Optical Illusion: ಚಿತ್ರ ನೋಡಿ ಉತ್ತರ ಹೇಳಿ; 10 ಸೆಕೆಂಡುಗಳಲ್ಲಿ 208ರ ನಡುವೆ ಅಡಗಿರುವ 280 ಸಂಖ್ಯೆ ಗುರುತಿಸಬಲ್ಲಿರಾ?
ಇಲ್ಲಿರುವ ಫೋಟೋದಲ್ಲಿ ಎಲ್ಲಿ ನೋಡಿದರೂ 208 ಕಾಣಿಸುತ್ತದೆ. ಇದರ ನಡುವೆ 280 ಅಡಗಿ ಕುಳಿತಿದೆ. ನಿಮ್ಮ ತಲೆ ಹಾಗೂ ಕಣ್ಣುಗಳಿಗೆ ಕೆಲಸ ಕೊಟ್ಟು ಅಡಗಿರುವ ಸಂಖ್ಯೆಯನ್ನು ಕಂಡುಹಿಡಿಯಬೇಕು ಎನ್ನುವುದು ನಿಮ್ಮ ಸವಾಲು.

ಕೆಲವೊಬ್ಬರಿಗೆ ಅಂಕೆ-ಸಂಖ್ಯೆಗಳೆಂದರೆ ಇಷ್ಟವೇ ಆಗುವುದಿಲ್ಲ. ಲೆಕ್ಕಗಳಿರುವ ಗಣಿತ ಕಬ್ಬಿಣದ ಕಡಲೆ ಎನ್ನುವವರು ಹಲವು ಮಂದಿ. ಇವರಲ್ಲಿ ಕೆಲವೊಬ್ಬರಿಗೆ ಮೆದುಳಿಗೆ ಮೇವು ಕೊಡುವ ಲೆಕ್ಕಗಳು ಇಷ್ಟವಾಗುತ್ತದೆ. ಇವತ್ತು ನಾವಿಲ್ಲಿ ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಹಾಗೂ ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮವಾಗಿವೆ ಎಂಬುದನ್ನು ಪರೀಕ್ಷೆ ಮಾಡಲು ಸಣ್ಣ ಸವಾಲನ್ನು ಹೊತ್ತು ತಂದಿದ್ದೇವೆ. ಇಲ್ಲಿ ಲೆಕ್ಕವಂತೂ ಇಲ್ಲವೇ ಇಲ್ಲ. ಪೆನ್ನು-ಪುಸ್ತಕ ಹಿಡಿದು ಸಮಸ್ಯೆಗೆ ಉತ್ತರ ಹುಡುಕಬೇಕಾಗಿಯೂ ಇಲ್ಲ. ಇಲ್ಲಿ ನಾವು ಕೊಟ್ಟಿರುವ ಚಿತ್ರವನ್ನು ನೋಡಿ, ಅದಕ್ಕೆ ಸಂಬಂಧಿಸಿದ ಸರಳ ಪ್ರಶ್ನೆಗೆ ಉತ್ತರಿಸಿದರೆ ಸಾಕು.
ಸಂಖ್ಯೆಗಳನ್ನು ಒಳಗೊಂಡ ಫೋಟೋಗಳನ್ನು ನೋಡಿ ಪ್ರಶ್ನೆಗೆ ಉತ್ತರಿಸುವುದರಿಂದ ನಿಮ್ಮ ಮನಸ್ಸು ಹಾಗೂ ಮೆದುಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಇಂಥಾ ಸವಾಲುಗಳಿಗೆ ತಲೆ ಉಪಯೋಗಿಸಿದಷ್ಟು ಮೆದುಳನ್ನು ಇನ್ನಷ್ಟು ತೀಕ್ಷ್ಣವಾಗಿ ಇರಿಸಿಕೊಳ್ಳಬಹುದು. ನಿಮ್ಮ ಬುದ್ಧಿವಂತಿಕೆಯನ್ನು ಕೂಡಾ ನೀವು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸರಳ ಸವಾಲು ಇಲ್ಲಿದೆ.
ಇಂದಿನ ಸವಾಲು ಆಸಕ್ತಿದಾಯಕವಾಗಿದೆ. ಇಲ್ಲಿರುವ ಚಿತ್ರದಲ್ಲಿ ನಿಮ್ಮ ಕಣ್ಣುಗಳಿಗೆ ಎಲ್ಲಿ ನೋಡಿದರೂ 208 ಎಂಬ ಸಂಖ್ಯೆ ಕಾಣಿಸುತ್ತಿದೆ. ಫೋಟೋ ತುಂಬೆಲ್ಲಾ ಈ ಒಂದೇ ಸಂಖ್ಯೆ ಇದೆ ಎಂದು ನೀವು ಹೇಳಬಹುದು. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಈ ಸಂಖ್ಯೆಗಳ ನಡುವೆ, ಅಂದರೆ 208ರ ನಡುವೆ ಒಂದು ಕಡೆ 280 ಕೂಡಾ ಇದೆ. ನಿಮಗಿರುವ ಸವಾಲು ಇಷ್ಟೇ. ಆ 280ನ್ನು ನೀವು ಕಂಡುಹಿಡಿಯಬೇಕು. ಇದಕ್ಕೆ ಪೆನ್ನು ಪುಸ್ತಕ ಬೇಡವೇ ಬೇಡ. ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಬೇಕು ಅಷ್ಟೇ. ಈ ಸರಳ ಪ್ರಶ್ನೆಗೆ ನೀವು 10 ಸೆಕೆಂಡ್ ಒಳಗೆ ಉತ್ತರಿಸಬೇಕು. ನಿಮ್ಮ ಸಮಯ ಈಗ ಶುರು.
208ರ ಗುಂಪಿನಲ್ಲಿ ಅಡಗಿ ಕುಳಿತಿರುವ ಸಂಖ್ಯೆ 280 ಅನ್ನು ಕಂಡುಹಿಡಿಯಬೇಕು ಎನ್ನುವುದು ನಿಮ್ಮ ಸವಾಲು. ಇಲ್ಲಿ ಆ ಸಂಖ್ಯೆಯೇ ಇಲ್ಲ ಎಂದು ನೀವು ಹೇಳಬಹುದು. ಆದರೆ, ಖಂಡಿತಾ ಇದೆ. ಈ ಸ್ಪರ್ಧೆ ಏಕವ್ಯಕ್ತಿ ಸ್ಪರ್ಧೆ ಅಷ್ಟೇ. ನಿಮಗೆ ನೀವು ಸ್ಪರ್ಧಿ. ಹೀಗಾಗಿ ನಿಮಗೆ ನೀವೇ ಮೋಸ ಮಾಡದೆ ಉತ್ತರ ಹುಡುಕುವ ಪ್ರಯತ್ನ ಮಾಡಿ.
ಉತ್ತರ ನಾವೇ ಹೇಳ್ತೀವಿ
ಇನ್ನೂ ಉತ್ತರ ಹೊಳೆಯದಿದ್ದರೆ, ನಾವೊಂದು ತಂತ್ರ ಹೇಳಿಕೊಂಡುತ್ತೇವೆ. ಚಿತ್ರವನ್ನು ಭಾಗಗಳಾಗಿ ವಿಂಗಡಿಸಿ. ಆರಂಭದಲ್ಲಿ ಮೇಲಿನಿಂದ ಕೆಳಕ್ಕೆ ನೋಡುತ್ತಾ ಬನ್ನಿ, ಇದು ಆಗದಿದ್ದರೆ ಎಡದಿಂದ ಬಲಕ್ಕೆ ನೋಡುತ್ತಾ ಬನ್ನಿ. ಚಿತ್ರವನ್ನು ನಾಲ್ಕು ಭಾಗಗಳಾಗಿ ಮಾಡಿ ಒಂದೊಂದು ಭಾಗದಲ್ಲಿ ಕಣ್ಣಾಡಿಸುತ್ತಾ ಬನ್ನಿ. ಇನ್ನೂ ಸಿಗದಿದ್ದರೆ ಉತ್ತ ನಾವೇ ಹೇಳುತ್ತೇವೆ ಬನ್ನಿ.
ಚಿತ್ರದ ನಾಲ್ಕನೇ ಸಾಲಿನಲ್ಲಿ 280 ಸಂಖ್ಯೆ ಇದೆ.
ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ಯಾ, ಹಾಗಿದ್ರೆ ಆಕ್ಟೋಪಸ್ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್
