ಕ್ಯಾಲ್ಕುಲೇಟರ್ ಅಗತ್ಯವಿಲ್ಲ; ಗಣಿತದಲ್ಲಿ ನಿಮ್ಮದು ಮಾಸ್ಟರ್ ಮೈಂಡ್ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾಲ್ಕುಲೇಟರ್ ಅಗತ್ಯವಿಲ್ಲ; ಗಣಿತದಲ್ಲಿ ನಿಮ್ಮದು ಮಾಸ್ಟರ್ ಮೈಂಡ್ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಿ

ಕ್ಯಾಲ್ಕುಲೇಟರ್ ಅಗತ್ಯವಿಲ್ಲ; ಗಣಿತದಲ್ಲಿ ನಿಮ್ಮದು ಮಾಸ್ಟರ್ ಮೈಂಡ್ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಿ

ಬುದ್ಧಿಗೆ ಗುದ್ದು ಕೊಡುವ ಗಣಿತದ ಪ್ರಶ್ನೆಗಳು ನಿಮ್ಮನ್ನು ಭಾರಿ ಯೋಚನೆ ಮಾಡುವಂತೆ ಪ್ರೇರೇಪಿಸುತ್ತದೆ. ಇಂಥಹುದೇ ಪ್ರಶ್ನೆ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ. ಈ ಪ್ರಶ್ನೆಗೆ ಅನೇಕರು ಕಾಮೆಂಟ್ ಮೂಲಕ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೆ ನಿಮ್ಮ ಉತ್ತರ ಏನು?

ಗಣಿತದಲ್ಲಿ ನಿಮ್ಮದು ಮಾಸ್ಟರ್ ಮೈಂಡ್ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಿ
ಗಣಿತದಲ್ಲಿ ನಿಮ್ಮದು ಮಾಸ್ಟರ್ ಮೈಂಡ್ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಿ

ಈ ದಿನ ನೀವು ಏನಾದರೂ ಬೇಜಾರಲ್ಲಿದ್ದೀರಾ? ನಿಮ್ಮ ಮೂಡ್‌ ಚೆನ್ನಾಗಿಲ್ಲವಾದರೆ, ಮನಸ್ಸು ಮತ್ತು ದೇಹದಲ್ಲಿ ಲವಲವಿಕೆ ತುಂಬುವಂತೆ ಮಾಡಲು ನಾವೊಂದು ಪ್ರಶ್ನೆ ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ಮಾನಸಿಕ ಪರಾಕ್ರಮಕ್ಕೆ ಸವಾಲೊಡ್ಡಲು, ಗಣಿತದ ಮೋಜಿನ ಪ್ರಶ್ನೆಯೊಂದು ಇಲ್ಲಿದೆ. ಇದು ನಿಮ್ಮೆ ಮೆದುಳಿಗೆ ಕೆಲಸ ಕೊಡಲಿದೆ. ನೀವು ಬ್ರೇನ್‌ ಟೀಸರ್ ಹುಡುಕುತ್ತಿದ್ದರೆ, ಈ ಸರಳ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ. ನೋಡಲು ಸರಳವಾಗಿ ಕಾಣುವ ಗಣಿತದ ಮೋಜಿನ ಪ್ರಶ್ನೆ ಅಂತರ್ಜಾಲದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಈ ಪ್ರಶ್ನೆ ಇದೀಗ ನಿಮ್ಮ ಮುಂದಿದೆ.

ಬ್ರೈನಿ ಬಿಟ್ಸ್ ಹಬ್ ಎಂಬ ಎಕ್ಸ್ ಖಾತೆಯಲ್ಲಿ ಈ ಪ್ರಶ್ನೆಯನ್ನು ಹಂಚಿಕೊಳ್ಳಲಾಗಿದೆ. ಈ ಪ್ರಶ್ನೆಗೆ ಕ್ಯಾಲ್ಕುಲೇಟರ್ ಸಹಾಯವಿಲ್ಲದೆ ನಿಮ್ಮ ಗಣಿತದ ಕೌಶಲ್ಯಗಳನ್ನು ಬಳಸಿ ಉತ್ತರಿಸುವ ಪ್ರಯತ್ನ ಮಾಡಬಹುದು.

ಬುದ್ಧಿಗೆ ಗುದ್ದು ಕೊಡುವ ಪ್ರಶ್ನೆ ಹೀಗಿದೆ

1 + 1 = 8

1 + 2 = 27

1 + 3 = ?

ಮೊದಲ ನೋಟದಲ್ಲಿ, ಇಲ್ಲಿ ಕೊಟ್ಟಿರುವ ಸಂಖ್ಯೆಗಳು ಅಸಂಬದ್ಧ ಎಂದು ತೋರಬಹುದು. ಆದರೆ ಅದರಲ್ಲಿಯೇ ಸವಾಲು ಇದೆ. ಬಳಕೆದಾರರು ಇಲ್ಲಿ ಕೊಟ್ಟಿರುವ ಸಂಖ್ಯೆಗಳ ನಡುವಿನ ಸಂಬಂಧವನ್ನು ಆಲೋಚಿಸುತ್ತಿದ್ದಾರೆ. ಈಗಾಗಲೇ ಈ ಪ್ರಶ್ನೆ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಬಳಕೆದಾರರು ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿದ್ದು, ತಮ್ಮ ಉತ್ತರವನ್ನು ಕಾಮೆಂಟ್‌ ರೂಪದಲ್ಲಿ ಮಾಡಿದ್ದಾರೆ.

ಜನರ ಪ್ರತಿಕ್ರಿಯಿ ಹೀಗಿದೆ

ಒಬ್ಬ ಬಳಕೆದಾರ ಆತ್ಮವಿಶ್ವಾಸದಿಂದ ಉತ್ತರ ನೀಡಿದ್ದಾರೆ. ಅವರ ಉತ್ತರ 64. ನಿಮಗೂ ಇದೇ ಉತ್ತರ ಎಂದು ಅನಿಸಿರಬಹುದು. “ಇದು 64!” ಎಂದು ಅವರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಕೂಡಾ ಇದೇ ಉತ್ತರ ಎಂದಿದ್ದಾರೆ. “ಉತ್ತರ 64 ಎಂದು ನಾನು ಊಹಿಸುತ್ತೇನೆ,” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “64 ಸರಿಯಾದ ಉತ್ತರ ಎಂದು ನನಗೆ 100 ಪ್ರತಿಶತ ಖಚಿತವಾಗಿದೆ” ಎಂದು ಹೇಳಿದರೆ, ಇನ್ನೊಬ್ಬರು “ನಾನು ಗೊಂದಲಕ್ಕೊಳಗಾಗಿದ್ದೇನೆ, ಆದರೆ ನನ್ನ ಗಣಿತವು 64 ಸರಿಯಾದ ಉತ್ತರ ಎಂದು ಹೇಳುತ್ತದೆ” ಎಂದು ಒಪ್ಪಿಕೊಂಡಿದ್ದಾರೆ.

ನೆಟ್ಟಿಗರ ಉತ್ಸಾಹ ಅಲ್ಲಿಗೇ ನಿಲ್ಲಲಿಲ್ಲ. ಇತರರು ಕೂಡಾ ಪ್ರಶ್ನೆಗೆ ಉತ್ತರ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರ, “ನಾನು ಕಾಮೆಂಟ್‌ಗಳನ್ನು ಓದಿ ಆನಂದಿಸುತ್ತಿದ್ದೇನೆ,” ಎಂದಿದ್ದಾರೆ. ಇತರರು ತಮ್ಮ ಪ್ರಯತ್ನದ ಬಗ್ಗೆ ಬರೆದಿದ್ದಾರೆ. “ನನಗೆ 64 ಸರಿ ಉತ್ತರ ಎಂದು ಅನಿಸುತ್ತದೆ, ಆದರೆ ನಾನು ಖಚಿತವಾಗಿಲ್ಲ” ಎಂದು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರು “ಅಬ್ಬಾ, ನನಗೆ ಊಹಿಸಲು ತುಂಬಾ ಕಷ್ಟವಾಗುತ್ತಿದೆ” ಎಂದು ವಿಷಾದಿಸಿದ್ದಾರೆ.

ಇಂಥಾ ಮೆದುಳಿನ ಟೀಸರ್‌ಗಳು ಮೆದುಳಿಗೆ ಕೆಲಸ ಕೊಡುತ್ತದೆ. ಇದು ಮನಸ್ಸಿನಲ್ಲಿ ಓಡಾಡುತ್ತಿರುವ ಅನಗತ್ಯ ಆಲೋಚನೆಗಳನ್ನು ದೂರ ಮಾಡಲು ನೆರವಾಗುತ್ತದೆ. ಬೌದ್ಧಿಕ ಸವಾಲುಗಳೊಂದಿಗೆ ನಿಮ್ಮ ಯೋಚನಾ ಸಾಮರ್ಥ್ಯವನ್ನು ವಿಸ್ತರಿಸುತ್ತದೆ. ಹಾಗಂತಾ ಇಂಥಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಗಣಿತದಲ್ಲಿ ಬುದ್ಧಿವಂತರಾಗಿರಬೇಕು ಎಂದೇನಿಲ್ಲ. ಆಸಕ್ತಿ ಇದ್ದರೆ ಯಾರೇ ಆದರೂ ಉತ್ತರ ಹುಡುಲುವ ಪ್ರಯತ್ನ ಮಾಡಬಹುದು. ಹೀಗಾಗಿ,ನಿಮಗೂ ಗಣಿತದ ಮೋಜಿಗೆ ಉತ್ತರ ಹುಡುಕುವ ಆಸಕ್ತಿ ಇದ್ದರೆ, ನೀವು ಕೂಡಾ ಟ್ರೈ ಮಾಡಿ.

Whats_app_banner