Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನಿಸಿ-viral news brain teaser 90 percent people failed to answer this maths puzzle could you able to find social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನಿಸಿ

Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಗಣಿತದ ಪಜಲ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನಿಸಿ

ಗಣಿತದ ಪಜಲ್‌ಗಳನ್ನು ಬಿಡಿಸುವುದು ನಮಗೆ ಮೋಜಿನ ಸಂಗತಿಯಾದ್ರೂ ಕೂಡ ಇವು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲಿರುವ ಪಜಲ್‌ಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತದ ಪಜಲ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುತ್ತವೆ. ಕೆಲವೊಮ್ಮೆ ಎಷ್ಟೇ ಯೋಚಿಸಿದ್ರೂ ಇದಕ್ಕೆ ಉತ್ತರ ಹುಡುಕುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ನೋಡಿದ ತಕ್ಷಣ ಉತ್ತರ ಹೊಳೆಯುತ್ತದೆ. ಆದರೆ ಉತ್ತರ ಸಿಗದಿದ್ದಾಗ ಅದಕ್ಕೆ ಉತ್ತರ ಹುಡುಕುವವರೆಗೂ ನೆಮ್ಮದಿ ಇರುವುದಿಲ್ಲ. ಅಂತಹ ಪಜಲ್‌ವೊಂದು ಇಲ್ಲಿದೆ.

ಇದು ಸ್ವಲ್ಪ ಟ್ರಿಕ್ಕಿ ಪಜಲ್ ಅನ್ನಿಸುವುದು ಸುಳ್ಳಲ್ಲ. ಹಣ್ಣುಗಳ ಮೌಲ್ಯ ಕಂಡುಹಿಡಿಯುವುದು ನಿಮಗಿರುವ ಸವಾಲು. ಇದರಲ್ಲಿ ಸ್ಟ್ರಾಬೆರಿ, ಬಾಳೆಹಣ್ಣು ಹಾಗೂ ಪೈನಾಪಲ್ ಇದೆ. ಪ್ರತಿ ಹಣ್ಣನ್ನು ಇನ್ನುಳಿದ ಎರಡು ಹಣ್ಣುಗಳ ಒಟ್ಟು ಮೊತ್ತದ ಜೊತೆ ಭಾಗಿಸಬೇಕು. ಈ ಎಲ್ಲದರ ಒಟ್ಟು ಮೊತ್ತ 4 ಆಗುತ್ತದೆ. ಹಾಗಾದರೆ ಪ್ರತಿ ಹಣ್ಣಿನ ಮೌಲ್ಯ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮ್ಮಿಂದ ಸಾಧ್ಯವೇ ಎಂದು ಪ್ರಯತ್ನಿಸಿ. ನಿಮಗಿರುವುದು ಕೇವಲ 12 ಸೆಕೆಂಡ್ ಸಮಯ.

Julia Galef ಎನ್ನುವವರು ಈ ಬ್ರೈನ್ ಟೀಸರ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ತಿಂಗಳು ಇವರು ಈ ಪೋಸ್ಟ್ ಪ್ರಕಟಿಸಿದ್ದಾರೆ. ಇಲ್ಲಿಯವರೆಗೆ ಹಲವರು ಈ ಪೋಸ್ಟ್ ನೋಡಿದ್ದು 170ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 80ಕ್ಕೂ ಹೆಚ್ಚು ಮಂದಿ ರೀಪೋಸ್ಟ್ ಮಾಡಿದ್ದಾರೆ. ಹಲವರು ಇದಕ್ಕೆ ಉತ್ತರ ಹೇಳುವುದು ಅಸಾಧ್ಯ ಎಂದರೆ ಕೆಲವರು ಪ್ರಶ್ನೆಯೇ ಅಸಾಧ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ಈ ಪ್ರಶ್ನೆಗೆ ನಿಮ್ಮ ಉತ್ತರವೇನು ತಿಳಿಸಿ.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಒಟ್ಟಾರೆ ನಮ್ಮ ಮನಸ್ಥಿತಿ ಸುಧಾರಿಸುತ್ತದೆ. ಮನಸ್ಸು ಚುರುಕಾಗುತ್ತದೆ. ಹಾಗಾಗಿ ಪ್ರತಿದಿನ ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 96+2=32, 64+4=24, ಆದ್ರೆ, 42+9= ಎಷ್ಟು? ಗಣಿತಪ್ರೇಮಿ ನೀವಾದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದ ಪಜಲ್‌ಗಳನ್ನು ಬಿಡಿಸುವುದು ನಿಮಗೆ ಇಷ್ಟವಾದ್ರೆ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಬ್ರೈನ್ ಟೀಸರ್‌ನಲ್ಲಿರುವ ಪಜಲ್ ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಇರುವುದು ಕೇವಲ ಕೂಡಿಸುವ ಲೆಕ್ಕಾಚಾರ. ನೀವು ಗಣಿತಪ್ರೇಮಿ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ 12 ಸೆಕೆಂಡ್‌ ಒಳಗೆ ಉತ್ತರ ಹೇಳಿ.

Brain Teaser: ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ಈ ಬ್ರೈನ್ ಟೀಸರ್‌ಗೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್

ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಹಣ್ಣುಗಳ ಚಿತ್ರವನ್ನು ಹೊಂದಿರುವ ಈ ಬ್ರೈನ್ ಟೀಸರ್‌ಗೆ ನೀವು 30 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು...

mysore-dasara_Entry_Point