ಕನ್ನಡ ಸುದ್ದಿ / ಜೀವನಶೈಲಿ /
Valentines Day Wishes: ನನ್ನೊಲುಮೆಯ ಆಕಾಶ ನೀನು; ಪ್ರೇಮಿಗಳ ದಿನಕ್ಕೆ ವಿಶೇಷವಾಗಿ ವಿಶ್ ಮಾಡಲು ಇಲ್ಲಿವೆ ಶುಭಾಶಯ ಸಂದೇಶಗಳು
ಪ್ರೇಮಿಗಳ ದಿನ ಇರುವುದು ಫೆಬ್ರುವರಿ 14ಕ್ಕೆ ಆದರೂ ಫೆ 7ರ ರೋಸ್ ಡೇಯಿಂದಲೇ ವ್ಯಾಲೆಂಟೈನ್ಸ್ ವೀಕ್ ಆರಂಭವಾಗುತ್ತದೆ. ಈ ಬಾರಿ ಪ್ರೇಮಿಗಳ ದಿನಕ್ಕೆ ನಿಮ್ಮ ಪ್ರೇಮಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಇಲ್ಲಿವೆ ಶುಭಾಶಯ ಸಂದೇಶಗಳು.

ಪ್ರೇಮಿಗಳ ದಿನದ ಶುಭಾಶಯ ಸಂದೇಶಗಳು (PC: Canva)
ಫೆಬ್ರುವರಿ ತಿಂಗಳು ಬಂತೆಂದರೆ ಪ್ರೀತಿಯಲ್ಲಿ ಬಿದ್ದವರಿಗೆ ಅದೇನೋ ಕಾತುರ. ಈಗಾಗಲೇ ಪ್ರೀತಿ ಮಾಡುತ್ತಿರುವವರು ತಮ್ಮ ಸಂಗಾತಿಗೆ ಉಡುಗೊರೆ ನೀಡಿ, ವಿಶೇಷವಾಗಿ ವಿಶ್ ಮಾಡುವ ಮೂಲಕ ಈ ದಿನವನ್ನು ಸಂಭ್ರಮಿಸಲು ಬಯಸಿದರೆ, ಮನ ಮೆಚ್ಚಿದ ಸಂಗಾತಿಗೆ ಪ್ರಪೋಸ್ ಮಾಡಬೇಕು ಎಂದುಕೊಂಡವರು ಈ ದಿನಕ್ಕಾಗಿ ಎದುರು ನೋಡುತ್ತಾರೆ.
ಪ್ರೇಮಿಗಳ ದಿನಕ್ಕೆ ವಿಶೇಷ ಸಂದೇಶಗಳನ್ನು ಕಳುಹಿಸುವ ಮೂಲಕ ಗೆಳೆಯ ಅಥವಾ ಗೆಳತಿಯನ್ನು ಇಂಪ್ರೆಸ್ ಮಾಡಬೇಕು ಎಂದುಕೊಳ್ಳುವವರ ಸಾಲಿನಲ್ಲಿ ನೀವು ಇದ್ದೀರಾ. ಪ್ರತಿ ಬಾರಿ ಒಂದೇ ರೀತಿ ಸಂದೇಶಗಳನ್ನು ಕಳುಹಿಸುತ್ತಿದ್ದು ಈ ಬಾರಿ ನಿಮ್ಮ ಮನಸ್ಸು ಇಷ್ಟಪಟ್ಟವರಿಗೆ ವಿಶೇಷವಾದ ಸಂದೇಶ ಕಳುಹಿಸುವ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವನ್ನಾಗಿಸಲು ಬಯಸುತ್ತಿದ್ದೀರಾ, ಹಾಗಾದರೆ ಈ ಶುಭಾಶಯಗಳನ್ನೊಮ್ಮೆ ಗಮನಿಸಿ. ಇವು ಖಂಡಿತ ನಿಮ್ಮ ಮನ ಮೆಚ್ಚಿದವರಿಗೆ ಮಾತ್ರವಲ್ಲ ನಿಮಗೂ ಇಷ್ಟವಾಗುತ್ತದೆ.
