Valentines Day: ಹತ್ತಿರದಲ್ಲೇ ಇದೆ ಪ್ರೇಮಿಗಳ ದಿನ, ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳಿಗೆ ಇಲ್ಲಿದೆ 6 ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ಹತ್ತಿರದಲ್ಲೇ ಇದೆ ಪ್ರೇಮಿಗಳ ದಿನ, ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳಿಗೆ ಇಲ್ಲಿದೆ 6 ಸಲಹೆ

Valentines Day: ಹತ್ತಿರದಲ್ಲೇ ಇದೆ ಪ್ರೇಮಿಗಳ ದಿನ, ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳಿಗೆ ಇಲ್ಲಿದೆ 6 ಸಲಹೆ

ಪ್ರೇಮಿಗಳ ದಿನ ಹತ್ತಿರದಲ್ಲೇ ಇದೆ. ಈ ಸಮಯದಲ್ಲಿ ಪ್ರೇಮಿಗಳು ತಮ್ಮ ಸಂಗಾತಿಗೆ ಏನು ಉಡುಗೊರೆ ನೀಡಬಹುದು ಎಂದು ಯೋಚಿಸುತ್ತಿದ್ದರೆ, ವ್ಯಾಪಾರಿಗಳು ಗ್ರಾಹಕರನ್ನು ಹೇಗೆ ಸೆಳೆಯಬೇಕು ಎಂದು ಯೋಚಿಸುವುದು ಸಹಜ. ನೀವು ವ್ಯಾಪಾರಿಯಾಗಿದ್ದು, ಈ ಬಾರಿ ಪ್ರೇಮಿಗಳ ದಿನದ ಸಂದರ್ಭ ನಿಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಬೇಕು ಅಂತಿದ್ದರೆ ಈ 6 ಸಲಹೆಗಳನ್ನು ಪಾಲಿಸಿ.

ಪ್ರೇಮಿಗಳನ್ನು ಸೆಳೆಯಲು ವ್ಯಾಪಾರಿಗಳಿಗೆ ಇಲ್ಲಿದೆ ಸಲಹೆ (ಸಾಂಕೇತಿಕ ಚಿತ್ರ)
ಪ್ರೇಮಿಗಳನ್ನು ಸೆಳೆಯಲು ವ್ಯಾಪಾರಿಗಳಿಗೆ ಇಲ್ಲಿದೆ ಸಲಹೆ (ಸಾಂಕೇತಿಕ ಚಿತ್ರ)

ಪ್ರೇಮಿಗಳ ದಿನ ಹತ್ತಿರದಲ್ಲೇ ಇದೆ. ಪ್ರೇಮಿಗಳ ದಿನವೆಂದರೆ ಅದೇನೋ ಸಂಭ್ರಮ. ಪ್ರೇಮಲೋಕದ ಈ ಸಡಗರಕ್ಕೆ ಇಡೀ ಜಗತ್ತೇ ಸಾಕ್ಷಿಯಾಗುತ್ತದೆ. ಪ್ರೇಮಿಗಳ ದಿನ ಹತ್ತಿರ ಬಂದಂತೆ ಪ್ರತಿಯೊಬ್ಬರು ತಮ್ಮ ಪ್ರೇಮಿಗಾಗಿ ವಿಶೇಷ ಉಡುಗೊರೆ ನೀಡಬೇಕು ಎಂದು ಬಯಸುವುದು ಸಹಜ. ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಬೇಕು ಎಂದುಕೊಳ್ಳುವುದು ಖಂಡಿತ ತಪ್ಪಲ್ಲ.

ಪ್ರೇಮಿಗಳ ದಿನಕ್ಕೆ ಪ್ರೇಮಿಗಳನ್ನು ಸೆಳೆಯಲು ವ್ಯಾಪಾರಿಗಳು ಕೂಡ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಪ್ರೇಮಿಗಳ ದಿನದ ಸಮಯದಲ್ಲಿ ನಿಮ್ಮ ವ್ಯಾಪಾರ ವೃದ್ಧಿಯಾಗಬೇಕು ಅಂದ್ರೆ ಈ 6 ಸಲಹೆಗಳನ್ನು ಪಾಲಿಸಿ, ಇದರ ಮೂಲಕ ವ್ಯಾಪಾರ ವೃದ್ಧಿಸುವ ಜೊತೆಗೆ, ಪ್ರೇಮಿಗಳ ದಿನದ ಸಂಭ್ರಮ ಹೆಚ್ಚಲು ನೆರವಾಗಿ.

ಹಿಂದಿನ ವರ್ಷ ಆರ್ಡರ್‌ ನೋಡಿ

ಕಳೆದ ವರ್ಷದ ಅಂಕಿ-ಅಂಶಗಳನ್ನು ನೋಡುವುದರಿಂದ ಈ ವರ್ಷ ನೀವು ಏನನ್ನು ಆರ್ಡರ್‌ ಮಾಡಬಹುದು ಎಂಬುದರ ಬಗ್ಗೆ ನಿಮಗೆ ಒಂದು ಉತ್ತಮ ಕಲ್ಪನೆ ಮೂಡಬಹುದು. ಹೂಗುಚ್ಛ, ಚಾಕೊಲೇಟ್‌, ಗ್ರೀಟಿಂಗ್ಸ್‌, ಡಾಲ್‌ಗಳು ಹೀಗೆ ಯಾವುದು ಹೆಚ್ಚು ಸೇಲ್‌ ಆಗಿದೆ ಎಂಬುದನ್ನು ಗಮನಿಸಿ. ಕಳೆದ ವರ್ಷಕ್ಕಿಂತ ಭಿನ್ನವಾಗಿ ಈ ವರ್ಷ ಏನನ್ನು ಇರಿಸಬಹುದು ಎಂಬುದನ್ನೂ ಗಮನಿಸಿ. ಕಳೆದ ವರ್ಷ ಯಾವುದು ಮಾರಾಟವಾಗಿಲ್ಲ ಎಂಬುದು ನಿಮ್ಮ ಗಮನದಲ್ಲಿರಬೇಕು. ಆನ್‌ಟ್ರೆಂಡ್‌ ವಸ್ತುಗಳ ಬಗ್ಗೆಯೂ ನೀವು ಗಮನ ಹರಿಸಬೇಕು.

ಸೋಷಿಯಲ್‌ ಮಿಡಿಯಾ ಪೋಸ್ಟ್‌ ಹಾಗೂ ಜಾಹೀರಾತು ನೀಡಿ

ಇತ್ತೀಚಿನ ದಿನಗಳಲ್ಲಿ ಜನರನ್ನು ತಲುಪಲು ಸೋಷಿಯಲ್‌ ಮಿಡಿಯಾ ಉತ್ತಮ ವೇದಿಕೆ. ಪ್ರೇಮಿಗಳ ದಿನಕ್ಕೆ ಸಂಬಂಧಿಸಿ ನಿಮ್ಮಲ್ಲಿರುವ ವಸ್ತುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಾಗೂ ಜಾಹೀರಾತುಗಳನ್ನು ರಚಿಸಿ. 3 ತಿಂಗಳ ಹಿಂದಿನಿಂದಲೇ ಪೋಸ್ಟ್‌ ನಿಗದಿ ಪಡಿಸುವ ಅವಕಾಶ ನಿಮಗಿರುತ್ತದೆ. ಇನ್ನೂ ಕಾಲ ಮಿಂಚಿಲ್ಲ. ನೀವು ಈಗಲೂ ಪ್ರೇಮಿಗಳ ದಿನದ ನಿಮ್ಮ ವ್ಯಾಪಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿಸಿಕೊಳ್ಳಬಹುದು. ನಿಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮಲ್ಲಿ ಸಿಗುವ ವಸ್ತುಗಳನ್ನು ಫೋಟೊ ತೆಗೆದು ಪೋಸ್ಟ್‌ ಮಾಡಿ. ವೆಬ್‌ಸೈಟ್‌ನಲ್ಲಿ ಸಂಪರ್ಕ ಸಂಖ್ಯೆಯಿಂದ ಎಲ್ಲವೂ ಎಲ್ಲವೂ ಸಿಗುವಂತೆ ಮಾಡಿ.

ಆಫರ್‌ಗಳನ್ನು ನೀಡಿ

ಮಾರಾಟವನ್ನು ಹೆಚ್ಚಿಸಲು ರಿಯಾಯಿತಿಗಳನ್ನು ನೀಡುವುದು ಮುಖ್ಯವಾಗುತ್ತದೆ. ಗ್ರಾಹಕರನ್ನು ಆರ್ಕಷಿಸಲು ವಿಶೇಷ ಆಫರ್‌ಗಳನ್ನು ನೀಡುವುದು ಮುಖ್ಯವಾಗುತ್ತದೆ. ಆಗ ನಿಮಗೆ ಬಂದ ಬೇಡಿಕೆಯ ಆಧಾರದ ಮೇಲೆ ಪೂರೈಕೆದಾರರಿಂದ ಎಷ್ಟು ಖರೀದಿ ಮಾಡಬೇಕು ಎಂಬುದು ನಿಮಗೆ ಅರಿವಾಗುತ್ತದೆ. ಜೊತೆಗೆ ಪ್ರೇಮಿಗಳ ದಿನವು ಫೆಬ್ರುವರಿ 7ರ ರೋಸ್ಟ್‌ ಡೇ ಯಿಂದ ಆರಂಭವಾಗಿ ವಾಲೆಂಟೈನ್ಸ್‌ ದಿನದವರೆಗೆ ಇರುತ್ತದೆ. ಅದಕ್ಕಾಗಿ ಆಯಾ ದಿನಕ್ಕೆ ಹೊಂದುವಂತೆ ಮುಂಚಿತವಾಗಿ ಗಿಫ್ಟ್‌ ತರಿಸುವುದು ಮುಖ್ಯವಾಗುತ್ತದೆ. ಶೇ 20 ರಿಂದ 30 ರಷ್ಟು ವಿನಾಯಿತ ನೀಡುವುದು ಮುಖ್ಯವಾಗುತ್ತದೆ. ನಿಮ್ಮ ವ್ಯಾಪಾರ ನ್ಯಾಯ ಸಮ್ಮತವಾಗಿರಲಿ.

ನಿಮ್ಮ ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡಿ

ನೀವು ಪ್ರೇಮಿಗಳ ದಿನಕ್ಕೆಂದೇ ಹೊಸತಾಗಿ ವ್ಯಾಪಾರ ಆರಂಭಿಸಿದ್ದರೆ ಸಂತೋಷ. ಆದರೆ ನೀವು ಈಗಾಗಲೇ ಕೆಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರೆ ಪ್ರಸ್ತುತ ಹಾಗೂ ಹಿಂದಿನ ಗ್ರಾಹಕರನ್ನು ತಲುಪುವುದು ಮುಖ್ಯವಾಗುತ್ತದೆ. ಪ್ರೇಮಿಗಳ ವ್ಯಾಲೆಂಟೈನ್ಸ್‌ ಡೇ ಅಗತ್ಯಗಳಿಗೆ ಸಹಾಯ ಮಾಡಲು ನೀವು ಸಿದ್ಧರಿದ್ದೀರಿ ಎಂಬುದನ್ನು ಅವರಿಗೆ ಇಮೇಲ್‌ ಅಥವಾ ಎಸ್‌ಎಂಎಸ್‌, ವ್ಯಾಟ್ಸ್‌ಆಪ್‌ ಸಂದೇಶದ ಮೂಲಕ ಕಳುಹಿಸಿ. ಪ್ರೇಮಿಗಳ ದಿನ ಮಾತ್ರವಲ್ಲ ಮುಂದಿನ ಅಮ್ಮಂದಿರ ದಿನಕ್ಕೂ ಅವರು ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಂತಹ ಸೌಲಭ್ಯಗಳನ್ನು ಒದಗಿಸಿ.

ಪೂರ್ವಸಿದ್ಧತೆಯೂ ಮುಖ್ಯ

ಹಿಂದಿನ ಗ್ರಾಹಕರನ್ನು ಇನ್ನಷ್ಟು ಸೆಳೆಯಲು ಪ್ರೇಮಿಗಳ ದಿನವೂ ಒಂದು ಕಾರಣವಾಗಬೇಕು. ಪ್ರತಿದಿನ ಬರುವ ಗ್ರಾಹಕರನ್ನು ಸೆಳೆಯಲು ಒಂದಿಷ್ಟು ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರೇಮಿಗಳ ದಿನಕ್ಕೆ ಗ್ರಾಹಕರನ್ನು ಸೆಳೆಯಲು ಪೂರ್ವಸಿದ್ಧತೆ ಕೂಡ ಬಹಳ ಮುಖ್ಯ.

ಇನ್ನೂ ಸಮಯವಿದೆ

ಪ್ರೇಮಿಗಳ ದಿನ ಹತ್ತಿರ ಬಂದಿದೆ, ಈಗ ಇಷ್ಟೆಲ್ಲಾ ಸಿದ್ಧತೆ ಮಾಡಲು ಹೇಗೆ ಸಾಧ್ಯ. ಗ್ರಾಹಕರನ್ನು ಸೆಳೆಯುವುದು ಹೇಗೆ ಎಂಬೆಲ್ಲಾ ಚಿಂತೆ ಬೇಡ. ಪ್ರೇಮಿಗಳ ದಿನ ಆರಂಭವಾಗಲು ಇನ್ನೂ ಕೆಲ ದಿನ ಇದೆ. ಇಂದೇ ನೀವು ಸಿದ್ಧತೆ ಆರಂಭಿಸಿ. ಗ್ರಾಹಕರನ್ನು ಅರಿತು ಹಾಗೂ ಸದ್ಯದ ಟ್ರೆಂಡ್‌ ಅರಿತು ಅದಕ್ಕೆ ತಕ್ಕಂತೆ ಉಡುಗೊರೆಗಳನ್ನು ನಿಮ್ಮ ಮಳಿಗೆ ಅಥವಾ ವೆಬ್‌ಸೈಟ್‌ನಲ್ಲಿ ಸಿಗುವಂತೆ ನೋಡಿಕೊಳ್ಳಿ. ಅಲ್ಲದೆ ಹೂವಿನಂತಹ ಬಾಡಿ ಹಾಳಾಗುವ ವಸ್ತುಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು.

ನೋಡಿದ್ರಲ್ಲಾ, ಪ್ರೇಮಿಗಳ ದಿನಕ್ಕೆ ನೀವು ಗ್ರಾಹಕರನ್ನು ಆರ್ಕಷಿಸಲು ಬಯಸಿದರೆ ಈ ಎಲ್ಲಾ ಮಾರ್ಗಗಳನ್ನು ಅನುಸರಿಸಬೇಕು. ಈ ಮೂಲಕ ನಿಮ್ಮ ಈ ವರ್ಷದ ಪ್ರೇಮಿಗಳ ದಿನದ ವ್ಯಾಪಾರವನ್ನು ವೃದ್ಧಿಸಿಕೊಳ್ಳಬಹುದು.

Whats_app_banner