Valentine Day 2024: ವ್ಯಾಲೆಂಟೈನ್‌ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್‌ ಟಿಪ್ಸ್‌ ಬಳಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Valentine Day 2024: ವ್ಯಾಲೆಂಟೈನ್‌ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್‌ ಟಿಪ್ಸ್‌ ಬಳಸಿ

Valentine Day 2024: ವ್ಯಾಲೆಂಟೈನ್‌ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್‌ ಟಿಪ್ಸ್‌ ಬಳಸಿ

Valentine Day 2024: ಯಾವುದೇ ಪಾರ್ಟಿ ಇರಲಿ, ಸಾಮಾನ್ಯ ದಿನವಾಗಿರಲಿ ಯುವತಿಯರು ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಈ ವ್ಯಾಲೆಂಟೈನ್‌ ಡೇಗೆ ನೀವು ಎಲ್ಲರ ನಡುವೆ ಸುಂದರವಾಗಿ ಕಾಣಬೇಕೆಂದರೆ ಈ ಮೇಕಪ್‌ ಟಿಪ್ಸ್‌ ಫಾಲೋ ಮಾಡಿ.

ವ್ಯಾಲೆಂಟೈನ್‌ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್‌ ಟಿಪ್ಸ್‌ ಬಳಸಿ
ವ್ಯಾಲೆಂಟೈನ್‌ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್‌ ಟಿಪ್ಸ್‌ ಬಳಸಿ (PC: Unsplash)

Valentine Day 2024: ಇಂದು (ಫೆ 14) ಪ್ರೇಮಿಗಳ ದಿನ. ಪ್ರೀತಿಸುವ ಜೀವಗಳಿಗೆ ಇಂದು ವಿಶೇಷವಾದ ದಿನ. ನಿನ್ನೆ ರಾತ್ರಿಯಿಂದಲೇ ಪ್ರೇಮಿಗಳ ನಡುವೆ ಶುಭಾಶಯ ವಿನಿಮಯ ಆರಂಭವಾಗಿರುತ್ತದೆ. ಕಳೆದ ಒಂದು ವಾರದಿಂದ ಚಾಕೊಲೇಟ್‌ ಡೇ, ಪ್ರಪೋಸ್‌ ಡೇ, ಪ್ರಾಮಿಸ್‌ ಡೇ, ಹಗ್‌ ಡೇ ಎಂದೆಲ್ಲಾ ಒಂದೊಂದು ವಿಶೇಷ ದಿನವನ್ನು ಆಚರಿಸಿರುವ ಪ್ರೇಮಿಗಳು ಇಂದು ತಮ್ಮ ವಿಶೇಷ ದಿನವನ್ನು ಇನ್ನಷ್ಟು ಮಮೋರಬಲ್‌ ಆಗಿ ಆಚರಿಸಲು ಹೊರಟಿದ್ದಾರೆ.

ಪ್ರತಿ ಪ್ರೇಮಿಯೂ ತನ್ನ ಸಂಗಾತಿಯ ಮುಂದೆ ಬಹಳ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಮೊದಲ ನೋಟದಲ್ಲೇ ಪ್ರೇಮಿಯನ್ನು ಹೃದಯದಲ್ಲಿ ಬಂಧಿಯಾಗಿಸುವಂತೆ ಕಾತರಿಸುತ್ತಾರೆ. ಇನ್ನ ಯುವತಿಯರಿಗೆ ಮೇಕಪ್‌ ಎಂದರೆ ಬಹಳ ಇಷ್ಟ. ಸಾಮಾನ್ಯ ದಿನಗಳಲ್ಲೇ ತಮ್ಮ ಸೌಂದರ್ಯವನ್ನು ಅಷ್ಟು ಕೇರ್‌ ಮಾಡುವ ಯುವತಿಯರು ಇಂದು ಪ್ರೇಮಿಗಳ ದಿನದಂದು ಇನ್ನಷ್ಟು ಗ್ಲಾಮರಸ್‌ ಆಗಿ ಕಾಣಲು ಬಯಸುತ್ತಾರೆ. ಆದ್ದರಿಂದ ನೀವು ಇಂದು ಯಾವ ರೀತಿ ಮೇಕಪ್‌ ಆಗಬಹುದು ಎಂಬುದಕ್ಕೆ ಇಲ್ಲಿ ಕೆಲವೊಂದು ಟಿಪ್ಸ್‌ ಇವೆ. ಈ 7 ಟಿಪ್ಸ್‌ ಫಾಲೋ ಮಾಡಿದರೆ ನೀವು ಇಂದು ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಿರುವುದರಲ್ಲಿ ಅನುಮಾನವೇ ಇಲ್ಲ.

