ವ್ಯಾಲೆಂಟೈನ್ಸ್‌ಡೇಗೆ ಲವರ್‌ ಜೊತೆಗಿಲ್ಲ ಅಂತ ಬೇಜಾರಾಗ್ಬೇಡಿ, ದೂರದೂರಿನಲ್ಲಿರುವ ಪ್ರೇಮಿಯ ಜೊತೆ ಈ ದಿನವನ್ನು ಹೀಗೆ ಸಂಭ್ರಮಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವ್ಯಾಲೆಂಟೈನ್ಸ್‌ಡೇಗೆ ಲವರ್‌ ಜೊತೆಗಿಲ್ಲ ಅಂತ ಬೇಜಾರಾಗ್ಬೇಡಿ, ದೂರದೂರಿನಲ್ಲಿರುವ ಪ್ರೇಮಿಯ ಜೊತೆ ಈ ದಿನವನ್ನು ಹೀಗೆ ಸಂಭ್ರಮಿಸಿ

ವ್ಯಾಲೆಂಟೈನ್ಸ್‌ಡೇಗೆ ಲವರ್‌ ಜೊತೆಗಿಲ್ಲ ಅಂತ ಬೇಜಾರಾಗ್ಬೇಡಿ, ದೂರದೂರಿನಲ್ಲಿರುವ ಪ್ರೇಮಿಯ ಜೊತೆ ಈ ದಿನವನ್ನು ಹೀಗೆ ಸಂಭ್ರಮಿಸಿ

ಪ್ರೇಮಿಗಳ ದಿನ ಬಂದೇ ಬಿಡ್ತು, ಜೊತೆಯಾಗಿ ಈ ದಿನವನ್ನು ಸಂಭ್ರಮಿಸೋಣ ಅಂದ್ರೆ ನಿಮ್ಮ ಪ್ರೇಮಿ ನಿಮ್ಮ ಜೊತೆಗಿಲ್ವಾ, ದೂರದೂರಿನಲ್ಲಿರುವ ಪ್ರೇಮಿ ಜೊತೆ ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್‌ ಮಾಡೋದು ಹೇಗೆ ಅಂತ ಚಿಂತೆ ಮಾಡ್ತಾ ಇದೀರಾ, ನಿಮಗಾಗಿ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ.

ವ್ಯಾಲೆಂಟೈನ್ಸ್‌ಡೇಗೆ ಲವರ್‌ ಜೊತೆಗಿಲ್ಲ ಅಂತ ಬೇಜಾರಾಗ್ಬೇಡಿ, ದೂರದೂರಿನಲ್ಲಿರುವ ಪ್ರೇಮಿಯ ಜೊತೆ ಈ ದಿನವನ್ನು ಹೀಗೆ ಸಂಭ್ರಮಿಸಿ
ವ್ಯಾಲೆಂಟೈನ್ಸ್‌ಡೇಗೆ ಲವರ್‌ ಜೊತೆಗಿಲ್ಲ ಅಂತ ಬೇಜಾರಾಗ್ಬೇಡಿ, ದೂರದೂರಿನಲ್ಲಿರುವ ಪ್ರೇಮಿಯ ಜೊತೆ ಈ ದಿನವನ್ನು ಹೀಗೆ ಸಂಭ್ರಮಿಸಿ

ಈ ಜಗತ್ತಿನಲ್ಲಿ ಅತ್ಯಂತ ಸುಂದರ ಸಂಬಂಧ ಎಂದರೆ ಅದು ಪ್ರೇಮ ಸಂಬಂಧ. ಪ್ರೀತಿಗೆ ಕಣ್ಣಿಲ್ಲ. ಪ್ರೀತಿ ಎದುರು ವಯಸ್ಸು, ಬಣ್ಣ, ರೂಪ, ದೂರ ಎಲ್ಲವೂ ನಗಣ್ಯ. ಪ್ರೀತಿ ಮಾಡಲು ಮನಸ್ಸು ಮುಖ್ಯ. ಎರಡು ಹೃದಯಗಳು ಒಂದಾದ್ರೆ ದೂರ ಎನ್ನುವುದಕ್ಕೆ ಅರ್ಥವಿರುವುದಿಲ್ಲ. ಪ್ರೀತಿಸಿದವರು ದೂರವಿದ್ದಷ್ಟೂ ಅವರ ನಡುವೆ ಪ್ರೀತಿ ಹೆಚ್ಚುತ್ತದೆ ಎನ್ನುತ್ತಾರೆ ಎಂಬ ಮಾತಿದೆ. ಆದರೆ ಪ್ರೇಮಿಗಳ ದಿನದಂತಹ ವಿಶೇಷ ಸಂದರ್ಭದಲ್ಲಿ ಛೇ, ನನ್ನ ಪ್ರೇಮಿಯು ಜೊತೆಗೆ ಇದ್ದಿದ್ರೆ ಅಂತ ಅನ್ನಿಸದೇ ಇರುವುದಿಲ್ಲ. ಕೆಲವೊಮ್ಮೆ ಬಹಳ ದಿನಗಳ ಅಂತರವೂ ಪ್ರೇಮಿಗಳ ನಡುವೆ ಬಿರುಕು ಮೂಡಲು ಕಾರಣವಾಗಬಹುದು.

ಈ ವ್ಯಾಲೆಂಟೈನ್ಸ್‌ ಡೇಯನ್ನು ನಿಮ್ಮಿಂದ ದೂರದಲ್ಲಿರುವ ಪ್ರೇಮಿಯ ಜೊತೆ ವಿಶೇಷವಾಗಿ ಆಚರಿಸಿ. ವರ್ಚುವಲ್‌ ವಿಧಾನದ ಮೂಲಕ ಇಬ್ಬರೂ ಜೊತೆಯಾಗಿ ಇರುವಂತಹ ಕ್ಷಣಗಳನ್ನು ಸೃಷ್ಟಿಸಿ. ಆ ಮೂಲಕ ನೀವು ಜೊತೆಯಾಗಿಯೇ ಇದ್ದೀರಿ ಎನ್ನುವ ಭಾವನೆ ಮೂಡುವಂತೆ ಮಾಡಿ. ಅದರಿಂದ ನಿಮ್ಮ ಬಂಧ ಇನ್ನಷ್ಟು ಗಟ್ಟಿಯಾಗಲಿ. ದೂರದಲ್ಲಿರುವ ಪ್ರೇಮಿಯ ಜೊತೆ ಪ್ರೇಮಿಗಳ ದಿನವನ್ನು ಹೀಗೆ ಆಚರಿಸಿ

ಜೊತೆಯಾಗಿ ಅಡುಗೆ ಮಾಡಿ

ರೊಮ್ಯಾಂಟಿಕ್‌ ನೈಟ್‌ಗಿಂತ ಸುಂದರವಾದದ್ದು ಇನ್ನೊಂದಿಲ್ಲ. ನೀವಿಬ್ಬರೂ ಜೊತೆಯಾಗಿ ಇಲ್ಲದೇ ಇದ್ದರೂ ವರ್ಚುವಲ್‌ ಮೂಲಕ ಜೊತೆಯಾಗಬಹುದು. ವಿಡಿಯೊ ಕಾಲ್‌ ಮಾಡುವ ಮೂಲಕ ಇಬ್ಬರಿಗೂ ಏನು ಇಷ್ಟ ಅಂತಹ ಅಡುಗೆ ಮಾಡಿ. ಇಬ್ಬರು ಜೊತೆಯಾಗಿ ಕಾಫಿ ಅಥವಾ ವೈನ್‌ ಕುಡಿಯುವ ಮೂಲಕ ದಿನವನ್ನು ಸಂಭ್ರಮಿಸಬಹುದು.

ವರ್ಚುವಲ್‌ ಮೂವಿ ಡೇಟ್‌

ಈ ವರ್ಚುವಲ್‌ ಜಗತ್ತಿನಲ್ಲಿ ಆಗೊಲ್ಲ ಎನ್ನುವುದು ಏನೂ ಇಲ್ಲ. ನೀವಿಬ್ಬರೂ ಮೈಲಿಗಟ್ಟಲೆ ದೂರವಿದ್ದರೂ ವರ್ಚುವಲ್‌ ಮೂವಿ ಡೇಟ್‌ಗೆ ಅವಕಾಶವಿದೆ. ನಿಮ್ಮ ರೂಮ್‌ ಅನ್ನು ಕ್ಯಾಂಡಲ್‌ಗಳಿಂದ ಅಲಂಕರಿಸಿ. ಪಾಪ್‌ ಕಾರ್ನ್‌ ಜೊತೆ ಇರಿಸಿಕೊಂಡು ಇಬ್ಬರೂ ತಿನ್ನುತ್ತಾ ಜೊತೆಯಾಗಿ ಸಮಯ ಕಳೆಯುವುದನ್ನು ಎಂಜಾಯ್‌ ಮಾಡಿ.

ಪೇಟಿಂಗ್‌ ಮಾಡುವುದು, ಓದುವುದು

ಪೇಟಿಂಗ್‌ ಎನ್ನುವುದು ಮನಸ್ಸಿಗೆ ಖುಷಿ ಕೊಡುವ ಕ್ರಿಯೆ. ನಿಮಗೆ ಚೆಂದದ ಪೇಟಿಂಗ್‌ ಬಾರದೇ ಇದ್ದರೂ ವರ್ಚುವಲ್‌ ವಿಧಾನದ ಮೂಲಕ ಜೊತೆಯಾಗುವ ನೀವು ಪೇಟಿಂಗ್‌ ಮೇಲೆ ಗಮನ ನೀಡಬಹುದು. ಜೊತೆಯಾಗಿ ಒಂದೇ ಪುಸ್ತಕ ಓದುತ್ತಾ ಇದರ ಬಗ್ಗೆ ಚರ್ಚೆ ಮಾಡುತ್ತಾ ನಿಮ್ಮ ಖಾಸಗಿ ಕ್ಷಣಗಳನ್ನು ಕಳೆಯಬಹುದು. ಇದರಿಂದ ಎರಡು ದೇಹಗಳು ದೂರದಲ್ಲಿ ಇದ್ದರೂ ಮನಸ್ಸುಗಳು ಒಂದಾಗಿಯೇ ಇರುತ್ತವೆ.

ವರ್ಚುವಲ್‌ ಟೂರ್‌

ಪ್ರೇಮಿಗಳು ದೂರವಿದ್ದಾಗ ಜೊತೆಯಾಗಿ ಟ್ರಾವೆಲ್‌ ಮಾಡುವುದು, ಪಿಕ್ನಿಕ್‌ನಂತಹ ಕ್ಷಣಗಳು ಮಿಸ್‌ ಆಗುವುದು ಸಹಜ. ಅದಕ್ಕಾಗಿ ನೀವು ವರ್ಚುವಲ್‌ ಟೂರ್‌ಗೆ ಪ್ರಾಧಾನ್ಯ ನೀಡಬಹುದು.

ಗೇಮಿಂಗ್‌ ನೈಟ್‌

ಜೊತೆಯಾಗಿ ಆನ್‌ಲೈನ್‌ ಗೇಮ್‌ಗಳಲ್ಲಿ ತೊಡಗುವ ಮೂಲಕವೂ ನೀವು ನಿಮ್ಮ ಸಮಯವನ್ನು ಜೊತೆಯಾಗಿ ಕಳೆಯಬಹುದು.

ಕ್ಯಾಂಡಲ್‌ಲೈಟ್‌ ಡಿನ್ನರ್‌

ನೀವು ನಿಮ್ಮ ಮನೆಯಲ್ಲಿ ಅವರು ಅವರ ಮನೆಯಲ್ಲಿ ಇದ್ದು, ವಿಡಿಯೊ ಕಾಲ್‌ನಲ್ಲಿ ಕ್ಯಾಂಡಲ್‌ ಲೈಟ್‌ ಡಿನ್ನರ್‌ನಲ್ಲಿ ಸಂಧಿಸಿ. ನಿಮ್ಮಷ್ಟದ ತಿನಿಸುಗಳನ್ನು ತಿನ್ನುತ್ತಾ ಹರಟೆ ಹೊಡೆಯುತ್ತಾ ಕ್ಷಣಗಳನ್ನು ಎಂಜಾಯ್‌ ಮಾಡಿ.

ಈ ಎಲ್ಲಾ ವರ್ಚುವಲ್‌ ವಿಧಾನಗಳು ದೂರದೂರಿನಲ್ಲಿರುವ ಪ್ರೇಮಿಯ ಜೊತೆ ನೀವು ವ್ಯಾಲೆಂಟೈನ್ಸ್‌ ಡೇಯನ್ನು ಸಂಭ್ರಮಿಸಲು ನೆರವಾಗುವ ಕ್ಷಣಗಳು.

ಇದನ್ನೂ ಓದಿ

Valentines Day: ವೈಟ್‌ಡೇಯಿಂದ ಸಾಮೂಹಿಕ ವಿವಾಹದವರೆಗೆ; ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ

ಫಿನ್‌ಲ್ಯಾಂಡ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಆದ್ರೆ, ಫಿಲಿಪ್ಪೀನ್ಸ್‌ನಲ್ಲಿ ಸಾಮೂಹಿಕ ವಿವಾಹ, ಜರ್ಮನಿಯಲ್ಲಿ ಕೊಡ್ತಾರೆ ಹಂದಿ ಆಕಾರದ ಗಿಫ್ಟ್‌ ವ್ಯಾಲೆಂಟೈನ್ಸ್‌ ಡೇಯನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ ಅನ್ನೋದನ್ನು ತಿಳಿಯುವ ಕುತೂಹಲ ನಿಮಗಿದ್ರೆ ಈ ಸ್ಟೋರಿ ನೋಡಿ.

Whats_app_banner