Vi 365 Days Plans: ವೋಡಾಫೋನ್ ಐಡಿಯಾದ ಅತ್ಯುತ್ತಮ ವಾರ್ಷಿಕ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಯಾವುದು? ವಿಐನಲ್ಲಿದೆ 7 ಯೋಜನೆಗಳು
Vi 365 Days Plans: 2025ರ ಹೊಸ ವರ್ಷದಲ್ಲಿ ಒಂದು ವರ್ಷದ ಮೊಬೈಲ್ ರೀಚಾರ್ಜ್ ಮಾಡುವ ಮೂಲಕ ವರ್ಷವಿಡೀ ನಿಶ್ಚಿಂತೆಯಿಂದ ಇರಬೇಕೆಂದು ಬಯಸುವವರಿಗೆ ಇಂದಿನ ಲೇಖನದಲ್ಲಿ ವೋಡಾಫೋನ್- ಐಡಿಯಾದ ವಾರ್ಷಿಕ ಪ್ಲ್ಯಾನ್‌ಗಳ ವಿವರ ನೀಡಲಾಗಿದೆ.
Vi 365 Days Plans: ಈಗ ಬಹುತೇಕ ಮೊಬೈಲ್ ಫೋನ್ ಬಳಕೆದಾರರು ವಾರ್ಷಿಕ ಮೊಬೈಲ್ ರೀಚಾರ್ಜ್ ಆಫರ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಪ್ರತಿ ತಿಂಗಳು ನಿಗದಿತ ಮೊತ್ತ ಹಾಕುವುದಕ್ಕಿಂತ ಅಥವಾ ಎರಡು ಮೂರು ತಿಂಗಳ ಪ್ಯಾಕೇಜ್‌ಗೆ ಹೋಗುವುದಕ್ಕಿಂತ ವಾರ್ಷಿಕ ಪ್ಲ್ಯಾನ್‌ನಲ್ಲಿ ಹೆಚ್ಚು ಲಾಭವಿರುವುದನ್ನು ಕೆಲವರು ಕಂಡುಕೊಳ್ಳುತ್ತಿದ್ದಾರೆ. ಒಂದು ಬಾರಿ ಹಣ ಪಾವತಿಸುವಾಗ ಹೆಚ್ಚು ಅನಿಸಿದರೂ ಉತ್ತಮ ವಾರ್ಷಿಕ ಪ್ಲ್ಯಾನ್‌ಗಳಲ್ಲಿ ಸಾಕಷ್ಟು ಲಾಭವಿದೆ. ವಿವಿಧ ವಾರ್ಷಿಕ ಪ್ಲ್ಯಾನ್‌ಗಳ ಕುರಿತು ರಿಸರ್ಚ್ ಮಾಡಿಕೊಂಡು ಮುಂದುವರೆದರೆ ಖಂಡಿತವಾಗಿಯೂ ಮೊಬೈಲ್ ರೀಚಾರ್ಜ್ ವೆಚ್ಚವನ್ನು ತಗ್ಗಿಸಿಕೊಳ್ಳಬಹುದು. 2025ರ ಹೊಸ ವರ್ಷದಲ್ಲಿ ಒಂದು ವರ್ಷದ ಮೊಬೈಲ್ ರೀಚಾರ್ಜ್ ಮಾಡುವ ಮೂಲಕ ವರ್ಷವಿಡೀ ನಿಶ್ಚಿಂತೆಯಿಂದ ಇರಬೇಕೆಂದು ಬಯಸುವವರಿಗೆ ಇಂದಿನ ಲೇಖನದಲ್ಲಿ ವೋಡಾಫೋನ್- ಐಡಿಯಾದ ವಾರ್ಷಿಕ ಪ್ಲ್ಯಾನ್‌ಗಳ ವಿವರ ನೀಡಲಾಗಿದೆ.