ಪ್ರೈಮರ್‌ ಹಚ್ಚುವುದು ಮೊದಲ ಆಯ್ಕೆಯಾಗಿರಲಿ

ಮೇಕಪ್‌ ಹಚ್ಚಿಕೊಳ್ಳುವ ಮುನ್ನ ಚರ್ಮಕ್ಕೆ ಒಂದೊಳ್ಳೆ ಪ್ರೈಮರ್‌ ಹಚ್ಚುವುದನ್ನು ಮರೆಯಬೇಡಿ. ಇದು ಮೇಕಪ್‌ ಆಕರ್ಷಕವಾಗಿ ಕಾಣಲು ಬಹಳ ಮುಖ್ಯ. ಮೊದಲು ಕ್ಲೆನ್ಸಿಂಗ್‌ ಮಿಲ್ಕ್‌ನಿಂದ ನಿಮ್ಮ ಮುಖವನ್ನು ಒಂದೆರಡು ನಿಮಿಷ ಮಸಾಜ್‌ ಮಾಡಿ ಕೊಳೆಯನ್ನು ತೆಗೆಯಿರಿ. ಒಂದೆರಡು ನಿಮಿಷದ ನಂತರ ಮಾಯಿಶ್ಚರೈಸರ್‌ ಅಥವಾ ಪ್ರೈಮರ್‌ ಹಚ್ಚಿ. ಇದರಿಂದ ನಿಮ್ಮ ಮೇಕಪ್‌ ಲಾಂಗ್‌ ಲಾಸ್ಟಿಂಗ್‌ ಆಗಿ ಇರಲಿದೆ.

ಫೌಂಡೇಶನ್‌

ಮಾಯಿಶ್ಚರೈಸರ್‌ ಅಥವಾ ಪ್ರೈಮರ್‌ ನಂತರ ನಿಮ್ಮ ಚರ್ಮದ ಟೋನ್‌ಗೆ ಹೊಂದುವ ಫೌಂಡೇಶನ್‌ ಹಚ್ಚಿ. ನಿಮ್ಮ ಮುಖದಲ್ಲಿ ಕಲೆಗಳಿದ್ದರೆ ಆ ಜಾಗಗಳಲ್ಲಿ ತುಸು ಹೆಚ್ಚಾಗಿ ಫೌಂಡೇಶನ್‌ ಅಪ್ಲೈ ಮಾಡಿ. ಚೀಕ್‌ ಬೋನ್ಸ್‌, ಮೂಗಿನ ತುದಿಗಳು, ತುಟಿಗಳ ಮೇಲ್ಭಾಗದಲ್ಲಿ ಸಮನಾಗಿ ಫೌಂಡೇಶನ್‌ ಅಪ್ಲೈ ಮಾಡಿ. ಆದಷ್ಟು ಗ್ಲೋಯಿಂಗ್‌ ಇರುವ ಫೌಂಡೇಶನ್‌ ಆಯ್ಕೆ ಮಾಡಿಕೊಳ್ಳಿ.

ಕೆನ್ನೆಯ ಮೇಕಪ್‌

ವ್ಯಾಲೆಂಟೈನ್‌ ಡೇ ಕಲರ್‌ಫುಲ್‌ ಆಗಿರಲು ನಿಮ್ಮ ಮೇಕಪ್‌ನಲ್ಲಿ ತೆಳುವಾದ ರೊಮ್ಯಾಂಟಿಕ್‌ ಕಲರ್‌ಗಳನ್ನು ಬಳಸಿ. ನಿಮ್ಮ ಕೆನ್ನೆ, ಐ ಶ್ಯಾಡೋ, ಬ್ಲಷ್‌, ತುಟಿಗಳಿಗೆ ಪಿಂಕ್‌, ರೋಸ್‌, ಕೆಂಪು ಬಣ್ಣಗಳನ್ನು ಬಳಸಿ. ಐ ಮೇಕಪ್‌ಗೆ ಶಿಮ್ಮರಿಂಗ್‌ ಬಳಸಿ ಇದರಿಂದ ನೀವು ಬಹಳ ಆಕರ್ಷಕವಾಗಿ ಕಾಣಲಿದ್ದೀರಿ.

ಐ ಮೇಕಪ್‌

ವ್ಯಾಲೆಂಟೈನ್‌ ಡೇ ಪಾರ್ಟಿಯಲ್ಲಿ ನಿಮ್ಮ ಕಣ್ಣುಗಳು ಹೈಲೈಟ್‌ ಆಗಿರಲಿ. ಆದ್ದರಿಂದ ಐ ಮೇಕಪ್‌ಗೆ ಹೆಚ್ಚಿನ ಆದ್ಯತೆ ನೀಡಿ. ನಿಮ್ಮ ಐಶ್ಯಾಡೋ ಹೆಚ್ಚು ಹೊತ್ತು ರೊಮ್ಯಾಂಟಿಕ್‌ ಆಗಿರಲು ಮೊದಲು ಐಶ್ಯಾಡೋ ಪ್ರೈಮರ್ ಹಚ್ಚಿ. ಮ್ಯಾಟ್‌ ಹಾಗೂ ಶಿಮ್ಮರಿಂಗ್‌ ಐಶ್ಯಾಡೋವನ್ನು ಜೊತೆಗೆ ಸೇರಿಸಿ ಕಣ್ಣುಗಳಿಗೆ ಹಚ್ಚಿ. ನಂತರ ಐಲೈನರ್, ವಾಲ್ಯೂಮೈಸಿಂಗ್ ಮಸ್ಕರಾ ಮತ್ತು ಕೃತಕ ರೆಪ್ಪೆಗಳನ್ನು ಬಳಸುವ ಮೂಲಕ ಐ ಮೇಕಪ್‌ಗೆ ಕೊನೆಯ ಸ್ಪರ್ಶ ನೀಡಿ.

