Valentines Day Wishes: ನಿಮ್ಮ ಪ್ರೀತಿ ಪಾತ್ರರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day Wishes: ನಿಮ್ಮ ಪ್ರೀತಿ ಪಾತ್ರರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಿ

Valentines Day Wishes: ನಿಮ್ಮ ಪ್ರೀತಿ ಪಾತ್ರರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಿ

ವ್ಯಾಲೆಂಟೈನ್ಸ್ ಡೇ ಶುಭಾಶಯಗಳು ಎಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳನ್ನು ಕಳುಹಿಸಲು ಯೋಚಿಸುತ್ತಿದ್ದೀರಾ. ಈ ವ್ಯಾಲೆಂಟೈನ್ಸ್ ಡೇ ಹಿಂದೆಂದಿಗಿಂತಲೂ ನೆನಪಿನಲ್ಲಿ ಉಳಿಯುವಂತಾಗಲಿ. ಇಲ್ಲಿವೆ ನಿಮಗಾಗಿ ಪ್ರೀತಿಯ ಸಂದೇಶಗಳು.

ನಿಮ್ಮ ಪ್ರೀತಿ ಪಾತ್ರರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ಕಳುಹಿಸಿ
ನಿಮ್ಮ ಪ್ರೀತಿ ಪಾತ್ರರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ಕಳುಹಿಸಿ (Pixabay)

ವ್ಯಾಲೆಂಟೈನ್ಸ್ ಡೇ ಶುಭಾಶಯಗಳು: ನಿಮ್ಮ ಪ್ರೀತಿಪಾತ್ರರಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ಕಳುಹಿಸಲು ಸುಂದರ ಸಂದೇಶಗಳಿಗಾಗಿ ಹುಡುಕುತ್ತಿದ್ದೀರಾ? ನಾವು ನಿಮಗಾಗಿ ಕೆಲವು ಸುಂದರ, ಹೃದಯಸ್ಪರ್ಶಿ ಸಂದೇಶಗಳನ್ನು ಹೊತ್ತು ತಂದಿದ್ದೇವೆ. ಇವುಗಳನ್ನು ಸಂದೇಶಗಳ ರೂಪದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಿ, ಅವರ ದಿನವನ್ನು ಇನ್ನಷ್ಟು ಸುಂದರವಾಗಿಸಿ.

ಪ್ರೇಮಿಗಳಿಗೆಂದೇ ಜಗತ್ತಿನಾದ್ಯಂತ ಆಚರಿಸುವ ದಿನವೊಂದಿದ್ದರೆ ಅದು ವ್ಯಾಲೆಂಟೈನ್ಸ್ ಡೇ. ಈ ದಿನ ನಿಮ್ಮ ಭಾವಿ ಸಂಗಾತಿ, ಪ್ರೇಮಿ, ಪತ್ನಿ, ಪತಿಗೆ ಈ ದಿನ ಶುಭಾಶಯಗಳ ಜೊತೆಗೆ ಅವರ ನೆಚ್ಚಿನ ಉಡುಗೊರೆಗಳನ್ನು ಕೊಡುವುದು ಅಭ್ಯಾಸ... ನೀವು ಕಳುಹಿಸುವ ಈ ಹೃದಯಸ್ಪರ್ಶಿ ಶುಭಾಶಯಗಳು ಅವರಿಗೆ ಖುಷಿಯನ್ನು ನೀಡುತ್ತದೆ. ಇತರರಂತೆ ಭಾವನೆಗಳನ್ನು ತುಂಬಿ ಸಂದೇಶ ಕಳುಹಿಸುವುದು ಹೇಗೆ ಎಂದು ನಿಮಗೆ ತಿಳಿದಿಲ್ಲವೇ? ನಿಮಗೆ ಸಹಾಯವಾಗಲೆಂದೇ ನಾವಿಲ್ಲಿ ಕೆಲವೊಂದು ಪ್ರೇಮ ಕವಿತೆಗಳು, ಪದಗಳನ್ನು ಸುಂದರವಾಗಿ ಪೋಣಿಸಿ ನೀಡಿದ್ದೇವೆ. ಚಾಕೊಲೇಟ್‌‌ಗಳು, ಗುಲಾಬಿಗಳು ಅಥವಾ ಇನ್ನಾವುದೇ ಸುಂದರವಾದ ಉಡುಗೊರೆಯೊಂದಿಗೆ, ಈ ಪ್ರೇಮ ಸಂದೇಶವನ್ನು ಬರೆದು ಅವರಿಗೆ ಕಳುಹಿಸಿ. ಈ ಪ್ರೇಮಿಗಳ ದಿನವನ್ನು ಅವರ ಸಂತೋಷಕ್ಕಾಗಿ ಮೀಸಲಿಡಿ.

ಪ್ರೇಮಿಗಳ ದಿನದ ಶುಭಾಶಯಗಳು

1. ನನ್ನ ಜೀವ ನೀನು, ನನ್ನ ಜೀವನ ನೀನು

ನನ್ನ ಇಂದು, ನನ್ನ ನಾಳೆಗಳು ನೀನು

ನನ್ನ ಕನಸು, ನನ್ನ ವಿಶ್ವಾಸ ನೀನು

ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮೈ ಲವ್

 

2. ನಿನ್ನೊಂದಿಗೆ ಕಳೆದ ಪ್ರತಿ ಕ್ಷಣವೂ ಅದ್ಭುತ

ಜೀವನದುದ್ದಕ್ಕೂ ಈ ಪ್ರೀತಿ ಸದಾ ಹೀಗೆ ಇರಲಿ

ಹ್ಯಾಪಿ ವ್ಯಾಲೆಂಟೈನ್ಸ್ ಡೇ ಪ್ರಿಯ

 

3. ನೀನು ನನ್ನ ಸಂಗಾತಿ ಮಾತ್ರವಲ್ಲ.

ನನ್ನ ಜೀವನಕ್ಕೊಂದು ವಿಶೇಷ ಅರ್ಥ ನೀಡಿದಾಕೆ

ಕಷ್ಟ ಸುಖಗಳಲ್ಲಿ ಭಾಗಿಯಾದಾಕೆ

ಈ ಪ್ರೀತಿ ಸದಾ ಹೀಗೆ ಇರಲಿ,

ನಮ್ಮ ಜೀವನ ಸಂತೋಷದಿಂದ ತುಂಬಿರಲಿ

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

 

4. ನಿನ್ನ ಸಾಮಿಪ್ಯವೇ ನನಗೆ ಹಿತ

ನಿನ್ನ ಮಾತು, ನಿನ್ನ ನಗು ನನಗೆ ಪ್ರಿಯ

ನಿನ್ನೊಂದಿಗಿರುವ ಪ್ರತೀ ಕ್ಷಣವೂ ನನಗೆ ಪ್ರೇಮಿಗಳ ದಿನ

ಹ್ಯಾಪಿ ವ್ಯಾಲೆಂಟೈನ್ಸ್ ಡೇ

 

5. ನನ್ನ ಹೃದಯವನ್ನು ಗೆದ್ದ ಪ್ರೇಮಿಗೆ

ಸದಾ ನನ್ನನ್ನು ಬೆಂಬಲಿಸುವ ಸ್ನೇಹಿತನಿಗೆ

ಹ್ಯಾಪಿ ವ್ಯಾಲೆಂಟೈನ್ಸ್ ಡೇ

ನಿನ್ನಿಂದಲೇ ನನ್ನ ಜೀವನ ಪರಿಪೂರ್ಣ

 

6. ಪದಗಳಲ್ಲಿ ಹೇಗೆ ಬಣ್ಣಿಸಲಿ

ಮಾತಿನಲ್ಲಿ ಹೇಗೆ ವಿವರಿಸಲಿ

ನಿಮ್ಮ ಪ್ರೀತಿ, ನಿಮ್ಮ ಸಾಮೀಪ್ಯ ನೀಡುವ ಖುಷಿಗೆ

ನಾನು ಸದಾ ಹಾತೊರೆಯುತ್ತೇನೆ

ನಿಮ್ಮೊಂದಿಗಿರುವ ಪ್ರತಿ ದಿನವೂ ವ್ಯಾಲೆಂಟೈನ್ಸ್ ಡೇ.

 

7. ನನ್ನ ಜೀವನದಲ್ಲಿ ಎಲ್ಲವೂ ಆಗಿರುವ

ನನ್ನ ಪ್ರತೀ ಯಶಸ್ಸನ್ನೂ ನಿನ್ನ ಯಶಸ್ಸಿನಂತೆ ಸಂಭ್ರಮಿಸುವ

ನನ್ನ ಬಾಳ ಸಂಗಾತಿಗೆ

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

 

8. ನಾನು ನಿಮ್ಮನ್ನು ಅಂದು ಭೇಟಿಯಾದ ಕ್ಷಣದಿಂದ

ನನ್ನ ಜೀವನ ಬದಲಾದ ರೀತಿಗೆ ನಾನೇ ಬೆರಗಾಗಿದ್ದೇನೆ.

ನನ್ನ ಸರ್ವಸ್ವವೂ ಆಗಿರುವ ನನ್ನ ಜೀವನ ಸಂಗಾತಿಗೆ

ನಾನು ಸದಾ ಚಿರಋಣಿ

ಹ್ಯಾಪಿ ವ್ಯಾಲೆಂಟೈನ್ಸ್ ಡೇ ಲವ್

 

9. ನನ್ನ ಭಾವೀ ಪತಿಗೆ ವ್ಯಾಲೆಂಟೈನ್ಸ್ ಡೇ ಶುಭಾಶಯಗಳು

ನಿಮ್ಮೊಂದಿಗಿನ ನನ್ನ ಜೀವನ ಪಯಣ ಖುಷಿಯಿಂದ ಕೂಡಿರಲಿ

ಮುಂದಿನ ಪ್ರತೀ ದಿನವೂ ಪ್ರೇಮಿಗಳ ದಿನವಾಗಿರಲಿ

ನೀವು ಅದನ್ನು ಇನ್ನಷ್ಟು ಸುಂದರವಾಗಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಹ್ಯಾಪಿ ವ್ಯಾಲೆಂಟೈನ್ಸ್ ಡೇ

 

10. ನೀವು ನನ್ನ ಜಗತ್ತನ್ನು ಬೆಳಗಿಸಿದ್ದೀರಿ.

ಕಷ್ಟದಲ್ಲಿ ಕೈ ಹಿಡಿದಿದ್ದೀರಿ

ಗೆದ್ದಾಗ ಸಂತೋಷದಿಂದ ಕುಣಿದಾಡಿದ್ದೀರಿ

ನನ್ನ ಸಂತೋಷ ನೀವಾಗಿದ್ದೀರಿ

ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮೈ ಡಿಯರ್.

 

11. ನೀವು ನನ್ನ ಜೀವನ ಸಂಗಾತಿಯಾಗಿರುವುದು ನನ್ನ ಅದೃಷ್ಟ

ಎಲ್ಲಾ ಕ್ಷಣಗಳನ್ನು ಆನಂದಿಸುವಂತೆ ಮಾಡಿರುವ ನಿಮಗೆ

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

 

 

12. ಅಂದೂ, ಇಂದೂ ನಿನ್ನನ್ನು ನೋಡಿದಾಗಲೆಲ್ಲಾ

ನನ್ನ ಹೃದಯ ಅಷ್ಟೇ ವೇಗವಾಗಿ ಬಡಿದುಕೊಳ್ಳುತ್ತದೆ

ನನ್ನ ಜಗತ್ತೇ ಆಗಿದ್ದಕ್ಕೆ, ಕೈ ಹಿಡಿದು ಸಾಗಿದ್ದಕ್ಕೆ

ಥ್ಯಾಂಕ್ಯೂ ಮೈ ಲವ್

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

 

13. ನಿನ್ನಿಂದ ಸುಂದರವಾಗಿದೆ ನನ್ನ ಬದುಕು

ಪ್ರತೀ ಕ್ಷಣ, ಪ್ರತೀ ದಿನ ನಿಮ್ಮ ಇರುವಿಕೆಗಾಗಿ ಹಾತೊರೆಯುತ್ತೇನೆ

ಹ್ಯಾಪಿ ವ್ಯಾಲೆಂಟೈನ್ಸ್ ಡೇ ಗೆಳೆಯಾ

 

 

14. ನನ್ನ ಜೀವನದ ಕಥೆಯಲ್ಲಿ ನೀವೊಂದು ನನ್ನ ನೆಚ್ಚಿನ ಅಧ್ಯಾಯ.

ನನ್ನ ಕನಸನ್ನು ನನಸಾಗಿಸಿದ್ದಕ್ಕೆ, ಪ್ರೀತಿಯ ಪಯಣದಲ್ಲಿ ಜೊತೆಯಾಗಿದ್ದಕ್ಕೆ

ಬಾಳ ಸಂಗಾತಿಯಾಗಿದ್ದಕ್ಕೆ, ನನ್ನ ಕನಸುಗಳನ್ನೆಲ್ಲಾ ಸಾಕಾರಗೊಳಿಸಿದ್ದಕ್ಕೆ

ಥ್ಯಾಂಕ್ಯೂ, ಹ್ಯಾಪಿ ವ್ಯಾಲೆಂಟೈನ್ಸ್ ಡೇ ಡಾರ್ಲಿಂಗ್

 

15. ಪ್ರೀತಿಯು ಒಂದು ಪ್ರಯಾಣವಾಗಿದ್ದರೆ

ನಿಮ್ಮೊಂದಿಗೆ ನಡೆದ ಪ್ರತಿಯೊಂದು ಹೆಜ್ಜೆಯೂ ಅವಿಸ್ಮರಣೀಯ.

ಈ ಪ್ರೀತಿ ಸದಾ ಹೀಗೆಯೇ ಇರಲಿ ಗೆಳೆಯಾ

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner