ಅರೇ ಇಲ್ನೋಡಿ, ರಿಕ್ಷಾ ಸೀಟ್‌ಗೆ ಆಫೀಸ್ ಚೇರ್ ಜೋಡಿಸಿದ ಆಟೊರಾಜ; ಇವೆಲ್ಲ ನಮ್ಮ ಬೆಂಗಳೂರಲ್ಲಷ್ಟೇ ಸಾಧ್ಯ ಎಂದ ನೆಟ್ಟಿಗರು
ಬೆಂಗಳೂರಿನ ಆಟೊ ಡ್ರೈವರ್‌ಗಳು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಸಿಲಿಕಾನ್ ಸಿಟಿಯ ಆಟೊ ಡ್ರೈವರ್ ಒಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ರಿಕ್ಷಾ ಚಾಲಕನ ಟ್ಯಾಲೆಂಟ್‌ಗೆ ಸಲಾಂ ಅಂದಿದ್ದಾರೆ ನೆಟ್ಟಿಗರು. ಹಾಗಾದರೆ ಆ ಆಟೊದಲ್ಲಿ ಅಂಥದ್ದೇನಿದೆ ನೋಡಿ.
ನಮ್ಮ ಬೆಂಗಳೂರಲ್ಲಿ ಏನೆಲ್ಲಾ ಅದ್ಭುತಗಳು ನಡೆಯುತ್ತವೆ ಎಂದರೆ ಅದನ್ನ ನಂಬೋಕು ಸಾಧ್ಯವಿಲ್ಲ. ಮಾತ್ರವಲ್ಲ, ಇಂತಹ ಅದ್ಭುತ ಟ್ಯಾಲೆಂಟ್‌ಗಳನ್ನ ನೀವು ಬೆಂಗಳೂರಲ್ಲಿ ಮಾತ್ರ ನೋಡೋಕೆ ಸಾಧ್ಯ. ಇಲ್ಲೊಂದು ಅಂಥದ್ದೇ ಅದ್ಭುತವಿದೆ. ಅದೇನಪ್ಪ ಅಂಥದ್ದು ಅಂತೀರಾ, ಖಂಡಿತ ಇದನ್ನು ನೋಡಿದ್ರೆ ಹೀಗೂ ಮಾಡಬಹುದಾ ಅಂತ ನೀವು ಮೂಗಿನ ಮೇಲೆ ಬೆರಳು ಇಡ್ತೀರಿ, ಯಾಕಂದ್ರೆ ನೀವಿದ್ದನ್ನ ಯೋಚನೆ ಕೂಡ ಮಾಡಿರೊಲ್ಲ.
ಇದೀಗ ಬೆಂಗಳೂರಿನ ಆಟೊ ಡ್ರೈವರ್ ಒಬ್ಬರ ಫೋಟೊವೊಂದು ಭಾರಿ ವೈರಲ್ ಆಗುತ್ತಿದೆ. ಸದಾ ಕೆಟ್ಟ ಸುದ್ದಿಗಳಿಂದಲೇ ವೈರಲ್ ಆಗುವ ಆಟೊ ಡ್ರೈವರ್‌ಗಳಲ್ಲಿ ಈ ವ್ಯಕ್ತಿ ನಿಮಗೆ ಅಸಾಧಾರಣ ಪ್ರತಿಭಾವಂತ ಅಂತ ಅನ್ನಿಸದೇ ಇರುವುದಿಲ್ಲ. ಕಾರಣ ಏನಪ್ಪಾ ಅಂತೀರಾ? ಕಾರಣ ಇವರ ಟ್ಯಾಲೆಂಟ್. ಅವರ ಟ್ಯಾಲೆಂಟ್ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆನೇ, ಅಂತಹ ಮಹಾನ್ ಸಾಧನೆ ಅವರೇನು ಮಾಡಿದ್ದಾರೆ ಅಂತ ನೋಡಿ.
