ಕನ್ನಡ ಸುದ್ದಿ  /  Lifestyle  /  Viral News Bengaluru News Bengaluru Auto Driver Rides With Puppy In His Lap Netizens Love The Video Social Media Rst

ನಾಯಿಮರಿಯನ್ನ ತೊಡೆ ಮೇಲೆ ಕೂರಿಸಿಕೊಂಡು ಸವಾರಿ; ಬೆಂಗಳೂರಿನ ಆಟೊ ಡ್ರೈವರ್‌ಗೆ ಸಿಕ್ತು ನೆಟ್ಟಿಗರ ಭಾರಿ ಮೆಚ್ಚುಗೆ: Video

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಗಾಗ ನಿಮ್ಮ ಕಣ್ಣಿಗೆ ಕಾಣುವ ದೃಶ್ಯಗಳು ಆಪ್ತ ಎನ್ನಿಸುತ್ತವೆ. ಇದೀಗ ಬೆಂಗಳೂರು ಟ್ರಾಫಿಕ್‌ನಲ್ಲಿ ಎಲ್ರೂ ಮೆಚ್ಚುವಂತ ಫೋಟೊವೊಂದು ಸಿಕ್ಕಿದ್ದು, ವೈರಲ್‌ ಆಗಿದೆ. ನಾಯಿಮರಿಯನ್ನು ತೊಡೆ ಮೇಲೆ ಕೂರಿಸಿಕೊಂಡ ಆಟೊ ಚಾಲಕನ ಫೋಟೊ ಇದಾಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನಾಯಿಮರಿಯನ್ನ ತೊಡೆ ಮೇಲೆ ಕೂರಿಸಿಕೊಂಡು ಸವಾರಿ; ಬೆಂಗಳೂರಿನ ಆಟೊ ಡ್ರೈವರ್‌ಗೆ ಸಿಕ್ತು ನೆಟ್ಟಿಗರ ಭಾರಿ ಮೆಚ್ಚುಗೆ
ನಾಯಿಮರಿಯನ್ನ ತೊಡೆ ಮೇಲೆ ಕೂರಿಸಿಕೊಂಡು ಸವಾರಿ; ಬೆಂಗಳೂರಿನ ಆಟೊ ಡ್ರೈವರ್‌ಗೆ ಸಿಕ್ತು ನೆಟ್ಟಿಗರ ಭಾರಿ ಮೆಚ್ಚುಗೆ

ಬೆಂಗಳೂರು ಟ್ರಾಫಿಕ್‌ ಜಗತ್ಪ್ರಸಿದ್ಧ. ಇಲ್ಲಿನ ಟ್ರಾಫಿಕ್‌ ಕ್ಷಣಗಳು ಕೆಲವೊಮ್ಮೆ ಅಸಹನೆ ಮೂಡಿಸಿದ್ರೂ ಕೆಲವೊಮ್ಮೆ ವಾವ್‌ ಎನ್ನಿಸುತ್ತದೆ. ಟ್ರಾಫಿಕ್‌ನಲ್ಲಿದ್ದಾಗ ನಮ್ಮ ಕಣ್ಣಿಗೆ ಬೀಳುವ ಕೆಲವು ದೃಶ್ಯಗಳು ಮನ ಮಿಡಿಯುವಂತಿರುತ್ತದೆ. ಇಲ್ಲೊಂದು ಅಂತಹದ್ದೇ ಫೋಟೊ ಈಗ ವೈರಲ್‌ ಆಗಿದೆ.

ಆಟೊ ಚಾಲಕನೊಬ್ಬ ನಾಯಿಮರಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಆಟೊ ಓಡಿಸುತ್ತಿರುವ ಫೋಟೊ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊವನ್ನು ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್‌ ಆಗಿದೆ. ಹಲವರು ಈ ಪೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಾಯಿಮರಿ ಜೊತೆಗಿದ್ರೆ ಬೇಸರ ಕಾಡೊಲ್ಲ ಅಂತ ಕಾಮೆಂಟ್‌ ಮಾಡಿದ್ದಾರೆ.

ಪಾವ್‌ಫುಲ್‌ ವರ್ಲ್ಡ್‌ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ವ್ಯಕ್ತಿಯು ಆಟೊದಲ್ಲಿ ನಾಯಿಮರಿಯೊಂದಿಗೆ ಸವಾರಿ ಮಾಡುತ್ತಿರುವ ವ್ಯಕ್ತಿಯ ಫೋಟೊವನ್ನು ಹಂಚಿಕೊಂಡಿದ್ದಾರೆ. ʼಇಂದು ಆಟೊ ಚಾಲಕರೊಬ್ಬರು ತಮ್ಮ ಮುದ್ದಿನ ಟಾಮಿಯನ್ನು ಸವಾರಿಗೆ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದೆʼ ಎಂದು ಅವರು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ ಏನಿದೆ?

ವಿಡಿಯೊ ಆರಂಭವಾದಾಗ ಆಟೊ ಚಾಲಕನ ತೊಡೆಯ ಮೇಲೆ ನಾಯಿಮರಿ ನಿಂತಿರುವುದು ಕಾಣಿಸುತ್ತದೆ. ಆಟೊ ಟ್ರಾಫಿಕ್‌ನಲ್ಲಿ ಮುಂದೆ ಸಾಗಿದಾಗ ನಾಯಿಮರಿಯು ಹ್ಯಾಂಡಲ್‌ ಮೇಲೆ ತನ್ನ ಕಾಲುಗಳನ್ನು ಊರಿ ರಾಜನಂತೆ ನಿಂತಿರುವುದನ್ನು ಗಮನಿಸಬಹುದು. ಈ ವಿಡಿಯೊದ ಮೇಲೆ ಸುಂದರ ಶೀರ್ಷಿಕೆಯೊಂದನ್ನು ಬರೆದು ಹಂಚಿಕೊಳ್ಳಲಾಗಿದೆ. ʼನಾಯಿಗಳು ಎಂದಿಗೂ ನಿಮ್ಮ ಅಂತಸ್ತು ನೋಡುವುದಿಲ್ಲ, ಅದರ ಹಿಂದೆ ಓಡುವುದಿಲ್ಲ. ಅವುಗಳಿಗೆ ಕೇವಲ ನಿಮ್ಮ ಉಪಸ್ಥಿತಿ ಹಾಗೂ ಪ್ರೀತಿ ಸಿಕ್ಕರೆ ಸಾಕು. ಇಂದು ನಾನೊಂದು ಪರಿಶುದ್ಧ ಘಟನೆಯನ್ನು ನೋಡಿದೆʼ ಎಂದು ಬರೆಯಲಾಗಿದೆ.

ಮೂರ್ನ್ಕಾಲು ದಿನಗಳ ಹಿಂದೆ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿತ್ತು. ಈಗಾಗಲೇ ಸುಮಾರು 3.5 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್‌ ವೀಕ್ಷಿಸಿದ್ದಾರೆ. 33,800 ಮಂದಿ ಲೈಕ್‌ ಮಾಡಿದ್ದಾರೆ. ಹಲವರು ತಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಬೆಂಗಳೂರಿನಲ್ಲಿ ಇಂತಹ ಹಲವರನ್ನು ನೋಡಿದ್ದೇನೆ. ಇದು ಕೇವಲ ಪ್ರೀತಿ ಅಷ್ಟೇʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಬೆಂಗಳೂರಿನ ಟ್ರಾಫಿಕ್‌ನಲ್ಲಿ ನಾಯಿ ಜೊತೆ ಇದ್ರೆ ನಿಜಕ್ಕೂ ಹೊತ್ತು ಕಳಿಯೋದು ತಿಳಿಯೊಲ್ಲʼ ಎಂದು ಎರಡನೇ ವ್ಯಕ್ತಿ ಕಾಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ʼಎಷ್ಟು ಮುದ್ದಾಗಿದೆ ಈ ದೃಶ್ಯʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇದು ನನ್ನ ಹೃದಯ ಕಸಿಯಿತುʼ ಎಂದು ಮನತುಂಬಿ ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)