Vastu tips: ಬೆಳಗ್ಗೆ ಎದ್ದಕೂಡಲೇ ಈ 5 ವಸ್ತುಗಳನ್ನ ನೋಡದಿರಿ; ವಾಸ್ತುಶಾಸ್ತ್ರ ಹೇಳೋದಿಷ್ಟು
ಬೆಳಗ್ಗೆ ಎದ್ದ ಕೂಡಲೇ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ಸಣ್ಣ ತಪ್ಪು ನಿಮ್ಮ ಇಡೀ ದಿನವನ್ನು ಹಾಳು ಮಾಡಿಬಿಡಬಹುದು. ಹೀಗಾಗಿ ವಾಸ್ತುಶಾಸ್ತ್ರದ ಈ ಸಲಹೆಗಳನ್ನು ಪಾಲಿಸಿದಲ್ಲಿ ನೀವು ನಿಮ್ಮ ಜೀವನದಲ್ಲಿ ದುರಾದೃಷ್ಟದಿಂದ ಪಾರಾಗಬಹುದಾಗಿದೆ.
ಬೆಳಗ್ಗೆ ಎದ್ದಾಕ್ಷಣ ಈ ದಿನ ಒಳ್ಳೆಯ ದಿನವಾಗಿರಲಿ ಎಂಬ ಆಸೆ ಬೇಡಿಕೆ ಎಲ್ಲರಿಗೂ ಇರುತ್ತದೆ. ಆದರೆ ಬೆಳಗ್ಗೆ ಎದ್ದ ಬಳಿಕ ಗೊತ್ತೋ ಗೊತ್ತಿಲ್ಲದೆಯೇ ನಾವು ಮಾಡಿದ ಕೆಲವೊಂದು ತಪ್ಪುಗಳು ನಮ್ಮ ದಿನನಿತ್ಯದ ಜೀವನದ ಮೇಲೆ ದುಷ್ಪರಿಣಾಮ ಬೀರಬಹುದು. ಆದರೆ ನೀವು ವಾಸ್ತು ಶಾಸ್ತ್ರದ ಮೊರೆ ಹೋಗುವ ಮೂಲಕ ನಿಮ್ಮ ಬೆಳಗ್ಗಿನ ದಿನಚರಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ. ವಾಸ್ತು ಶಾಸ್ತ್ರವು ನೀವು ಬೆಳಗ್ಗೆ ಎದ್ದ ಬಳಿಕ ಕೆಲವು ವಸ್ತುಗಳನ್ನು ನೋಡುವುದು ನಿಷಿದ್ಧ ಎಂದು ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನೀವು ಬೆಳಗ್ಗೆ ಎದ್ದ ಕೂಡಲೇ ಈ ಐದು ವಸ್ತುಗಳನ್ನು ನೋಡುವುದರಿಂದ ನಿಮ್ಮ ಇಡೀ ದಿನ ಹಾಳಾಗಲಿದೆ .
ಒಡೆದು ಹೋದ ಮೂರ್ತಿ : ವಾಸ್ತು ಶಾಸ್ತ್ರವು ಅಪ್ಪಿತಪ್ಪಿವೂ ಮನೆಯಲ್ಲಿ ಒಡೆದು ಹೋದ ದೇವರ ಮೂರ್ತಿಗಳನ್ನು ಇಡಬೇಡಿ ಎಂದೇ ಹೇಳುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದಾದರೂ ದೇವರ ವಿಗ್ರಹ ಒಡೆದು ಹೋಗಿದ್ದಲ್ಲಿ ಅದನ್ನು ಬಟ್ಟೆಯಲ್ಲಿ ಸುತ್ತಿ ದೂರ ಇಡುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ಕೂಡಲೇ ಒಡೆದು ಹೋದ ಮೂರ್ತಿಯನ್ನು ನೋಡುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ಇಡೀ ದಿನ ಹಾಳಾಗಲಿದೆ.
ಬೆಳಗ್ಗೆ ಎದ್ದ ಕೂಡಲೇ ಕನ್ನಡಿ ನೋಡಬಾರದು : ಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ ನಮ್ಮ ಮುಖವನ್ನೇ ನಾವು ನೋಡಿಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ ಅಂತಾ ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈ ರೀತಿ ಮಾಡುವುದರಿಂದ ನಮಗೆ ಅರಿವಿಲ್ಲದಂತೆ ನಮ್ಮ ಮೇಲೆ ನಮಗೆ ದುರಾಭಿಮಾನ ಮೂಡುವ ಸಾಧ್ಯತೆ ಇರಲಿದೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ನೀವು ದೇವರ ಮುಖವನ್ನು ನೋಡುವುದು ಉತ್ತಮ.
ಅಡುಗೆ ಮನೆಯಲ್ಲಿರುವ ತೊಳೆಯದ ಪಾತ್ರೆಗಳು : ರಾತ್ರಿ ಮಲಗುವ ಮುನ್ನವೇ ಅಡುಗೆ ಮನೆಯಲ್ಲಿರುವ ಎಲ್ಲಾ ಪಾತ್ರೆಗಳನ್ನು ತೊಳೆದು ಅಡುಗೆ ಮನೆಯನ್ನು ಸ್ವಚ್ಛವಾಗಿಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಯಾರ ಮನೆಯಲ್ಲಿ ರಾತ್ರಿ ತೊಳೆಯದ ಪಾತ್ರೆಗಳು ಹಾಗೆಯೇ ಇರುತ್ತದೆಯೋ ಅಂತಾ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ ಎಂಬ ನಂಬಿಕೆಯಿದೆ. ಅಲ್ಲದೇ ಈ ರೀತಿ ಮಾಡುವುದರಿಂದ ಮನೆಯಲ್ಲಿ ಪತಿ ಪತ್ನಿ ಸಂಬಂಧ ಹಳಸುತ್ತದೆ ಎಂದು ಹೇಳಲಾಗುತ್ತಿದೆ.
ನಿಮ್ಮ ನೆರಳನ್ನು ನೀವೇ ನೋಡಬೇಡಿ : ಬೆಳಗ್ಗೆ ಎದ್ದಕೂಡಲೇ ನಿಮ್ಮ ನೆರಳನ್ನು ನೀವೇ ನೋಡಿಕೊಳ್ಳುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಇದರಿಂದ ನೀವು ನಷ್ಟವನ್ನು ಅನುಭವಿಸಲಿದ್ದೀರಿ. ಅಥವಾ ನಿಮಗೆ ತೀರಾ ಹತ್ತಿರದವರ ಸಾವಿನ ಸುದ್ದಿ ಕೇಳಲಿದ್ದೀರಿ ಎಂಬರ್ಥವೂ ಇದಕ್ಕಿದೆ.
ನಿಂತು ಹೋದ ಅಥವಾ ಕೆಟ್ಟು ಹೋದ ಗಡಿಯಾರ, ವಾಚ್ : ಬೆಳಗ್ಗೆ ಎದ್ದ ಕೂಡಲೇ ನಿಂತು ಹೋದ ಗಡಿಯಾರ ಅಥವಾ ವಾಚ್ಗಳನ್ನು ನೋಡಬಾರದು. ಇದರಿಂದ ದುರಾದೃಷ್ಟ ನಿಮ್ಮ ಬೆನ್ನು ಬೀಳಲಿದೆ. ದೊಡ್ಡ ಸಂಕಷ್ಟದ ಸುಳಿಯಲ್ಲಿ ನೀವು ಸಿಲುಕಲಿದ್ದೀರಿ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ನಿಂತು ಹೋದ ಗಡಿಯಾರವನ್ನು ನೋಡಬಾರದು ಎಂದರೆ ಬೇಗನೇ ಅದನ್ನು ಸರಿಪಡಿಸುವುದು ಒಳ್ಳೆಯದು.
ಇದನ್ನೂ ಓದಿ: ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆಯ ಆರೋಗ್ಯ ಪ್ರಯೋಜನಗಳು
ವಿಭಾಗ