ಬೆಂಗಳೂರಿನ ಈ ಆಟೊ ಡ್ರೈವರ್ ತಮ್ಮ ಸೀಟಿಗೆ ಆಫೀಸ್ ಚೇರ್ ಫಿಕ್ಸ್ ಮಾಡಿದ್ದಾರೆ. ನಾರ್ಮಲ್ ಸೀಟ್‌ನಲ್ಲಿ ಕೂತು ಪ್ರತಿದಿನ ಆಟೊ ಓಡಿಸೋದು ಖಂಡಿತ ಬೆನ್ನು ನೋವು ತರಿಸುತ್ತೆ, ಇದಕ್ಕೆ ಸಖತ್ ಐಡಿಯಾ ಮಾಡಿರೋ ಅವರು ಆಫೀಸ್ ಚೇರ್ ಅನ್ನ ತಮ್ಮ ಸೀಟ್‌ಗೆ ಫಿಕ್ಸ್ ಮಾಡಿದ್ದಾರೆ. ಇದರಿಂದ ಆರಾಮಾಗಿ ಕೂತು ಬೆನ್ನು ನೋವು ಬರದಂತೆ ಆಟೊ ಓಡಿಸಬಹುದು ಎಂಬುದು ಅವರ ಯೋಚನೆ ಇರಬಹುದು. ಇದೀಗ ಈ ಆಟೊದ ಫೋಟೊ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಆಟೊ ಡ್ರೈವರ್ ಐಡಿಯಾಕ್ಕೆ ಸಲಾಂ ಗುರು ಎನ್ನುತ್ತಿದ್ದಾರೆ. ತಮ್ಮ ಆಟೊ ರಿಕ್ಷಾವನ್ನು ಅಪ್‌ಗ್ರೇಡ್ ಮಾಡಿಕೊಂಡ ಚಾಲಕನ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಎಕ್ಸ್ ಬಳಕೆದಾರರಾದ Shivani Matlapudi ಎನ್ನುವವರು ಆಟೊ ರಿಕ್ಷಾದ ಡ್ರೈವರ್ ತನ್ನ ಗಾಡಿಗೆ ಆಫೀಸ್ ಚೇರ್ ಫಿಕ್ಸ್ ಮಾಡಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ತನಗೆ ಇನ್ನಷ್ಟು ಕಂಫರ್ಟ್ ಬೇಕು ಎನ್ನುವ ಕಾರಣಕ್ಕೆ ಆಟೊ ಡ್ರೈವರ್ ಒಬ್ಬರು ತಮ್ಮ ಸೀಟಿಗೆ ಆಫೀಸ್ ಚೇರ್ ಫಿಕ್ಸ್ ಮಾಡಿರುವ ದ್ರಶ್ಯ ಬೆಂಗಳೂರಿನಲ್ಲಿ ಕಣ್ಣಿಗೆ ಬಿತ್ತು, ಈ ಕಾರಣಕ್ಕೆ ಬೆಂಗಳೂರು ನನಗೆ ಇಷ್ಟ ಆಗೋದು‘ ಅಂತ ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 23 ರಂದು ಆಕೆ ಈ ಪೋಸ್ಟ್ ಮಾಡಿದ್ದಾರೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಅವರ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಆಟೊ ಡ್ರೈವರ್ ಕಾರ್ಯಕ್ಕೆ, ಬೆಂಗಳೂರಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಕಾಮೆಂಟ್‌ಗಳನ್ನೂ ಓದಿ
‘ಇದು ಬೆಂಗಳೂರಿನ ಸೌಂದರ್ಯ‘ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಈ ಆಟೊ ಡ್ರೈವರ್ ಯೋಚನೆಗೊಂದು ಸಲಾಂ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಅವರು ತಮ್ಮ ಬೆನ್ನಿನ ಬಗ್ಗೆ, ಕುಳಿತುಕೊಳ್ಳುವ ರೀತಿಯ ಬಗ್ಗೆ ಯೋಚಿಸಿದ್ದಾರಲ್ಲ, ಅದು ಗ್ರೇಟ್‘ ಎಂದು ಎಕ್ಸ್ ಬಳಕೆದಾರರೊಬ್ಬರು ಆಟೊ ಡ್ರೈವರ್ ಮೇಲೆ ಕಾಳಜಿಯಿಂದ ಕಾಮೆಂಟ್ ಮಾಡಿದ್ದಾರೆ. ‘ನಾನು ಆದಷ್ಟು ಬೇಗ ಬೆಂಗಳೂರಿಗೆ ಹೋಗ್ತೀನಿ, ಇದನ್ನೆಲ್ಲಾ ನೋಡಲು ಖಂಡಿತ ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿ ಆಟೊ ಡ್ರೈವರ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.