ಪ್ರೇಮಿಗಳ ದಿನದ ಶುಭಾಶಯ ಸಂದೇಶಗಳು
- ನನ್ನೊಲವಿನ ವಿಶೇಷ ವ್ಯಕ್ತಿಗೆ ಪ್ರೇಮಿಗಳ ದಿನ ಶುಭಾಶಯ. ನನ್ನೊಲುಮೆಯ ಆಕಾಶ ನೀನು, ನನ್ನೊಡಲ ಕಡಲು ನೀನು.
- ನನ್ನ ಸಮುದ್ರ ನೀನು, ಓ ಒಲವೇ ನಿನಗೆ ಪ್ರೇಮಿಗಳ ದಿನ ಶುಭಾಶಯ
- ನನ್ನ ಬದುಕೆಂಬ ಸಮುದ್ರಕ್ಕೆ ಸಾಗರವಾಗಿ ಹರಿದು ಬಂದವನು/ಬಂದವಳು ನೀನು, ನಿನಗಿದೋ ಈ ವಿಶೇಷ ದಿನದ ಶುಭಾಶಯ. ಈ ಪ್ರೇಮಿಗಳ ದಿನ ನಮ್ಮ ಬದುಕಿಗೆ ವಿಶೇಷವಾಗಲಿ.
ಇದನ್ನೂ ಓದಿ: Valentines Week 2025: ರೋಸ್ ಡೇ, ಕಿಸ್ ಡೇ, ಹಗ್ ಡೇ; ಪ್ರೇಮದ ಕಂಪು ಪಸರಿಸುವ ಸಪ್ತ ದಿನಗಳಲ್ಲಿ ಯಾವ ದಿನ ಏನು ವಿಶೇಷ, ಇಲ್ಲಿದೆ ವಿವರ - ಪ್ರತಿ ಕ್ಷಣ, ಪ್ರತಿ ದಿನ, ಪ್ರತಿ ತಿಂಗಳು, ಪ್ರತಿ ವರ್ಷ ನಮ್ಮ ಪ್ರೇಮದ ಒರತೆ ಎಂದಿಗೂ ಬತ್ತದಿರಲಿ. ಪ್ರೇಮ ಹೊಳೆ ಹರಿದು ಕಡಲಾಗಲಿ. ಪ್ರೇಮಿಗಳ ದಿನದ ಶುಭಾಶಯಗಳು.
- ನನಗೆಂದಿಗೂ ಪ್ರೇಮಿಗಳ ದಿನ ಆಚರಿಸುವುದು ಇಷ್ಟವಾಗುತ್ತಿರಲಿಲ್ಲ, ಆದರೆ ನೀ ಸಿಕ್ಕ ಮೇಲೆ ಪ್ರತಿ ದಿನವೂ ಪ್ರೇಮಿಗಳ ದಿನವೇ, ಪ್ರತಿ ಕ್ಷಣವೂ ಪ್ರೇಮದ ಅಮಲೇ. ನನ್ನ ಮನದೊಡಲ ವಿಶೇಷ ವ್ಯಕ್ತಿಗೆ ಪ್ರೇಮಿಗಳ ದಿನದ ಶುಭಾಶಯ.
- ಈ ಜಗತ್ತಿನ ಸಕಲವೂ ನಿನ್ನ ಸಂತೋಷಕ್ಕೆ ಕಾರಣವಾಗಲಿ, ನೀ ಕಂಡ ಕನಸೆಲ್ಲವೂ ನನಸಾಗಲಿ. ನನ್ನೊಲವಿನ ಗೆಳತಿ/ ಗೆಳೆಯ ನಿನಗಿದೋ ಪ್ರೇಮಿಗಳ ದಿನ ಶುಭಾಶಯ.
