ವೈರಲ್‌ ಆಯ್ತು ಬೆಂಗಳೂರಿನ ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷೀನ್‌, ಬೆಂಗ್ಳೂರು ತುಂಬಾ ಫಾಸ್ಟ್‌ ಕಣ್ರಿ ಅಂದ್ರು ನೆಟ್ಟಿಗರು
ಕನ್ನಡ ಸುದ್ದಿ  /  ಜೀವನಶೈಲಿ  /  ವೈರಲ್‌ ಆಯ್ತು ಬೆಂಗಳೂರಿನ ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷೀನ್‌, ಬೆಂಗ್ಳೂರು ತುಂಬಾ ಫಾಸ್ಟ್‌ ಕಣ್ರಿ ಅಂದ್ರು ನೆಟ್ಟಿಗರು

ವೈರಲ್‌ ಆಯ್ತು ಬೆಂಗಳೂರಿನ ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷೀನ್‌, ಬೆಂಗ್ಳೂರು ತುಂಬಾ ಫಾಸ್ಟ್‌ ಕಣ್ರಿ ಅಂದ್ರು ನೆಟ್ಟಿಗರು

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ಇತ್ತೀಚಗಷ್ಟೇ ಅತ್ಯಧಿಕ ಮನೆ ಬಾಡಿಗೆ ಹೊಂದಿರುವ ಏರಿಯಾ ಎಂಬ ಕಾರಣಕ್ಕೆ ಸುದ್ದಿಯಾಗಿತ್ತು. ಇದೀಗ ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷಿನ್‌ ಮೂಲಕ ಸುದ್ದಿಯಾಗುತ್ತಿದೆ. ಪಾನಿಪೂರಿಗೂ ಆಟೊಮೆಟಿಕ್‌ ಮಷಿನ್‌ ಬಂದಿರುವುದು ಕಂಡು ಎಚ್‌ಎಸ್‌ಆರ್‌ ಲೇಔಟ್‌ 2050ರಷ್ಟು ಮುಂದಕ್ಕೆ ಹೋಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

ವೈರಲ್‌ ಆಯ್ತು ಬೆಂಗಳೂರಿನ ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷೀನ್‌, ಬೆಂಗ್ಳೂರು ತುಂಬಾ ಫಾಸ್ಟ್‌ ಕಣ್ರಿ ಅಂದ್ರು ನೆಟ್ಟಿಗರು
ವೈರಲ್‌ ಆಯ್ತು ಬೆಂಗಳೂರಿನ ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷೀನ್‌, ಬೆಂಗ್ಳೂರು ತುಂಬಾ ಫಾಸ್ಟ್‌ ಕಣ್ರಿ ಅಂದ್ರು ನೆಟ್ಟಿಗರು

ಬೆಂಗಳೂರಲ್ಲಿ ಏನೆಲ್ಲಾ ವೈರಲ್‌ ಆಗುತ್ತೆ ಅಂತ ಹೇಳೋಕೆ ಬರೋಲ್ಲಾ, ಆದ್ರೆ ವೈರಲ್‌ ಆಗುವ ವಿಷಯಗಳಂತೂ ಬೆಂಗಳೂರಿನಲ್ಲಿ ಸಾಕಷ್ಟಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್‌ ಮಾಡಿದ್ರೆ ಸಾಕು ಇಂತಹ ಹಲವು ವೈರಲ್‌ ಕಂಟೆಂಟ್‌ಗಳು ಕಣ್ಣಿಗೆ ಬೀಳುತ್ತವೆ. ಇದೀಗ ಹಲವರ ಫೇವರಿಟ್‌ ಸ್ಟ್ರೀಟ್‌ ಫುಡ್‌ ಆಗಿರುವ ಪಾನಿಪುರಿಗೆ ಸಂಬಂಧಿಸಿದ ವಿಷಯವೊಂದು ವೈರಲ್‌ ಆಗಿದೆ. ಇದೇನಪ್ಪಾ ಇದು ಪಾನಿಪುರಿಗೆ ಸಂಬಂಧಿಸಿದ್ದು, ವೈರಲ್‌ ಆಗೋವಂಥದ್ದು ಏನದು ಎಂದು ನೀವು ಭಾವಿಸಬಹುದು, ವಿಷ್ಯಾ ಏನು ತಿಳಿಯಲು ಮುಂದೆ ನೋಡಿ.

ಆಟೊಮೆಟಿಕ್‌ ಪಾನಿಪುರಿ ವೆಂಡಿಂಗ್‌ ಮಷಿನ್

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸ್ವಯಂಚಾಲಿತ ಪಾನಿ ಪುರಿ ವಿತರಣಾ ಯಂತ್ರವಿದೆ. ಅಂದರೆ ಆಟೊಮೆಟಿಕ್‌ ಪಾನಿಪುರಿ ನೀಡುವ ಯಂತ್ರ. ಇದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಯಾರೋ ಒಬ್ಬ ಪಾನಿಪೂರಿ ಪ್ರೇಮಿ. ಬೆಂಗಳೂರಲ್ಲಿ ಇಂತಹ ವೆಂಡಿಂಗ್‌ ಮೆಷಿನ್‌ ಹಾಗೂ ಕಿಯೋಸ್ಕ್‌ಗಳು ಎಲ್ಲೆಂದರಲ್ಲಿ ಕಣ್ಣಿಗೆ ಬೀಳುತ್ತವೆ. ಆದರೆ ಈ ಪಾನಿಪಾರಿ ಸ್ಟಾಲ್‌ನ ಹ್ಯಾಸಮಯ ಹೆಸರು ಇಂಟರ್ನೆಟ್‌ನಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ.

ಬೆನೆಡಿಕ್ಟ್ ಎಂಬ ಎಕ್ಸ್‌ ಪುಟವನ್ನು ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಈ ಪಾನಿಪುರಿ ಸ್ಟಾಲ್‌ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ʼWTF - ವಾಟ್ ದಿ ಫ್ಲೇವರ್ಸ್ʼ ಎಂಬುದು ಆಟೊಮೆಟಿಕ್‌ ಪಾನಿಪುರಿ ಬೋರ್ಡ್‌ ಜೊತೆ ಬರೆಸಲಾಗಿದೆ. ಈ ಸ್ಟಾಲ್‌ನಲ್ಲಿ ಪಾನಿಪೂರಿಗಳಿಗೆ ನೀಡುವ ಫ್ಲೇವರ್ಸ್‌ಗಳಿಗೆ ಸಪರೇಟ್‌ ಟ್ಯಾಪ್‌ ನೀಡಲಾಗಿದೆ. ಇದು ಪಾನಿಪುರಿ ತಿನ್ನುವವರಿಗೆ ನೈರ್ಮಲ್ಯ ಕಾಪಾಡುವುದು ಹಾಗೂ ತಮ್ಮಿಷ್ಟದ ಫ್ಲೇವರ್‌ ತಿನ್ನುವ ಸ್ವಾತಂತ್ರ್ಯ ನೀಡುವ ಆಯ್ಕೆಯಾಗಿದೆ. ಪುರಿಯಲ್ಲಿ ತಮ್ಮಿಷ್ಟದ ಫ್ಲೇವರ್‌ನ ಪುರಿಯನ್ನು ಹಾಕಿಕೊಂಡು ತಿನ್ನಬಹುದು. ʼಎಚ್‌ಎಸ್‌ಆರ್‌ 2050ರಲ್ಲಿ ಬದುಕುತ್ತಿದೆʼ ಎಂದು ಅವರು ಫೋಟೊ ಜೊತೆ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಈ ಮಧ್ಯೆ ಇತರ ಎಕ್ಸ್‌ ಬಳಕೆದಾರರಿಗೆ ಈ ಆಟೊಮೆಟಿಕ್‌ ಪಾನಿಪುರಿ ಯಂತ್ರದ ಬಗ್ಗೆ ಅನುಮಾನ ಶುರುವಾಗಿತ್ತು. ಈ ಪಾನಿಪುರಿ ಉಕ್ಕಿ ಹರಿಯುವುದೇ, ಇದನ್ನು ಅವರು ಖಾಲಿ ಮಾಡುತ್ತಾರಾ ಅಥವಾ ಮರು ಬಳಕೆ ಮಾಡುತ್ತಾರಾ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇದು ಜನರನ್ನು ಖಂಡಿತ ಆರ್ಕಷಿಸುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಇದನ್ನು ಸ್ವಲ್ಪ ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಪ್ರದೀಪ್‌ ಎಂಬ ಎಕ್ಸ್‌ ಬಳಕೆದಾರರು ಬಿನ್ನಿ ಪೆಟ್‌ನಲ್ಲಿರುವ ಇಟಿಎ ಮಾಲ್‌ನಲ್ಲಿ ಕನಿಷ್ಠ ಐದು ವರ್ಷಗಳ ಹಿಂದೆ ಸ್ವಯಂಚಾಲಿತ ಪಾನಿಪುರಿ ವೆಂಡಿಂಗ್ ಮಷಿನ್ ಇತ್ತು. ಇದು ಇನ್ನೂ ಏಕೆ ಸುದ್ದಿಯಾಗಿಲ್ಲ ಎನ್ನುವುದರ ಬಗ್ಗೆ ನನಗೆ ಖಚಿತವಿಲ್ಲ. ಇದೀಗ ಎಚ್‌ಎಸ್‌ಆರ್‌ ಆವಿಷ್ಕಾರ ಆಗಿರುವುದರಿಂದ ಆ ವಿಚಾರವನ್ನು ಬಿಡೋಣʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಸ್ಟ್ರೀಟ್ ಫುಡ್ ಅದರಲ್ಲೂ ಪಾನಿ ಪುರಿ ಇತ್ತೀಚೆಗೆ ಕರ್ನಾಟಕದಲ್ಲಿ ನೈರ್ಮಲ್ಯದ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಕರ್ನಾಟಕದಲ್ಲಿ ಮಾದರಿ ತಪಾಸಣೆ ನಡೆಸಿದಾಗ ಆಘಾತಕಾರಿ ಫಲಿತಾಂಶಗಳು ಕಂಡುಬಂದಿವೆ. ಸಂಗ್ರಹಿಸಿದ 260 ಮಾದರಿಗಳ ಪೈಕಿ 41 ಮಾದರಿಗಳಲ್ಲಿ ಕೃತಕ ಬಣ್ಣಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ಏಜೆಂಟ್‌ಗಳು ಕಂಡುಬಂದಿವೆ. ಇತರ 18 ಮಾದರಿಗಳು ಮಾನವ ಬಳಕೆಗೆ ಅನರ್ಹವಾಗಿವೆ. ಫಲಿತಾಂಶಗಳು ನಗರಗಳಲ್ಲಿ ಹೆಚ್ಚು ಸೇವಿಸುವ ಬೀದಿ ಆಹಾರದ ಗುಣಮಟ್ಟದ ಮೇಲೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Whats_app_banner