ಪ್ರೇಮಿಗಳ ದಿನಕ್ಕೆ ಇನಿಯಗೇನು ಉಡುಗೊರೆ ಕೊಡಲಿ ಎನ್ನುವವರಿಗೆ ಇಲ್ಲಿದೆ ಬೆಸ್ಟ್ ಆಯ್ಕೆ; ಪ್ರಿಯಕರನಿಗೆ ಕೊಡಬಹುದಾದ ಗಿಫ್ಟ್ ಐಡಿಯಾಗಳು
ಪ್ರೇಮಿಗಳ ದಿನಕ್ಕೆ ಮನ ಮೆಚ್ಚಿದ ಇನಿಯನಿಗೆ ವಿಶೇಷ ಉಡುಗೊರೆ ಕೊಡಬೇಕು, ಆದ್ರೆ ಏನ್ ಕೊಡ್ಲಿ ಅಂತ ಯೋಚ್ನೆ ಮಾಡ್ತಾ ಇದೀರಾ? ಈ ಆಯ್ಕೆಗಳು ಖಂಡಿತ ನಿಮ್ಮ ಹುಡುಗನಿಗೆ ಇಷ್ಟ ಆಗುತ್ತೆ, ಕೊಟ್ಟು ನೋಡಿ. (ಬರಹ: ಪ್ರಜ್ವಲಾ)

ವಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು, ಈ ಸಮಯದಲ್ಲಿ ಮನ ಮೆಚ್ಚಿದ ವ್ಯಕ್ತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೇಮಿಗಳ ದಿನವನ್ನು ಸಂಭ್ರಮಿಸಲಾಗುತ್ತದೆ. ಹೆಣ್ಣುಮಕ್ಕಳಿಗೆ ಗಿಫ್ಟ್ ಕೊಡೋದು ಅಂತ ಬಂದ್ರೆ ಚಾಕೋಲೇಟ್, ಗುಲಾಬಿ ಹೂಗಳು, ಅಥವಾ ಪಾಂಡಾ ಟಾಯ್ಸ್... ಹೀಗೆ ಆಯ್ಕೆಗಳು ಹಲವಿವೆ. ಆದರೆ ಹುಡುಗರಿಗೆ ಗಿಫ್ಟ್ ಆಯ್ಕೆ ಮಾಡೋದು ಸ್ವಲ್ಪ ಯೋಚನೆ ಮಾಡಬೇಕಾದ ವಿಚಾರ. ಪ್ರತಿ ವರ್ಷವೂ ಒಂದೇ ತರಹದ ಗಿಫ್ಟ್ ಕೊಡೋದು ಬೇಸರ, ಅಲ್ಲವೇ? ಈ ಬಾರಿ ಏನಾದರೂ ಹೊಸದಾಗಿ, ಅರ್ಥಪೂರ್ಣವಾಗಿ ಹಾಗೂ ಅವನಿಗೆ ತೃಪ್ತಿ ಕೊಡುವಂತದ್ದು ಆಯ್ಕೆ ಮಾಡುವ ಆಸೆ ಇದ್ಯಾ. ಹಾಗಾದರೆ ಮುಂದೆ ಓದಿ.
ನಿಮ್ಮ ಗೆಳೆಯನಿಗೆ ಅಥವಾ ಪತಿಯೊಡನೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳಿ, ಅವನಿಗೆ ಯಾವ ತರಹದ ವಸ್ತುಗಳು ಖುಷಿ ಕೊಡಬಹುದು? ಅವನ ಆಸಕ್ತಿಗಳು, ಹವ್ಯಾಸಗಳು, ಡೈಲಿ ಯೂಸೇಜ್ ಇವುಗಳನ್ನೆಲ್ಲಾ ಗಮನಿಸಿ ಗಿಫ್ಟ್ ಆಯ್ಕೆ ಮಾಡಿದರೆ ಅದು ಕೇವಲ ವಸ್ತುವಾಗಿರದೆ, ನಿಮ್ಮ ಸ್ನೇಹ, ಪ್ರೀತಿ, ಆರೈಕೆಯ ಪ್ರತೀಕವಾಗಬಹುದು. ಇನ್ನು ಹೆಚ್ಚು ಯೋಚನೆ ಮಾಡೋ ಅವಶ್ಯಕತೆ ಇಲ್ಲ! ಈ ಸಲ ಒಂದು ಅರ್ಥಪೂರ್ಣ, ಸ್ಮಾರ್ಟ್, ಹಾಗೂ ಸ್ಟೈಲಿಶ್ ಗಿಫ್ಟ್ ಆಯ್ಕೆ ಮಾಡಲು ಈ ಟಾಪ್ ಐಡಿಯಾಸ್ ನಿಮಗೆ ಸಹಾಯ ಮಾಡುತ್ತವೆ.
1. ಕಸ್ಟಮೈಸ್ಡ್ ವಾಚ್: ಅವನ ಸ್ಟೈಲಿಗೆ ತಕ್ಕ ಫಿಟ್!
ಗಂಡುಮಕ್ಕಳಿಗೆ ವಾಚ್ ಎಂದರೆ ಕೇವಲ ಟೈಮ್ ಪೀಸ್ ಅಲ್ಲ, ಅದು ಅವರ ವೈಯಕ್ತಿಕ ಶೈಲಿಯ ಪ್ರತೀಕ. ನಿಮ್ಮ ಗೆಳೆಯನಿಗೆ ಅವನ ಖಾಸಗಿ ಸ್ಟೈಲ್‌ಗೆ ಹೊಂದುವ ವಾಚ್ ಆಯ್ಕೆ ಮಾಡಿ. ಅದರ ಒಳಗೆ ಒಂದು ಮೆಸೇಜ್ ಅಥವಾ ಅವನ ಹೆಸರಿನ ಅಕ್ಷರಗಳು ಇರುವ ವಾಚ್ ಇದ್ದರೆ ಇನ್ನೂ ವಿಶೇಷ. ಈ ರೀತಿ ಕಸ್ಟಮೈಸ್ಡ್ ವಾಚ್ ನಿಮ್ಮ ಇನಿಯನಿಗೆ ಖಂಡಿತ ವಿಶೇಷ ಎನ್ನಿಸುತ್ತದೆ.
2. ಕಸ್ಟಮ್ ಮೇಡ್ ಲೆದರ್ ವಾಲೆಟ್
ವಾಲೆಟ್ ಎಂದರೆ ಗಂಡಸರ ದಿನ ಬಳಕೆಯ ಅತ್ಯಗತ್ಯ ವಸ್ತು. ಹ್ಯಾಂಡ್‌ಮೇಡ್ ಲೆದರ್ ವಾಲೆಟ್ ಅನ್ನು ಅವನ ಹೆಸರಿನ ಚಿಹ್ನೆ ಹಚ್ಚಿಸಿ ಗಿಫ್ಟ್ ಕೊಟ್ಟರೆ ಅದು ಅರ್ಥಪೂರ್ಣವಾಗಿಯೂ ಇರುತ್ತದೆ, ಹಾಗೇ ಶೈಲಿಯಲ್ಲೂ ಟಾಪ್. ವಾಲೆಟ್ ಮೇಲೆ ಗಂಡಸರಿಗೆ ವಿಶೇಷ ಒಲವಿರುವ ಕಾರಣ ಇದು ಟಾಪ್ ಆಯ್ಕೆಯಾಗಬಹುದು.
3. ಫಿಟ್ನೆಸ್ ಟ್ರ್ಯಾಕರ್
ನಿಮ್ಮ ಗೆಳೆಯನಿಗೆ ಫಿಟ್ನೆಸ್ ಬಗ್ಗೆ ಆಸಕ್ತಿ ಇದೆಯಾ? ಅವನ ಪ್ರತಿದಿನ ಸ್ಟೆಪ್ಸ್, ಹಾರ್ಟ್ ರೇಟ್, ಕ್ಯಾಲೋರಿ ಬರ್ನ್ ಇವೆಲ್ಲಾ ಟ್ರ್ಯಾಕ್ ಮಾಡೋ ಫಿಟ್ನೆಸ್ ಬ್ಯಾಂಡ್ ಕೊಡೋದು ಸೂಕ್ತ ಆಯ್ಕೆ. ಇದು ಅವನ ಆರೋಗ್ಯದ ಕಡೆ ಗಮನ ಹರಿಸಲು ಒಳ್ಳೆಯ ಪ್ರೇರಣೆ.
4. ಸಂಗೀತ ಪ್ರಿಯನಿಗೆ ಹೈ-ಕ್ವಾಲಿಟಿ ಇಯರ್‌ಫೋನ್ಸ್!
ನೀವು ಕೂಗಿದರೂ ಕೇಳೋದನ್ನ ಇಷ್ಟಪಡುವ ಸಂಗೀತ ಪ್ರಿಯ ಹುಡುಗನಿಗೆ ಪರ್ಫೆಕ್ಟ್ ಗಿಫ್ಟ್ ಬೇಕಾ? ಲೇಟೆಸ್ಟ್ ನೋಯ್ಸ್-ಕ್ಯಾನ್ಸಲಿಂಗ್ ಇಯರ್‌ಫೋನ್ಸ್ ಕೊಡಿಸಿ. ಇದರಿಂದ ಅವನು ಮೆಲೋಡಿ ಕ್ಷಣಗಳನ್ನು ಮತ್ತಷ್ಟು ಆನಂದಿಸಬಹುದು.
5. ಅಡಿಗೆ ತರಬೇತಿ ಕ್ಲಾಸ್
ಹುಡುಗರು ಅಡಿಗೆ ಕಲಿತ್ರೆ ಅದೇನು ದೊಡ್ಡ ಅಚ್ಚರಿಯಲ್ಲ! ನಿಮ್ಮ ಗೆಳೆಯನಿಗೆ ಕ್ಲಾಸಿಕ್ ಕುಕಿಂಗ್ ತರಬೇತಿಯನ್ನು ಗಿಫ್ಟ್ ಮಾಡಿದರೆ, ಅದು ಒಮ್ಮೆ ನಿಮಗೂ ಲಾಭ ಆಗಬಹುದು! ಹೊಟ್ಟೆ ತುಂಬಾ ತಿಂದಾಗ ಪ್ರೀತಿ ಇನ್ನೂ ಸೊಗಸಾಗತ್ತೆ!
6. ಡ್ರೀಮ್ ಟ್ರಿಪ್ – ಜೋಡಿಯ ಜರ್ನಿ ಮೆಮೋರೆಬಲ್ ಆಗಲಿ!
ನಿಮ್ಮವರು ತುಂಬಾ ಕೆಲಸದಲ್ಲಿ ಬಿಜಿಯಾಗಿದ್ದರೆ, ಅವರಿಗೆ ಉತ್ತಮವಾದ ಗಿಫ್ಟ್ ಎಂದರೆ, ಹಾಯಾದ ವಿಶ್ರಾಂತಿ! ಒಂದು ಸಣ್ಣ ಟ್ರಿಪ್, ಅದರಲ್ಲೂ ಅವರ ಆಸಕ್ತಿಯ ಸ್ಥಳಕ್ಕೆ ಪ್ಲ್ಯಾನ್ ಮಾಡಿದರೆ, ಅದು ನಿಮ್ಮ ಸಂಬಂಧಕ್ಕೂ ಹೊಸ ಬಣ್ಣ ತುಂಬುತ್ತದೆ.
ಸಂಕ್ಷಿಪ್ತವಾಗಿ ಹೇಳೋದೆಂದರೆ, ಗಿಫ್ಟ್ ಎಂದರೆ ಕೇವಲ ಒಂದು ವಸ್ತು ಅಲ್ಲ, ಅದು ನಿಮ್ಮ ಸಂಬಂಧದ ಬೆಲೆ ಬಾಳುವ ಪ್ರೀತಿಯ ಪ್ರತೀಕ. ನೀವು ಕೊಡುವ ಗಿಫ್ಟ್ ಅವನ ಜೀವನಶೈಲಿಗೆ ಸೇರಲಿ, ಅವನಿಗೆ ಪ್ರೇರಣೆ ಕೊಡಲಿ, ಹಾಗೂ ಅವನಿಗೆ ನಿಮ್ಮ ಪ್ರೀತಿಯ ಸ್ಮರಣೆಯಾಗಲಿ. ಈ ಸಲ ವಾಲೆಂಟೈನ್ಸ್ ಡೇ ವಿಶೇಷವಾಗಿ ಆಚರಿಸಿ, ನಿಮ್ಮ ಪ್ರೀತಿಯ ವ್ಯಕ್ತಿಗೆ ಖುಷಿ ನೀಡೋದು ನಿಮ್ಮ ಕೈಯಲ್ಲಿ!

ವಿಭಾಗ