Valentines Day Gifts: ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಗಿಫ್ಟ್ ಕೊಡಲು ಇಲ್ಲಿದೆ ನೋಡಿ ಬೆಸ್ಟ್ ಐಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day Gifts: ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಗಿಫ್ಟ್ ಕೊಡಲು ಇಲ್ಲಿದೆ ನೋಡಿ ಬೆಸ್ಟ್ ಐಡಿಯಾ

Valentines Day Gifts: ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಗಿಫ್ಟ್ ಕೊಡಲು ಇಲ್ಲಿದೆ ನೋಡಿ ಬೆಸ್ಟ್ ಐಡಿಯಾ

ಪ್ರೇಮಿಗಳ ದಿನ ಬರುತ್ತಿದೆ. ಪ್ರೇಮಿಗಳು ಫೆ. 14ರಂದು ವಿವಿಧ ರೀತಿಯ ಗಿಫ್ಟ್ ಕೊಡುವ ಮೂಲಕ ಆ ದಿನವನ್ನು ಸಂಭ್ರಮದಿಂದ ಕಳೆಯುತ್ತಾರೆ. ಪ್ರಿಯಕರನಿಗೆ ಅಂದು ನೀವು ಕೊಡಬಹುದಾದ ಸೂಕ್ತ ಉಡುಗೊರೆ ಯಾವುದು? ಇಲ್ಲಿದೆ ನೋಡಿ..

ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಹಬ್ಬದ ಖುಷಿ.
ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಹಬ್ಬದ ಖುಷಿ. (Pixabay)

ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಹಬ್ಬದ ಖುಷಿ. ಆ ದಿನವನ್ನು ಸಂಭ್ರಮಿಸಲು ವಿವಿಧ ರೀತಿಯ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಉಡುಗೊರೆ ಕೊಡುವ ಮೂಲಕ ಪರಸ್ಪರ ಪ್ರೀತಿಯನ್ನು ವ್ಯಕ್ತಿಪಡಿಸುತ್ತಾರೆ. ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಹುಡುಗನು, ಹುಡುಗಿಗೆ ಉಡುಗೊರೆ ಕೊಡಲು ಹಲವು ರೀತಿಯ ಆಯ್ಕೆಗಳು ಇರುತ್ತವೆ. ಮಳಿಗೆಗಳಲ್ಲಿ ಕೂಡ ಹುಡುಗಿಯರಿಗೆ ಕೊಡಬಹುದಾದ ಗಿಫ್ಟ್‌ಗಳ ಪಟ್ಟಿಯೇ ದೊಡ್ಡದಿರುತ್ತದೆ. ಅಲ್ಲದೆ, ಹುಡುಗಿಗೆ ಕೊಡಬಹುದಾದ ಗಿಫ್ಟ್‌ಗಳ ಕುರಿತು ಬಹುತೇಕ ಎಲ್ಲರೂ ಪ್ಲ್ಯಾನ್, ಐಡಿಯಾ ಹೇಳಿಕೊಡುತ್ತಾರೆ. ಆದರೆ, ಹುಡುಗಿಯು ಹುಡುಗನಿಗೆ ಕೊಡಬಹುದಾದ ಗಿಫ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಆಕೆಗೆ ಸೀಮಿತ ಆಯ್ಕೆಗಳು ಕಾಣಿಸುತ್ತವೆ. ಶಾಪಿಂಗ್ ಮಳಿಗೆಗಳಲ್ಲೂ ಅಷ್ಟೇ.. ಹುಡುಗನಿಗೆ ಕೊಡಬಹುದಾದ ಗಿಫ್ಟ್ ಸೀಮಿತವಾಗಿರುತ್ತದೆ. ಹುಡುಗಿಗೆ ಕೊಡುವ ಗಿಫ್ಟ್‌ಗಳದ್ದೇ ರಾಶಿ ಇರುತ್ತದೆ.

ಹುಡುಗರು ಸಾಮಾನ್ಯವಾಗಿ ಗಿಫ್ಟ್ ಸ್ವೀಕರಿಸುವುದನ್ನು ಇಷ್ಟಪಡುವುದಿಲ್ಲ. ಆದರೆ, ಯಾರಾದರೂ ಪ್ರೀತಿಪಾತ್ರರು ಕೊಟ್ಟರೆ ಮಾತ್ರ ಸ್ವೀಕರಿಸುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿಯ ಹುಡುಗನಿಗೆ ಏನು ಗಿಫ್ಟ್ ಕೊಡಬಹುದು ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ಮೊದಲು ಅವರು ಏನನ್ನು ಇಷ್ಟಪಡುತ್ತಾರೆ, ನೀವು ಕೊಡುವ ಗಿಫ್ಟ್ ಅವರಿಗೆ ಹೇಗೆ ಪ್ರಯೋಜನಕ್ಕೆ ಬರುತ್ತದೆ ಎಂದು ಯೋಚಿಸಿ. ಅವರಿಗೆ ಬಳಕೆಯಾಗುವಂತಹ ಉಡುಗೊರೆಗಳನ್ನೇ ಕೊಡಿ.

ಸುಗಂಧದ್ರವ್ಯ ಕೊಡಿ

ನಿಮ್ಮ ಪ್ರೀತಿಯ ಹುಡುಗನಿಗೆ ಸುಗಂಧ ದ್ರವ್ಯ ಕೊಡಬಹುದು. ಮಾರುಕಟ್ಟೆಯಲ್ಲಿ ಇಂದು ವಿವಿಧ ರೀತಿಯ ಪರ್ಫ್ಯೂಮ್ ಮತ್ತು ಡಿಯೋಡ್ರಂಟ್ ಇವೆ. ಅದರಲ್ಲಿ ನಿಮ್ಮ ಹುಡುಗನಿಗೆ ಒಪ್ಪುವ ರೀತಿಯ ಆಕರ್ಷಕ ಸುಗಂಧದ್ರವ್ಯ ಕೊಡಬಹುದು.

ಟಿ ಶರ್ಟ್ ಅಥವಾ ಶರ್ಟ್

ಹುಡುಗರು ಕೆಲವೊಮ್ಮೆ ಒಂದು ಶರ್ಟ್ ಅಥವಾ ಟಿ ಶರ್ಟ್ ಇಷ್ಟವಾದರೆ, ಮತ್ತೆ ಅದನ್ನೇ ಹಲವು ಬಾರಿ ಧರಿಸುತ್ತಾರೆ. ಅದಕ್ಕಾಗಿ, ಅವರಿಗೆ ಇಷ್ಟಪಡುವ ರೀತಿಯ ಮತ್ತು ಒಪ್ಪುವ ಬಣ್ಣದ ಆಕರ್ಷಕ ಶರ್ಟ್ ಅಥವಾ ಟಿ ಶರ್ಟ್ ಕೊಡಬಹುದು.

ಟ್ರೆಂಡಿ ಬ್ಯಾಗ್

ಹುಡುಗರಿಗೂ ವಿವಿಧ ರೀತಿಯ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವರಿಗೆ ಒಪ್ಪುವ ಮತ್ತು ಉಪಯೋಗವಾಗುವ ರೀತಿಯ ಆಕರ್ಷಕ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಬಹುದು. ಉಡುಗೊರೆ ನೀಡುವಾಗ ಮಾರುಕಟ್ಟೆಯ ಟ್ರೆಂಡ್ ಗಮನಿಸಿ, ಹೊಸ ವಿನ್ಯಾಸ, ಬಣ್ಣದ ಬ್ಯಾಗ್ ನೀಡಿ, ಅವರ ಖುಷಿ ನೋಡಿ.

ಶೂಗಳನ್ನು ಕೊಡಬಹುದು

ನಿಮ್ಮ ಹುಡುಗ ಸ್ಟೈಲಿಶ್ ಆಗಿ ಕಾಣಿಸಲು ಮಾರುಕಟ್ಟೆಯಲ್ಲಿ ದೊರೆಯುವ ಆಕರ್ಷಕ ವಿನ್ಯಾಸದ ಸ್ನೀಕರ್ಸ್, ಶೂ ಕೊಡಬಹುದು. ಜೀನ್ಸ್, ಟಿ ಶರ್ಟ್ ಜತೆ ಅದಕೊಪ್ಪುವ ಬಣ್ಣ ಮತ್ತು ವಿನ್ಯಾಸದ ಶೂ, ಸ್ನೀಕರ್ಸ್ ಅನ್ನು ಯುವಕರು ಇಷ್ಟಪಡುತ್ತಾರೆ. ಹೀಗಾಗಿ ಅಂತಹ ಆಕರ್ಷಕ ಸ್ನೀಕರ್ಸ್, ಶೂಗಳನ್ನು ಉಡುಗೊರೆ ಕೊಡಬಹುದು.

ವಾಚ್‌ ಕೊಟ್ಟು ನೋಡಿ

ವಾಚ್ ಎನ್ನುವುದು ಒಂದು ಫ್ಯಾಷನ್ ಅಕ್ಸೆಸ್ಸರಿ ಮಾತ್ರವಲ್ಲ, ಅಗತ್ಯದ ವಸ್ತುವೂ ಹೌದು. ನಿಮ್ಮ ಹುಡುಗನಿಗೆ ಒಪ್ಪುವ ರೀತಿಯ ವಿಶೇಷ ವಿನ್ಯಾಸದ ವಾಚ್ ಒಂದನ್ನು ಕೂಡ ಈ ಬಾರಿ ಪ್ರೇಮಿಗಳ ದಿನಕ್ಕೆ ನೀವು ಉಡುಗೊರೆ ನೀಡಬಹುದು.

ಫಿಟ್ನೆಸ್ ಗ್ಯಾಜೆಟ್ ಕೊಡಬಹುದು

ನಿಮ್ಮ ಪ್ರಿಯಕರ ಜಿಮ್ ಮತ್ತು ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ಹೊಂದಿರುವವನು ಆಗಿದ್ದರೆ, ಆತನಿಗೆ ಜಿಮ್ ಪರಿಕರಗಳನ್ನು ಗಿಫ್ಟ್ ಕೊಡಬಹುದು. ಅಲ್ಲದೆ, ಜಿಮ್ ಉಡುಪುಗಳು, ಫಿಟ್ನೆಸ್ ಗ್ಯಾಜೆಟ್ ಕೂಡ ಕೊಡಬಹುದು. ಇದರಿಂದ ಅವರಿಗೆ ಪ್ರಯೋಜನವೂ ಆಗುತ್ತದೆ ಮತ್ತು ಜಿಮ್ ಹೋಗಲು ಸ್ಪೂರ್ತಿಯೂ ಇರುತ್ತದೆ.

ಗಿಫ್ಟ್ ಕೊಡಲು ಇನ್ನಷ್ಟು ಐಡಿಯಾ

ಹುಡುಗರಿಗೆ ಸನ್‌ಸ್ಕ್ರೀನ್, ಶವರ್ ಜೆಲ್, ಶಾಂಪೂ, ಉತ್ತಮ ದರ್ಜೆಯ ಸೋಪ್ ಕೂಡ ಉಡುಗೊರೆ ಕೊಡಬಹುದು. ಅಲ್ಲದೆ, ಶೇವಿಂಗ್ ಕಿಟ್, ಬಾಡಿ ಲೋಶನ್ ಕೂಡ ಕೊಡಬಹುದು. ಅವರಿಗೆ ಅದರಿಂದ ಪ್ರಯೋಜನವಾಗುವ ಜತೆ, ಪ್ರೇಯಸಿಯಿಂದ ಪಡೆದ ಉಡುಗೊರೆ ಎಂಬ ಖುಷಿಯೂ ಇರುತ್ತದೆ.

Whats_app_banner