Brain Teaser: ನಿಮಗೆ ಗಣಿತ ತುಂಬಾ ಚೆನ್ನಾಗಿ ಗೊತ್ತಿದೆಯಾ; ಈ ಸರಳ ಪ್ರಶ್ನೆಗೆ 1 ನಿಮಿಷದಲ್ಲಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಪ್ರಶ್ನೆಗೆ ತುಂಬಾ ಸರಳವಾಗಿದ್ದರೂ ಕೆಲವರಿಗೆ ಗೊಂದಲ ಮೂಡಿಸುತ್ತದೆ. ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಟ್ರಿಕ್ ಗಣಿತದ ಒಗಟು ಬಿಡಿಸಿ. ಬ್ರೈನ್ ಟೀಸರ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು 33 ರಿಂದ 72 ರವರಿಗೆ ಕೆಲವೊಂದು ಉತ್ತರಗಳನ್ನು ಹೇಳಿದ್ದಾರೆ. ಇದರಲ್ಲಿ ಯಾವುದು ಸರಿ ನೋಡಿ ಹೇಳಿ.
ಬ್ರೈನ್ ಟೀಸರ್ ಗಳು ಯಾವಾಗಲೂ ಒಗಟು ಪ್ರಿಯರನ್ನು ಕುತೂಹಲಗೊಳಿಸುತ್ತವೆ. ನಮ್ಮ ಮನಸ್ಸನ್ನು ಆಕಡೆಗೆ ಸೆಳೆದು ಮೋಜಿನ ಮಾರ್ಗವನ್ನು ತೋರಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ಬ್ರೈನ್ ಟೀಸರ್ ಗಳು, ವ್ಯಕ್ತಿತ್ವ ಪರೀಕ್ಷೆಗಳು ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತವೆ. ಕಣ್ಣುಗಳು ಎಷ್ಟು ಶಾರ್ಪ್ ಇವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ಇಲ್ಲಿ ಬರುವ ಬ್ರೈನ್ ಟೀಸರ್ ಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಒಂದು ರೀತಿಯ ಮೋಜಿನೊಂದಿಗೆ ಸಮಯವನ್ನು ಕಳೆದಂತಾಗುತ್ತದೆ. ಬ್ರೈನಿ ಬಿಟ್ಸ್ ಹಬ್ ಎಂಬ ಬಳಕೆದಾರರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಇಂತಹ ಒಂದು ಟೀಸರ್ ಸಾವಿರಾರು ಜನರ ಗಮನ ಸೆಳೆದಿದೆ. ಈ ಟೀಸರ್ ಗಣಿತದ ಸಮೀಕರಣಗಳ ಸರಣಿಯನ್ನು ಪ್ರಸ್ತುತಪಡಿಸುತ್ತದೆ. ಅದು ಅನೇಕರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಜಾಲತಾಣದಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್ ಲೆಕ್ಕಾ ಹೇಗಿದೆ
"1 + 6 = 7, 2 + 7 = 16, 3 + 8 = 27, 6 + 11 = ?" ಇಲ್ಲಿ ನೀಡಲಾಗಿರುವ ಬ್ರೈನ್ ಟೀಸರ್ ನಲ್ಲಿ 1ಕ್ಕೆ 6 ಕೂಡಿದರೆ 7 ಆಗುತ್ತವೆ, 2ಕ್ಕೆ 7 ಕೂಡಿದರೆ 16 ಆಗುತ್ತದೆ, 3ಕ್ಕೆ 8 ಕೂಡಿದರೆ 27 ಆಗುತ್ತದೆ. ಆದರೆ 6ಕ್ಕೆ 11 ಕೂಡಿದರೆ ಎಷ್ಟು ಸಂಖ್ಯೆಯ ಉತ್ತರ ಬರುತ್ತವೆ ಎಂಬುದಾಗಿದೆ. ಜಾಲತಾಣ ಎಕ್ಸ್ ನಲ್ಲಿ ಇದು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಈ ಒಗಟು 3 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಬಳಕೆದಾರರು ಕೋಡ್ ಅನ್ನು ಭೇದಿಸಲು ಕುತೂಹಲದಿಂದ ಪ್ರಯತ್ನಿಸುತ್ತಿದ್ದಾರೆ.. ಆದರೆ, ಲೆಕ್ಕಕ್ಕೆ ಉತ್ತರ ಕಂಡುಕೊಳ್ಳಲು ಕೆಲವರಿಗೆ ಸಾಧ್ಯವಾಗಿಲ್ಲ. ಹಲವಾರು ನೆಟ್ಟಿಗರು ತಮ್ಮ ಊಹೆಯ ಉತ್ತರಗಳನ್ನು ಹಂಚಿಕೊಳ್ಳಲು ಕಾಮೆಂಟ್ ವಿಭಾಗವನ್ನು ಬಳಿಸಿಕೊಂಡಿದ್ದಾರೆ. ಏನೆಲ್ಲಾ ಉತ್ತರಗಳು ಬಂದಿವೆ ಎಂಬುದನ್ನು ನೋಡೋಣ.
ಒಬ್ಬ ಬಳಕೆದಾರರು ಧೈರ್ಯದಿಂದ ಉತ್ತರ "72" ಎಂದು ಬರೆದರೆ, ಇನ್ನೊಬ್ಬರು "33" ಎಂದು ಹೇಳಿದ್ದಾರೆ. ಮೂರನೇ ವ್ಯಕ್ತಿ "72" ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು "ನನಗೆ ಯಾವುದೇ ಸುಳಿವು ಇಲ್ಲ" ಎಂದು ಒಪ್ಪಿಕೊಂಡಿದ್ದಾರೆ. ಇತರ ಸಂಖ್ಯೆಗಳನ್ನು ನೀಡಿರುವ ಕಾಮೆಂಟ್ ಗಳನ್ನು ನೋಡುವುದಾದರೆ ಒಬ್ಬರು ಉತ್ತರ 44 ಆಗಿರಬಹುದು. ಇದು ನನ್ನ ಊಹೆ ಅಷ್ಟೇ ಎಂದಿದ್ದಾರೆ. ಇನ್ನೊಬ್ಬರು ಇದು "ನನ್ನ ಆಟವಲ್ಲ" ಎಂದು ಕಾಮೆಂಟ್ ಮಾಡಿ ಸುಮ್ಮನಾಗಿದ್ದಾರೆ.
ಈ ರೀತಿಯ ಬ್ರೈನ್ ಟೀಸರ್ ಗಳು ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ಬಳಕೆದಾರರನ್ನು ಆಕರ್ಷಿಸುತ್ತಿರುವುದು ಇದೇ ಮೊದಲನೆಯದಲ್ಲ. ಇತ್ತೀಚೆಗೆ, ಎಕ್ಸ್ ಬಳಕೆದಾರೊಬ್ಬರು ಬ್ರೈನ್ ಟೀಸರ್ ಒಂದನ್ನು ಹಂಚಿಕೊಂಡಿದ್ದರು. ಇದು ಕೂಡ ಗಮನ ಸೆಳೆದಿದೆ.
"312 = 36, 412 = 47, 512 = 58, 612 = ?"
ಈ ಒಗಟು ಪೋಸ್ಟ್ ಆದ ಕೂಡಲೇ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಪ್ರಸ್ತುತ ಈ ಎರಡೂ ಬ್ರೈನ್ ಟೀಸರ್ ಗಳು ವಿಭಿನ್ನ ಸಿದ್ಧಾಂತಗಳು ಮತ್ತು ಊಹೆಗಳಿಂದ ತುಂಬಿವೆ. ಮೆದುಳಿನ ಟೀಸರ್ ಗಳು ಯಾವಾಗಲೂ ಕುತೂಹಲವನ್ನು ಹುಟ್ಟುಹಾಕಲು ಮತ್ತು ಜನರನ್ನು ತೊಡಗಿಸಿಕೊಳ್ಳಲು ಯಶಸ್ವಿಯಾಗುತ್ತವೆ ಎಂದು ತೋರಿಸುತ್ತದೆ.
ಟೀಸರ್ ಗಳನ್ನು ಪರಿಹರಿಸಲು ನೀವು ಸಿದ್ಧರಿದ್ದೀರಾ?
ನೀವು ನಿಮ್ಮನ್ನು ಬ್ರೈನ್ ಟೀಸರ್ ಗಳ ಮಾಸ್ಟರ್ ಎಂದು ಪರಿಗಣಿಸಿದರೆ, ಈ ಒಗಟುಗಳು ನಿಮಗೆ ಪರಿಪೂರ್ಣ ಸವಾಲಾಗಿದೆ. ನಿಮ್ಮ ಕೌಶಲ್ಯಗಳನ್ನು ಪರೀಕ್ಷಿಸಿ ಮತ್ತು ನೀವು ಕೋಡ್ ಅನ್ನು ಭೇದಿಸಬಹುದೇ ಎಂದು ನೋಡಿ! ನೀವು ಸುಲಭವಾಗಿ ಪರಿಹಾರವನ್ನು ಕಂಡುಕೊಂಡಿದ್ದರೆ ನೀವು ತುಂಬಾ ಜಾಣರು.