ಈ ರೀತಿ ತಯಾರಿಸಿ ಹೂಕೋಸು ಕಟ್ಲೇಟ್: ಸಂಜೆ ಚಹಾ ಜತೆ ತಿನ್ನಲು ಬೆಸ್ಟ್ ಕಾಂಬಿನೇಷನ್, ಇಲ್ಲಿದೆ ರೆಸಿಪಿ
ಸಂಜೆ ವೇಳೆಗೆ ಅತಿಥಿಗಳು ಮನೆಗೆ ಬರುತ್ತಿದ್ದರೆ ಅಥವಾಮಕ್ಕಳು ಏನಾದರೂ ಸ್ಪೆಷಲ್ ಸ್ನಾಕ್ಸ್ ಬೇಕು ಅಂತಾ ಕೇಳುತ್ತಿದ್ದರೆ, ಒಮ್ಮೆ ಹೂಕೋಸ್ ಕಟ್ಲೇಟ್ ಮಾಡಿ ನೋಡಿ. ಗರಿಗರಿಯಾದ ಕಟ್ಲೇಟ್ ರೆಸಿಪಿ ಮಾಡುವುದು ತುಂಬಾ ಸುಲಭ. ಸಂಜೆ ಚಹಾ ಹೀರುತ್ತಾ ಈ ಹೂಕೋಸಿನ ಕಟ್ಲೇಟ್ ತಿನ್ನುವುದೇ ಒಂದು ಮಜಾ. ರೆಸಿಪಿ ಇಲ್ಲಿದೆ.
ಹೊಸ ವರ್ಷಕ್ಕೆ ಏನಾದರೂ ಪಾರ್ಟಿ ಯೋಜಿಸಿದ್ದೀರಾ? ಸಂಜೆ ವೇಳೆಗೆ ಅತಿಥಿಗಳು ಮನೆಗೆ ಬರುತ್ತಿದ್ದಾರಾ? ಮಕ್ಕಳು ಏನಾದರೂ ಸ್ಪೆಷಲ್ ಸ್ನಾಕ್ಸ್ ಕೇಳುತ್ತಿದ್ದರೂ, ರುಚಿಕರವಾದ ಹೂಕೋಸು ಕಟ್ಲೇಟ್ ಮಾಡಬಹುದು. ಸಂಜೆ ಚಹಾ ಹೀರುತ್ತಾ ಮಾಂಸಾಹಾರಿ ಖಾದ್ಯ ತಿನ್ನಲು ಬಹುತೇಕ ಯಾರೂ ಇಷ್ಟಪಡುವುದಿಲ್ಲ. ಹಲವು ಮಂದಿ ತರಕಾರಿ ರೆಸಿಪಿ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಹೇರಳವಾಗಿರುವ ತರಕಾರಿಗಳಲ್ಲಿ ಒಂದಾದ ಹೂಕೋಸಿನಿಂದ ಟೇಸ್ಟಿ ಕಟ್ಲೇಟ್ ಮಾಡಬಹುದು. ಗರಿಗರಿಯಾದ ಈ ತಿಂಡಿಗಳು ಬಹಳ ರುಚಿಕರವಾಗಿರುತ್ತದೆ. ಖಂಡಿತ ಎಲ್ಲರೂ ಇಷ್ಟಪಡುತ್ತಾರೆ. ಈ ರೆಸಿಪಿ ಮಾಡಿ ನೋಡಿ, ಅತಿಥಿಗಳು ಕೂಡ ಹೊಗಳುತ್ತಾರೆ. ಹೂಕೋಸು ಕಟ್ಲೇಟ್ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹೂಕೋಸು ಕಟ್ಲೇಟ್ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಹೂಕೋಸು- 1, ಈರುಳ್ಳಿ- 1, ಹಸಿರು ಮೆಣನಸಿನಕಾಯಿ- 2, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು- 2 ಟೀ ಚಮಚ, ಒಣ ಮೆಣಸಿನಕಾಯಿ- 1, ತುರಿದ ಶುಂಠಿ- ½ ಟೀಚಮಚ, ಅಮ್ಚೂರ್ (ಮಾವಿನ) ಪುಡಿ- ಸ್ವಲ್ಪ, ಕಾಶ್ಮೀರಿ ಮೆಣಸಿನ ಪುಡಿ- ½ ಟೀ ಚಮಚ, ಜೀರಿಗೆ- ½ ಟೀ ಚಮಚ, ಕಡಲೆಹಿಟ್ಟು- 2 ಟೀ ಚಮಚ, ಅಕ್ಕಿ ಹಿಟ್ಟು- 2 ಟೀ ಚಮಚ, ಓಂಕಾಳು- 1/2 ಟೀ ಚಮಚ.
ಮಾಡುವ ವಿಧಾನ: ಮೊದಲು ಹೂಕೂಸುಗಳನ್ನು ಕತ್ತರಿಸಿ ಬಿಸಿ ನೀರಿಗೆ ಅರಿಶಿನ, ಉಪ್ಪು ಸೇರಿಸಿ ಮಿಶ್ರಣ ಮಾಡಿ ಚೆನ್ನಾಗಿ ತೊಳೆಯಿರಿ.
- ನಂತರ ಸ್ಟೌವ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಒಂದು ಚಮಚ ಉಪ್ಪು ಸೇರಿಸಿ.
- ನೀರು ಕುದಿಯಲು ಪ್ರಾರಂಭಿಸಿದಾಗ, ಕತ್ತರಿಸಿದ ಹೂಕೋಸನ್ನು ಸೇರಿಸಿ, ಬೇಯಿಸಿ.
- ಹೂಕೋಸನ್ನು 3/4 ಭಾಗದಷ್ಟು ಬೇಯಿಸಿದ ನಂತರ, ಸೋಸಿಕೊಂಡು ಪಕ್ಕಕ್ಕೆ ಇರಿಸಿ.
- ಈಗ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಸುರಿಯಿರಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಹುರಿಯಿರಿ.
- ಅದರ ನಂತರ ಜೀರಿಗೆ ಮತ್ತು ಓಂಕಾಳನ್ನು ಹಾಕಿ ಹುರಿಯಿರಿ.
- ಬಳಿಕ ಒಣ ಮೆಣಸಿನಕಾಯಿ, ತುರಿದ ಶುಂಠಿ, ಅರಿಶಿನ, ಅಮ್ಚೂರ್ ಪುಡಿ, ಕಾಶ್ಮೀರಿ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸಮಯದವರೆಗೆ ಎಣ್ಣೆಯಲ್ಲಿ ಫ್ರೈ ಮಾಡಿ.
- ಈಗ ಬೇಯಿಸಿ ತಣ್ಣಗಾಗಲು ಇಟ್ಟಿರುವ ಹೂಕೋಸನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಹೂಕೋಸನ್ನು ಎಣ್ಣೆಯಲ್ಲಿ ಸ್ವಲ್ಪ ಸಮಯ ಹುರಿದ ನಂತರ ಸ್ಟೌವ್ ಆಫ್ ಮಾಡಿ ಪಕ್ಕಕ್ಕೆ ಇಡಿ.
- ಈ ಮಿಶ್ರಣ ತಣ್ಣಗಾದ ನಂತರ ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಕಡಲೆಬೇಳೆ ಹಿಟ್ಟು ಮತ್ತು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ.
- ನಂತರ ಕಟ್ಲೇಟ್ ಅಗಲಕ್ಕೆ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಳ್ಳಿ.
- ಒಂದು ಸ್ಟೌವ್ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಈ ಮಿಶ್ರಣವನ್ನು ಒಂದೊಂದಾಗಿ ಹಾಕಿ ಕರಿಯಿರಿ.
- ಎಲ್ಲವನ್ನೂ ಚೆನ್ನಾಗಿ ಕರಿದ ನಂತರ ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿದರೆ ರುಚಿಕರವಾದ ಹೂಕೋಸು ಕಟ್ಲೇಟ್ ಸವಿಯಲು ಸಿದ್ಧ.
ಈ ಹೂಕೋಸು ಕಟ್ಲೇಟ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದನ್ನು ಹಸಿರು ಚಟ್ನಿ (ಬೆಳ್ಳುಳ್ಳಿ ದಂಟಿನ ಚಟ್ನಿ) ಅಥವಾ ಸಾಸ್‍ನೊಂದಿಗೂ ತಿನ್ನಬಹುದು. ಮಕ್ಕಳಂತೂ ಖಂಡಿತ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ. ಸಂಜೆ ಚಹಾ ಜತೆ ಬೆಸ್ಟ್ ಕಾಂಬಿನೇಷನ್ ಈ ರೆಸಿಪಿ. ಒಮ್ಮೆ ಮಾಡಿ ನೋಡಿ, ಇಷ್ಟವಾಗಬಹುದು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