Brain Teaser: ರೈತನಲ್ಲಿ ಉಳಿದ ಕುರಿಗಳ ಸಂಖ್ಯೆ ಕಂಡುಹಿಡಿದರೆ ನೀವೇ ಜಾಣರು; ಪ್ರಶ್ನೆಗೆ ಸರಿಯಾದ ಉತ್ತರ ಹೊಳೀತಾ?
Brain Teaser: ಕುರಿಗಳ ಸಂಖ್ಯೆ ಬಗೆಗಿನ ಈ ಮೆದುಳಿನ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಯೋಚನೆಗೆ ತಳ್ಳಿದೆ. ಸರಿಯಾದ ಉತ್ತರ ಕಂಡುಹಿಡಿಯುವಲ್ಲಿ ನೆಟ್ಟಿಗರು ಸುಸ್ತಾಗಿದ್ದಾರೆ. ನಿಮ್ಮ ಯೋಚನಾ ಸಾಮರ್ಥ್ಯ ಉತ್ತಮವಾಗಿದ್ದರೆ, ಈ ಸರಳ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಿ.
ಮೆದುಳಿಗೆ ಕೆಲಸ ಕೊಡುವ ಬ್ರೇನ್ ಟೀಸರ್ (Brain Teaser) ಯಾರಿಗೆ ಇಷ್ವಾಗುವುದಿಲ್ಲ ಹೇಳಿ? ಗಣಿತದಲ್ಲಿ ಆಸಕ್ತಿ ಇರುವವರು, ಮೋಜಿನ ಸವಾಲುಗಳನ್ನು ಬಯಸುವವರು ಇಂಥಾ ಪ್ರಶ್ನೆಗಳನ್ನು ಇಷ್ಟಪಡುತ್ತಾರೆ. ಇವು ಮೆದುಳಿಗೆ ಒಂದಷ್ಟು ಕೆಲಸ ಕೊಟ್ಟು ಆಲೋಚಿಸವಂತೆ ಮಾಡುತ್ತದೆ. ಇಂಥಾ ಪ್ರಶ್ನೆಗಳು ನಿಮ್ಮ ಚಿಂತನೆಯನ್ನು ಉತ್ತೇಜಿಸುವುದಲ್ಲದೆ ನಮ್ಮನ್ನು ಗಂಟೆಗಳ ಕಾಲ, ಕೆಲವೊಮ್ಮೆ ಕೆಲವು ದಿನಗಳವರೆಗೆ ನಿರಂತವಾಗಿ ಯೋಚಿಸುವಂತೆ ಮಾಡುತ್ತದೆ. ಗಣಿತದ ಒಗಟುಗಳನ್ನು ಪರಿಹರಿಸಲು ಇಷ್ಟಪಡುವವರಿಗೆ ಇಲ್ಲೊಂದು ಪ್ರಶ್ನೆ ಇದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಪ್ರಶ್ನೆ ವೈರಲ್ ಆಗಿದ್ದು, ನೆಟ್ಟಿಗರನ್ನು ಸೆಳೆಯುತ್ತಿದೆ. ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹುಡುಕಲು ಸಾಧ್ಯವೇ ನೋಡಿ.
ಎಕ್ಸ್‌ನಲ್ಲಿ ಬ್ರೈನಿ ಬಿಟ್ಸ್ ಹಬ್ ಖಾತೆಯಿಂದ ಈ ಪ್ರಶ್ನೆ ಹಂಚಿಕೊಳ್ಳಲಾಗಿದೆ. ಈ ಬ್ರೇನ್ ಟೀಸರ್ ಬಳಕೆದಾರರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ನಿಮ್ಮ ಮೆದುಳಿಗೂ ಒಂದಷ್ಟು ಕೆಲಸ ಕೊಡಬಲ್ಲ ಬ್ರೇನ್ ಟೀಸರ್ ಮುಂದೆ ಕೊಡಲಾಗಿದೆ. ಸರಳ ಮತ್ತು ಸವಾಲಿನ ಪ್ರಶ್ನೆ ಹೀಗಿದೆ.
ಒಬ್ಬ ರೈತನ ಬಳಿ 15 ಕುರಿಗಳಿದ್ದವು. ಇದರಲ್ಲಿ 8 ಕುರಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸತ್ತವು. ಈಗ ಎಷ್ಟು ಉಳಿದಿವೆ?
ಇದು ನಿಮ್ಮ ಮುಂದಿರುವ ಪ್ರಶ್ನೆ. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆಯನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಪ್ರಶ್ನೆಗೆ ಉತ್ತರ ಹೇಳಲು ಹಲವರು ಪ್ರಯತ್ನ ಮಾಡಿದ್ದಾರೆ. ಆದರೆ, ಸರಿ ಉತ್ತರವನ್ನು ಅಂದಾಜಿಸುವಲ್ಲಿ ಹಲವರು ಗೊಂದಕ್ಕೊಳಗಾಗಿದ್ದಾರೆ.
ಹೀಗಿದೆ ಬ್ರೈನ್ ಟೀಸರ್
ನೆಟ್ಟಿಗರ ಬಗೆಬಗೆಯ ಪ್ರತಿಕ್ರಿಯೆಗಳು
ಈ ಪ್ರಶ್ನೆಗೆ ನೆಟ್ಟಿಗರಿಂದ ಬಗೆಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಜನರು ಪ್ರಶ್ನೆಗೆ ಪರಿಹಾರ ಹುಡುಕಲು ಭಿನ್ನ ವಿಧಾನಗಳನ್ನು ಅನುಸರಿಸಿದ್ದಾರೆ. ಒಬ್ಬ ಬಳಕೆದಾರ “ಇದು ನನ್ನ ಚಹಾವಲ್ಲ” ಎಂದು ಕಾಮೆಂಟ್ ಮಾಡುವ ಮೂಲಕ ಪ್ರಾಮಾಣಿಕವಾಗಿ ಪ್ರಶ್ನೆ ಕ್ಲಿಷ್ಟಕರವಾಗಿದೆ ಎಂದು ಒಪ್ಪಿಕೊಂಡರು. ಇನ್ನೊಬ್ಬರು ಊಹೆ ಮಾಡಿ,"ಉತ್ತರ 7 ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ. ಮೂರನೆಯ ವ್ಯಕ್ತಿ “ನನ್ನ ಊಹೆಯು ಉತ್ತರ 8 ಎಂದು ಹೇಳುತ್ತದೆ” ಎಂದು ಹೇಳಿದರು. ಈ ನಿರ್ದಿಷ್ಟ ಉತ್ತರವು ಹಲವಾರು ಬಳಕೆದಾರರ ಉತ್ತರವೂ ಆಗಿದೆ. ಮತ್ತೊಂದು ಕಾಮೆಂಟ್ ಹೀಗಿದೆ, “ನನಗೆ ತುಂಬಾ ಗೊಂದಲವಾಗಿದೆ. ಆದರೆ 8 ಸರಿಯಾದ ಉತ್ತರ ಎಂದು ನಾನು ಭಾವಿಸುತ್ತೇನೆ,” ಎಂದಿದ್ದಾರೆ.
ಎಲ್ಲರಿಗೂ ಒಗಟಿಗೆ ಉತ್ತರ ಹೇಳಲು ಸಾಧ್ಯವಾಗಿಲ್ಲ. “ನನಗೆ ತುಂಬಾ ಕಷ್ಟವಾಗುತ್ತಿದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ರೈತನನ್ನು ಕೇಳುವುದು ಉತ್ತಮ” ಎಂದು ಹಾಸ್ಯಮಯ ಸಲಹೆ ನೀಡಿದರು. ಈ ಮೆದುಳಿನ ಟೀಸರ್ ನೆಟ್ಟಿಗರಲ್ಲಿ ಕುತೂಹಲ ಮೂಡಿಸುವುದು ಮಾತ್ರವಲ್ಲದೆ ಸ್ನೇಹಪರ ತಮಾಷೆಯನ್ನು ಹುಟ್ಟುಹಾಕಿದೆ. ಇದೀಗ ನಿಮ್ಮ ಸರದಿ. ನಿಮ್ಮಿಂದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಿದೆಯೇ ನೋಡಿ.
ಇನ್ನಷ್ಟು ಬ್ರೈನ್ ಟೀಸರ್ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕ್ಯಾಲ್ಕುಲೇಟರ್ ಅಗತ್ಯವಿಲ್ಲ; ಗಣಿತದಲ್ಲಿ ನಿಮ್ಮದು ಮಾಸ್ಟರ್ ಮೈಂಡ್ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಿ