Valentines Day: ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಲು ಇಲ್ಲಿವೆ ನೋಡಿ ಸಿಂಪಲ್ ಐಡಿಯಾಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಲು ಇಲ್ಲಿವೆ ನೋಡಿ ಸಿಂಪಲ್ ಐಡಿಯಾಗಳು

Valentines Day: ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಲು ಇಲ್ಲಿವೆ ನೋಡಿ ಸಿಂಪಲ್ ಐಡಿಯಾಗಳು

ಪ್ರೇಮಿಗಳ ದಿನ ಬರುತ್ತಿದೆ. ಪ್ರೇಮಿಗಳು ಈ ದಿನವನ್ನು ಸ್ಮರಣೀಯವಾಗಿ ಆಚರಿಸಲು ವಿವಿಧ ರೀತಿಯ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಆದರೆ ನೀವಿನ್ನೂ ಪ್ಲ್ಯಾನ್ ಮಾಡಿಲ್ಲ ಎಂದಾದರೆ, ಇಲ್ಲಿವೆ ಕೆಲವೊಂದು ಸಿಂಪಲ್ ಐಡಿಯಾಗಳು.

ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿ ಆಚರಿಸಲು ವಿವಿಧ ರೀತಿಯ ಪ್ಲ್ಯಾನ್
ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿ ಆಚರಿಸಲು ವಿವಿಧ ರೀತಿಯ ಪ್ಲ್ಯಾನ್ (Pixabay)

ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಲು ಪ್ರೇಮಿಗಳು ಯೋಜನೆ ರೂಪಿಸುತ್ತಿದ್ದಾರೆ. ಅದರಲ್ಲೂ ಹಲವು ವರ್ಷಗಳ ಪ್ರೇಮವಾಗಿದ್ದರೆ, ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಸ್ಪೆಶಲ್ ಆಗಿ ಆಚರಿಸಬೇಕು, ವಿಶಿಷ್ಟವಾಗಿರಬೇಕು ಮತ್ತು ನಮ್ಮ ಪ್ರಿಯತಮೆ ಅಥವಾ ಪ್ರಿಯಕರನಿಗೆ ಇಷ್ಟವಾಗುವಂತಿರಬೇಕು ಎಂದು ಅಂದುಕೊಂಡಿರುತ್ತಾರೆ. ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡುವುದು, ಹೊರಗಡೆ ಸುತ್ತಾಡಲು ಹೋಗುವುದು ಎಲ್ಲವೂ ಖುಷಿ ಕೊಡುವ ಸಂಗತಿಗಳೇ.. ಅದರಲ್ಲೂ ಸಂಗಾತಿಯ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ, ಹುಡುಗನನ್ನು ಖುಷಿಪಡಿಸಲು ಹುಡುಗಿ ಯೋಚಿಸುತ್ತಿದ್ದರೆ, ಹುಡುಗಿಗೆ ಇಷ್ಟವಾಗುವಂಥಾದ್ದನ್ನು ಏನಾದರೂ ಕೊಡಬೇಕು, ಆ ದಿನವನ್ನು ಸ್ಮರಣೀಯವಾಗಿಸಬೇಕು ಎಂದು ಅಂದುಕೊಂಡಿರುತ್ತಾರೆ. ಅದಕ್ಕಾಗಿ ನೀವು ಕೂಡ ಹೊಸ ಐಡಿಯಾಗೆ ಹುಡುಕಾಟ ನಡೆಸುತ್ತಿದ್ದರೆ, ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್.. ನೀವೂ ಟ್ರೈ ಮಾಡಿ, ಪ್ರೇಮಿನ ಮನಸ್ಸು ಗೆಲ್ಲಿ..

ಫೋಟೊ ಕೊಲಾಜ್ ಮಾಡಿ ಕೊಡಿ

ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರನ ಜತೆ ಹಂಚಿಕೊಂಡಿರುವ ಮಧುರ ನೆನಪುಗಳ ಫೋಟೊಗಳು ನಿಮ್ಮಲ್ಲಿ ಇದ್ದರೆ, ಅದನ್ನು ಸುಂದರ ಕೊಲಾಜ್ ರೂಪಿಸಿ, ಪ್ರಿಂಟ್ ತೆಗೆದು ಫ್ರೇಮ್ ಹಾಕಿಸಿ ಗಿಫ್ಟ್ ಕೊಡಿ. ಮಧುರ ಕ್ಷಣಗಳು ಯಾವತ್ತೂ ನೆನಪಿನಲ್ಲಿ ಉಳಿಯುವಂಥಾದ್ದು ಆಗಿರುತ್ತದೆ.

ಪ್ರಿಯರ ಇಷ್ಟದ ತಿನಿಸು ತಯಾರಿಸಿ

ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರನಿಗೆ ಇಷ್ಟವಾದ ತಿಂಡಿ, ತಿನಿಸು ಅಥವಾ ಭಕ್ಷ್ಯವನ್ನು ಸಿದ್ಧಪಡಿಸಿ ಕೊಡಿ, ನೀವು ಪ್ರೀತಿಯಿಂದ ತಯಾರಿಸಿದ್ದೀರಿ ಎಂದರೆ ಅವರಿಗೂ ಇಷ್ಟವಾಗುತ್ತದೆ.

ವ್ಯಾಲೆಂಟೈನ್ಸ್ ಡೇ ಕಾರ್ಡ್ ಕೊಡಿ

ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರನಿಗೆ ಇಷ್ಟವಾಗುವ ರೀತಿಯಲ್ಲಿ, ನೀವೇ ಒಂದು ಅಂದದ ಚಂದದ ಕಾರ್ಡ್ ತಯಾರಿಸಿ, ಉಡುಗೊರೆ ಕೊಡಿ. ಅದರಲ್ಲಿ ನಿಮ್ಮ ಮನದ ಮಾತುಗಳನ್ನು ತಿಳಿಸಿ, ಇಂಟರ್‌ನೆಟ್‌ನಲ್ಲೂ, ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ, ಕಾರ್ಡ್ ತಯಾರಿಸಿ ಕೊಡಿ.

ನಿಮ್ಮ ಫೇವರಿಟ್ ಡೇಟ್ ಅನ್ನು ನೆನಪಿಸಿಕೊಳ್ಳಿ

ನಿಮ್ಮ ಪ್ರೇಮಿಯ ಜತೆ ಭೇಟಿ ನೀಡಿದ ಮತ್ತು ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಿ, ಸಾಧ್ಯವಾದರೆ ಅದನ್ನು ಮರುಸೃಷ್ಟಿಸಿ, ಆ ದಿನವನ್ನು ಮತ್ತೊಮ್ಮೆ ಆನಂದದಿಂದ ಕಳೆಯಿರಿ.

ವೀಕೆಂಡ್ ಟ್ರಿಪ್ ಹೋಗಿ

ವ್ಯಾಲೆಂಟೈನ್ಸ್ ಡೇಯನ್ನು ಸ್ಮರಣೀಯವಾಗಿಸಲು ನೀವು ವೀಕೆಂಡ್‌ನಲ್ಲಿ ಒಂದು ಸುಂದರ ತಾಣಕ್ಕೆ ಟ್ರಿಪ್ ಹೋಗಬಹುದು. ನಿಮ್ಮ ಪಕ್ಕದ ನಗರ, ರಾಜ್ಯ ಅಥವಾ ದೂರದ ಆಕರ್ಷಕ ವಿಶೇಷ ಪ್ರವಾಸಿ ತಾಣಕ್ಕೆ ಕೂಡ ಹೋಗಿ ಆಚರಣೆ ಮಾಡಬಹುದು.

ಡಿಜಿಟಲ್ ಫೋಟೊ ರೂಪಿಸಿ

ನಿಮ್ಮ ಫೇವರಿಟ್ ಚಿತ್ರ, ಫೋಟೊ ಇದ್ದರೆ, ಅದನ್ನು ಡಿಜಿಟಲ್ ಆರ್ಟ್ ರೂಪದಲ್ಲಿ ನಿಮ್ಮ ಪ್ರೇಮಿಗೆ ಉಡುಗೊರೆ ಕೊಡಿ.

ಸಮಾಜಕಾರ್ಯದಲ್ಲಿ ಪಾಲ್ಗೊಳ್ಳಿ

ಪ್ರೇಮಿಗಳ ದಿನವನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಬೇಕು ಮತ್ತು ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಮನಸ್ಥಿತಿ ನಿಮ್ಮದಾಗಿದ್ದರೆ, ಅದಕ್ಕೂ ಅವಕಾಶವಿದೆ. ಪ್ರೇಮಿಗಳ ದಿನವೆಂದರೆ ಪರಸ್ಪರ ಉಡುಗೊರೆ ಕೊಡುವುದು, ಸುತ್ತಾಡುವುದು ಮಾತ್ರವಲ್ಲ. ಅದರ ಜತೆಗೆ, ಗಿಡ ನೆಡುವುದು, ಬಡವರಿಗೆ, ಅನಾಥರಿಗೆ ಸಹಾಯ ಮಾಡುವುದು, ಶ್ರಮದಾನದಲ್ಲಿ ಪಾಲ್ಗೊಳ್ಳುವುದನ್ನು ಕೂಡ ಮಾಡಬಹುದು.

ರೊಮ್ಯಾಂಟಿಕ್ ಡಿನ್ನರ್ ಪಾರ್ಟಿ ಆಯೋಜಿಸಿ

ಪ್ರೇಮಿಗಳ ದಿನದ ಸಂಜೆಯನ್ನು ಖುಷಿಯಿಂದ ಕಳೆಯಲು, ನಿಮ್ಮ ಪ್ರೇಮಿಯ ಅಭಿರುಚಿಗೆ ತಕ್ಕಂತೆ ಸಂಜೆಗೆ ಒಂದು ರೊಮ್ಯಾಂಟಿಕ್ ಡಿನ್ನರ್ ಪಾರ್ಟಿ ಆಯೋಜಿಸಿ. ಅದಕ್ಕಾಗಿ ನೀವೇ ಎಲ್ಲ ತಯಾರಿ ರೂಪಿಸಿ. ಇದರಿಂದ ನಿಮ್ಮ ಪ್ರೇಮಿಗೆ ಖುಷಿಯಾಗುವುದು ಖಂಡಿತ.

ಇದನ್ನೂ ಓದಿ: ನಿಮ್ಮ ಜಿಯೋ ಸಿಮ್ ಕಳವಾದರೆ ಏನು ಮಾಡಬೇಕು? ಬ್ಲಾಕ್ ಮಾಡಲು ಈ ವಿಧಾನ ಅನುಸರಿಸಿ.

ಸಿನಿಮಾಗೆ ಹೋಗಿ

ಇಬ್ಬರೂ ಜತೆಯಾಗಿ ನಿಮ್ಮ ಇಷ್ಟದ ಸಿನಿಮಾಗೆ ಹೋಗಿ ಇಲ್ಲವೇ ಮನೆಯಲ್ಲೇ ಒಟಿಟಿಯಲ್ಲಿ ಸಿರೀಸ್ ಅಥವಾ ಚಲನಚಿತ್ರ ವೀಕ್ಷಿಸಿ. ಹೀಗೆ ಹಲವು ರೀತಿಯಲ್ಲಿ ನೀವು ನಿಮ್ಮ ಪ್ರಿಯರ ಜತೆ ವ್ಯಾಲೆಂಟೈನ್ಸ್ ದಿನವನ್ನು ಖುಷಿಯಿಂದ ಕಳೆಯಬಹುದು.

Whats_app_banner