ಬ್ಲಷ್‌

ನಿಮ್ಮ ಮೃದುವಾದ ಕೆನ್ನೆಗಳಿಗೆ ಆಕರ್ಷಕ ಬ್ಲಸ್‌ ಹಚ್ಚುವ ಮೂಲಕ ಇನ್ನಷ್ಟು ಕಲರ್‌ಫುಲ್‌ ಮೇಕಪ್‌ ಟಚ್‌ ನೀಡಿ. ತೆಳು ಗುಲಾಬಿ, ಪೀಚ್ ಅಥವಾ ಗುಲಾಬಿ ಬಣ್ಣ ಸೇರಿದಂತೆ ನಿಮ್ಮ ಚರ್ಮದ ಟೋನ್‌ಗೆ ಪೂರಕವಾದ ಬ್ಲಶ್ ಆಯ್ಕೆ ಮಾಡಿಕೊಳ್ಳಿ.

ಲಿಪ್‌ಸ್ಟಿಕ್‌

ಪೂರ್ತಿ ಮೇಕಪ್‌ ಮುಗಿದ ನಂತರ ಕೊನೆಯಲ್ಲಿ ನಿಮ್ಮ ಮುಖದ ಮೇಕಪ್‌ ಅಥವಾ ನಿಮ್ಮ ಕಾಸ್ಟ್ಯೂಮ್‌ಗೆ ಸರಿ ಹೊಂದುವಂಥ ತುಟಿಯ ರಂಗನ್ನು ಆಯ್ಕೆ ಮಾಡಿಕೊಳ್ಳಿ. ವ್ಯಾಲೆಂಟೈನ್‌ ಡೇ ಆಗಿರುವುದರಿಂದ ಪಿಂಕ್‌, ಕೆಂಪು ಅಥವಾ ಬೆರ್ರಿ ಬಣ್ಣದ ಲಿಪ್‌ ಸ್ಟಿಕ್‌ ಹಚ್ಚಿ. ಬಣ್ಣವು ನಿಮ್ಮ ತುಟಿಯಲ್ಲಿ ಹೆಚ್ಚು ಸಮಯ ಉಳಿಯಬೇಕೆಂದರೆ ವಾಟರ್‌ ಪ್ರೂಫ್‌ ಲಿಪ್‌ಸ್ಟಿಕ್‌ ಆಯ್ಕೆ ಮಾಡಿಕೊಳ್ಳಿ. ಲಿಪ್‌ಸ್ಟಿಕ್‌ ಇನ್ನಷ್ಟು ಆಕರ್ಷಕವಾಗಿ ಕಾಣಲು ಲಿಪ್‌ ಲೈನರ್‌ ಹಚ್ಚಿ.

ಫಿನಿಷಿಂಗ್‌ ಸ್ಪ್ರೇ

ಇಷ್ಟೆಲ್ಲಾ ಮೇಕಪ್‌ ಹಚ್ಚಿದ ನಂತರ ಅದು ಹೆಚ್ಚು ಹೊತ್ತು ಉಳಿಯಲು ಕೊನೆಗೆ ಸ್ಪ್ರೇ ಬಳಸಿ ಸೆಟ್‌ ಮಾಡಿ. ಸ್ಪ್ರೇ ಬಾಟಲನ್ನು ನಿಮ್ಮ ತೋಳಿನ ನೇರಕ್ಕೆ ಹಿಡಿದು T ಹಾಗೂ X ಡೈರೆಕ್ಷನ್‌ನಲ್ಲಿ ನಿಮ್ಮ ಮುಖಕ್ಕೆ ಬೀಳುವಂತೆ ದೂರದಿಂದ ಸ್ಪ್ರೇ ಮಾಡಿ. ಇದರಿಂದ ನಿಮ್ಮ ಮೇಕಪ್‌ ಹೆಚ್ಚು ಹೊತ್ತು ಉಳಿಯುತ್ತದೆ.

ಈ ಪ್ರೇಮಿಗಳ ದಿನ ನಿಮ್ಮ ಜೀವನದಲ್ಲಿ ಎಂದೆಂದಿಗೂ ಮರೆಯದ ದಿನವಾಗಿರಲಿ.

Whats_app_banner