ಉದ್ದಿನ ವಡೆ ಅಲ್ಲ ಇದು ರವೆ ವಡೆ; ಗಂಟೆಗಟ್ಟಲೆ ಉದ್ದು ನೆನೆಸುವ ಅಗತ್ಯವಿಲ್ಲ, ರವೆಯಲ್ಲಿ ಅರ್ಧಗಂಟೆಯೊಳಗೆ ಮಾಡಿ ಸವಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉದ್ದಿನ ವಡೆ ಅಲ್ಲ ಇದು ರವೆ ವಡೆ; ಗಂಟೆಗಟ್ಟಲೆ ಉದ್ದು ನೆನೆಸುವ ಅಗತ್ಯವಿಲ್ಲ, ರವೆಯಲ್ಲಿ ಅರ್ಧಗಂಟೆಯೊಳಗೆ ಮಾಡಿ ಸವಿಯಿರಿ

ಉದ್ದಿನ ವಡೆ ಅಲ್ಲ ಇದು ರವೆ ವಡೆ; ಗಂಟೆಗಟ್ಟಲೆ ಉದ್ದು ನೆನೆಸುವ ಅಗತ್ಯವಿಲ್ಲ, ರವೆಯಲ್ಲಿ ಅರ್ಧಗಂಟೆಯೊಳಗೆ ಮಾಡಿ ಸವಿಯಿರಿ

Rava Vada Recipe: ತೂತು ವಡೆಯನ್ನು ಇಷ್ಟಪಟ್ಟು ಸವಿಯುವ ಒಂದು ವರ್ಗವೇ ಇದೆ. ಆದರೆ ಇದನ್ನು ಮಾಡುವುದೇ ಒಂದು ರಗಳೆ. ತಕ್ಷಣಕ್ಕೆ ಮಾಡಿ ಸವಿಯುವುದು ಕಷ್ಟ. ಉದ್ದು ನೆನೆಸಿ ಮಾಡಲು ಸಮಯ ಬೇಕು. ನಿಮಗೆ ತಕ್ಷಣಕ್ಕೆ ವಡೆ ಬೇಕು ಅಂದ್ರೆ ರವಾದಿಂದ ಗರಿಗರಿ ವಡೆ ಮಾಡಿ ಸವಿಯಬಹುದು.

Rava Vada: ಉದ್ದಿನ ವಡೆ ಅಲ್ಲ ಇದು ರವೆ ವಡೆ; ಅರ್ಧ ಗಂಟೆಯೊಳಗೆ ಮಾಡಿ ಸವಿಯಿರಿ
Rava Vada: ಉದ್ದಿನ ವಡೆ ಅಲ್ಲ ಇದು ರವೆ ವಡೆ; ಅರ್ಧ ಗಂಟೆಯೊಳಗೆ ಮಾಡಿ ಸವಿಯಿರಿ

ಉದ್ದಿನ ವಡೆ ಹಲವರ ಫೇವರೆಟ್‌ ತಿಂಡಿ. ಬ್ರೇಕ್‌ಫಾಸ್ಟ್‌ಗೆ ಅಥವಾ ಸಂಜೆಯ ಉಪಾಹಾರಕ್ಕೆ ಇಡ್ಲಿ ಜೊತೆಗೆ ಕಾಂಬಿನೇಷನ್‌ ಆಗಿ, ಅಥವಾ ಪ್ಲೇನ್ ವಡೆಯನ್ನು ಗರಿಗರಿಯಾಗಿ ಸವಿಯುವುದೇ ರುಚಿ. ಹಾಗಂತಾ ವಡೆ ಮಾಡಲು ಹಲವರು ಹಿಂದೆ ಮುಂದೆ ನೋಡುತ್ತಾರೆ. ಯಾಕಂದ್ರೆ ಇದು ತಕ್ಷಣಕ್ಕೆ ಮಾಡಿ ಸವಿಯಲು ಆಗಲ್ಲ. ಗರಿ ಗರಿ ವಡೆ ಮಾಡಬೇಕಂದ್ರೆ, ಉದ್ದಿನ ಬೇಳೆಯನ್ನು ಕನಿಷ್ಠ ಐದು ಗಂಟೆಗಳ ಕಾಲ ನೆನೆಸಿಡಬೇಕು. ಆ ನಂತರ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ವಡೆ ಮಾಡಬಹುದು. ಅಷ್ಟರಲ್ಲಿ ವಡೆ ತಿನ್ನುವ ಆಸಕ್ತಿಯೇ ಕುಂದಬಹುದು. ಹಾಗಿದ್ರೆ ತಕ್ಷಣಕ್ಕೆ ಜಟ್‌ಪಟ್‌ ಅಂತ ವಡೆ ಮಾಡೋಕೆ ಸಾಧ್ಯವೇ ಎಂದು ನೀವು ಕೇಳಬಹುದು. ಇದಕ್ಕೆ ನಮ್ಮ ಉತ್ತರ, ಖಂಡಿತಾ ಸಾಧ್ಯ ಅನ್ನೋದು.

ಮನೆಯಲ್ಲಿ ಉಪ್ಮಾ ಅಥವಾ ಉಪ್ಪಿಟ್ಟು ಮಾಡುವ ರವೆ ಇದ್ದರೆ ಸಾಕು, ತಕ್ಷಣಕ್ಕೆ ನೀವು ವಡೆ ಮಾಡಬಹುದು. ಉದ್ದಿನ ವಡೆಯಂತೆಯೇ ಮೇಲಿಂದ ಕ್ರಿಸ್ಪಿ ಹಾಗೂ ಒಳಗಿಂದ ತುಸು ಮೃದುವಾದ ಗರಿಗರಿ ವಡೆ ರೆಡಿಯಾಗುತ್ತದೆ. ಇದರ ಪಾಕವಿಧಾನ ತುಂಬಾ ಸುಲಭ. ನಾವು ಹೇಳೋ ಈ ರೆಸಿಪಿಯನ್ನು ನೀವೊಮ್ಮೆ ಟ್ರೈ ಮಾಡಿ ನೋಡಿ. ರುಚಿಯಲ್ಲಿಯೂ ನಿಮಗೆ ಮೋಸ ಆಗಲು ಸಾಧ್ಯವಿಲ್ಲ.

ರವಾ ವಡೆ ರೆಸಿಪಿಗೆ ಬೇಕಾಗುವ ಸಾಮಾಗ್ರಿಗಳು

  • ಉಪ್ಮಾ ರವಾ - ಎರಡು ಕಪ್
  • ಮೊಸರು - ಒಂದು ಕಪ್
  • ಈರುಳ್ಳಿ - ಒಂದು
  • ಜೀರಿಗೆ - ಒಂದು ಚಮಚ
  • ಶುಂಠಿ - ಸಣ್ಣ ತುಂಡು
  • ಮೆಣಸಿನಕಾಯಿ - ಎರಡು
  • ಕೊತ್ತಂಬರಿ ಪುಡಿ - ಎರಡು ಚಮಚ
  • ಕರಿಬೇವು - ಸ್ವಲ್ಪ
  • ಪುದೀನ - (ಬೇಕಿದ್ದರೆ ಮಾತ್ರ)
  • ಉಪ್ಪು - ರುಚಿಗೆ
  • ನೀರು - ಸಾಕಷ್ಟು
  • ಎಣ್ಣೆ - ಡೀಪ್‌ಫ್ರೈ ಮಾಡಲು ಬೇಕಾಗುವಷ್ಟು

ಇದನ್ನೂ ಓದಿ | ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ ರೆಸಿಪಿ ಮೊಳಕೆ ಬರಿಸಿದ ರಾಗಿ ಉತ್ತಪ್ಪ; ಇದು ಹೆಲ್ತ್‌ಗಷ್ಟೇ ಅಲ್ಲ, ಟೇಸ್ಟ್‌ಗೂ ಬೆಸ್ಟ್‌

ರೆಸಿಪಿ ಹೀಗಿದೆ

ಒಂದು ಪಾತ್ರೆಗೆ ರವಾ ಹಾಕಿ. ಅದಕ್ಕೆ ಒಂದು ಕಪ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಸೇರಿಸಿ.

ಈಗ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಮತ್ತು ಶುಂಠಿ ಹಾಕಿ ಚೆನ್ನಾಗಿ ಕಲಸಿ.

ವಡೆ ಹಿಟ್ಟಿನ ಹದಕ್ಕೆ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಒಂದು ಚಿಟಿಕೆ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ.

ಈಗ ಒಲೆ ಮೇಲೆ ಡೀಪ್‌ಫ್ರೈ ಮಾಡಲು ಸೂಕ್ತವಾದ ಬಣಾಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಹಿಟ್ಟನ್ನು ವಡೆಯ ಆಕಾರಕ್ಕೆ ತೆಗೆದುಕೊಂಡು ಬಾಣಲೆಗೆ ಹಾಕಿ. ತೂತುವಡೆ ಬೇಕಿದ್ದರೆ ತೂತು ಮಾಡಿಕೊಳ್ಳಿ. ಇಲ್ಲವಾದರೆ ಸುಲಭವಾಗಿ ಮಾಡಬೇಕಿದ್ದರೆ ಹಾಗೆಯೇ ತುಸು ಚಪ್ಪಟೆ ಮಾಡಿ ಎಣ್ಣೆಗೆ ಬಿಡಿ.

ಎರಡೂ ಬದಿಗಳಲ್ಲಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ. ವಡೆಯ ಬಣ್ಣ ಬರುವವರೆಗೆ ಫ್ರೈ ಮಾಡಿದ ನಂತರ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ.

ಬಿಸಿಬಿಸಿ ವಡೆಯು ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೆ ಭಾರಿ ರುಚಿಕರವಾಗಿರುತ್ತವೆ.

Whats_app_banner