ಕನ್ನಡ ಸುದ್ದಿ  /  Lifestyle  /  Varalakshmi Vratam 2022 Wishes Messages Greetings And Whatsapp Status

Varalakshmi Vratam 2022 Wishes: ವರಮಹಾಲಕ್ಷ್ಮಿ ಹಬ್ಬಕ್ಕೆ ನಿಮ್ಮವರಿಗೆ ಹೀಗೆ ವಿಶ್‌ ಮಾಡಿ; ಇಲ್ಲಿವೆ ಶುಭಸಂದೇಶಗಳು

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ, ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ. ವರಮಹಾಲಕ್ಷ್ಮಿ ಹಬ್ಬದ ವ್ರತಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಿಮ್ಮವರಿಗೆ ಈ ಹಬ್ಬದ ಶುಭಾಶಯ ಕೋರಲು ಸಂದೇಶಗಳು ಇಲ್ಲಿವೆ…

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ... ವರಮಹಾಲಕ್ಷ್ಮಿ ಹಬ್ಬಕ್ಕೆ ನಾಡಿನಲ್ಲಿ ಸಿದ್ಧತೆ ಜೋರಾಗಿ ಸಾಗುತ್ತಿದೆ. ಅಷ್ಟಲಕ್ಷಿಯರನ್ನು ಪೂಜಿಸುವ ಅರ್ಥಪೂರ್ಣ ಹಬ್ಬಕ್ಕೆ ಹೆಂಗಳೆಯರು ಕಾಯುತ್ತಿದ್ದಾರೆ. ಧನದೊಂದಿಗೆ ಧಾನ್ಯ, ಐಶ್ವರ್ಯ, ಸಂಪತ್ತು, ಯಶಸ್ಸು, ಶ್ರೇಯಸ್ಸು, ಅಭಿವೃದ್ಧಿ ಎಲ್ಲವನ್ನೂ ನೀಡುವ ಅಧಿದೇವತೆ ಲಕ್ಷ್ಮಿ. ಹೀಗಾಗಿ ಕೇಳಿದ್ದನ್ನು ಕೊಡುವ ವರಮಹಾಲಕ್ಷ್ಮಿ ಪೂಜೆಗೆ ನಾಡಿನಲ್ಲಿ ಮಹತ್ವವಿದೆ.

ಹೆಚ್ಚಿನ ಮನೆಗಳಲ್ಲಿ ಮಹಿಳೆಯರು ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಪದ್ಧತಿ. ಇನ್ನೂ ಕೆಲ ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ ಹಾಗೂ ಮಂದಿರಗಳಲ್ಲೂ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಸರ್ವಾಲಂಕಾರಭೂಷಿತಳಾಗಿ, ಪ್ರತಿ ಮನೆಯ ಮಹಿಳೆಯರು ಈ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ.

ವರಮಹಾಲಕ್ಷ್ಮಿ ಹಬ್ಬ ಬರುತ್ತಿದ್ದಂತೆ, ನಮ್ಮವರಿಗೆ ಹಬ್ಬದ ಶುಭಾಶಯ ತಿಳಿಸುವುದು ಕ್ರಮ. ವರಮಹಾಲಕ್ಷ್ಮಿ ಬೇಡಿದ ವರವನ್ನು ಕೊಟ್ಟು, ಪ್ರತಿಯೊಬ್ಬರಿಗೂ ಒಳಿತು ಮಾಡಬೇಕೆಂಬುದೇ ಎಲ್ಲರ ಆಶಯ. ಹೀಗಾಗಿ ನಮ್ಮವರಿಗೆ ಯಾವ ರೀತಿಯಾಗಿ ಶುಭಾಶಯ ಕೋರುವುದು ಎಂಬ ಬಗ್ಗೆ ಹಲವರಿಗೆ ಗೊಂದಲವಿರುತ್ತದೆ. ನಿಮಗಾಗಿ ನಾವು ಬಗೆ ಬಗೆಯ ಸಂದೇಶದೊಂದಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಾಶಯದ ಸಂದೇಶವನ್ನು ಹೊತ್ತು ತಂದಿದ್ದೇವೆ. ನಿಮ್ಮವರಿಗೆ ಈ ಸಂದೇಶಗಳನ್ನು ನೀವು ಕಳುಹಿಸಬಹುದು. ಅಷ್ಟೇ ಅಲ್ಲಾ, ಈ ಸಂದೇಶಗಳನ್ನು ನಿಮ್ಮ ಸ್ಟೇಟಸ್‌ಗಳಲ್ಲೂ ಹಾಕಿಕೊಳ್ಳಿ...

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ, ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ… ಎಲ್ಲರಿಗೂ ಮಹಾಲಕ್ಷ್ಮಿ ಆಶೀರ್ವದಿಸಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ನಿಮಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಅಷ್ಟ ಲಕ್ಷ್ಮಿಯರು ನಿಮಗೆ ಸಕಲ ಸೌಭಾಗ್ಯಗಳನ್ನು ನೀಡಿ ಆಶೀರ್ವದಿಸಲಿ.

ಶ್ರೀ ವರಮಹಾಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ, ಧನ -ಧಾನ್ಯ, ಅಂತಸ್ತು, ಐಶ್ವರ್ಯ ನೀಡಿ, ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಕಾಪಾಡಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಶೌರ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಕಾರ್ಯಲಕ್ಷ್ಮಿ, ವಿಜಯಲಕ್ಷ್ಮಿ, ಅಷ್ಟಲಕ್ಷ್ಮಿ... ಅಷ್ಟ ಲಕ್ಷ್ಮಿಯರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಶೀರ್ವದಿಸಲಿ. ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವ ಜಗನ್ಮಾತೆ ಆದಿಶಕ್ತಿ ಮಹಾಲಕ್ಷ್ಮಿಯು ಸರ್ವರಿಗೂ ಸುಖ, ಸಂತೋಷ, ನೆಮ್ಮದಿ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ. ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.

ಅಷ್ಟಲಕ್ಷ್ಮಿ ನಮಸ್ತುಭ್ಯಂ ವರದೇ ಕಾಮರೂಪಿಣಿ. ವಿಷ್ಣುವಕ್ಷಃ ಸ್ಥಲಾ ರೂಢ ಭಕ್ತ ಮೋಕ್ಷ ಪ್ರದಾಯಿನಿ. ಅಷ್ಟಲಕ್ಷಮಿಯರು ನಿಮ್ಮ ಕುಟುಂಬಕ್ಕೆ ಒಳಿತನ್ನು ಮಾಡಲಿ. ನಿಮ್ಮ ಬದುಕು ಬಂಗಾರವಾಗಲಿ. ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಆರೋಗ್ಯದಲ್ಲಿ, ಅಭಿವೃದ್ಧಿಯಲ್ಲಿ, ನೆಮ್ಮದಿಯಲ್ಲಿ, ಧನದಲ್ಲಿ-ಧಾನ್ಯದಲ್ಲಿ, ಸುಖದಲ್ಲಿ-ಶಾಂತಿಯಲ್ಲಿ, ಮನೆಯಲ್ಲಿ-ಮನದಲ್ಲಿ ಸದಾಕಾಲ ನಮ್ಮೊಂದಿಗಿರು... ತಾಯಿ ವರಮಹಾಲಕ್ಷ್ಮಿ.

ಈ ಶುಭ ದಿನದಂದು ವರಮಹಾಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆಶೀರ್ವಾದ ಮಾಡಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ, ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ. ಶ್ರೀ ವರಮಹಹಾಲಕ್ಷ್ಮಿಯು ಎಲ್ಲರಿಗೂ ಆಯುರಾರೋಗ್ಯ ಹಾಗೂ ಐಶ್ವರ್ಯ ನೀಡಿ, ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಈ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ದೇವಿಯು ತನ್ನ ಎಲ್ಲಾ ಅಷ್ಟ ಶಕ್ತಿಗಳೊಂದಿಗೆ ನಿಮ್ಮನ್ನು ಆಶೀರ್ವದಿಸಲಿ. ಸಂಪತ್ತು, ಭೂಮಿ, ಕಲಿಕೆ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ ಮತ್ತು ಸಾಮರ್ಥ್ಯ ನಿಮ್ಮದಾಗಲಿ. ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು.

ಲಕ್ಷ್ಮೀ ದೇವಿಯು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸ್ವಾತಂತ್ರ್ಯದಿಂದ ತುಂಬಲಿ. ಈ ವರಮಹಾಲಕ್ಷ್ಮಿ ವ್ರತವು ನಿಮಗೆ ಎಲ್ಲವನ್ನೂ ತರಲಿ.

ನಿಮ್ಮ ಮನೆ ಮತ್ತು ಮನವನ್ನು ಮಹಾಲಕ್ಷ್ಮಿಯು ಸಕಲೈಶ್ವರ್ಯದಿಂದ ಬೆಳಗಲಿ. ನಿಮ್ಮೊಂದಿಗೆ ಧನಲಕ್‌ಷ್ಮಿ ಸದಾಕಾಲ ನೆಲೆಸಲಿ. ವರಮಹಾಲಕ್ಷ್ಮಿ ಹಬ್ಬದ ಶುಭಕಾಮನೆಗಳು.

ನೀವು ಈ ಸಂದೇಶಗಳನ್ನು ನಿಮ್ವರಿಗೆ ಕಳುಹಿಸಿ. ಎಲ್ಲರಿಗೂ ,ಹಲಕ್ಷ್ಮಿ ಒಳಿತನ್ನು ಮಾಡಲ

ವಿಭಾಗ