Brain Teaser: ಚಿತ್ರದಲ್ಲಿರುವ ತಪ್ಪೇನು? 10 ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ನೋಡೋಣ-viral news brain teaser can you able to solve this brain teaser shared on instagram threads social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿರುವ ತಪ್ಪೇನು? 10 ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ನೋಡೋಣ

Brain Teaser: ಚಿತ್ರದಲ್ಲಿರುವ ತಪ್ಪೇನು? 10 ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ನೋಡೋಣ

ಶೇ 99.99 ರಷ್ಟು ಮಂದಿ ಖಂಡಿತ ಇದಕ್ಕೆ ತಪ್ಪು ಉತ್ತರ ನೀಡ್ತಾರೆ ಎಂದು ಬರೆದಿರುವ ಬ್ರೈನ್‌ ಟೀಸರ್‌ ಚಿತ್ರವೊಂದು ಇದೀಗ ಭಾರಿ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಚಿತ್ರದಲ್ಲೇನಿದೆ, ಇದಕ್ಕೆ ಉತ್ತರ ಏನು ಎಂಬುದನ್ನೆಲ್ಲಾ ತಿಳಿಯಬೇಕು ಅಂದ್ರೆ ಮುಂದೆ ಓದಿ.

ಚಿತ್ರದಲ್ಲಿರುವ ತಪ್ಪೇನು?
ಚಿತ್ರದಲ್ಲಿರುವ ತಪ್ಪೇನು? ((Threads/@iam.marcoflores))

ಸಾಮಾಜಿಕ ಜಾಲತಾಣದಲ್ಲಿ ಬ್ರೈನ್‌ ಟೀಸರ್‌ ಚಿತ್ರವೊಂದು ಭಾರಿ ವೈರಲ್‌ ಆಗುತ್ತಿದೆ. ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ʼಶೇ 99.99ರಷ್ಟು ಜನರು ಉತ್ತರ ಹೇಳುವಲ್ಲಿ ಸೋಲುತ್ತಾರೆʼ ಎಂದು ಚಿತ್ರದಲ್ಲಿ ಬರೆಯಲಾಗಿದೆ. ಪ್ರಶ್ನೆ ಇರುವುದು ಇಷ್ಟೇ. ಈ ಬ್ರೈನ್‌ ಟೀಸರ್‌ನಲ್ಲಿರುವ ಚಿತ್ರದಲ್ಲಿ ತಪ್ಪೇನಿದೆ ಎಂಬುದನ್ನು ನೀವು ಹುಡುಕಬೇಕು. ತಪ್ಪು ಹುಡುಕೋದ್ರಲ್ಲಿ ನೀವು ಜಾಣರಾದ್ರೆ ಈಗಲೇ ಚಿತ್ರದಲ್ಲಿ ತಪ್ಪೇನಿದೆ ಹುಡುಕಿ ಉತ್ತರ ಹೇಳಿ. ಇದು ನಿಮ್ಮ ಮೆದುಳಿಗೆ ಚಾಲೆಂಜ್‌ ಮಾಡುವಂತಿರುವುದು ಸುಳಲ್ಲ.

ʼಈ ಚಿತ್ರದಲ್ಲಿ ತಪ್ಪೇನಿದೆ? ತಿಳಿಸಿʼ ಎಂದು ಶೀರ್ಷಿಕೆ ಬರೆದುಕೊಂಡು ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಂದು ವರ್ಕ್‌ ಟೇಬಲ್‌ ಇದ್ದು ಅದರ ಮೇಲೆ ಲ್ಯಾಪ್‌ಟಾಪ್‌ ಇರಿಸಲಾಗಿದೆ. ಜೊತೆಗೆ ಒಂದು ಮೌಸ್‌, ಪ್ರಿಂಟರ್‌ ಹಾಗೂ ಲ್ಯಾಂಡ್‌ಲೈನ್‌ ಫೋನ್‌ ಕೂಡ ಇದೆ. ಟೇಬಲ್‌ ಮೇಲೆ ಒಂದು ಕ್ಯಾಲೆಂಡರ್‌ ಹಾಗೂ 1ಕಪ್‌ ಟೀ ಕೂಡ ಕಾಣಿಸುತ್ತದೆ. ಟೇಬಲ್‌ ಮುಂದೆ ಕುರ್ಚಿ ಇದೆ. ಈ ಎಲ್ಲ ಇರುವ ಕೋಣೆಯಲ್ಲಿ ಒಂದು ತಪ್ಪಿದೆ. ಇದು ಏನು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ನಿಮ್ಮಿಂದ ಸಾಧ್ಯವೇ?

ಈ ಬ್ರೈನ್‌ ಟೀಸರ್‌ ಅನ್ನು ಇಂದು ಬೆಳಗ್ಗೆ ಪೋಸ್ಟ್‌ ಮಾಡಲಾಗಿದ್ದು, ಈಗಾಗಲೇ ಹಲವರು ವೀಕ್ಷಿಸಿದ್ದು, 200 ಮಂದಿ ಲೈಕ್‌ ಮಾಡಿದ್ದಾರೆ. ಕೆಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಜನರ ಪ್ರತಿಕ್ರಿಯೆ ಹೀಗಿದೆ ನೋಡಿ

ʼಮೊದಲನೇ ತಪ್ಪು ಚಿತ್ರದಲ್ಲಿ ಜೂನ್‌ 31 ಎಂಬ ದಿನಾಂಕವಿದೆ. ಎರಡನೇದು ಲ್ಯಾಪ್‌ಟಾಪ್‌ನಲ್ಲಿ ಸ್ಪೇಸ್‌ ಬಾರ್‌ ಇಲ್ಲʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಟೈಮರ್‌ ಗಾಳಿಯಲ್ಲಿ ತೇಲಾಡುತ್ತಿರುವುದುʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಖಂಡಿತವಾಗಿಯೂ ಜೂನ್‌ 31, ಯಾಕಂದ್ರೆ ಜೂನ್‌ ತಿಂಗಳಲ್ಲಿ ಇರುವುದು ಬರೀ 30 ದಿನʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಜೂನ್‌ ತಿಂಗಳಲ್ಲಿ 31 ಬರಲು ಸಾಧ್ಯವೇ ಇಲ್ಲʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ತಮಗೆ ಅನ್ನಿಸಿದ, ತಾವು ಕಂಡುಕೊಂಡ ತಪ್ಪುಗಳನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ. ಹಾಗಾದ್ರೆ ಈ ಚಿತ್ರವನ್ನು ಗಮನಿಸಿ. ಇದ್ರಲ್ಲಿ ನಿಮಗೇನು ತಪ್ಪು ಕಾಣಿಸಿತು ಕಾಮೆಂಟ್‌ ಮಾಡಿ.

ಇದನ್ನೂ ಓದಿ: Brain Teaser: ಹಸು ಖರೀದಿ ಮಾಡಿ, ಮಾರಾಟ ಮಾಡುವ ಸುಂದರ ಗಳಿಸಿದ ಲಾಭವೆಷ್ಟು; ಈ ಲೆಕ್ಕ ನಿಮ್ಮ ತಲೆಗೆ ಹುಳ ಬಿಡೋದು ಪಕ್ಕಾ

ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದೊಂಥರ ಮಜಾ ಇರುವುದು ಸುಳ್ಳಲ್ಲ. ಕ್ಯಾಲ್ಕುಲೆಟರ್‌ ಬಳಸದೇ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಬೇಕು. ದನ ಮಾರುವ ಸುಂದರನಿಗೆ ಎಷ್ಟು ಲಾಭ ಆಯ್ತು ಎಂಬುದನ್ನ ನೀವು ಕಂಡುಹಿಡಿಯಬೇಕು.

Brain Teaser: 3ಕ್ಕೆ 3 ಕೂಡಿಸಿದ್ರೆ 36 ಆದ್ರೆ, 6ಕ್ಕೆ 7 ಕೂಡಿಸಿದ್ರೆ ಎಷ್ಟು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಟ್ರೈ ಮಾಡಿ

ಗಣಿತಪ್ರೇಮಿಗಳಿಗಾಗಿ ಇಲ್ಲೊಂದು ಹೊಸ ಬ್ರೈನ್‌ ಟೀಸರ್‌ ಇದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಈ ಸುಲಭ ಗಣಿತದ ಪಜಲ್‌ಗೆ ಉತ್ತರ ಹುಡುಕಲು ಜನ ಮೆದುಳಿಗೆ ಹುಳ ಬಿಟ್ಟುಕೊಂಡಿರುವುದು ಸುಳ್ಳಲ್ಲ. 6ಕ್ಕೆ 7 ಕೂಡಿಸಿದ್ರೆ ಎಷ್ಟು ಅಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

mysore-dasara_Entry_Point