿಕೆ ಮತ್ತು ಈ ಅಲರ್ಜಿಯ ಪರಿಸ್ಥಿತಿಗಳನ್ನು ಅನುಭವಿಸುವ ಮಕ್ಕಳ ವಿಲಕ್ಷಣಗಳ ನಡುವೆ ಸಂಬಂಧವಿದೆ. ಪ್ರತಿದಿನ ಸೋಂಕು ನಿವಾರಕಗಳಿಗೆ ಒಡ್ಡಿಕೊಳ್ಳುವ ತಾಯಂದಿರ ಮಕ್ಕಳು ಹೆಚ್ಚಿನ ರೋಗನಿರ್ಣಯದ ಸಾಧ್ಯತೆಗಳನ್ನು ಹೊಂದಿದ್ದಾರೆ. ಅಸ್ತಮಾ ವಿಚಾರದಲ್ಲಿ ಇದು ಸೋಂಕು ನಿವಾರಕಗಳಿಗೆ ಒಟ್ಟಿಕೊಳ್ಳದ ತಾಯಂದಿರ ಮಕ್ಕಳಿಗಿಂತ ಶೇ.26ರಷ್ಟು ಹೆಚ್ಚು ಮತ್ತು ಅಲರ್ಜಿ ವಿಚಾರದಲ್ಲಿ ಶೇ.29 ರಷ್ಟು ಹೆಚ್ಚಾಗಿದೆ.

ಇನ್ನೊಂದು ವಿಚಾರವೆಂದರೆ, ಕೆಲ ಪ್ರಕರಣಗಳಲ್ಲಿ ಮಕ್ಕಳ ಜೊತೆ ತಾಯಂದಿರು ಅಸ್ತಮಾ ಹಾಗೂ ಅಲರ್ಜಿಯನ್ನು ವರದಿ ಮಾಡಿದ್ದಾರೆ. ಸೋಂಕು ನಿವಾರಕಗಳು ಮೊದಲು ತಾಯಿಯ ಕರುಳಿನ ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಆಮೇಲೆ ಮಕ್ಕಳ ಮೇಲೆ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳಿಗೆ ಒಡ್ಡಿಕೊಳ್ಳುವುದು ಭ್ರೂಣದಲ್ಲಿನ ಪ್ರತಿರಕ್ಷಣಾ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ.

ವಿಭಾಗ