ಕನ್ನಡ ಸುದ್ದಿ  /  Lifestyle  /  Viral News Brain Teaser Are You Smart Enough To Solve This Elementary School Level Puzzle Social Media Viral Rst

Brain Teaser: 9ರಲ್ಲಿ 5 ಗುಣಿಸಿ 8 ಕಳೆದು 6 ರಿಂದ ಭಾಗಿಸಿದ್ರೆ ಎಷ್ಟಾಗುತ್ತೆ? ಗಣಿತ ಸುಲಭ ಅನ್ನೋರು ಉತ್ತರ ಹೇಳಿ

ನಂಗೆ ಗಣಿತ ಅಂದ್ರೆ ಇಷ್ಟ, ಗಣಿತದ ಸೂತ್ರಗಳನ್ನು ಬಿಡಿಸೋದು ನೀರು ಕುಡಿದಷ್ಟೇ ಸುಲಭ ಅನ್ನೋರಿಗಾಗಿ ಇಲ್ಲೊಂದು ಪಜಲ್‌ ಇದೆ. ಇದಕ್ಕೆ ಉತ್ತರ ಹೇಳಿದ್ರೆ ನೀವು ಖಂಡಿತ ಗಣಿತದಲ್ಲಿ ಜಾಣರು ಅನ್ನೋದ್ರಲ್ಲಿ ಅನುಮಾನವಿಲ್ಲ. ಇನ್ಯಾಕೆ ತಡ ಪ್ರಶ್ನೆ ಇಲ್ಲಿದೆ ನೋಡಿ.

9ರಲ್ಲಿ 5 ಗುಣಿಸಿ 8 ಕಳೆದು 6 ರಿಂದ ಭಾಗಿಸಿದ್ರೆ ಎಷ್ಟಾಗುತ್ತೆ? ಗಣಿತ ಸುಲಭ ಅನ್ನೋರು ಉತ್ತರ ಹೇಳಿ
9ರಲ್ಲಿ 5 ಗುಣಿಸಿ 8 ಕಳೆದು 6 ರಿಂದ ಭಾಗಿಸಿದ್ರೆ ಎಷ್ಟಾಗುತ್ತೆ? ಗಣಿತ ಸುಲಭ ಅನ್ನೋರು ಉತ್ತರ ಹೇಳಿ

ಗಣಿತದ ಪಜಲ್‌ಗಳು ಸೂತ್ರಗಳನ್ನು ಬಿಡಿಸುವುದು ಎಲ್ಲರಿಗೂ ಸುಲಭವಲ್ಲ. ಇದೊಂಥರ ಥ್ರಿಲ್ಲಿಂಗ್‌ ಅನ್ನಿಸೋದು ಸುಳ್ಳಲ್ಲ. ಒಂದಿಷ್ಟು ಹೊತ್ತಿನ ಕಾಲ ನಮ್ಮ ಮೆದುಳನ್ನು ಹಿಡಿಟ್ಟುಕೊಳ್ಳುವ ಶಕ್ತಿ ಗಣಿತಕ್ಕಿದೆ. ಆದರೆ ಗಣಿತದಲ್ಲಿ ಅಪ್ರತಿಮರು ಅಂದುಕೊಂಡವರಿಗೂ ಕೆಲವೊಮ್ಮೆ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟವಾಗುತ್ತದೆ. ಆದರೆ ಇದಕ್ಕಾಗಿ ನಾವು ಔಟ್‌ ಆಫ್‌ ದಿ ಬಾಕ್ಸ್‌ ಯೋಚನೆ ಮಾಡಬೇಕಿರುವುದು ಸುಳ್ಳಲ್ಲ. ಕೆಲವು ಗಣಿತದ ಪಜಲ್‌ಗಳು ಉತ್ತರ ಹುಡುಕಲು ಸಾಧ್ಯವೇ ಎಲ್ಲ ಎನ್ನುವಷ್ಟು ಜಟಿಲವಾಗಿದ್ದರೂ ಒಂದಿಷ್ಟು ಹೊತ್ತಿನ ಕಾಲ ಯೋಚಿಸಿದರೆ ಖಂಡಿತ ಉತ್ತರ ದೊರೆಯುತ್ತದೆ. ಮೆದುಳಿಗೆ ಸವಾಲು ಹಾಕುವ ಈ ಪಜಲ್‌ಗಳು ಮನಸ್ಸಿಗೆ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ. ಇಂತಹ ಒಂದು ಸೂತ್ರ ಇಲ್ಲಿದೆ.

'Maths Quiz, Game and Puzzles' ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಮ್ಯಾಥ್ಸ್‌ ಪಜಲ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ಈ ಪ್ರಶ್ನೆ ಹೀಗಿದೆ: (9×5-8)/6 ಈ ಪ್ರಶ್ನೆಗೆ ನಿಮ್ಮ ಉತ್ತರವೇನು?. ಈ ಬ್ರೈನ್‌ ಟೀಸರ್‌ ಅನ್ನು ನೀವು ಬಿಡಿಸಬೇಕಿದೆ. ನಿಮ್ಮ ಸಮಯ ಈಗ ಶುರು.

ಕೆಲ ಸಮಯದ ಮುಂಚೆ ಈ ಬ್ರೈನ್‌ ಟೀಸರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾಗಿದೆ. ಆಗಿನಿಂದ ಇಲ್ಲಿಯವರೆಗೆ ಹಲವರು ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ. 37/6 ಎಂದು ಹಲವರು ಈ ಬ್ರೈನ್‌ ಟೀಸರ್‌ಗೆ ಉತರ ಹೇಳಿದ್ದಾರೆ.

ಈ ಸೂತ್ರಕ್ಕೆ ನಿಮ್ಮ ಉತ್ತರ ಏನು?

ಇಂತಹ ಹಲವಾರು ಬ್ರೈನ್‌ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುತ್ತವೆ. ಮೇಲ್ನೋಟಕ್ಕೆ ಇವು ಸುಲಭ ಎನ್ನಿಸಿದರೂ ಉತ್ತರ ಹೇಳುವುದು ಕಷ್ಟ. ಆದರೂ ಇದನ್ನು ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಹಂಚಿಕೊಂಡು ನೀವು ಒಂದಿಷ್ಟು ಹೊತ್ತು ಎಂಜಾಯ್‌ ಮಾಡುವುದು ಮಾತ್ರವಲ್ಲ, ನಿಮ್ಮ ಜ್ಞಾನವನ್ನೂ ಬೆಳೆಸಿಕೊಳ್ಳಬಹುದು.

ವಿಭಾಗ