Hug Day 2025: ಹಗ್ ಡೇ ಆಚರಿಸುವ ಉದ್ದೇಶವೇನು, ಪ್ರೇಮಿಗಳ ವಾರದ 6ನೇ ದಿನದ ಇತಿಹಾಸ, ಮಹತ್ವ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Hug Day 2025: ಹಗ್ ಡೇ ಆಚರಿಸುವ ಉದ್ದೇಶವೇನು, ಪ್ರೇಮಿಗಳ ವಾರದ 6ನೇ ದಿನದ ಇತಿಹಾಸ, ಮಹತ್ವ ಹೀಗಿದೆ

Hug Day 2025: ಹಗ್ ಡೇ ಆಚರಿಸುವ ಉದ್ದೇಶವೇನು, ಪ್ರೇಮಿಗಳ ವಾರದ 6ನೇ ದಿನದ ಇತಿಹಾಸ, ಮಹತ್ವ ಹೀಗಿದೆ

ಪ್ರೇಮಿಗಳ ವಾರದ (ವ್ಯಾಲೆಂಟೈನ್ಸ್ ವೀಕ್‌) 6ನೇ ದಿನ ಹಗ್‌ ಡೇ. ಈ ದಿನವನ್ನು ಆಚರಿಸುವ ಉದ್ದೇಶವೇನು, ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಹಗ್ ಡೇ 2025
ಹಗ್ ಡೇ 2025 (PC: Canva)

ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ. ಈಗಾಗಲೇ ರೋಸ್‌ ಡೇಯಿಂದ ಪ್ರಾಮಿಸ್‌ ಡೇವರೆಗೆ ಆಚರಿಸಲಾಗಿದೆ. ಇಂದು ಹಗ್ ಡೇ. ಪ್ರತಿವರ್ಷ ಪ್ರೇಮಿಗಳ ವಾರ ಅಥವಾ ವ್ಯಾಲೆಂಟೈನ್ಸ್ ವೀಕ್‌ನ 6ನೇ ದಿನ ಹಗ್‌ ಡೇ ಆಚರಿಸಲಾಗುತ್ತದೆ. ಹಗ್‌ ಡೇ ಎನ್ನುವುದು ಪ್ರೇಮಿಗಳನ್ನು ಭಾವನಾತ್ಮಕವಾಗಿ ಹತ್ತಿರ ಮಾಡುವ ದಿನವಾಗಿದೆ. ಹಾಗಾದರೆ ಈ ದಿನವನ್ನು ಆಚರಿಸುವ ಉದ್ದೇಶವೇನು, ಹಗ್‌ ಡೇಯ ಇತಿಹಾಸ ಮಹತ್ವ ತಿಳಿಯಿರಿ.

ಹಗ್ ಡೇ ಎನ್ನುವುದು ಮನದ ಒಲುಮೆಯನ್ನು ಅಪ್ಪಿಕೊಳ್ಳುವ ಮೂಲಕ ತೋರುವ ದಿನ. ಅಪ್ಪಿಕೊಳ್ಳುವುದರಿಂದ ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ವ್ಯಕ್ತಿಗಳನ್ನು ಹತ್ತಿರ ಮಾಡುತ್ತದೆ. ಮಾತಿನ ಹಂಗಿಲ್ಲದೇ ಮನದ ಭಾವನೆಗಳು ಬದಲಾಗಲು ಅಪ್ಪುಗೆಯೂ ಒಂದು ದಾರಿ ಎಂದರೆ ತಪ್ಪಾಗಲಿಕ್ಕಿಲ್ಲ. ಜಗತ್ತಿನಲ್ಲಿ ಯಾವುದೇ ಸಾಮಾಜಿಕ ನಿರ್ಬಂಧಗಳಿಲ್ಲದೇ ಪ್ರೀತಿ ವ್ಯಕ್ತಪಡಿಸಲು ಇರುವ ಒಂದೇ ಒಂದು ಮಾರ್ಗ ಎಂದರೆ ಅದು ಅಪ್ಪಿಕೊಳ್ಳುವುದು. 

ಹಗ್ ಡೇ ಇತಿಹಾಸ, ಮಹತ್ವ

ಹಗ್‌ ಡೇ ಆರಂಭವಾಗಿದ್ದು ಯಾವ ಕಾರಣಕ್ಕೆ, ಹೇಗೆ ಎಂಬುದರ ಬಗ್ಗೆ ಎಲ್ಲಿಯೂ ಸ್ವಷ್ಟತೆ ಇಲ್ಲ. 1986ರ ಜನವರಿ 21 ರಂದು ಕೆವಿನ್ ಜಬೋರ್ನಿ ಎನ್ನುವವರು ಮೊದಲು ಹಗ್ ಡೇಯನ್ನು ಪರಿಚಯಿಸಿದರು ಎಂದು ಹೇಳಲಾಗುತ್ತದೆ. ಅವರು ದೈಹಿಕ ಸ್ಪರ್ಶದ ಮೂಲಕ ಪರಸ್ಪರ ಪ್ರೀತಿ, ಮೆಚ್ಚುಗೆಯನ್ನು ತೋರಿಸಲು ಪ್ರೋತ್ಸಾಹಿಸಿದರು.

ನಂತರ ಇದು ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿತು. ಅಲ್ಲದೇ ಪ್ರೇಮಿಗಳ ವಾರದ 7 ದಿನಗಳ ಭಾಗವಾಯಿತು. ಕಾಲಾನಂತರದಲ್ಲಿ ಈ ದಿನ ಮಹತ್ವವು ಹೆಚ್ಚಾಯಿತು.

ಅಪ್ಪುಗೆಯು ಪ್ರೀತಿ, ಕೃತಜ್ಞತೆ, ಸಂತೋಷ ಮತ್ತು ದುಃಖದ ಭಾವನೆಗಳನ್ನು ಇನ್ನೊಬ್ಬ ವ್ಯಕ್ತಿಗೆ ತಿಳಿಸುವ ಅತ್ಯಂತ ಶಕ್ತಿಶಾಲಿ ವಿಧಾನಗಳಲ್ಲಿ ಒಂದಾಗಿದೆ. ಇದು ಸಾಂತ್ವನ, ಬೆಂಬಲವನ್ನು ನೀಡುತ್ತದೆ, ನಾವು ಇತರರೊಂದಿಗೆ ಹಂಚಿಕೊಳ್ಳುವ ಬಂಧವನ್ನು ಬಲಪಡಿಸುತ್ತದೆ. 

ಪ್ರೇಮಿಗಳ ವಾರ ಆರಂಭವಾಗಿ ಪ್ರಪೋಸ್‌ ಡೇ ದಿನ ಪ್ರಪೋಸ್‌ ಮಾಡಿ ಆದ ಮೇಲೆ, ನಾನೆಂದಿಗೂ ನಿನ್ನ ಜೊತೆಗೆ ಇರುತ್ತೇನೆ ನಿನ್ನಿಂದ ಎಂದಿಗೂ ದೂರಾಗುವುದಿಲ್ಲ ಎಂದು ಪ್ರಾಮಿಸ್ ಡೇ ದಿನ ಪ್ರಾಮಿಸ್ ಮಾಡಿ ನಂತರ ಹಗ್ ಡೇ ದಿನ ಪ್ರೀತಿಯಿಂದ ಅಪ್ಪಿಕೊಂಡು ಭಾವಾನಾತ್ಮಕವಾಗಿ ಹತ್ತಿರವಾಗುವ ದಿನವಿದು.  

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner