ಇದು ಹುಡುಗರಿಗಷ್ಟೇ ಅಲ್ಲ: ಕನಸೊಂದು ಶುರುವಾಗಿದೆ, ಹೇಳ್ಕೊಳ್ಳೋದು ಹೇಗೆ? ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 6 ಐಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  ಇದು ಹುಡುಗರಿಗಷ್ಟೇ ಅಲ್ಲ: ಕನಸೊಂದು ಶುರುವಾಗಿದೆ, ಹೇಳ್ಕೊಳ್ಳೋದು ಹೇಗೆ? ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 6 ಐಡಿಯಾ

ಇದು ಹುಡುಗರಿಗಷ್ಟೇ ಅಲ್ಲ: ಕನಸೊಂದು ಶುರುವಾಗಿದೆ, ಹೇಳ್ಕೊಳ್ಳೋದು ಹೇಗೆ? ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 6 ಐಡಿಯಾ

ಹರೆಯದ ಮನಸ್ಸುಗಳು ಕಾತರದಿಂದ ಕಾಯುತ ದಿನ ಫೆ 14. ಮೊದಲ ನೋಟದ ಪ್ರೇಮವೋ, ಗುಣ ಅರಿತು ಮೂಡಿದ ಮೆಚ್ಚುಗೆಯೋ, ಸದಾ ಹತ್ತಿರವೇ ಇರಬೇಕೆನ್ನುವ ಕಾತರವೋ ಪ್ರೇಮವೆಂದು ಅರ್ಥವಾಗಿದ್ದರೆ ಅದನ್ನು ಹೇಳಿಕೊಳ್ಳಲು ಇದೊಂದು ಅವಕಾಶ. ಪ್ರೀತಿ ಶುರುವಾಗಿದೆ, ಹೇಳ್ಕೊಳ್ಳೋದು ಹೇಗೆ ಅಂತ ಗೊತ್ತಾಗ್ತಿಲ್ಲ ಅನ್ನೋರ ಪೈಕಿ ನೀವೂ ಒಬ್ಬರಾಗಿದ್ದರೆ ಈ ಬರಹ ಓದಿ (ಬರಹ: ಪ್ರಜ್ವಲಾ)

ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 6 ಐಡಿಯಾ
ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 6 ಐಡಿಯಾ

ಪ್ರೇಮಿಗಳ ದಿನವೇ ಪ್ರೀತಿಸಿದವರಿಗೆ ತಮ್ಮ ಪ್ರೀತಿ ಹೇಳಿಕೊಳ್ಳಬೇಕೆಂದು ಬಹಳ ದಿನಗಳಿಂದ ಹರೆಯದ ಮನಸ್ಸುಗಳಲ್ಲಿ ಚಡಪಡಿಕೆ, ಕಾತರ, ಉತ್ಸಾಹ ಇರುತ್ತದೆ. ತನ್ನ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಬೇಕು ಎಂದು ಹಾತೊರೆಯುವುದು ಪ್ರೇಮಿಗಳ ಗುಣ. ಇಂತಹ ದಿನವನ್ನು ಭರ್ಜರಿಯಾಗಿ ಸಂಭ್ರಮಿಸಬಹುದು. ಸರಳವಾಗಿ, ಅದೇ ಹೊತ್ತಿಗೆ ಆರ್ಥಪೂರ್ಣವಾಗಿಯೂ ಖುಷಿಪಡಬಹುದು. ಅದಕ್ಕಾಗಿ ಹಲವಾರು ದಾರಿಗಳಿವೆ.

ಪ್ರಪಂಚದೆಲ್ಲೆಡೆ, ಪ್ರೇಮಿಗಳ ದಿನವನ್ನು ವಿವಿಧ ರೀತಿಗಳಲ್ಲಿ ಆಚರಿಸುತ್ತಾರೆ. ಕೆಲ ಏಕಮುಖಿ (ಒನ್‌ಸೈಡ್) ಪ್ರೇಮಿಗಳು ತಮ್ಮ ಪ್ರೀತಿ ಹೇಳಿಕೊಳ್ಳಲು ಈ ದಿನಕ್ಕಾಗಿಯೇ ಕಾಯುತ್ತಿರುತ್ತಾರೆ. ಪ್ರೇಮ ಪ್ರಸ್ತಾವದ (ಲವ್ ಪ್ರೊಪೋಸಲ್) ಒಂದು ಘಳಿಗೆಯನ್ನು ಸದಾ ನೆನಪಿನಲ್ಲ ಇರುವಂತೆ ಮಾಡಬೇಕೆಂಬುದು ಎಲ್ಲ ಪ್ರೇಮಿಗಳ ಕನಸಾಗಿರುತ್ತದೆ. ಚೆಂದದ ಉಡುಗೊರೆಗಳನ್ನು ಕೊಡುವುದು, ಹಳೆಕಾಲದ ಪ್ರೀತಿಯ ಹಾಗೆ ಪ್ರೇಮಪತ್ರಗಳನ್ನು ಬರೆಯುವುದು, ಫ್ಯಾನ್ಸಿ ಡಿನ್ನರ್ ಡೇಟ್‌ಗಳಿಗೆ ಹೋಗುವುದು, ವಿಶಿಷ್ಟ ರೀತಿಯಲ್ಲಿ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ವಿಧಾನಗಳಿವೆ. ಪ್ರೇಮ ಪ್ರಸ್ತಾವದ ಆಸೆ ಈಡೇರಲು ಕೆಲ ಆಯ್ಕೆಗಳು ಇಲ್ಲಿವೆ.

1. ಆರ್ಥಪೂರ್ಣ ಸ್ಥಳ ಆರಿಸಿಕೊಳ್ಳಿ

ಪ್ರೀತಿಯನ್ನು ಹೇಳಿಕೊಳ್ಳುವ ದಿನ, ಎಂತಹ ಜಾಗದಲ್ಲಿ ಅದನ್ನು ವ್ಯಕ್ತಪಡಿಸುತ್ತೀದ್ದೀರ ಎಂಬುದು ಬಹಳ ಮುಖ್ಯ. ಆಯ್ಕೆ ಮಾಡುವ ಜಾಗವು ಇಬ್ಬರಿಗೂ ಸುಂದರ ಕ್ಷಣಗಳನ್ನು ಮರುಕಳಿಸುವಂತಿರಬೇಕು. ಪ್ರೀತಿ ಹೇಳಿಕೊಂಡ ನಂತರ ಆ ದಿನ ಇನ್ನಷ್ಟು ಸುಂದರವಾಗಿ ನೆನಪಿನಲ್ಲುಳಿಯಬೇಕು. ಸುಂದರವಾದ ಬೀಚ್ ಮುಂದೆ ಕುಳಿತು, ಸೂರ್ಯ ಮುಳುಗುವ ಹೊತ್ತಿನ ಸಂಜೆಗೆಂಪಿನಲ್ಲಿ, ಇಬ್ಬರು ಸಮುದ್ರವನ್ನು ನೋಡುತ್ತಾ ಮನಸಿನಲ್ಲಿರುವ ಪ್ರೀತಿಯನ್ನು ಹೇಳಿಕೊಳ್ಳಲು ಆಪ್ಯಾಯಮಾನವಾಗಿರುತ್ತದೆ. ಒಂದು ಸುಂದರವಾದ ಪಾರ್ಕ್‌ಗೆ ಕೂಡ ಹೋಗಬಹುದು. ಒಳ್ಳೆಯ ವಾತಾವರಣವಿರುವ ಕೆಫೆ ಅಥವಾ ರೆಸ್ಟೋರೆಂಟ್ ಕೂಡ ಉತ್ತಮ ಆಯ್ಕೆ ಆಗಬಲ್ಲದು.

2. ಪ್ರೇಮಪತ್ರ ಬರೆಯಿರಿ

ಹಳೇ ಕಾಲದ ಶೈಲಿ ಎನಿಸಿದರೂ ಇದೊಂಥರ ಎವರ್ ಗ್ರೀನ್ ಆಯ್ಕೆ. ಎಲ್ಲರಿಗೂ ಸುಲಭ ಎನಿಸದರಿಬಹುದು. ಆದರೆ ಪ್ರೀತಿಯಲ್ಲಿ ಬಿದ್ದ ಮೇಲೆ ಎಲ್ಲರೂ ಪ್ರೇಮಪತ್ರ ಬರೆಯಲು ಪ್ರಯತ್ನಿಸಿರುತ್ತಾರೆ. ಪತ್ರದ ಮೂಲಕ ಮನಸಿನ ಭಾವನೆಯನ್ನು ಬರವಣಿಗೆಯಲ್ಲಿ, ಚೆಂದವಾಗಿ ವರ್ಣನೆ ಮಾಡಿ ವ್ಯಕ್ತಪಡಿಸಬಹುದು. ಆದರೆ, ನೀವು ಬರೆದ ಪತ್ರವು ಸರಿಯಾದ ವ್ಯಕ್ತಿಯನ್ನೇ ತಲುಪಿದೆಯಾ ನೋಡಿಕೊಳ್ಳಿ.

3. ಹೂ ಜೊತೆಗೆ ಚಂದದ ಗಿಫ್ಟ್‌

ಕೆಂಪು ಗುಲಾಬಿ ಹೂ ಪ್ರೀತಿಯ ಸಂಕೇತ ಎಂದು ಹೇಳುತ್ತಾರೆ. ಒಂದೇ ಒಂದು ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. 100 ಕೆಂಪು ಗುಲಾಬಿಗಳ ಗುಚ್ಛ ಕೊಟ್ಟು 'ಲವ್ ಯು' ಎಂದರೆ ಅದರ ಮಜಾ ಬೇರೆಯೇ ಲೆವೆಲ್‌ನಲ್ಲಿ ಇರುತ್ತೆ. ನೀವಿಷ್ಟ ಪಟ್ಟ ಹುಡುಗ ಅಥವಾ ಹುಡುಗಿಗೆ ಏನು ಇಷ್ಟವಾಗಬಹುದು, ಅವರ ಟೇಸ್ಟ್‌ ಹೇಗಿದೆ ಎಂದು ತಿಳಿದು ಉಡುಗೊರೆ ಕೊಡುವುದು ನಿಮ್ಮ ಪ್ರೇಮಪ್ರಸ್ತಾವಕ್ಕೆ ಇನ್ನಷ್ಟು ಮೆರುಗು ತುಂಬಬಹುದು.

4. ಎಲ್ಲಿ ಪ್ರಪೋಸ್ ಮಾಡೋದು?

ಯಾವ ಸ್ಥಳದಲ್ಲಿ ನಿಮ್ಮ ಪ್ರೇಮಿಯ ಎದುರು ಮಂಡಿಯೂರಿ 'ಐ ಲವ್ ಯು' ಹೇಳುತ್ತೀರಿ ಎನ್ನುವುದು ಸಹ ಮುಖ್ಯವಾಗುತ್ತೆ. ಕೆಲವರ ಪ್ರಕಾರ ತಾಜ್ ಮಹಲ್ ಅತ್ಯುತ್ತಮ ಆಯ್ಕೆ. ಇನ್ನು ಮಾಲ್‌ಗಳಲ್ಲಿ ಜನಸಮೂಹಗಳ ಮಧ್ಯೆ ಫ್ಲ್ಯಾಶ್ ಮಾಬ್‌ಗಳನ್ನು ಮಾಡಿ ಪ್ರಪೋಸ್ ಮಾಡುವುದರ ಮೂಲಕವೂ ಪ್ರೀತಿ ತೋಡಿಕೊಳ್ಳಬಹುದು.

5. ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡುವುದು

ನಿಮ್ಮ ಹಾಗೂ ನಿಮ್ಮ ಪ್ರೇಯಸಿ/ಪ್ರಿಯಕರನ ಗೆಳೆಯ ಗೆಳತಿಯರನ್ನು ಒಂದು ಕಡೆ ಕರೆದು, ಸುಂದರ ಸಮಯ ಕಳೆಯುತ್ತ, ಎಲ್ಲರ ಸಮೂಹದಲ್ಲಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ತಮ್ಮ ಆತ್ಮೀಯರ ಜೊತೆ ಹಾಡು ಹಾಡುತ್ತಾ, ಆಟ ಆಡುತ್ತಾ, ತಿಂಡಿ ತಿನಿಸುಗಳನ್ನು ಸವಿಯುತ್ತಾ, ಸುಂದರವಾದ ಕ್ಷಣಗಳನ್ನು ಕಳೆಯಬಹುದು.

ಈ ರೀತಿಯಲ್ಲಿ, ಪ್ರೇಮಿಗಳ ದಿನದಂದು, ವಿಶೇಷವಾಗಿ ನಿಮ್ಮ ಪ್ರೀತಿಯನ್ನು ಹೇಳಿಕೊಂಡು ಸುಂದರವಾದ ಕ್ಷಣಗಳನ್ನು ನಿಮ್ಮ ನೆನಪಿನ ಬುತ್ತಿಗೆ ತುಂಬಿಕೊಳ್ಳಬಹುದು.

Whats_app_banner