ಬೆಂಗಳೂರಲ್ಲಿದ್ದು ಪಾಕೆಟ್ ಫ್ರೆಂಡ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸಬೇಕು ಅಂತಿರೋರಿಗೆ ಇಲ್ಲಿದೆ ಐಡಿಯಾ; ಹೀಗಿರಲಿ ಇಂದಿನ ಇಳಿಸಂಜೆ
ಈ ಬಾರಿ ಫೆ. 14 ವಾರದ ನಡುವಲ್ಲಿ ಬಂದಿರುವ ಕಾರಣ ಬಹುತೇಕರಿಗೆ ನಿರಾಸೆ ಕಾಡಿರುವುದು ಸಹಜ. ಹಾಗಂತ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಬೆಂಗಳೂರಿನಲ್ಲಿ ಇದ್ದು ಪಾಕೆಟ್ ಫ್ರೆಂಡ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸಬೇಕು, ಜೊತೆಗೆ ನಿಮ್ಮ ವ್ಯಾಲೆಂಟೈನ್ಸ್ ಡೇ ರೊಮ್ಯಾಂಟಿಕ್ ಆಗಿಯೂ ಇರಬೇಕು ಅಂದ್ರೆ ಈ ಐಡಿಯಾಗಳನ್ನು ಫಾಲೋ ಮಾಡಿ.
ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಈ ಬಾರಿ ವಾರದ ನಡುವಲ್ಲಿ ವ್ಯಾಲೆಂಟೈನ್ಸ್ ಡೇ ಬಂದಿರುವ ಕಾರಣ ಒಂದಿಷ್ಟು ಜನಕ್ಕೆ ಬೇಸರವಾಗಿರುವುದು ಸುಳಲ್ಲ. ಹಾಗಂತ ಬೇಸರ ಯಾಕೆ, ಇಳಿ ಸಂಜೆ ಇರುವುದು ನಿಮಗಾಗಿಯೇ. ನೀವು ಬೆಂಗಳೂರಲ್ಲೇ ಇದ್ದು, ಸಂಜೆ ಹೊತ್ತಿಗೆ ವ್ಯಾಲೆಂಟೈನ್ಸ್ ಡೇ ಆಚರಿಸೋಕೆ ಪ್ಲಾನ್ ಮಾಡಿಲ್ಲ ಅಂದ್ರೆ ಈಗಲೇ ಇದನ್ನು ಓದಿ ಪ್ಲಾನ್ ಮಾಡಿ. ಬೆಂಗಳೂರಲ್ಲಿ ಪ್ರೇಮಿಗಳು ಸುತ್ತಾಡಲು ಜಾಗ ಏನು ಕಡಿಮೆ ಇದ್ಯಾ? ಕೊಂಚ ಥಿಂಕ್ ಮಾಡಿ.
ಈ ಬಾರಿ ವ್ಯಾಲೆಂಟೈನ್ಸ್ ಡೇ ಪಾಕೆಟ್ ಫ್ರೆಂಡ್ಲಿನೂ ಆಗಿರಬೇಕು, ರೊಮ್ಯಾಂಟಿಕ್ ಡೇ ಕೂಡ ಆಗಿರಬೇಕು ಅಂದ್ರೆ ಈ ಜಾಗಗಳಲ್ಲಿ ನಿಮ್ಮ ಪ್ರೇಮಿಯೊಂದಿಗೆ ಸಂಜೆ ಕಳೆಯಿರಿ.
ಸೂರ್ಯನ ಕಿರಣಗಳ ನಡುವೆ ಅರಳಲಿ ಪ್ರೇಮಲೋಕ
ಸೂರ್ಯಾಸ್ತಕ್ಕಿಂತ ಸುಂದರ ನೋಟ ಯಾವುದಿದೆ ಹೇಳಿ. ನಿಮ್ಮ ಪ್ರೇಮಿಯ ಕೈ ಹಿಡಿದುಕೊಂಡು ಸೂರ್ಯಾಸ್ತ ನೋಡುತ್ತಾ ಕಾಲ ಕಳೆಯುವುದಕ್ಕಿಂತ ಖುಷಿ ಯಾವುದಿದೆ. ಅದಕ್ಕಾಗಿ ನೀವು ಹಲಸೂರು ಕೆರೆ, ಸ್ಯಾಂಕ್ ಕೆರೆ, ಯಡಿಯೂರು ಕೆರೆಯಂತಹ ಜಾಗವನ್ನು ಆರಿಸಿಕೊಳ್ಳಬಹುದು. ಅಲ್ಲದೇ ಹೋದರು ನಿಮ್ಮ ಮನೆಯ ಟೆರೆಸ್‌ನಲ್ಲಿ ಸೂರ್ಯಾಸ್ತವನ್ನು ಕಾಣುತ್ತಾ ಐಸ್‌ಕ್ರೀಮ್ ಮೆಲ್ಲುತ್ತಾ ಕಾಲ ಕಳೆಯಬಹುದು. ಅಲ್ಲದೇ ಆ ಕ್ಷಣಗಳ ಫೋಟೊಗಳನ್ನು ಸೆರೆ ಹಿಡಿದು ನಿಮ್ಮ ನೆನಪಿನ ಬುತ್ತಿಗೆ ಸೇರಿಸಬಹುದು.
ಒಂದು ಆತ್ಮೀಯ ವಾಕ್
ಸಂಜೆ ಹೊತ್ತಿಗೆ ಕಬ್ಬನ್ ಪಾರ್ಕ್ ಅಥವಾ ಲಾಲ್‌ಬಾಗ್‌ನಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಕೈ ಕೈಹಿಡಿದು ಹೆಜ್ಜೆ ಹಾಕುತ್ತಾ, ಭವಿಷ್ಯದ ಕನಸು ಕಾಣಬಹುದು. ಅಲ್ಲಿನ ಹಾಸು ಹುಲ್ಲಿನ ಮೇಲೆ ಕುಳಿತು ಕನಸಿನ ಲೋಕಕ್ಕೆ ತೆರಳಬಹುದು. ನಿಮ್ಮ ಸಂಗಾತಿ ಮೀಟ್ ಮಾಡಲು ಹೋಗುವಾಗ ಕೇಕ್ ಅಥವಾ ಐಸ್‌ಕ್ರೀಮ್ ತೆಗೆದುಕೊಂಡು ಹೋಗಲು ಮರೆಯದಿರಿ.
ಡಾನ್ಸ್ ಡಾನ್ಸ್
ಸಂಜೆ ವೇಳೆಗೆ ನಿಮ್ಮ ಲವರ್ ಹಾಗೂ ನಿಮಗೆ ಇಬ್ಬರಿಗೂ ಸನಿಹ ಎನ್ನಿಸುವ ಕ್ಲಬ್ ಅಥವಾ ಪಬ್‌ಗೆ ಹೋಗಿ. ಅಲ್ಲಿ ನಿಮ್ಮ ದಿನವನ್ನು ಎಂಜಾಯ್ ಮಾಡಿ. ವ್ಯಾಲೆಂಟೈನ್ಸ್ ಡೇಗಾಗಿ ವಿಶೇಷ ಕೆಲವು ಕ್ಲಬ್‌ಗಳು ವಿಶೇಷ ಆಫರ್ ನೀಡುತ್ತವೆ, ಅಂತಹವನ್ನು ಗಮನಿಸಿ. ಸಂಗಾತಿಯೊಂದಿಗೆ ಹೆಜ್ಜೆ ಹಾಕಿ. ನಿಮ್ಮ ದಿನವನ್ನು ಎಂಜಾಯ್ ಮಾಡಿ.
ಲಾಂಗ್ ರೈಡ್
ಇಳಿ ಸಂಜೆಯಲ್ಲಿ ತಿಳಿ ಗಾಳಿ ಬೀಸುವಾಗ ಜೊತೆಯಾಗಿ ಲಾಂಗ್ ರೈಡ್ ಹೋಗೋದು ಯಾರಿಗೆ ಇಷ್ಟವಿಲ್ಲ ಹೇಳಿ. ನೀವು ಬೆಂಗಳೂರಿನ ಟ್ರಾಫಿಕ್‌ನಿಂದ ಬೇಸತ್ತಿದ್ದರೆ ಕೊಂಚ ಹೊರಗಡೆ ಲಾಂಗ್‌ರೈಡ್ ಹೋಗಬಹುದು. ಇದು ನಿಮಗೂ ನಿಮ್ಮ ಸಂಗಾತಿಗೂ ಇಷ್ಟವಾಗಬಹುದು.
ತೆರೆದ ಟೆರೆಸ್ ಮೇಲೆ ಸಿನಿಮಾ ನೋಡಿ
ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್‌ಗೆ ಹೋಟೆಲ್‌ನಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್, ಥಿಯೇಟರ್‌ನಲ್ಲಿ ಮೂವಿ ನೈಟ್ ಹೋಗ್ಬೇಕು ಅಂದೇನಿಲ್ಲ. ನೀವು ಮನೆಯಲ್ಲೇ ತೆರೆದ ಟೆರೆಸ್‌ನಲ್ಲಿ ಚಂದ್ರ, ನಕ್ಷತ್ರಗಳ ಬೆಳಕಿನಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತು ಸಿನಿಮಾ ನೋಡುತ್ತಾ ನಿಮ್ಮಿಷ್ಟದ ಆಹಾರ ಮೆಲ್ಲುತ್ತಾ ಕ್ಷಣವನ್ನು ಎಂಜಾಯ್ ಮಾಡಬಹುದು. ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್‌ಗೆ ಇದಕ್ಕಿಂತ ಉತ್ತಮ ಮಾರ್ಗವಿಲ್ಲ. ಇನ್ನೂ ಕೆಲವೆಡೆ ಓಪನ್ ಥಿಯೇಟರ್‌ಗಳೂ ಇರುತ್ತವೆ, ಅಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬಹುದು. ಆದರೆ ಟಿಕೆಟ್‌ಗಳು ಮೊದಲೇ ಬುಕ್ ಆಗಿರುತ್ತವೆ ಎಂಬುದನ್ನು ಮರೆಯಬೇಡಿ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