Valentines Day: ಸಿಂಗಲ್‌ ಆಗಿರೋರು ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡೋಕೆ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ಸಿಂಗಲ್‌ ಆಗಿರೋರು ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡೋಕೆ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ

Valentines Day: ಸಿಂಗಲ್‌ ಆಗಿರೋರು ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡೋಕೆ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ

ಪ್ರೇಮಿಗಳ ದಿನ ಎಂದರೆ ಕೇವಲ ಪ್ರೇಮಿಯೊಂದಿಗೆ ರೊಮ್ಯಾಂಟಿಕ್‌ ಲೋಕವನ್ನು ತೆರೆದಿಡುವುದು ಅಂತಲ್ಲ, ಸ್ವಯಂ ಪ್ರೀತಿ ಮಾಡಲು ಕೂಡ ಇದೊಂದು ಉತ್ತಮ ಅವಕಾಶ. ನೀವು ಸಿಂಗಲ್‌ ಆಗಿದ್ದು, ವ್ಯಾಲೆಂಟೈನ್ಸ್‌ ಡೇನಾ ಹೇಗೆ ಸೆಲೆಬ್ರೇಟ್‌ ಮಾಡೋದು ಅಂತ ಚಿಂತೆ ಮಾಡ್ತಾ ಇದೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಸಿಂಗಲ್‌ ಆಗಿರೋರು ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡೋಕೆ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ
ಸಿಂಗಲ್‌ ಆಗಿರೋರು ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡೋಕೆ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ

ಪ್ರೇಮಿಗಳ ದಿನ ಎನ್ನುವುದು ಪ್ರೀತಿಗೆ ಮೀಸಲಾಗಿರುವ ದಿನ. ಈ ದಿನದಂದು ತಮ್ಮ ಪ್ರೀತಿ ಪಾತ್ರರಿಗೆ ಕೆಂಪು ಗುಲಾಬಿ, ಉಡುಗೊರೆಗಳನ್ನು ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಕ್ಯಾಂಡಲ್‌ ಲೈಟ್‌ ಡಿನ್ನರ್‌ ಆಯೋಜಿಸುವ ಮೂಲಕ ರೊಮ್ಯಾಂಟಿಕ್‌ ಲೋಕದಲ್ಲಿ ತೇಲಾಡಬಹುದು. ನಮ್ಮೊಲವಿನ ವ್ಯಕ್ತಿಯೊಂದಿಗೆ ಮನದ ಭಾವನೆಗಳನ್ನು ಉಸುರಲು ಇದೊಂದು ಸೂಕ್ತ ದಿನ. ಈ ದಿನಕ್ಕಾಗಿ ಜಗತ್ತಿನಾದ್ಯಂತ ಪ್ರೇಮಿಗಳ ಕಾಯುತ್ತಾರೆ. ಪ್ರೇಮಲೋಕ ಮುಳುಗಿರುವವರ ಕಥೆ ಇದಾದ್ರೆ, ಒಂಟಿ ಆಗಿರುವವರ ಕಥೆ ಏನು ಎಂದು ಅನ್ನಿಸದೇ ಇರದು.

ಒಂಟಿಯಾಗಿರುವವರು ಪ್ರೇಮಿಯಿಲ್ಲ ಎಂದು ಯೋಚಿಸುವ ಅಗತ್ಯವಿಲ್ಲ. ಒಂಟಿಯಾಗಿ ಇರೋ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ವ್ಯಾಲೆಂಟೈನ್ಸ್‌ ಡೇ ದಿನ ಸ್ವಯಂ ಪ್ರೀತಿಯತ್ತ ನೀವು ಗಮನ ಕೊಡಬಹುದು. ಸೆಲ್ಪ್‌ ಲವ್‌ ನಿಮ್ಮ ಮೇಲೆ ನಿಮಗೆ ಒಲವು ಮೂಡುವಂತೆ ಮಾಡುತ್ತದೆ. ನಿಮ್ಮನ್ನು ನೀವು ಅನ್ವೇಷಣೆ ಮಾಡಿಕೊಳ್ಳಲು ಇದು ಉತ್ತಮ ದಿನ. ವ್ಯಾಲೆಂಟೈನ್ಸ್‌ ದಿನವನ್ನು ಸ್ಪಾದಲ್ಲಿ ಕಳೆಯುವುದು, ಹೊಸ ಸಾಹಸ ಕ್ರೀಡೆಯಲ್ಲಿ ತೊಡಗಿಕೊಳ್ಳುವುದು, ಸ್ನೇಹಿತರ ಜೊತೆ ಸಿನಿಮಾ ನೋಡುವುದು ಹೀಗೆಲ್ಲಾ ಮಾಡುವ ಮೂಲಕ ನಿಮ್ಮನ್ನು ನೀವು ಪ್ರೀತಿಸುವ ಮಾರ್ಗವನ್ನು ಕಂಡುಕೊಳ್ಳಬಹುದು. ಇದರೊಂದಿಗೆ ಪಾಸಿಟವ್‌ ವೈಬ್‌ ಇರಬೇಕು ಅಂದ್ರೆ ಯೋಗ, ಧ್ಯಾನದಂತಹ ಅಭ್ಯಾಸಗಳಲ್ಲೂ ತೊಡಗಿಸಿಕೊಳ್ಳಬಹುದು.

