Valentines Day: ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ರೊಮ್ಯಾಂಟಿಕ್ ಆಗಿಸಲು ಹೀಗೆ ಅಲಂಕರಿಸಿ-valentines day 2024 how to makeover bedroom for valentines day romantic bedroom look valentines day tips rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ರೊಮ್ಯಾಂಟಿಕ್ ಆಗಿಸಲು ಹೀಗೆ ಅಲಂಕರಿಸಿ

Valentines Day: ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ರೊಮ್ಯಾಂಟಿಕ್ ಆಗಿಸಲು ಹೀಗೆ ಅಲಂಕರಿಸಿ

ವ್ಯಾಲೆಂಟೈನ್ಸ್​ ಡೇ ಆಚರಿಸಬೇಕು ಎಂಬ ಆಸೆ ಎಲ್ಲ ಜೋಡಿಗೆ ಇರುತ್ತದೆ. ಆದರೆ ಎಲ್ಲರೂ ರೆಸ್ಟೋರೆಂಟ್​ಗಳಲ್ಲೋ ಅಥವಾ ಇನ್ಯಾವುದೋ ಸ್ಥಳಕ್ಕೆ ಹೋಗಿ ಇದನ್ನು ಆಚರಿಸಲು ಇಷ್ಟಪಡುವುದಿಲ್ಲ. ನೀವು ನಿಮ್ಮ ಮನೆಯಲ್ಲಿಯೇ ನಿಮ್ಮ ಸಂಗಾತಿಯೊಂದಿಗೆ ವ್ಯಾಲೆಂಟೈನ್ಸ್​ ಡೇ ಆಚರಿಸಬೇಕು ಎಂದುಕೊಂಡಿದ್ದರೆ ನಿಮ್ಮ ಬೆಡ್‌ರೂಂ ಅನ್ನು ರೊಮ್ಯಾಂಟಿಕ್‌ ಆಗಿಸಲು ಇಲ್ಲಿದೆ ಒಂದಿಷ್ಟು ಸಲಹೆ.

ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ರೊಮ್ಯಾಂಟಿಕ್​ ಆಗಿಸಲು ಇಲ್ಲಿದೆ ಒಂದಿಷ್ಟು ಸಲಹೆ
ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ರೊಮ್ಯಾಂಟಿಕ್​ ಆಗಿಸಲು ಇಲ್ಲಿದೆ ಒಂದಿಷ್ಟು ಸಲಹೆ

ವ್ಯಾಲೆಂಟೈನ್ಸ್​ ಡೇಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಇಷ್ಟು ದಿನ ಹಗ್​ ಡೇ, ಕಿಸ್​ ಡೇ, ಪ್ರಪೋಸ್​ ಡೇ, ಚಾಕಲೇಟ್​ ಡೇ, ಟೆಡ್ಡಿ ಡೇ ಅಂತಾ ದಿನಕ್ಕೊಂದು ರೀತಿಯಲ್ಲಿ ವ್ಯಾಲೆಂಟೈನ್ಸ್​ ವಾರವನ್ನು ಸಂಭ್ರಮಿಸಿದ ಪ್ರಣಯ ಪಕ್ಷಿಗಳಿಗೆ ಈಗ ವ್ಯಾಲೆಂಟೈನ್ಸ್​ ಡೇಯನ್ನು ಸಂಭ್ರಮಿಸೋದು ಹೇಗೆ ಎಂಬ ಯೋಚನೆ ಇದ್ದೇ ಇರುತ್ತದೆ. ಮದುವೆಯಾದವರೂ ಸಹ ವ್ಯಾಲೆಂಟೈನ್ಸ್​ ಡೇ ಆಚರಿಸಬಾರದು ಎಂದೇನಿಲ್ಲ. ಹೀಗಾಗಿ ನೀವು ಕೂಡ ವ್ಯಾಲೆಂಟೈನ್ಸ್​ ಡೇ ಆಚರಿಸುವ ಯೋಚನೆಯಲ್ಲಿದ್ದರೆ ನಿಮ್ಮ ಬೆಡ್​ ರೂಮನ್ನೇ ಹೇಗೆ ಒಂದು ರೊಮ್ಯಾಂಟಿಕ್​ ತಾಣವಾಗಿ ಬದಲಾಯಿಸಬಹುದು ಎಂಬುದಕ್ಕೆ ಇಲ್ಲಿ ಒಂದಷ್ಟು ಮುಖ್ಯವಾದ ಸಲಹೆಗಳಿವೆ .

ರೆಸ್ಟಾರೆಂಟ್​ಗಳಿಗೆ ಹೋಗಿ ಅಥವಾ ದೂರದ ತಾಣಗಳಿಗೆ ತೆರಳಿ ವ್ಯಾಲೆಂಟೈನ್ಸ್​ ಡೇ ಆಚರಿಸುವುದು ಎಲ್ಲರಿಗೂ ಇಷ್ಟವಿರುವುದಿಲ್ಲ. ಕೆಲವರು ಮನೆಯಲ್ಲಿ ಕಾಲ ಕಳೆಯುವುದನ್ನೇ ಹೆಚ್ಚೆಚ್ಚು ಇಷ್ಟಪಡುತ್ತಾರೆ. ಈ ಪೈಕಿ ನೀವೂ ಒಬ್ಬರಾಗಿದ್ದರೆ ವ್ಯಾಲೆಂಟೈನ್ಸ್​ ಡೇಯನ್ನು ಮನೆಯಲ್ಲಿ ರೊಮ್ಯಾಂಟಿಕ್​ ಆಗಿ ಯಾವ ರೀತಿಯಲ್ಲಿ ಸೆಲಬ್ರೇಟ್​ ಮಾಡಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಐಡಿಯಾಗಳಿವೆ ನೋಡಿ.

ಹಾಸಿಗೆಯ ಮೇಲೆ ಮೆತ್ತನೆಯ ಹೊದಿಕೆಗಳು : ನಿಮ್ಮ ಬೆಡ್​ರೂಮನ್ನೆ ರೊಮ್ಯಾಂಟಿಕ್​ ತಾಣವಾಗಿ ಬದಲಾಯಿಸಬೇಕು ಎಂದುಕೊಂಡಿದ್ದರೆ ನೀವು ಮಲಗುವ ಹಾಸಿಗೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಮಲಗುವ ಕೋಣೆಯಲ್ಲಿ ವೆಲ್ವೆಟ್​ ಬಟ್ಟೆಯ ಹೊದಿಕೆಗಳನ್ನು ಇಡಿ. ಗುಲಾಬಿ ಬಣ್ಣದ ಹೊದಿಕೆಗಳಿಗೆ ಆದ್ಯತೆ ನೀಡಿ. ಅಥವಾ ಇನ್ಯಾವುದೇ ಗಾಢ ಬಣ್ಣದ ಹೊದಿಕೆಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಕಿಟಕಿಗಳಿಗೆ ಸುಂದರವಾದ ಪರದೆಗಳು : ನಿಮ್ಮ ಮಲಗುವ ಕೋಣೆ ಇನ್ನಷ್ಟು ಆಕರ್ಷಕವಾಗಿ ಕಾಣಬೇಕು ಎಂದರೆ ನೀವು ಕಿಟಕಿಗಳಿಗೆ ಹಾಕುವ ಪರದೆಯ ಕಡೆಗೂ ಗಮನ ನೀಡಬೇಕು. ಪರದೆಗಳು ನಿಮಗೆ ಕೇವಲ ಗೌಪ್ಯತೆಯನ್ನು ನೀಡುವುದು ಮಾತ್ರವಲ್ಲ. ಮಲಗುವ ಕೋಣೆಯ ಸೊಬಗನ್ನೇ ಬದಲಾಯಿಸಬಿಡುತ್ತದೆ. ಹೀಗಾಗಿ ಮನಸ್ಸಿಗೆ ಮುದ ನೀಡುವಂತಹ ಪರದೆಗಳನ್ನು ಕಿಟಕಿಗೆ ಅಳವಡಿಸಿ.

ಮಲಗುವ ಕೋಣೆಗೆ ದೀಪಾಲಂಕಾರ : ಮಲಗುವ ಕೋಣೆಗೆ ನಿಜವಾಗಿ ರೊಮ್ಯಾಂಟಿಕ್​ ನೋಟವನ್ನು ನೀಡುವುದು ದೀಪಗಳು . ಮಂದವಾದ ದೀಪಗಳನ್ನು ನೀವು ಇದಕ್ಕೆ ಆಯ್ಕೆ ಮಾಡಿಕೊಳ್ಳಿ. ಇದು ಒಂದು ರೀತಿಯ ಪ್ರಣಯದ ಭಾವನೆಯನ್ನು ಮೂಡಿಸುತ್ತದೆ.

ಪರಿಮಳಯುಕ್ತ ಕ್ಯಾಂಡಲ್​ಗಳು : ಈಗ ಮಾರುಕಟ್ಟೆಗಳಲ್ಲಿ ಇಂಥಾ ಕ್ಯಾಂಡಲ್​ಗಳು ಲಭ್ಯವಿದೆ. ಇದು ಮಲಗುವ ಕೋಣೆಯ ಅಂದವನ್ನು ಹೆಚ್ಚಿಸುವ ಜೊತೆಯಲ್ಲಿ ಒಳ್ಳೆಯ ಪರಿಮಳವನ್ನೂ ನೀಡುತ್ತದೆ. ಇದು ನಿಮ್ಮ ಸಂಗಾತಿಗೆ ಒಳ್ಳೆಯ ಭಾವನೆ ಮೂಡುವಂತೆ ಮಾಡುತ್ತದೆ.

ಐಷಾರಾಮಿ ಫರ್ನಿಚರ್​​ಗಳು : ನಿಮ್ಮ ಬೆಡ್​ರೂಮಿನಲ್ಲಿ ನೀವು ಈಗ ಇರುವ ಸಾಮಾನ್ಯ ಫರ್ನಿಚರ್​ಗಳನ್ನು ತೆಗೆದು ಐಷಾರಾಮಿ ಫರ್ನಿಚರ್​ಗಳನ್ನು ಅಳವಡಿಸಬೇಕು. ವಿಂಟೇಜ್​ ಫರ್ನಿಚರ್​ಗಳು ಮಲಗುವ ಕೋಣೆಗೆ ಒಳ್ಳೆಯ ನೋಟವನ್ನು ನೀಡುತ್ತವೆ. ಇಲ್ಲವಾದಲ್ಲಿ ನೀವು ಮಲಗುವ ಕೋಣೆಯ ಗೋಡೆಯ ಬಣ್ಣಕ್ಕೆ ಅನುಗುಣವಾದ ಫರ್ನಿಚರ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು .