Valentines Gift: ಪ್ರೇಮಿಗಳ ದಿನ ನಿಮ್ಮ ಪ್ರಿಯತಮೆಗೆ ಏನು ವಿಶೇಷ ಉಡುಗೊರೆ ಕೊಡಲಿ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಗಿಫ್ಟ್ ಐಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Gift: ಪ್ರೇಮಿಗಳ ದಿನ ನಿಮ್ಮ ಪ್ರಿಯತಮೆಗೆ ಏನು ವಿಶೇಷ ಉಡುಗೊರೆ ಕೊಡಲಿ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಗಿಫ್ಟ್ ಐಡಿಯಾ

Valentines Gift: ಪ್ರೇಮಿಗಳ ದಿನ ನಿಮ್ಮ ಪ್ರಿಯತಮೆಗೆ ಏನು ವಿಶೇಷ ಉಡುಗೊರೆ ಕೊಡಲಿ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಗಿಫ್ಟ್ ಐಡಿಯಾ

ಪ್ರೇಮಿಗಳ ದಿನವೆಂದರೆ ಹಾಗೆ, ಪ್ರೇಮಿಗಳಿಗೆ ಉಡುಗೊರೆ ಕೊಡುವ ಮತ್ತು ಪಡೆದುಕೊಳ್ಳುವ ಖುಷಿ. ಅದರಲ್ಲೂ ಪ್ರೀತಿಯ ಹೊಸದರಲ್ಲಿ ಪ್ರೇಮಿ ಯಾವ ರೀತಿ ಸರ್ಪ್ರೈಸ್ ಕೊಡಬಹುದು ಎಂದು ಕಾಯುತ್ತಿರುತ್ತಾರೆ. ನಿಮ್ಮ ಪ್ರಿಯತಮೆಗೆ ಏನು ಉಡುಗೊರೆ ಕೊಡಬೇಕೆನ್ನುವ ಗೊಂದಲವೇ? ಹಾಗಾದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.

ನಿಮ್ಮ ಪ್ರಿಯತಮೆಗೆ ಏನು ಉಡುಗೊರೆ ಕೊಡಬೇಕೆನ್ನುವ ಗೊಂದಲವೇ?
ನಿಮ್ಮ ಪ್ರಿಯತಮೆಗೆ ಏನು ಉಡುಗೊರೆ ಕೊಡಬೇಕೆನ್ನುವ ಗೊಂದಲವೇ? (Pixabay)

ಪ್ರೇಮಿಗಳಿಗಾಗಿಯೇ ಒಂದು ದಿನವಿದೆ.. ಫೆಬ್ರವರಿ 14 ಬಂತೆಂದರೆ ಸಾಕು, ಕೆಂಪು ಬಣ್ಣದ ಗುಲಾಬಿ ಹಿಡಿದುಕೊಂಡು, ಕೈಕೈ ಹಿಡಿದು, ನಾವೇ ಸೂಪರ್ ಜೋಡಿ, ನಮ್ಮ ಪ್ರೀತಿಯೇ ದೊಡ್ಡದು ಎಂದು ಪೋಸ್ ಕೊಡುವ ಜನರಿಗೇನೂ ಕಡಿಮೆಯಿಲ್ಲ. ಕೆಲವರಿಗೆ ಪ್ರೀತಿಯೆಂದರೆ ಅದೊಂಥರಾ ಕಚಗುಳಿಯ ಅನುಭವ. ಇನ್ನು ಹೊಸದರಲ್ಲಿ ಪ್ರೇಮಿಯನ್ನು ಹೇಗೆ ಮೆಚ್ಚಿಸುವುದು, ಯಾವ ಉಡುಗೊರೆ ಕೊಡುವುದು ಎಂಬ ಆತಂಕ, ಗೊಂದಲ. ಅದರಲ್ಲೂ ಪ್ರೇಮಿಗಳ ದಿನದಂದು ಉಡುಗೊರೆ ಕೊಡುವುದು ಸಹಜವಾದ್ದರಿಂದ ಯಾವ ಉಡುಗೊರೆ ಕೊಡಲಿ, ಹೇಗೆ ಇರಲಿ, ಅದನ್ನು ಪ್ರೇಮಿ ಮೆಚ್ಚಬಹುದೇ ಎಂಬ ಆತಂಕ ಹೆಚ್ಚಾಗಿಯೇ ಇರುತ್ತದೆ. ಸರ್ಪ್ರೈಸ್ ಉಡುಗೊರೆ ನೋಡಿ ಖುಷಿಪಡುವ ಪ್ರೇಮಿಯ ಸಂತಸವನ್ನು ಆ ದಿನವನ್ನು ಖುಷಿಯನ್ನು ಕಳೆಯಲು ಪ್ರೇಮಿಗಳು ಯೋಜನೆ ರೂಪಿಸಿರುತ್ತಾರೆ.

ಪ್ರೇಮಿಗಳ ದಿನದಂದು ಹುಡುಗಿಯರಿಗೆ ಗಿಫ್ಟ್ ಕೊಡುವುದು ಒಂದು ಸವಾಲಿನ ಕೆಲಸವೇ ಸರಿ, ಯಾಕೆಂದರೆ, ಸರಳ ಮತ್ತು ಸಾಮಾನ್ಯ ಗಿಫ್ಟ್ ಆಗಿದ್ದರೆ, ಅವುಗಳನ್ನು ಅವರು ಮೆಚ್ಚುವುದಿಲ್ಲ.

ನೀವು ನಿಮ್ಮ ಜೀವನದಲ್ಲಿ ಹುಡುಗಿಗಾಗಿ ಶಾಪಿಂಗ್ ಮಾಡುವಾಗ, ನಿಜವಾದ ಪ್ರಣಯವೆಂದರೆ ನೀವು ಖರ್ಚು ಮಾಡುವ ಹಣ ಅಥವಾ ದೊಡ್ಡ ಗುಲಾಬಿಗಳ ಪುಷ್ಪಗುಚ್ಛವನ್ನು ನೀಡುವುದಲ್ಲ. ಬದಲಾಗಿ, ನೀವು ಅವಳ ದೂರುಗಳಿಗೆ ಎಷ್ಟು ಗಮನ ಕೊಡುತ್ತೀರಿ, ಅವಳು ಏನು ಇಷ್ಟಪಡುತ್ತಾಳೆಂದು ತಿಳಿದುಕೊಳ್ಳುತ್ತೀರಿ ಮತ್ತು ಅವಳ ಜೀವನವನ್ನು ಸುಲಭಗೊಳಿಸುವ ಏನನ್ನಾದರೂ ಉಡುಗೊರೆಯಾಗಿ ನೀಡುವ ಮೂಲಕ ಅವಳು ನಿಮಗಾಗಿ ಏನು ಮಾಡುತ್ತಾಳೆ ಎಂಬುದನ್ನು ಪ್ರಶಂಸಿಸುತ್ತೀರಿ ಎಂದು ತೋರಿಸುವುದರ ಬಗ್ಗೆ.

ಈ ವರ್ಷದ ಪ್ರೇಮಿಗಳ ದಿನದ ಉಡುಗೊರೆಯನ್ನು ನಿಮ್ಮ ಪ್ರಿಯತಮೆಗೆ ಕೊಡಲು ಇಲ್ಲಿ ಕೆಲವೊಂದು ಸಲಹೆಗಳಿವೆ. ಅದು ಖಂಡಿತವಾಗಿಯೂ ನಿಮ್ಮನ್ನು ಮೆಚ್ಚಿಸುತ್ತದೆ. ಈ ಉಡುಗೊರೆಗಳನ್ನು ನೀವು ನಿಮ್ಮ ಪ್ರೇಯಸಿಗೆ ಕೊಡುವುದರಿಂದ ಅವರಿಗೂ ಸಂತಸವಾಗುವುದು ಖಚಿತ, ನಿಮ್ಮ ಮನಸ್ಸಿಗೂ ಖುಷಿಯಾಗುವುದು ಗ್ಯಾರಂಟಿ.

ಹೃದಯಾಕಾರದ ಬಲೂನ್ ಲೈಟ್

ಪ್ರೇಮಿಗಳ ದಿನದ ಉಡುಗೊರೆಯಾಗಿ ನೀವು,ಪ್ರೇಯಸಿಗೆ ಹೃದಯದ ಆಕಾರದ ಬಲೂನ್ ದೀಪವನ್ನು ಉಡುಗೊರೆಯಾಗಿ ನೀಡಬಹುದು. ಸಾಮಾನ್ಯ ಬಲೂನ್ ಆದರೆ ಒಡೆದುಹೋಗಬಹುದು. ಆದರೆ ಬಲೂನ್ ಲೈಟ್ ಅವಳ ಕೋಣೆಯಲ್ಲಿ ಸದಾ ಉರಿಯುತ್ತಿರುತ್ತದೆ.

ಒಳಾಂಗಣ ಗಾರ್ಡನ್

ಮನೆಯ ಒಳಗೆ ಅಡುಗೆ ಕೋಣೆಯಲ್ಲಿ ಇರಿಸಬಹುದಾದ ಏರೋಗಾರ್ಡನ್ ಕೂಡ ಉಡುಗೊರೆಗೆ ಸೂಕ್ತ ಆಯ್ಕೆ. ನೈಸರ್ಗಿಕ ಸೂರ್ಯನ ಬೆಳಕನ್ನು ಪಡೆಯದಿದ್ದರೂ ಸಹ ಏರೋಗಾರ್ಡನ್ ಗಿಡಗಳು ಮನೆಯೊಳಗೆ ಬೆಳೆಯುತ್ತವೆ. ಅದರಲ್ಲಿ ಅವಳು ರುಚಿಕರವಾದ ಮನೆಯಲ್ಲಿ ಬೆಳೆದ ಗಿಡಮೂಲಿಕೆಗಳು, ಸೊಪ್ಪು ಮತ್ತು ತರಕಾರಿಗಳನ್ನು ಸಹ ಪಡೆಯುತ್ತಾಳೆ.

ಹೊಸ ಮತ್ತು ಅತ್ಯಾಧುನಿಕ ಕುಕ್‌ವೇರ್

ಹೆಣ್ಣುಮಕ್ಕಳು ಅಡುಗೆಗೆ ಮಾತ್ರ ಸೀಮಿತ ಎಂದಲ್ಲ, ಆದರೆ ಹೊಸರುಚಿ ಮಾಡುವುದು ಮತ್ತು ಅದನ್ನು ಸಂಭ್ರಮಿಸುವುದು ಎಂದರೆ ಹೆಣ್ಣುಮಕ್ಕಳಿಗೆ ಇಷ್ಟ. ಅದಕ್ಕಾಗಿ ನೀವು ಹೊಸ ಅತ್ಯಾಧುನಿಕ ವಿನ್ಯಾಸದ ಕುಕ್‌ವೇರ್ ಉಡುಗೊರೆ ನೀಡಬಹುದು.

ಬಾಡಿ ಮಸಾಜರ್

ನಿಮ್ಮ ಪ್ರೇಯಸಿಗೆ ಅನುಕೂಲವಾಗುವ ಉಡುಗೊರೆಗಳಲ್ಲಿ ಬಾಡಿ ಮಸಾಜರ್ ಕೂಡ ಒಂದು.

ಅವಳು ಜಿಮ್ ಹೋಗಿ ಬಂದಾಗ ಕಾಲು ನೋವಾದರೆ, ಅಥವಾ ದೀರ್ಘಕಾಲದ ನೋವಿನಿಂದ ಬಳಲುತ್ತಿರುವಾಗ ಮಸಾಜ್ ಗನ್ ಪ್ರಯೋಜನಕ್ಕೆ ಬರುತ್ತದೆ. ಈ ಸಾಧನಗಳು ನೋವು ನಿವಾರಣೆಯಲ್ಲಿ ಮತ್ತು ವ್ಯಾಯಾಮದ ನಂತರದ ಚೇತರಿಕೆಗೆ ಸಹಕಾರಿಯಾಗಿವೆ.

ಹೇರ್ ಡ್ರೈಯರ್ ಮತ್ತು ಸ್ಟ್ರೈಟನರ್

ಖಂಡಿತವಾಗಿಯೂ ನಿಮ್ಮ ಪ್ರೇಯಸಿ ಇಷ್ಟಪಡುವ ಮತ್ತೊಂದು ಉಡುಗೊರೆ ಎಂದರೆ ಹೇರ್ ಡ್ರೈಯರ್ ಮತ್ತು ಹೇರ್‌ ಸ್ಟ್ರೈಟನರ್. ಕೂದಲನ್ನು ಒಪ್ಪಗಾಗಿ ಸಿಂಗರಿಸಿಕೊಂಡು, ಸಮಾರಂಭಕ್ಕೆ, ಪಾರ್ಟಿಗೆ ಹೋಗುವುದು ಎಂದರೆ ಆಕೆಗೆ ನಿಜಕ್ಕೂ ಖುಷಿ ಕೊಡುತ್ತದೆ. ಅದಕ್ಕಾಗಿ ಹೇರ್ ಡ್ರೈಯರ್ ಮತ್ತು ಸ್ಟ್ರೈಟನರ್ ಉಡುಗೊರೆ ಕೊಡಿ.

ಆಭರಣ ಪೆಟ್ಟಿಗೆ

ಜ್ಯುವೆಲರಿ ಬಾಕ್ಸ್ ಉಡುಗೊರೆಯಾಗಿ ಕೊಟ್ಟರೆ, ಅದರಲ್ಲಿ ನಿಮ್ಮ ಪ್ರೇಯಸಿ ವಿವಿಧ ರೀತಿಯ ಆಭರಣಗಳನ್ನು ಒಪ್ಪವಾಗಿ, ಜೋಡಿಸಿ ಇರಿಸಬಹುದು. ಅಲ್ಲದೆ, ಹೊರಗಡೆ ಹೋಗುವಾಗ ಪ್ಯಾಕ್ ಮಾಡಿ ಒಯ್ಯಲೂ ಸುಲಭವಾಗುತ್ತದೆ.

Whats_app_banner