ವಿಐ 365 ದಿನಗಳ ಪ್ಲ್ಯಾನ್‌ಗಳು
ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಸೇರಿದಂತೆ ಇತರೆ ಮೊಬೈಲ್ ನೆಟ್‌ವರ್ಕ್ ಸೇವಾ ಕಂಪನಿಗಳ ವಾರ್ಷಿಕ ಪ್ಲ್ಯಾನ್‌ಗಳಿಗೆ ಹೋಲಿಸಿದರೆ ವಿಐ (ವೋಡಾಫೋನ್ ಐಡಿಯಾ) ಕಂಪನಿಯು 365 ದಿನಗಳ ಹೆಚ್ಚು ಪ್ಯಾಕ್‌ಗಳನ್ನು ಹೊಂದಿರುವುದನ್ನು ಗಮನಿಸಬಹುದು. ಕರ್ನಾಟಕ ಸರ್ಕಲ್‌ನಲ್ಲಿ ಲಭ್ಯವಿರುವ ವೋಡಾಫೋನ್ ಐಡಿಯಾ ವಾರ್ಷಿಕ ಪ್ಲ್ಯಾನ್‌ಗಳ ವಿವರ ಮುಂದೆ ಇದೆ.
ವಿಐ 3599 ರೂಪಾಯಿಗಳ ವಾರ್ಷಿಕ ಪ್ಯಾಕ್
ಅನಿಯಮಿತ ಕರೆಗಳು, ಪ್ರತಿದಿನಕ್ಕೆ 2 ಜಿಬಿ ಡೇಟಾ, ವ್ಯಾಲಿಡಿಟಿ- 365 ದಿನಗಳು ಮಾತ್ರವಲ್ಲದೆ ಬಿಂಗ್ ಆಲ್‌ನೈಟ್, ವೀಕೆಂಡ್ ಡೇಟಾ ರಿಕವರ್, ಡೇಟಾ ಡಿಲೈಟ್ ಎಂಬ ಪ್ರಯೋಜನಗಳನ್ನೂ ವಿಐ ನೀಡುತ್ತದೆ. ಇವುಗಳಲ್ಲಿ ಬಿಂಗ್ ಆಲ್ ನೈಟ್ ಅಂದ್ರೆ ರಾತ್ರಿ ಹನ್ನೆರಡು ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಎಷ್ಟು ಇಂಟರ್‌ನೆಟ್ ಬೇಕಾದರೂ ಬಳಸಬಹುದು. ಇವಿಷ್ಟು ಮಾತ್ರವಲ್ಲದೆ ಸೋಮವಾರದಿಂದ ಶುಕ್ರವಾರದವರೆಗೆ ಬಳಕೆ ಮಾಡದೆ ಉಳಿದಿರುವ ಇಂಟರ್‌ನೆಟ್ ಅನ್ನು ವೀಕೆಂಡ್‌ಗೆ ಕ್ಯಾರಿ ಮಾಡಬಹುದು. ಪ್ರತಿತಿಂಗಳು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ 2 ಜಿಬಿ ಇಂಟರ್‌ನೆಟ್ ಬ್ಯಾಕಪ್ ದೊರಕುತ್ತದೆ.
ವಿಐ 3699 ರೂಪಾಯಿಯ ವಾರ್ಷಿಕ ಪ್ಯಾಕ್
ಈ ಪ್ಯಾಕ್‌ನಲ್ಲಿಯೂ ಮೇಲಿನ ಬಹುತೇಕ ಎಲ್ಲಾ ಕೊಡುಗೆಗಳು ಇವೆ. ಡೇಟಾ ಡಿಲೈಟ್ ಕೊಡುಗೆ ಇದರಲ್ಲಿ ಇಲ್ಲ. ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಉಚಿತವಾಗಿ ದೊರಕುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಬಳಕೆ ಮಾಡದೆ ಉಳಿದಿರುವ ಇಂಟರ್‌ನೆಟ್ ಅನ್ನು ವೀಕೆಂಡ್‌ಗೆ ಕ್ಯಾರಿ ಮಾಡಬಹುದು. ಅನಿಯಮಿತ ಕರೆಗಳು, ಪ್ರತಿದಿನಕ್ಕೆ 2 ಜಿಬಿ ಡೇಟಾ ದೊರಕುತ್ತದೆ.
ವಿಐ 3799 ರೂಪಾಯಿ ವಾರ್ಷಿಕ ಪ್ಲ್ಯಾನ್
ಮೇಲಿನ ಎಲ್ಲಾ ಫೀಚರ್‌ಗಳು, ಆಫರ್‌ಗಳು ದೊರಕುತ್ತವೆ. ಆದರೆ, ಇದರಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಬದಲಿಗೆ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಮೊಬೈಲ್ ಚಂದಾದಾರಿಕೆ ಒಂದು ವರ್ಷಕ್ಕೆ ಉಚಿತವಾಗಿ ದೊರಕುತ್ತದೆ. ಅನಿಯಮಿತ ಕರೆಗಳು, ಪ್ರತಿದಿನಕ್ಕೆ 2 ಜಿಬಿ ಡೇಟಾ ದೊರಕುತ್ತದೆ.
ವಿಐ 3499 ರೂಪಾಯಿ ವಾರ್ಷಿಕ ಪ್ಲ್ಯಾನ್
ಇದರಲ್ಲಿ ಪ್ರತಿದಿನಕ್ಕೆ 1.5 ಜಿಬಿ ಡೇಟಾ ದೊರಕುತ್ತದೆ. ಉಳಿದಂತೆ 3599 ರೂಪಾಯಿಯ ಪ್ಲ್ಯಾನ್‌ನಲ್ಲಿರುವ ಬಹುತೇಕ ಎಲ್ಲಾ ಕೊಡುಗೆಗಳು ಇದರಲ್ಲಿವೆ. ಇದರಲ್ಲಿ ಯಾವುದೇ ಒಟಿಟಿ ಸಬ್‌ಸ್ಕ್ರಿಪ್ಷನ್ ದೊರಕುವುದಿಲ್ಲ.
ವಿಐ 1999 ರೂಪಾಯಿ ವಾರ್ಷಿಕ ಪ್ಲ್ಯಾನ್
ಹೆಚ್ಚು ಇಂಟರ್‌ನೆಟ್ ಬೇಡ ಎನ್ನುವವರಿಗೆ ಸೂಕ್ತವಾದ ಪ್ಲ್ಯಾನ್ ಇದಾಗಿದೆ. ಅನಿಯಮಿತ ಕರೆಗಳು ದೊರಕುತ್ತವೆ. ವರ್ಷಕ್ಕೆ 24 ಜಿಬಿ ಡೇಟಾ ಮತ್ತು 3600 ಎಸ್‌ಎಂಎಸ್‌ಗಳು ದೊರಕುತ್ತವೆ. ಕೇವಲ ಫೋನ್ ಕರೆ ಹೆಚ್ಚು ಬಳಸುವವರಿಗೆ ಇದು ಸೂಕ್ತವಾಗಿದೆ.
ವಿಐ 1189 ರೂಪಾಯಿ ವಾರ್ಷಿಕ ಪ್ಲ್ಯಾನ್
ಗಮನಿಸಿ ಇದು ಡೇಟಾ ಮಾತ್ರ ಇರುವ ಪ್ಯಾಕ್. 50 ಜಿಬಿ ಇಂಟರ್‌ನೆಟ್ ಒಂದು ವರ್ಷಕ್ಕೆ ಬಳಸಬಹುದು. ಆದರೆ, ಇದರಲ್ಲಿ ಸರ್ವೀಸ್ ವ್ಯಾಲಿಡಿಟಿ ಇಲ್ಲ.
ವಿಐ 2997 ರೂಪಾಯಿ ವಾರ್ಷಿಕ ಇಂಟರ್‌ನ್ಯಾಷನಲ್ ರೋಮಿಂಗ್ ಪ್ಯಾಕ್
ಇದು ಕೇವಲ ಇಂಟರ್‌ನ್ಯಾಷನಲ್ ರೋಮಿಂಗ್‌ಗೆ ಇರುವ ವಾರ್ಷಿಕ ಪ್ಯಾಕ್ ಆಗಿದೆ. ಬೇರೆ ಯಾವುದೇ ಪ್ರಯೋಜನಗಳನ್ನು ಹೊಂದಿಲ್ಲ. ವಿದೇಶದಲ್ಲಿರುವವ ಜತೆ ಮಾತನಾಡಲು ಸೂಕ್ತ.