Brain Teaser: ನಿಮ್ಮ ಜಾಣ್ಮೆಗೊಂದು ಸವಾಲ್‌, ಚಿತ್ರದಲ್ಲಿರುವ ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು? 11 ಸೆಕೆಂಡ್‌ನಲ್ಲಿ ಉತ್ತರ ಹೇಳಿ-viral brain teaser test your iq you are a genius if you can solve the brain teaser what is the total weight of 3 animal ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಜಾಣ್ಮೆಗೊಂದು ಸವಾಲ್‌, ಚಿತ್ರದಲ್ಲಿರುವ ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು? 11 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: ನಿಮ್ಮ ಜಾಣ್ಮೆಗೊಂದು ಸವಾಲ್‌, ಚಿತ್ರದಲ್ಲಿರುವ ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು? 11 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Test: ನೀವು ತುಂಬಾ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ಇಲ್ಲಿರುವ ಬ್ರೈನ್ ಟೀಸರ್‌ಗೆ 11 ಸೆಕೆಂಡ್‌ ಒಳಗೆ ಉತ್ತರ ಹೇಳಿ. ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು ಎಂದು ಹೇಳುವುದು ನಿಮಗಿರುವ ಸವಾಲು, ಇನ್ನೇಕೆ ತಡ ಚಿತ್ರ ನೋಡಿ, ಉತ್ತರ ಹೇಳಿ.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

Brain Teaser: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವುದು ಸುಳ್ಳಲ್ಲ. ಇದಕ್ಕಾಗಿ ನಾವು ಬಹಳ ಯೋಚನೆ ಮಾಡಬೇಕು. ಕಣ್ಣಿಗೆ ಕಂಡಷ್ಟು ಸುಲಭವಾಗಿ ಇದಕ್ಕೆ ಉತ್ತರ ಹೇಳಲು ಆಗುವುದಿಲ್ಲ. ಇದಕ್ಕಾಗಿ ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ‌

ಇಂದಿನ ಬ್ರೈನ್ ಟೀಸರ್ ಮೂರು ಪ್ರಾಣಿಗಳ ತೂಕವನ್ನು ಹೇಳುವುದಾಗಿದೆ. ಚಿತ್ರದಲ್ಲಿ 4 ತೂಕದ ಯಂತ್ರಗಳಿವೆ. ಅದರಲ್ಲಿ ಎರಡೆರಡು ಪ್ರಾಣಿಗಳನ್ನು ನಿಲ್ಲಿಸಿ ಅವುಗಳ ತೂಕ ಎಷ್ಟು ಎಂದು ಬರೆಯಲಾಗಿದೆ. ಆದರೆ ಕೊನೆಯ ಚಿತ್ರದಲ್ಲಿರುವ ಯಂತ್ರದ ಮೇಲೆ 3 ಪ್ರಾಣಿಗಳನ್ನು ಒಟ್ಟಿಗೆ ನಿಲ್ಲಿಸಲಾಗಿದ್ದು, ಅವುಗಳ ಒಟ್ಟು ತೂಕ ಎಷ್ಟು ಎಂಬುದನ್ನು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲ್‌.

@100sandhya ಎನ್ನುವವರು ಈ ಬ್ರೈನ್ ಟೀಸರ್‌ ಅನ್ನು ತಮ್ಮ ಟ್ವಿಟರ್‌ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ನಿಜಕ್ಕೂ ಬುದ್ಧಿವಂತರಾಗಿದ್ದರೆ ಈ ಬ್ರೈನ್ ಟೀಸರ್‌ಗೆ 11 ಸೆಕಂಡ್‌ ಒಳಗೆ ಉತ್ತರ ಹೇಳಿ, ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು ಎಂಬುದು ನಿಮಗಿರುವ ಪ್ರಶ್ನೆ ಎಂದು ಅವರು ಬರೆದುಕೊಂಡಿದ್ದಾರೆ. ನಿಮ್ಮ ಐಕ್ಯೂ ಪರೀಕ್ಷೆ ಮಾಡಿ ಎಂದು ಅವರು ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನೀವು ಗಣಿತದಲ್ಲಿ ಶಾರ್ಪ್ ಇರಬೇಕು, ಜೊತೆಗೆ ನಿಮ್ಮ ಮೆದುಳು ಕೂಡ ಸಾಕಷ್ಟು ಕೆಲಸ ಮಾಡಬೇಕು. ಯಾಕಂದರೆ ಇದು ಗಣಿತದ ಲೆಕ್ಕಾಚಾರವೂ ಹೌದು, ಜೊತೆಗೆ ನಿಮ್ಮ ಯೋಚನಾಶಕ್ತಿಯನ್ನೂ ಹರಿಸಬೇಕು. ಹಾಗಾದರೆ ಈ ಬ್ರೈನ್ ಟೀಸರ್‌ಗೆ 11 ಸೆಕೆಂಡ್‌ ಒಳಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಗುವುದೇ ಗಮನಿಸಿ.

ಇಂತಹ ಬ್ರೈನ್ ಟೀಸರ್‌ಗಳು ಒಂಥರಾ ಮೋಜು ನೀಡುವುದು ಮಾತ್ರವಲ್ಲ, ನಮ್ಮಲ್ಲಿ ಗಮನಶಕ್ತಿ ಹಾಗೂ ಏಕಾಗ್ರತೆ ಹೆಚ್ಚುವಂತೆ ಮಾಡುತ್ತವೆ. ಪ್ರತಿದಿನ ಬ್ರೈನ್ ಟೀಸರ್ ಬಿಡಿಸುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ, ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಕೌಶಲವೂ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ನೀವು ಮಕ್ಕಳಿಗೂ ಎಕ್ಸ್‌ಸೈಜ್ ರೂಪದಲ್ಲಿ ಮೆದುಳಿಗೆ ಕೆಲಸ ಕೊಡಬಹುದು. ಇನ್ನೇಕೆ ತಡ ನಿಮ್ಮ ಸಮಯ ಶುರು, ಮೂರು ಪ್ರಾಣಿಗಳ ಒಟ್ಟು ತೂಕ ಎಷ್ಟು ಎಂದು ಥಟ್ಟಂತ ಹೇಳಿ ನೋಡೋಣ.

ಈ ಬ್ರೈನ್ ಟೀಸರ್ ಅನ್ನೂ ಓದಿ 

Brain Teaser: ಯಾವ ಕಪ್‌ನಲ್ಲಿ ಮೊದಲು ಕಾಫಿ ತುಂಬುತ್ತೆ, ನಿಮ್ಮ ಮೆದುಳು ಚುರುಕಾಗಿದ್ರೆ 10 ಸೆಕೆಂಡ್ ಒಳಗೆ ಹೇಳಿ

Brain Teaser: ನಿಮ್ಮ ಮೆದುಳು ಸಖತ್ ಶಾರ್ಪ್ ಅಂತ ನಿಮಗೆ ಅನ್ಸುತ್ತಾ, ಎಂಥ ಟ್ರಿಕ್ಕಿ ಪ್ರಶ್ನೆ ಇದ್ರು ಥಟ್ಟಂತ ಉತ್ತರ ಹೇಳ್ತೀರಾ, ಹಾಗಾದ್ರೆ ಇಂದಿನ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು. ಈ ಚಿತ್ರದಲ್ಲಿ ಯಾವ ಕಪ್ ಮೊದಲು ತುಂಬುತ್ತೆ ಅಂತ ಹೇಳೋದು ನಿಮಗಿರುವ ಚಾಲೆಂಜ್‌. ನಿಮ್ಮ ಸಮಯ ಈಗ ಶುರು.

mysore-dasara_Entry_Point