- ನೀನು ನಾನಾಗಿ ಬದಲಾಗಲು, ನಾನು ನೀನಾಗಿ ಬದಲಾಗಲು ಕಾರಣ ಈ ಪ್ರೀತಿ, ಈ ಸುಂದರ ಪ್ರೇಮ ಪ್ರಪಂಚದ ಪಾತ್ರವಾಗಿರುವ ನಮಗೆ ಪ್ರೇಮವೇ ಎಲ್ಲ, ಪ್ರೇಮಿಗಳ ದಿನ ಶುಭಾಶಯಗಳು ಒಲವೇ.
ಇದನ್ನೂ ಓದಿ: Valentines day 2025: ಪ್ರೇಮಿಗಳ ದಿನ ಯಾವಾಗ? ಈ ಆಚರಣೆಯ ಹಿಂದಿನ ಇತಿಹಾಸ, ವ್ಯಾಲೆಂಟೈನ್ಸ್ ಡೇ ಹೆಸರು ಬರಲು ಕಾರಣ ಹೀಗಿದೆ - ಸದ್ದೇ ಇಲ್ಲದೇ, ಸೂಚನೆಯೂ ನೀಡದೇ ಆರಂಭವಾದ ಈ ಪ್ರೀತಿಗೆ ಏನೆಂದು ಹೆಸರಿಡಲಿ ಗೆಳತಿ/ ಗೆಳೆಯ. ನೀ ನನ್ನ ಉಸಿರು, ನೀ ನನ್ನ ಒಲವು, ನಿನಗೆ ಪ್ರೇಮಿಗಳ ದಿನದ ಶುಭಾಶಯ
- ಸೂರ್ಯ ಬರದೇ ಹೂ ಅರಳುವುದಿಲ್ಲ, ನೀ ಬರದೇ ನನ್ನ ಬಾಳು ಬೆಳಗುವುದಿಲ್ಲ... ನನ್ನ ಬದುಕಿನ ಸೂರ್ಯ ನೀನು... ನಿನಗಿದೋ ಪ್ರೇಮಿಗಳ ದಿನದ ಶುಭಾಶಯ
- ಬರಡಾಗಿದ್ದ ನನ್ನ ಜೀವನಕ್ಕೆ ಪ್ರೇಮವೆಂಬ ಒರತೆ ಹರಿಸಿ ಹಸಿರಾಗಿಸಿದ ಜೀವ ನೀನು, ಈ ಜೀವ, ಜೀವನ ಎರಡೂ ನಿನಗಾಗಿ, ಓ ನನ್ನ ಒಲಮೆ ನಿನಗೆ ಪ್ರೇಮಿಗಳ ದಿನದ ಶುಭಾಶಯ
- ಪ್ರೇಮವೆಂಬ ಪ್ರಪಂಚದಲ್ಲಿ ಎಂದೆಂದಿಗೂ ಹಾರಾಡುವ ನವಿಲುಗಳು ನಾವು, ನಮ್ಮ ಪ್ರೀತಿಗೆ, ಪ್ರೇಮದ ಹಾರಾಟಕ್ಕೆ ಎಂದಿಗೂ ಅಂತ್ಯ ಬಾರದಿರಲಿ. ಪ್ರೇಮಿಗಳ ದಿನದ ಶುಭಾಶಯ
- ನನ್ನ ಮನದ ಕಡಲಿಗೆ ಅನುರಾಗದ ಹೊಳೆ ಹರಿಸಿದ ಒಲವಿಗೆ ಪ್ರೇಮಿಗಳ ದಿನದ ಶುಭಾಶಯ
ಇದನ್ನೂ ಓದಿ: Rose Day: ಈ ಗುಲಾಬಿ ನಿನಗಾಗಿ ಎಂದು ಪ್ರೇಮಿಗೆ ರೋಸ್ ಕೊಡಬೇಕೆಂದುಕೊಂಡಿರಾ? ಎಷ್ಟು ಹೂ ನೀಡಿದ್ರೆ ಏನರ್ಥ, ಹೂವಿನ ಸಂಖ್ಯೆಗೂ ಇದೆ ನಾನಾರ್ಥ
*

ವಿಭಾಗ
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.