ನೀವು ಗಣಿತದಲ್ಲಿ ತುಂಬಾ ಜಾಣರಿದ್ದೀರಾ; ಎರಡನೇ ನಿಮಿಷದಲ್ಲಿ ಈ ಲೆಕ್ಕಕ್ಕೆ ಸರಿಯಾದ ಆಯ್ಕೆಯ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಗಣಿತದಲ್ಲಿ ತುಂಬಾ ಜಾಣರಿದ್ದೀರಾ; ಎರಡನೇ ನಿಮಿಷದಲ್ಲಿ ಈ ಲೆಕ್ಕಕ್ಕೆ ಸರಿಯಾದ ಆಯ್ಕೆಯ ಉತ್ತರ ಹೇಳಿ

ನೀವು ಗಣಿತದಲ್ಲಿ ತುಂಬಾ ಜಾಣರಿದ್ದೀರಾ; ಎರಡನೇ ನಿಮಿಷದಲ್ಲಿ ಈ ಲೆಕ್ಕಕ್ಕೆ ಸರಿಯಾದ ಆಯ್ಕೆಯ ಉತ್ತರ ಹೇಳಿ

ಕೆಲವರು ಗಣಿತ ವಿಷಯದಲ್ಲಿ ತುಂಬಾ ಚುರುಕಾಗಿರುತ್ತಾರೆ. ಯಾವುದೇ ರೀತಿಯ ಪ್ರಶ್ನೆ ಮುಂದಿಟ್ಟರೆ ಕೆಲವೇ ಕ್ಷಣಗಳಲ್ಲಿ ಉತ್ತರ ಹೇಳುತ್ತಾರೆ. ಒಂದು ವೇಳೆ ನೀವೇನಾದರೂ ಗಣಿತದಲ್ಲಿ ಪಂಟರಾಗಿದ್ದರೆ ಎರಡನೇ ನಿಮಿಷದಲ್ಲಿ ಇಲ್ಲಿ ನೀಡಲಾಗಿರುವ ಪ್ರಶ್ನೆಗೆ ಉತ್ತರ ಹೇಳಿ. ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ನೀಡಲಾಗಿದೆ.

ನೀವು ಗಣಿತದಲ್ಲಿ ತುಂಬಾ ಜಾಣರಾಗಿದ್ದರೆ ಇಲ್ಲಿ ನೀಡಲಾಗಿರುವ ಪ್ರಶ್ನೆಗೆ 2 ನಿಮಿಷದಲ್ಲಿ ಉತ್ತರ ಕಂಡುಹಿಡಿಯಿರಿ
ನೀವು ಗಣಿತದಲ್ಲಿ ತುಂಬಾ ಜಾಣರಾಗಿದ್ದರೆ ಇಲ್ಲಿ ನೀಡಲಾಗಿರುವ ಪ್ರಶ್ನೆಗೆ 2 ನಿಮಿಷದಲ್ಲಿ ಉತ್ತರ ಕಂಡುಹಿಡಿಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಬ್ರೈನ್ ಟೀಸರ್ ಗಳು ವೈರಲ್ ಆಗುತ್ತಲೇ ಇರುತ್ತವೆ. ಇವು ನಮ್ಮ ಮೆದುಳಿಗೆ ಕೆಲಸ ಕೊಡುವ ಜೊತೆಗೆ ನಾವು ಎಷ್ಟು ಚುರುಕಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಜೊತೆಗೆ ನಮ್ಮ ಮನಸ್ಸು ಎಷ್ಟು ತೀಕ್ಷಣವಾಗಿದೆ, ಸ್ಪಷ್ಟವಾಗಿ ಯೋಚಿಸುವ ಸಾಮರ್ಥ್ಯ ನಮಲ್ಲಿ ಎಷ್ಟಿದೆ ಎಂಬುದನ್ನು ತಿಳಿಸಿಕೊಡುತ್ತವೆ. ಜಾಲತಾಣಗಳಲ್ಲಿ ಗಮನವನ್ನು ಸೆಳೆಯುವ ಗಣಿತ ವಿಷಯಕ್ಕೆ ಸಂಬಂಧಿಸಿದ ಬ್ರೈನ್ ಟೀಸರ್ ವೈರಲ್ ಆಗಿದೆ. ಇದಕ್ಕೆ ಉತ್ತರ ಹೇಳಿದರೆ ನೀವು ಗಣಿತ್ಯದಲ್ಲಿ ಜಾಣರು. ಅದು ಕೂಡ 2 ನಿಮಿಷದೊಳಗೆ ಉತ್ತರ ಹೇಳಬೇಕೆಂಬುದನ್ನು ಈ ಬ್ರೈನ್ ಟೀಸರ್ ನ ಚಾಲೆಂಜ್.

ಇಂಥ ಗಣಿತದ ಲೆಕ್ಕಗಳನ್ನು ಪರಿಹರಿಸುವ ಮೂಲಕ ನಾನು ನಮ್ಮ ದೈನಂದಿನ ದಿನಚರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಈ ಬ್ರೈನ್ ಟೀಸರ್ ಗಳು ನಿಮ್ಮನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಇರುವಂತೆ ಸಹಾಯ ಮಾಡುತ್ತವೆ.

ಇತ್ತೀಚೆಗೆ ಜಿತೇಂದ್ರ ಎಂಬುವರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಗಣಿತ ಬ್ರೈನ್ ಟೀಸರ್ ನಿಮ್ಮ ಗಣಿತದ ಜ್ಞಾನಕ್ಕೆ ಸವಾಲು ಹಾಕಿದೆ. ಕೌಶಲ್ಯಗಳನ್ನು ಪರೀಕ್ಷಿಸುವ ಗಣಿತದ ಒಗಟನ್ನು ಪರಿಹರಿಸಿ. ನೀವು ಈ ಲೆಕ್ಕವನ್ನು ಭೇದಿಸಿದರೆ ನಿಮ್ಮ ಮಾನಸಿಕ ಚುರುಕುತನ ಎಷ್ಟು ವೇಗವಾಗಿ ಕೆಲಸ ಮಾಡುತ್ತೆ ಎಂಬುದು ನಿಮಗೆ ಗೊತ್ತಾಗಲಿದೆ.

ಏನಿದು ಗಣಿತದ ಬ್ರೈನ್ ಟೀಸರ್

ಬ್ರೈನ್ ಟೀಸರ್ ನಲ್ಲಿ ನೀಡಿರುವ ಪ್ರಶ್ನೆಯನ್ನು ನೋಡುವುದಾದರೆ ('6 - 3 ÷ 3 x 2' ) ಆರರಿಂದ 3 ರನ್ನು ಕಳೆದರೆ ಅದರಲ್ಲಿ ಬರುವ ಅಂಕಿಯನ್ನು ಮತ್ತೆ ಮೂರರಿಂದ ಭಾಗಿಸಬೇಕು ಆಗ ಬರುವ ಅಂಕಿಯನ್ನು 2 ಎರಡಿಂದ ಗುಣಿಸಿದರೆ ಎಷ್ಟು ಅಂಕಿಗಳ ಉತ್ತರ ಬರಲಿದೆ ಎಂಬುದನ್ನು ಹೇಳಬೇಕು. ಈ ಬ್ರೈನ್ ಟೀಸರ್ ನ ಗಣಿತದ ಲೆಕ್ಕವನ್ನು ಬಿಡಿಲು ನಿಮಗೆ ಮತ್ತಷ್ಟು ಸುಲಭವಾಗಲಿ ಎನ್ನುವ ಕಾರಣಕ್ಕೆ 4 ಉತ್ತರಗಳನ್ನು ಸಹ ನೀಡಲಾಗಿದೆ. ಇದರಲ್ಲಿ ಸರಿಯಾದ ಉತ್ತರ ಯಾವುದು ಎಂದು ಹೇಳಬೇಕು.

ಗಣಿತ ಲೆಕ್ಕದ ಬ್ರೈನ್ ಟೀಸರ್ ನ ಉತ್ತರ ಆಯ್ಕೆಗಳು ಹೀಗಿವೆ. A: 2, B: 10, C: 4, ಮತ್ತು D: ಯಾವುದೂ ಇಲ್ಲ. ಈ ನಾಲ್ಕು ಆಯ್ಕೆಗಳಲ್ಲಿ ಯಾವುದು ಸರಿಯಾದ ಉತ್ತರ ಎಂಬುದನ್ನು 2 ನಿಮಿಷದಲ್ಲಿ ಹೇಳಬೇಕು.

ಜಾಲತಾಣಗಳಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್ ಇಲ್ಲಿದೆ ನೋಡಿ

ಈ ಮೆದುಳಿನ ಟೀಸರ್ ಗೆ ಜನರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ:

ಈ ಬ್ರೈನ್ ಟೀಸರ್ ಗಣಿತದ ಪ್ರಶ್ನೆಗೆ ಜಾಲತಾಣದಲ್ಲಿ ಹಲವರು ಉತ್ತರ ನೀಡಲು ಪ್ರಯತ್ನಿಸಿದ್ದಾರೆ. ತಮ್ಮ ಉತ್ತಮ ಯಾವುದು ಎಂಬುದನ್ನು ಕಾಮೆಂಟ್ ಮಾಡುತ್ತಿದ್ದಾರೆ. ಇದರಲ್ಲೊಬ್ಬ ನೆಟ್ಟಿಗರು ಲೆಕ್ಕವನ್ನು ಪರಿಹರಿಸಲು ಪ್ರಯತ್ನಿಸಿ ಹೀಗೆ ಬರೆದಿದ್ದಾರೆ, "ಮೊದಲು ವಿಭಜನೆ ಮತ್ತು ಗುಣಾಕಾರದೊಂದಿಗೆ ಪ್ರಾರಂಭಿಸಿ: 3 ÷ 3 = 1, ನಂತರ 1 x 2 = 2. 4" ಪಡೆಯಲು 2 ಅನ್ನು 6 ರಿಂದ ಕಳೆಯಿರಿ ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು ಸರಿಯಾದ ಉತ್ತರವು ಆಯ್ಕೆ ಸಿ (4) ಎಂದು ಹೇಳಿದ್ದಾರೆ. ನೀವು ಲೆಕ್ಕಕ್ಕೆ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಯಿತೇ? ನಿಮ್ಮ ಮನಸ್ಸನ್ನು ತೀಕ್ಷ್ಣಗೊಳಿಸಲು ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸಲು ಇಂತಹ ಗಣಿತದ ಮೆದುಳಿನ ಟೀಸರ್ ಗಳನ್ನು ಪರಿಹರಿಸುತ್ತಲೇ ಇರಿ.

Whats_app_banner