Valentines Day: ಪ್ರೇಮಿಗಳ ದಿನದಂದು ಸಂಗಾತಿ ಇಲ್ಲ ಎಂದು ಕೊರಗಬೇಡಿ; ಒಂಟಿಹಕ್ಕಿಗಳು ಹೀಗೂ ಎಂಜಾಯ್ ಮಾಡಬಹುದು..
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ಪ್ರೇಮಿಗಳ ದಿನದಂದು ಸಂಗಾತಿ ಇಲ್ಲ ಎಂದು ಕೊರಗಬೇಡಿ; ಒಂಟಿಹಕ್ಕಿಗಳು ಹೀಗೂ ಎಂಜಾಯ್ ಮಾಡಬಹುದು..

Valentines Day: ಪ್ರೇಮಿಗಳ ದಿನದಂದು ಸಂಗಾತಿ ಇಲ್ಲ ಎಂದು ಕೊರಗಬೇಡಿ; ಒಂಟಿಹಕ್ಕಿಗಳು ಹೀಗೂ ಎಂಜಾಯ್ ಮಾಡಬಹುದು..

ಪ್ರೇಮಿಗಳ ದಿನ ಮತ್ತೆ ಬಂದಿದೆ. ಫೆಬ್ರವರಿ ಬಂತೆಂದರೆ ಸಾಕು, ಎರಡನೇ ವಾರದಲ್ಲಿ ಪ್ರೇಮಿಗಳ ದಿನಾಚರಣೆಗೆ ಎಲ್ಲಿಲ್ಲದ ಸಂಭ್ರಮ ಮತ್ತು ಸಡಗರ ಇರುತ್ತದೆ. ಆದರೆ ಪ್ರಿಯತಮೆ ಅಥವಾ ಪ್ರಿಯಕರ ಇಲ್ಲದೇ ಇರುವ ಒಂಟಿ ಜೀವಗಳು ಕೂಡ ಈ ದಿನವನ್ನು ಸಂಭ್ರಮಿಸಬಹುದು. ಹೇಗೆ ಅಂತಿರಾ? ಈ ಸ್ಟೋರಿ ಓದಿ..

ಒಂಟಿ ಜೀವಗಳು ಕೂಡ ಈ ದಿನವನ್ನು ಸಂಭ್ರಮಿಸಬಹುದು. ಹೇಗೆ ಅಂತಿರಾ? ಈ ಸ್ಟೋರಿ ಓದಿ..
ಒಂಟಿ ಜೀವಗಳು ಕೂಡ ಈ ದಿನವನ್ನು ಸಂಭ್ರಮಿಸಬಹುದು. ಹೇಗೆ ಅಂತಿರಾ? ಈ ಸ್ಟೋರಿ ಓದಿ.. (Pixabay)

ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಗೆ ಪ್ರೇಮಿಗಳು ವಿವಿಧ ರೀತಿಯ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಡೇಟಿಂಗ್, ಔಟಿಂಗ್, ಈಟಿಂಗ್, ಡಿನ್ನರ್, ಕ್ಯಾಂಡಲ್ ಲೈಟ್ ಪಾರ್ಟಿ ಎಂದೆಲ್ಲ ಹಲವು ರೀತಿಯಲ್ಲಿ ಅವರು ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರೇಮಿಗಳ ದಿನವು ದಂಪತಿಗಳಿಗೆ ಒಂದು ಆಚರಣೆಯಾಗಿದ್ದು, ಅದು ವಿವಿಧ ರೀತಿಯ ಪ್ರೇಮ ಪತ್ರಗಳು, ಪ್ರೇಮಗೀತೆಗಳು ಮತ್ತು ಕೆಂಪು ಗುಲಾಬಿಗಳಿಂದ ತುಂಬಿರುತ್ತದೆ. ದಂಪತಿಗಳ ಅತಿಯಾದ ವಿಜ್ರಂಭಣೆಯ ಆಚರಣೆಯು ಅವಿವಾಹಿತರಿಗೆ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಭಾವಿಸುವಂತೆ ಮಾಡುತ್ತದೆ, ಈ ರೀತಿಯ ಆಚರಣೆಯು ಅದ್ಧೂರಿಯಾಗಿ ನಡೆಯುವುದರಿಂದ, ಅವರಿಗೆ ತಾನು ಏಕಾಂಗಿ ಎಂಬ ಭಾವನೆ ಮೂಡುವಂತೆ ಮಾಡುತ್ತದೆ. ನನಗೂ ಪ್ರೇಮಿಯಿರಬೇಕು ಎಂದು ಅನ್ನಿಸುತ್ತದೆ. ಆದರೆ ನೀವು ಒಂಟಿಯಾಗಿದ್ದರೆ, ಅದಕ್ಕಾಗಿ ದುಃಖಿಸಬೇಕಿಲ್ಲ.

