Propose Day: ಫೆ 8 ಪ್ರಪೋಸ್ ಡೇ; ಮನ ಮೆಚ್ಚಿದವರಿಗೆ ಪ್ರೇಮ ನಿವೇದನೆ ಮಾಡುವ ಮುನ್ನ ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ವ್ಯಾಲೆಂಟೈನ್ಸ್ ವೀಕ್‌ನ ಎರಡನೇ ದಿನವನ್ನು ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ. ಫೆ 8 ಪ್ರಪೋಸ್ ಡೇ. ಈ ದಿನ ನಿಮ್ಮ ಮನಸ್ಸಿಗೆ ಇಷ್ಟವಾದರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ನೀವು ಈ ವರ್ಷ ಯಾರಿಗಾದ್ರೂ ಪ್ರಪೋಸ್ ಮಾಡ್ಬೇಕು ಅಂತಿದ್ರೆ, ಅದಕ್ಕೂ ಮುನ್ನ ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

ನಮ್ಮ ಬದುಕಿನಲ್ಲಿ ಯಾರ ಮೇಲೆ ಹೇಗೆ ಬೇಕಾದ್ರೂ ಪ್ರೀತಿ ಹುಟ್ಟಬಹುದು. ಹುಟ್ಟಿದ ಪ್ರೀತಿಯನ್ನು ನಮ್ಮೊಲವಿನ ವ್ಯಕ್ತಿಯ ಮುಂದೆ ನಿವೇದಿಸುವುದು ಖಂಡಿತ ಸುಲಭವಲ್ಲ. ಪ್ರೇಮ ನಿವೇದನೆಗೆಂದೇ ಒಂದು ವಿಶೇಷ ದಿನವಿದೆ. ಅದು ಪ್ರಪೋಸ್ ಡೇ. ಪ್ರತಿವರ್ಷ ಪ್ರೇಮಿಗಳ ದಿನಕ್ಕೂ ಮುನ ಅಂದರೆ ಫೆ. 8 ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಈ ದಿನವು ಪ್ರೀತಿ, ಒಲವು, ಬದ್ಧತೆಯನ್ನು ನಿರೂಪಿಸುವ ದಿನ. ನಮ್ಮ ಪ್ರೇಮ ಪಯಣಕ್ಕೆ ಹೊಸ ಹೆಜ್ಜೆ ಇಡಲು ಬಯಸುವವರಿಗೆ ಇದು ಬೆಸ್ಟ್ ಡೇ ಅಂತಲೇ ಹೇಳಬಹುದು. ಪ್ರಪೋಸ್ ಡೇ ಎನ್ನುವುದು ಹುಟ್ಟಿಕೊಂಡಿದ್ದು, ಪಾಶ್ಚಿಮಾತ್ಯ ಜಗತ್ತಿನಲ್ಲಿ. ಇದರ ಹುಟ್ಟಿನ ಇತಿಹಾಸದ ಬಗ್ಗೆ ಯಾವುದೇ ಸ್ವಲ್ಪ ದಾಖಲೆಗಳಿಲ್ಲ.
ಅದೇನೇ ಇರಲಿ, ತಮ್ಮ ಮನ ಮೆಚ್ಚಿದ ವ್ಯಕ್ತಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮೀಸಲಾಗಿರುವ ವಿಶೇಷ ದಿನವಾದ ಪ್ರಪೋಸ್ ಡೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವುದು ಸುಳ್ಳಲ್ಲ. ಜಗತ್ತಿನಾದ್ಯಂತ ಹಲವು ಪ್ರೇಮಿಗಳು ಈ ದಿನಕ್ಕಾಗಿ ಎದುರು ನೋಡುತ್ತಿರುತ್ತಾರೆ. ಪ್ರೇಮ ನಿವೇದನೆ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತ ಮಾಡಿಕೊಳ್ಳುವ ಬಯಕೆ ಅವರದ್ದು. ಈ ದಿನದಿಂದ ಹಲವರು ತಮ್ಮ ಹೊಸ ಬದುಕಿಗೆ ಹೆಜ್ಜೆ ಇಡುತ್ತಾರೆ.
ಪ್ರಪೋಸ್ ಡೇ
ಪ್ರತಿ ವರ್ಷವೂ ಫೆ. 8 ರಂದೇ ಪ್ರಪೋಸ್ ಡೇಯನ್ನು ಆಚರಿಸಲಾಗುತ್ತದೆ. ಇದು ವ್ಯಾಲೆಂಟೈನ್ ವೀಕ್‌ನ ಎರಡನೇ ದಿನ ಬರುತ್ತದೆ. ಈ ವರ್ಷ ಗುರುವಾರ ಪ್ರಪೋಸ್ ಡೇ ಇದೆ.
ಪ್ರಪೋಸ್ ಡೇ ಇತಿಹಾಸ ಮತ್ತು ಮಹತ್ವ
ಪ್ರಪೋಸ್ ಡೇ ಇತಿಹಾಸ ಬಗ್ಗೆ ಎಲ್ಲೂ ನಿಖರವಾಗಿ ದಾಖಲಿಸಿಲ್ಲ. ಆದರೆ ಕೆಲವು ನಿರ್ದಿಷ್ಟ ಘಟನೆಗಳು ಈ ಆಚರಣೆಯ ಮೇಲೆ ಪ್ರಭಾವ ಬೀರಿದೆ. 1477ರಲ್ಲಿ ಆಸ್ಟ್ರೀಯನ್ ಆರ್ಚ್ ಡ್ಯೂಕ್ ಮ್ಯಾಕ್ಸಿ ಮಿಲಿಯನ್ ಬರ್ಗಂಡಿಯ ಮೇರಿಗೆ ಒಂದು ವಿಶೇಷ ವಜ್ರದ ಉಂಗುರ ತೊಡಿಸಿ ತಮ್ಮ ಪ್ರೇಮ ನಿವೇದನೆ ಮಾಡಿದ್ದರು. ಅಂದಿನಿಂದ ಈ ಪ್ರಪೋಸ್ ಡೇ ಚಾಲನೆಗೆ ಬಂತು ಎಂದು ಒಂದು ಕಡೆ ಹೇಳಲಾಗುತ್ತದೆ.
ಇನ್ನೊಂದ ದಂತಕಥೆಯ ಪ್ರಕಾರ 1816ರಲ್ಲಿ ರಾಜಕುಮಾರಿ ಷಾರ್ಲೆಟ್ ಅವರೊಂದಿಗೆ ವಿವಾಹ ನಿಶ್ಚಯವಾದ ದಿನ ಇದು ಎಂದು ಹೇಳಲಾಗುತ್ತದೆ.
ಅದೇನೇ ಇರಲಿ, ಪ್ರಪೋಸ್ ಡೇ ಎಂಬುದು ಒಂದು ಅದ್ಭುತ ದಿನ. ಮನ ಭಾವನೆಗಳನ್ನು ಮನಸ್ಸಿನಲ್ಲೇ ಹುದುಗಿಟ್ಟುಕೊಳ್ಳುವ ಬದಲು ನೇರವಾಗಿ ನಿಮ್ಮ ಮನ ಮೆಚ್ಚಿದ ವ್ಯಕ್ತಿ ಎದುರು ನಿಮ್ಮ ಪ್ರೇಮವನ್ನು ವ್ಯಕ್ತಪಡಿಸಿ. ನಿಮ್ಮ ಪ್ರೇಮ ಪಯಣಕ್ಕೆ ನಾಳೆ ಎಂಬುದು ಹೊಸ ಹಾದಿ ಬರೆಯುವಂತಾಗಲಿ. ಹ್ಯಾಪಿ ಪ್ರಪೋಸ್ ಡೇ.
ಇದನ್ನೂ ಓದಿ
Propose Day 2024: ನಿಮ್ಮಷ್ಟದ ವ್ಯಕ್ತಿಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಲು ಇಲ್ಲಿದೆ 8 ಕ್ರಿಯೆಟಿವ್ ಐಡಿಯಾಗಳು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರೇಮಿಗಳ ದಿನದಷ್ಟೇ ಮಹತ್ವ ಪಡೆದಿರುವುದು ಪ್ರಪೋಸ್ ಡೇ. ಫೆ 8 ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಅಂದು ನಿಮ್ಮ ಒಲವಿನ ವ್ಯಕ್ತಿಯ ಮುಂದೆ ಪ್ರೇಮಿ ನಿವೇದಿಸುವ ಮೂಲಕ ಖುಷಿ ಪಡಿಸಬಹುದು. ಈ ವರ್ಷ ನೀವು ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್ ಹಾಗೂ ಕ್ರಿಯೇಟಿವ್ ಆಗಿ ಪ್ರಪೋಸ್ ಮಾಡ್ಬೇಕು ಅಂತಿದ್ರೆ, ನಿಮಗಾಗಿ ಇಲ್ಲಿದೆ 8 ಐಡಿಯಾ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