Vastu Tips: ಹೊಸ ಮನೆ ಖರೀದಿಸುವ ಆಸೆ ಇದ್ಯಾ, ಹಾಗಿದ್ರೆ ನಿಮ್ಮ ಕನಸಿನ ಮನೆ ವಾಸ್ತು ಹೀಗಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Vastu Tips: ಹೊಸ ಮನೆ ಖರೀದಿಸುವ ಆಸೆ ಇದ್ಯಾ, ಹಾಗಿದ್ರೆ ನಿಮ್ಮ ಕನಸಿನ ಮನೆ ವಾಸ್ತು ಹೀಗಿರಲಿ

Vastu Tips: ಹೊಸ ಮನೆ ಖರೀದಿಸುವ ಆಸೆ ಇದ್ಯಾ, ಹಾಗಿದ್ರೆ ನಿಮ್ಮ ಕನಸಿನ ಮನೆ ವಾಸ್ತು ಹೀಗಿರಲಿ

Vastu Tips: ವಾಸ್ತು ಪ್ರಕಾರ ಮನೆ ಇದ್ದರೆ ಆ ಮನೆಯಲ್ಲಿ ಎಲ್ಲಾ ರೀತಿಯ ಸಂತೋಷ, ನೆಮ್ಮದಿ ನೆಲೆಸಿರುತ್ತದೆ, ಒಂದು ವೇಳೆ ಮನೆ ವಾಸ್ತು ಪ್ರಕಾರ ಇರದಿದ್ದರೆ ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಒಂದು ವೇಳೆ ನೀವು ಮನೆ ಖರೀದಿಸುವ ಆಸೆ ಇದ್ದರೆ ವಾಸ್ತು ಯಾವ ರೀತಿ ಇರಬೇಕು ಎಂಬುದನ್ನು ಗಮನದಲ್ಲಿಡಿ.

ಖರೀದಿಸುವ ಮನೆಗೆ ವಾಸ್ತು ಟಿಪ್ಸ್
ಖರೀದಿಸುವ ಮನೆಗೆ ವಾಸ್ತು ಟಿಪ್ಸ್ (PC: Unsplash)

Vastu Tips: ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಗಾದೆ ಮಾತು ಎಲ್ಲರಿಗೂ ಪರಿಚಿತ. ಪ್ರತಿಯೊಬ್ಬರಿಗೂ ಸ್ವಂತ ಮನೆ ಕನಸಿರುತ್ತದೆ. ಕೆಲವರು ಮನೆ ಹೀಗೆ ಇರಬೇಕು ಎಂದು ಪ್ಲಾನ್‌ ಹಾಕಿ ಕಟ್ಟಿಸುತ್ತಾರೆ. ಇನ್ನೂ ಕೆಲವರು ಕಟ್ಟಿರುವ ಮನೆಯನ್ನೇ ಖರೀದಿಸುತ್ತಾರೆ. ಆದರೆ ನೀವು ಮನೆ ಖರೀದಿಸುವಾಗ ವಾಸ್ತುವನ್ನು ಗಮನಿಸುವುದು ಬಹಳ ಮುಖ್ಯವಾಗಿದೆ.

ವಾಸುವಿನಿಂದ ಖುಷಿ, ಸಮೃದ್ಧಿ

ಪ್ರತಿಯೊಬ್ಬರಿಗೂ ವಾಸ್ತು ಬಹಳ ಅಗತ್ಯ. ಮನೆಯಲ್ಲಿ ಎಲ್ಲವೂ ವಾಸ್ತು ಪ್ರಕಾರ ಇಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ, ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ. ಆದ್ದರಿಂದ ನೀವು ಕಟ್ಟಿದ ಮನೆಯನ್ನು ಖರೀದಿಸಬೇಕು ಎಂದು ಪ್ಲಾನ್‌ ಮಾಡುತ್ತಿದ್ದಲ್ಲಿ ವಾಸ್ತುತಜ್ಞರು ಹೇಳುವ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ.

  • ವಾಸ್ತುಶಾಸ್ತ್ರದ ನಂಬಿಕೆಗಳ ಪ್ರಕಾರ ತಿರುವು ಅಥವಾ ಛೇದಕವನ್ನು ನಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇಂತಹ ಸ್ಥಳಗಳಲ್ಲಿರುವ ಮನೆಗಳನ್ನು ಎಂದಿಗೂ ಖರೀದಿಸಬೇಡಿ.
  • ಶಾಂತಿ ಮತ್ತು ಏಕಾಂತವಾಗಿರಬೇಕು ಎಂದು ಬಯಸುವವರು ತಮ್ಮ ಮನೆಯನ್ನು ನಿರ್ಜನ ಸ್ಥಳದಲ್ಲಿ ಖರೀದಿಸಲು ಬಯಸುತ್ತಾರೆ. ಆದರೆ ಈ ರೀತಿಯ ಮನೆಗಳನ್ನು ನೀವು ಖರೀದಿಸಿದರೆ ನಿಮಗೆ ಗ್ರಹ ಗತಿಗಳ ಆಶೀರ್ವಾದ ಇರುವುದಿಲ್ಲ.
  • ಮನೆಯ ಮುಖ್ಯ ದ್ವಾರವು ಕೇವಲ ಎಲ್ಲರೂ ಬಂದು, ಹೋಗುವ ಪ್ರವೇಶ ದ್ವಾರ ಮಾತ್ರ ಅಲ್ಲ, ಅದು ಸಕಾರಾತ್ಮಕ, ನಕಾರಾತ್ಮಕ ಶಕ್ತಿಯೂ ಹೌದು. ಮನೆಯ ಪ್ರವೇಶ ದ್ವಾರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನದಲ್ಲಿಡಬೇಕು. ವಾಸ್ತು ಪ್ರಕಾರ ನಿಮ್ಮ ಮನೆಯ ಮುಖ್ಯ ಪ್ರವೇಶ ದ್ವಾರ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ನೀವು ಮನೆಯಿಂದ ಹೊರಡುವಾಗ, ಆ ಹೆಜ್ಜೆ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಪಡುವಂತೆ ಇರಬೇಕೆಂದು ತಜ್ಞರು ಹೇಳುತ್ತಾರೆ. ಹಾಗೇ ಪ್ರವೇಶದ್ವಾರದ ಬಾಗಿಲುಗಳು ಕಪ್ಪು ಬಣ್ಣದಲ್ಲಿ ಇರಬಾರದು.
  • ಯಾವುದೇ ಮನೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಸ್ಥಳ, ಹೆಚ್ಚು ಸಮಯ ಕಳೆಯುವ ಸ್ಥಳ ಮತ್ತು ಅತಿಥಿಗಳು ಬಂದಾಗ ಲಿವಿಂಗ್‌ ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಪ್ರವೇಶದ್ವಾರದಿಂದ ಲಿವಿಂಗ್‌ ರೂಮ್‌ ಪೂರ್ವ, ಉತ್ತರ ಅಥವಾ ಈಶಾನ್ಯಕ್ಕೆ ಎದುರಾಗಿರಬೇಕು. ಈ ಕೋಣೆಯಲ್ಲಿ ಪೀಠೋಪಕರಣಗಳನ್ನು ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ವಾಸ್ತು ದೋಷ ಇರುವುದಿಲ್ಲ.
  • ನಿಮ್ಮ ಮನೆಯಲ್ಲಿ ಊಟಕ್ಕಾಗಿ ಪ್ರತ್ಯೇಕ ಸ್ಥಳವಿದ್ದರೆ ಅದು ಪಶ್ಚಿಮ ಭಾಗದಲ್ಲಿ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಉತ್ತರ, ಪೂರ್ವ ಅಥವಾ ದಕ್ಷಿಣ ದಿಕ್ಕುಗಳನ್ನು ಆಯ್ಕೆ ಮಾಡಬಹುದು. ಆದರೆ ನೈಋತ್ಯ ದಿಕ್ಕಿನಲ್ಲಿ ಊಟದ ಪ್ರದೇಶ ಇರಬಾರದು, ಅದು ಸರಿಯಾದ ವಾಸ್ತು ಅಲ್ಲ.
  • ಉತ್ತಮ ಆರೋಗ್ಯ ಮತ್ತು ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಮಲಗುವ ಕೋಣೆಗಳು ನೈಋತ್ಯ ದಿಕ್ಕಿನಲ್ಲಿರಬೇಕು. ಈಶಾನ್ಯ ದಿಕ್ಕಿನಲ್ಲಿ ಮಲಗುವ ಕೋಣೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಆಗ್ನೇಯ ದಿಕ್ಕಿನಲ್ಲಿರುವ ಮಲಗುವ ಕೋಣೆ ದಂಪತಿಗಳ ನಡುವೆ ಜಗಳ ಮತ್ತು ಜಗಳ ಉಂಟುಮಾಡುತ್ತದೆ. ಹಾಗೆಯೇ ಮಲಗುವ ಕೋಣೆಯಲ್ಲಿ ಹಾಸಿಗೆ ಕೋಣೆಯ ನೈಋತ್ಯ ಮೂಲೆಯಲ್ಲಿದ್ದರೆ, ತಲೆಯನ್ನು ಪಶ್ಚಿಮಕ್ಕೆ ಇಡಬೇಕು. ಮಲಗುವ ಕೋಣೆಯಲ್ಲಿ ಪೂಜಾ ಮಂದಿರವನ್ನು ಸ್ಥಾಪಿಸಬೇಡಿ. ಹಾಸಿಗೆಗೆ ಎದುರಾಗಿ ಕನ್ನಡಿ ಅಥವಾ ದೂರದರ್ಶನ ಇರಬಾರದು. ಏಕೆಂದರೆ ಮಲಗುವ ಕೋಣೆಯಲ್ಲಿ ಕನ್ನಡಿಯಲ್ಲಿ ಜನರ ಪ್ರತಿಬಿಂಬ ಕಂಡುಬಂದರೆ ಅದು ಕುಟುಂಬ ಸದಸ್ಯರ ನಡುವೆ ಜಗಳಕ್ಕೆ ಕಾರಣವಾಗಬಹುದು.
  • ವಾಸ್ತು ಪ್ರಕಾರ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿರಬೇಕು. ಅಡುಗೆ ಮನೆಯು ಉತ್ತರ, ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿರಬಾರದು. ಅಡುಗೆಮನೆಯಲ್ಲಿ ಬೆಂಕಿಯನ್ನು ಉಂಟುಮಾಡುವ ಉಪಕರಣಗಳು ಸಹ ಆಗ್ನೇಯ ದಿಕ್ಕಿನಲ್ಲಿರಬೇಕು.
  • ಸ್ನಾನಗೃಹ ಅಥವಾ ಶೌಚಾಲಯದ ಪ್ರವೇಶದ್ವಾರವು ಉತ್ತರ ಅಥವಾ ಪೂರ್ವ ಗೋಡೆಯ ಕಡೆಗೆ ಇರಬೇಕು. ಶೌಚಾಲಯದ ಆಸನದ ಮೇಲೆ ಕುಳಿತುಕೊಳ್ಳುವಾಗ ವ್ಯಕ್ತಿಯು ಪಶ್ಚಿಮ ಅಥವಾ ಪೂರ್ವಕ್ಕೆ ಮುಖ ಮಾಡುವಂತೆ ನಿಯೋಜನೆಯು ಇರಬೇಕು. ನಿಮ್ಮ ಸ್ನಾನಗೃಹ ಅಥವಾ ಶೌಚಾಲಯವು ಅಡುಗೆ ಅಥವಾ ಪೂಜಾ ಕೋಣೆಯ ಗೋಡೆಗೆ ಅಂಟಿರಬಾರದು.
  • ವಾಸ್ತು ಶಾಸ್ತ್ರ ಮನೆಯ ಎಲ್ಲಾ ಕೋಣೆಗಳು ಚೌಕ ಅಥವಾ ಆಯತಾಕಾರದ ಆಕಾರದಲ್ಲಿ ಇರುವಂತೆ ನೋಡಿಕೊಳ್ಳಿ. ವಾಸ್ತು ಪ್ರಕಾರ ದುಂಡಗಿನ, ಏರಿಳಿತದ ಮೂಲೆಗಳು ಸರಿಯಲ್ಲ. ಅಲ್ಲದೆ, ಮನೆಯ ಕೋಣೆಗಳಲ್ಲಿ ಬೆಳಕು ಮತ್ತು ಗಾಳಿ ಚೆನ್ನಾಗಿ ಬರಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು.

ಇದನ್ನೂ ಓದಿ: ವಾಸ್ತು ಶಾಸ್ತ್ರ, ಫೆಂಗ್ ಶೂಯಿ ಪ್ರಕಾರ ಉತ್ತಮ ನಿದ್ರೆಗೆ ಯಾವ ದಿಕ್ಕಿನಲ್ಲಿ ಮಲಗಬೇಕು? ಈ 2 ದಿಕ್ಕುಗಳಲ್ಲಿ ಮಲಗಬಾರದು

Whats_app_banner