ಪ್ರೇಮಿಗಳ ದಿನ, ಪ್ರೀತಿ, ಪ್ರೇಮ ಮತ್ತು ಪ್ರಣಯದ ಮೇಲೆ ಹೆಚ್ಚು ಕೇಂದ್ರೀಕೃತವಾದ ದಿನದಂತೆ ತೋರುತ್ತಿದ್ದರೂ, ಪ್ರೀತಿಯು ಕೇವಲ ಪ್ರಣಯದ ಬಗ್ಗೆ ಮಾತ್ರವೇ ಇರುವುದಲ್ಲ. ಬದಲಾಗಿ, ಇದು ಅತ್ಯಂತ ಶಕ್ತಿಶಾಲಿಯಾದ ಸ್ವ-ಪ್ರೀತಿ ಸೇರಿದಂತೆ ಎಲ್ಲಾ ರೀತಿಯ ಪ್ರೀತಿಯನ್ನು ಆಚರಿಸಲು ಒಂದು ದಿನವೂ ಆಗಿರಬಹುದು. ಪ್ರೇಮಿಗಳ ದಿನದಂದು ನೀವು ನನಗೆ ಪ್ರಿಯಕರ ಇಲ್ಲ, ಅಥವಾ ಪ್ರಿಯತಮೆ ಇಲ್ಲ ಎಂದು ಕೊರಗಬೇಕಿಲ್ಲ. ಅದರ ಬದಲು ನೀವು ಕೂಡ ಅತ್ಯಂತ ಖುಷಿಯಿಂದ, ಸಂತೋಷದ ಆಚರಣೆಯ ಮೂಲಕ ಈ ದಿನವನ್ನು ಕಳೆಯಬಹುದು, ಸ್ವ-ಪ್ರೀತಿ, ಸ್ವ- ಕಾಳಜಿಯನ್ನು ವ್ಯಕ್ತಪಡಿಸಬಹುದು.

ಸ್ಪಾಗೆ ಹೋಗಿ, ನಿಮ್ಮನ್ನು ನೀವು ಪ್ರೀತಿಸಿ

ಪ್ರೇಮಿಗಳ ದಿನದಂದು ನೀವು, ಐಷಾರಾಮಿ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮನಸ್ಸು ಮತ್ತು ದೇಹ ಎರಡನ್ನೂ ಶಮನಗೊಳಿಸುವ ಮತ್ತು ನಿಮಗೆ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಪ್ರೇಮಿಗಳ ದಿನದಂದು ಸ್ಪಾಗೆ ಹೋಗಿ, ಅಲ್ಲಿನ ಹಿತವಾದ ಮಸಾಜ್‌, ಫೇಶಿಯಲ್‌ಗಳು ಮತ್ತು ಅರೋಮಾಥೆರಪಿ ಚಿಕಿತ್ಸೆಗಳ ಸೇವೆಯನ್ನು ಪಡೆಯಿರಿ. ಹೀಗೆ ಮಾಡುವುದರಿಂದ, ಪ್ರೇಮಿಗಳ ದಿನವು ಪ್ರೀತಿಯೊಂದಿಗೆ ಸಮಯ ಕಳೆಯುವುದರ ಬಗ್ಗೆ ಇರುವಂತೆಯೇ, ನಿಮ್ಮನ್ನು ನೀವು ಪ್ರೀತಿಸಲು, ನಿಮಗಾಗಿ ಸಮಯ ಕೊಡಲು ಇರುವ ಅವಕಾಶ ಎಂದು ಭಾವಿಸಿ.

ಹೊಸ ಹವ್ಯಾಸಕ್ಕೆ ದಿನ ವಿನಿಯೋಗಿಸಿ

ಪ್ರೇಮಿಗಳ ದಿನದಂದು ನೀವು ನೃತ್ಯ, ಸ್ಕೇಟಿಂಗ್, ಕುಂಬಾರಿಕೆ, ಅಡುಗೆ ಅಥವಾ ನಿಮ್ಮ ಆಸಕ್ತಿಗೆ ಪೂರಕವಾದ ಯಾವುದೇ ಹವ್ಯಾಸ ಕಾರ್ಯಾಗಾರದ ತರಗತಿಗಳಿಗೆ ಹಾಜರಾಗಿ. ಈ ಕಾರ್ಯಾಗಾರಗಳಲ್ಲಿ ನೀವು ಇದೇ ರೀತಿಯ ಉತ್ಸಾಹವನ್ನು ಹಂಚಿಕೊಳ್ಳುವ ಹೊಸ ಜನರನ್ನು ಭೇಟಿಯಾಗುತ್ತೀರಿ. ಹೀಗೆ ನೀವು ಹೊಸದು ಏನನ್ನಾದರೂ ಪ್ರಯತ್ನಿಸಿದರೂ, ಪ್ರೇಮಿಗಳ ದಿನವು ಖಂಡಿತವಾಗಿಯೂ ಬಹಳಷ್ಟು ಸೃಜನಶೀಲತೆ ಮತ್ತು ವಿನೋದದಿಂದ ತುಂಬಿರುತ್ತದೆ. ಜತೆಗೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ, ನಾನು ಒಂಟಿ ಎಂಬ ಭಾವನೆಯಿಂದ ಮುಕ್ತಿ ನೀಡುತ್ತದೆ.

ಸಿನಿಮಾಗೆ ಹೋಗಿ, ಇಲ್ಲವೇ ವೆಬ್‌ ಸಿರೀಸ್ ವೀಕ್ಷಿಸಿ

ನಾನು ಒಂಟಿ, ನನಗೆ ಪ್ರೇಮಿಯಿಲ್ಲ ಎಂಬ ಭಾವನೆಯನ್ನು ಬಿಟ್ಟು, ಈ ಪ್ರೇಮಿಗಳ ದಿನದಂದು ಒಂದು ಉತ್ತಮ ಚಲನಚಿತ್ರವನ್ನು ವೀಕ್ಷಿಸಿ. ಅದು ಮನೆಯಲ್ಲಿರಬಹುದು, ಅಥವಾ ಚಿತ್ರಮಂದಿರಗಳಲ್ಲಿ ಆಗಿರಬಹುದು. ಒಟ್ಟಾರೆ ಅದು ಮನಸ್ಸಿಗೆ ಖುಷಿ ಕೊಡುತ್ತದೆ.

ಹೊರಗಡೆ ಸುತ್ತಾಡಲು ಹೋಗಿ

ಪ್ರೇಮಿಗಳ ದಿನವನ್ನು ಕೆಲಸ ಮತ್ತು ದೈನಂದಿನ ಜಂಜಾಟದಿಂದ ದೂರವಿರಲು ಒಂದು ಅವಕಾಶವೆಂದು ಪರಿಗಣಿಸಿ. ವಿರಾಮ ತೆಗೆದುಕೊಂಡು ಪ್ರವಾಸಕ್ಕೆ ಹೋಗಿ. ಏಕಾಂಗಿ ಪ್ರಯಾಣದ ಆನಂದವನ್ನು ಅನುಭವಿಸಿ, ನಿಮ್ಮ ದಿನವನ್ನು ಉಲ್ಲಾಸದಿಂದ ಕಳೆಯಿರಿ.

ಶಾಪಿಂಗ್ ಮಾಡಿ, ಹೊಸ ಫ್ಯಾಷನ್ ಟ್ರೈ ಮಾಡಿ

ಪ್ರೇಮಿಗಳ ದಿನದಂದು ಯಾವುದಾದರೂ ಮಾಲ್ ಅಥವಾ ಸ್ಟ್ರೀಟ್‌ಗೆ ಶಾಪಿಂಗ್ ಹೋಗಿ. ಶಾಪಿಂಗ್ ಎಂದರೆ ಅದು ಕೇವಲ ಎಲ್ಲಾ ಬಟ್ಟೆಗಳಾಗಿರಬೇಕಾಗಿಲ್ಲ. ನಿಮ್ಮಿಷ್ಟದ ವಸ್ತುಗಳನ್ನಾದರೂ ಸರಿ, ಬೇಕಾಗಿರುವುದನ್ನು ಖರೀದಿಸಿ, ಖುಷಿ ಪಡಿ.

Whats_app_banner