ಒಂಟಿಯಾಗಿರುವವರು ಹೇಗೆಲ್ಲಾ ಈ ದಿನವನ್ನು ಸೆಲೆಬ್ರೇಟ್‌ ಮಾಡಬಹುದು

ಆ ದಿನ ನಿಮ್ಮನ್ನು ನೀವು ಪ್ರೀತಿಸಿ

ಇಂದು ಪ್ರೇಮಿಗಳ ದಿನ, ನನಗೂ ಪ್ರೇಮಿ ಇದ್ದಿದ್ರೆ ಎಂದು ಬೇಸರ ಮಾಡಿಕೊಳ್ಳುವ ಬದಲು ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳುವ ಸಲುವಾಗಿ ಸ್ಪಾಗೆ ಭೇಟಿ ನೀಡಿ ಅಥವಾ ಮನೆಯಲ್ಲಿ ನಿಮ್ಮ ವೈಯಕ್ತಿಕ ಕಾಳಜಿಯ ಮೇಲೆ ಗಮನ ಹರಿಸಿ. ಸಂಗೀತ ಕೇಳುವುದು ಅಥವಾ ನಿಮ್ಮ ಮನಸ್ಸಿಗೆ ಖುಷಿ ನೀಡುವ ಕಾಯಕದಲ್ಲಿ ತೊಡಗಿಸಿಕೊಳ್ಳಿ. ಲಂಚ್‌ ಅಥವಾ ಡಿನ್ನರ್‌ಗೆ ಹೊರಗಡೆ ಹೋಗಿ ನಿಮ್ಮಿಷ್ಟದ ಊಟ ಮಾಡಿ. ಇದರಿಂದ ನಿಮ್ಮ ಮನಸ್ಸಿಗೂ ಖುಷಿ ಸಿಗುತ್ತದೆ, ಒಂಟಿ ಎನ್ನುವ ಭಾವವೂ ದೂರಾಗುತ್ತದೆ. ನೀವು ನಿಮಗಾಗಿ ಬದುಕುತ್ತಿರುವುದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ನಿಮಗೆ ಹೇಗೆ ಬೇಕೋ ಹಾಗೆ ಬದುಕಲು ಕಮಿಟ್‌ಮೆಂಟ್‌ ಇಲ್ಲದೇ ಇರುವುದು ಉತ್ತಮ ಎಂಬುದು ನೆನಪಿರಲಿ.

ನಿಮ್ಮ ಸ್ನೇಹಿತರಾಗಿ ಈ ದಿನವನ್ನು ಡೆಡಿಕೇಟ್‌ ಮಾಡಿ

ನೀವು ಸಿಂಗಲ್‌ ಆಗಿದ್ರೆ ವ್ಯಾಲೆಂಟೈನ್ಸ್‌ ಡೇಯನ್ನೇ ಫ್ರೆಂಡ್‌ಶಿಪ್‌ ಡೇಯನ್ನಾಗಿ ಪರಿವರ್ತಿಸಬಹುದು. ಈ ದಿನವನ್ನು ನಿಮ್ಮ ಸ್ನೇಹಿತರಿಗಾಗಿ ಡೆಡಿಕೇಟ್‌ ಮಾಡಿ. ವರ್ಚುವಲ್‌ ವಿಧಾನ ಅಥವಾ ವೈಯಕ್ತಿಕವಾಗಿ ನಿನ್ನ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಿ. ನಿಮ್ಮಿಂದ ದೂರಾದ ಅಥವಾ ನೀವು ದೂರ ಮಾಡಿಕೊಂಡ ಸ್ನೇಹಿತರನ್ನು ಮರಳಿ ಸಂಪರ್ಕಿಸಿ. ನಿಮ್ಮ ಕಥೆಯನ್ನು ಅವರೊಂದಿಗೆ ಹಂಚಿಕೊಳ್ಳಿ. ಜೊತೆಯಾಗಿ ಆಟವಾಡಿ, ಊಟ ಮಾಡಿ ಎಂಜಾಯ್‌ ಮಾಡಿ.

ಔಟ್‌ಡೋರ್‌ ಆಕ್ಟಿವಿಟಿ

ಸೋಲೊ ರೈಡ್‌ ಮಾಡಿ. ಸುಂದರ ಪರಿಸರ ಒಂದು ಸುತ್ತು ನಡೆದಾಡಿ. ಸೋಲೊ ಟ್ರಾವೆಲರ್‌ ಗುಂಪುಗಳಿಗೆ ಸೇರಿಕೊಳ್ಳಿ. ಔಟ್‌ಡೋರ್‌ ಚಟುವಟಿಕೆಗಳತ್ತ ಗಮನ ಹರಿಸಿ. ಪ್ರಕೃತಿಯಲ್ಲಿ ಕಳೆದು ಹೋಗುವುದಕ್ಕಿಂತ ಉತ್ತಮ ಪ್ರೇಮ ಇನ್ನೊಂದಿಲ್ಲ.

ಕ್ರಿಯಾತ್ಮಕ ಚಟುವಟಿಕೆಗಳು

ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಸಂತಸದಿಂದಿರುತ್ತದೆ. ಪೇಟಿಂಗ್‌ ಮಾಡುವುದು, ಬರವಣಿಗೆ, ಓದುವುದು, ಸಂಗೀತ ಉಪಕರಣವನ್ನು ನುಡಿಸುವುದು ಇವೆಲ್ಲವೂ ನಿಮ್ಮ ಮನಸ್ಸಿಗೆ ಖುಷಿ ನೀಡುವುದರಲ್ಲಿ ಎರಡು ಮಾತಿಲ್ಲ.

ಮೈಂಡ್‌ಫುಲ್‌ನೆಸ್‌

ಸೆಲ್ಪ್‌ ಲವ್‌ ಅಥವಾ ಸ್ವಯಂ ಪ್ರೀತಿ ಎಂದರೆ ನಿಮ್ಮೊಳಗೆ ನೀವು ಆಳವಾಗಿ ಇಳಿದು ನೋಡಿಕೊಳ್ಳುವುದು. ಆಗ ನಿಮಗೆ ನೀವು ಯಾವೆಲ್ಲಾ ವಿಚಾರಗಳಲ್ಲಿ ಬದಲಾಗಬೇಕಿದೆ ಎಂಬುದು ಅರಿವಾಗುತ್ತದೆ. ಧ್ಯಾನ ಮಾಡುವುದು ಅಥವಾ ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆಗ ನಿಮ್ಮನ್ನು ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ಸಿಂಗಲ್‌ ಆಗಿರುವವರು ತಮ್ಮ ವ್ಯಾಲೆಂಟೈನ್ಸ್‌ ದಿನವನ್ನು ಆಚರಿಸುಬಹುದು. ಜಗತ್ತಿನಲ್ಲಿ ನಮ್ಮನ್ನು ನಾನು ಪ್ರೀತಿಸಿಕೊಳ್ಳುವುದಕ್ಕಿಂತ ಮಧುರ ಅನುಭೂತಿ ಇನ್ನೊಂದಿಲ್ಲ. ನನ್ನನ್ನು ನಾವು ಮೊದಲು ಪ್ರೀತಿಸಬೇಕು. ಆಗಷ್ಟೇ ಬದುಕು ಸುಂದರವಾಗಿರುವುದು. ಸಿಂಗಲ್‌ ಅನ್ನೋ ಬೇಸರ ಬೇಡ... ಜಸ್ಟ್‌ ಎಂಜಾಯ್‌.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner