ನಿಮ್ಮ ಡಯೆಟ್‌ನಲ್ಲಿ ಈ ಹಣ್ಣು, ತರಕಾರಿಗಳನ್ನು ಸೇರಿಸಿದ್ರೆ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣ್ತೀರಿ, ಇದರಲ್ಲಿದೆ ಯೌವನದ ಗುಟ್ಟು
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಡಯೆಟ್‌ನಲ್ಲಿ ಈ ಹಣ್ಣು, ತರಕಾರಿಗಳನ್ನು ಸೇರಿಸಿದ್ರೆ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣ್ತೀರಿ, ಇದರಲ್ಲಿದೆ ಯೌವನದ ಗುಟ್ಟು

ನಿಮ್ಮ ಡಯೆಟ್‌ನಲ್ಲಿ ಈ ಹಣ್ಣು, ತರಕಾರಿಗಳನ್ನು ಸೇರಿಸಿದ್ರೆ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣ್ತೀರಿ, ಇದರಲ್ಲಿದೆ ಯೌವನದ ಗುಟ್ಟು

ನಿಮ್ಮ ಡಯೆಟ್‌ ಕ್ರಮದಲ್ಲಿ ತರಕಾರಿಗಳನ್ನು ಹೆಚ್ಚು ಬಳಸಿದರೆ ನೀವು ಮತ್ತಷ್ಟು ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸುತ್ತೀರಿ ಎಂದು ತಜ್ಞರು ಹೇಳುತ್ತಾರೆ. ಅದು ನಿಜವೂ ಹೌದು, ಕೆಲವು ಸಿಂಪಲ್ ಡಯೆಟ್ ಪಾಲಿಸಿದರೆ ಸಾಕು, ಆಕರ್ಷಕ ವ್ಯಕ್ತಿತ್ವ ನಿಮ್ಮದಾಗುತ್ತದೆ.

ಡಯೆಟ್‌ನಲ್ಲಿ ತರಕಾರಿಗಳನ್ನು ಬಳಸಿದರೆ ನೀವು ಮತ್ತಷ್ಟು ಯೌವನಭರಿತರಾಗಿ ಕಾಣಿಸುತ್ತೀರಿ
ಡಯೆಟ್‌ನಲ್ಲಿ ತರಕಾರಿಗಳನ್ನು ಬಳಸಿದರೆ ನೀವು ಮತ್ತಷ್ಟು ಯೌವನಭರಿತರಾಗಿ ಕಾಣಿಸುತ್ತೀರಿ (pixabay)

ಸದಾ ಯೌವನದಲ್ಲಿರುವಂತೆ ಕಾಣುವುದು ಮತ್ತು ಎಲ್ಲರಿಂದಲೂ ಪ್ರಶಂಸೆ ಗಳಿಸುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ನೀವು ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದರೆ ಸಾಕು, ಅವರ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತದೆ. ಇನ್ನು ಕೆಲವರಂತೂ ವಯಸ್ಸಾಗುತ್ತಿದೆ ಎನ್ನುವುದನ್ನು ಮರೆಮಾಚಲು ದುಬಾರಿ ಸೌಂದರ್ಯ ವರ್ಧಕ ಉತ್ಪನ್ನಗಳು ಮತ್ತು ಕಾಸ್ಮೆಟಿಕ್ ಚಿಕಿತ್ಸೆಯ ಮೊರೆಹೋಗುತ್ತಾರೆ. ಆದರೆ ಅಷ್ಟೆಲ್ಲಾ ಮಾಡುವ ಬದಲು, ನೀವೇಕೆ ಸರಳ ತರಕಾರಿ ಡಯೆಟ್ ಸೂತ್ರ ಪಾಲಿಸಬಾರದು? ಆರ್ಥೋಸರ್ಜನ್ ಡಾ. ಮನು ಬೋರಾ ಅವರು ಹೇಳುವಂತೆ, ನಾವು ಸೇವಿಸುವ ಆಹಾರ ಮತ್ತು ಜೀವನಶೈಲಿಯ ಪ್ರಭಾವ ನಮ್ಮ ವಯಸ್ಸಾಗುವಿಕೆ ಮತ್ತು ಬಾಹ್ಯ ಸೌಂದರ್ಯದ ಮೇಲೆ ಉಂಟಾಗುತ್ತದೆ. ಆದರೆ ವಯಸ್ಸಾಗಿದೆ ಎನ್ನುವುದನ್ನು ಮರೆಮಾಚಲು ಮತ್ತು 10 ವರ್ಷ ಚಿಕ್ಕವರಾಗಿ ಕಾಣಿಸಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ವಯಸ್ಸಾದಂತೆ ಕಾಣಿಸುವುದನ್ನು ತಡೆಯಲು ಏನು ತಿನ್ನಬೇಕು?

ಡಾ. ಮನು ಬೋರಾ ಅವರ ಪ್ರಕಾರ, ವಯಸ್ಸಾದಂತೆ ಕಾಣಿಸುವುದನ್ನು ತಡೆಯಲು ಮಾಂಸಾಹಾರ ಸೇವನೆಗಿಂತ ತರಕಾರಿಗಳನ್ನು ಸೇವಿಸುವುದು ಉತ್ತಮ. ಸಸ್ಯಾಹಾರ ಸೇವನೆಯಿಂದ ಯೌವನವನ್ನು ಹಾಗೆಯೇ ಉಳಿಸಿಕೊಳ್ಳಬಹುದು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆದು, ಮತ್ತಷ್ಟು ಕಾಂತಿಯುತವಾಗಿರುತ್ತದೆ ಎನ್ನುತ್ತಾರೆ.

ಬಣ್ಣಬಣ್ಣದ ತರಕಾರಿಗಳು: ಮಾರುಕಟ್ಟೆಯಲ್ಲಿ ದೊರಕುವ ಕೆಲವೊಂದು ತರಕಾರಿಗಳಲ್ಲಿ ಆಂಟಿಆ್ಯಕ್ಸಿಡೆಂಟ್ಸ್‌ ಮತ್ತು ಪಾಲಿಫಿನಾಲ್‌ಗಳು ಇರುತ್ತವೆ, ಅವು ವಯಸ್ಸಾಗುವುದನ್ನು ತಡೆದು, ಚರ್ಮ ಮತ್ತು ಬಾಹ್ಯ ಸೌಂದರ್ಯವನ್ನು ಕಾಪಾಡುತ್ತವೆ.

ಬೆರ್ರಿ ಹಣ್ಣುಗಳು: ಬೆರ್ರಿ ಹಣ್ಣುಗಳಲ್ಲಿ ಕೂಡ ಆಂಟಿಆ್ಯಕ್ಸಿಡೆಂಟ್ಸ್‌ ಇದ್ದು, ಅವು ಒತ್ತಡದಿಂದ ರಕ್ಷಿಸಿ, ಚರ್ಮವನ್ನು ರಕ್ಷಿಸುತ್ತವೆ. ಅದರಿಂದ ಚರ್ಮದಲ್ಲಿ ವಯಸ್ಸಾಗಿರುವಂತೆ ಕಾಣಿಸುವುದಿಲ್ಲ.

ಬೇಳೆಗಳು: ಹೇರಳ ಪ್ರೊಟೀನ್ ಹೊಂದಿರುವ ಇವುಗಳ ಬಳಕೆಯಿಂದ ಚರ್ಮಕ್ಕೆ ಅಗತ್ಯ ಪ್ರೊಟೀನ್ ಒದಗಿಸುತ್ತವೆ.

ಆರೋಗ್ಯಕರ ಕೊಬ್ಬು: ಅವಕಾಡೊ, ವರ್ಜಿನ್ ಆಲಿವ್ ಎಣ್ಣೆಯಿಂದ ಚರ್ಮದ ತೇವಾಂಶ ಹೆಚ್ಚಳವಾಗಿ, ಆರೋಗ್ಯಕರ ಕೊಬ್ಬು ಸೇರ್ಪಡೆಯಾಗುತ್ತದೆ.

ಬೀಜಗಳು: ಅಗಸೆಬೀಜ, ಬಾದಾಮಿ ಮತ್ತು ಪಿಸ್ತಾದಂತಹ ಒಣಹಣ್ಣುಗಳು ಸಹಿತ ವಿವಿಧ ಬೀಜಗಳನ್ನು ಆಹಾರದಲ್ಲಿ ಸೇವಿಸಿದರೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ.

ಇದನ್ನೂ ಓದಿ: ಒತ್ತಡದ ಜೀವನಕ್ಕೂ ಹೃದಯಾಘಾತಕ್ಕೂ ಇದೆ ಸಂಬಂಧ; ವೈದ್ಯರು ಹೇಳುವ ಕಾರಣ ಹೀಗಿದೆ

ವಯಸ್ಸಾಗುವುದನ್ನು ತಡೆಯಲು ಇವುಗಳನ್ನು ತಿನ್ನದಿರಿ

ಮಾಂಸಾಹಾರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ ನಿಜ, ಆದರೆ ಅದರಿಂದ ಚರ್ಮದಲ್ಲಿ ನಿಮಗೆ ಬೇಕಾಗಿರುವ ಯೌವನದ ಅಂಶಗಳು ದೊರೆಯುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹಾರ ಸೇವಿಸಬೇಕು. ಸಸ್ಯಾಹಾರದಿಂದ ಬರುವ ಪ್ರೊಟೀನ್‌ಗಳು, ಚರ್ಮಕ್ಕೆ ಮತ್ತು ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುವ ಜತೆಗೆ, ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಕಠಿಣ ಕೆಲಸ ಮತ್ತು ಕ್ರೀಡೆ, ಜಿಮ್ ಹೋಗುವವರಿಗೆ ಮಾಂಸಾಹಾರ ಸೇವನೆ ಅಗತ್ಯ ಮತ್ತು ಅದರಿಂದ ಅವರಿಗೆ ಸಾಕಷ್ಟು ಹೆಚ್ಚಿನ ಪ್ರಮಾಣದ ಪ್ರೊಟೀನ್ ದೊರೆಯುತ್ತದೆ. ಆದರೆ ಅದರಿಂದ ನಿಮ್ಮ ಚರ್ಮಕ್ಕೆ ಪ್ರಯೋಜನವಿಲ್ಲ, ಅಂದರೆ, ವಯಸ್ಸಾಗಿರುವಂತೆ ಕಾಣಿಸುವುದನ್ನು ತಡೆಯಲು ಇದು ಸಹಕಾರಿಯಾಗುತ್ತದೆ.

ಆದರೆ, ಮಾರುಕಟ್ಟೆಯಲ್ಲಿ ದೊರೆಯುವ ಪ್ಯಾಕೇಜ್ ಮತ್ತು ಸಂಸ್ಕರಿಸಿದ ಆಹಾರವನ್ನು, ಹಿಟ್ಟು ಸೇವನೆಯಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಹೊರಗಡೆ ಹೋಟೆಲ್‌ಗಳ ಆಹಾರ ಸೇವನೆಯೂ ಚರ್ಮಕ್ಕೆ ಒಳ್ಳೆಯದಲ್ಲ. ಜತೆಗೆ ಕರಿದ ಮತ್ತು ಹುರಿದ ಆಹಾರಗಳನ್ನು ತಿಂದರೆ, ಅದರಿಂದಲೂ ಸಮಸ್ಯೆಯಾಗುತ್ತದೆ. ಅವುಗಳಿಂದ ಚರ್ಮದ ಸೌಂದರ್ಯಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುವುದಿಲ್ಲ.

ಇದನ್ನೂ ಓದಿ: ನಿಮ್ಮ ಮಕ್ಕಳ ಭವಿಷ್ಯ ಸುಂದರವಾಗಿ ರೂಪಿಸಲು ಪಾಲಕರಿಗೆ ಇಲ್ಲಿದೆ ಕೆಲವು ಬೆಸ್ಟ್ ಟಿಪ್ಸ್

ಸಾಧ್ಯವಾದಷ್ಟು ಹಣ್ಣು ಹಂಪಲು ಮತ್ತು ತಾಜಾ ತರಕಾರಿಗಳ ಸೇವನೆ ನಿಮಗೆ ವಯಸ್ಸಾಗಿರುವಂತೆ ಕಾಣುವುದನ್ನು ತಡೆಯುತ್ತದೆ. ಅಲ್ಲದೆ, ಮನೆಯಲ್ಲೇ ತಯಾರಿಸಿದ ಆಹಾರವೂ ಆರೋಗ್ಯಕ್ಕೆ ಪೂರಕ. ಹೀಗೆ ಮಾಡುವುದರಿಂದ ಚರ್ಮದ ಕೋಮಲತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ವಯಸ್ಸಾಗಿರುವಂತೆ ಕಾಣಿಸುವುದನ್ನು ತಡೆಯಬಹುದು.

Whats_app_banner