ಕನ್ನಡ ಸುದ್ದಿ  /  Lifestyle  /  Viral News Brain Teaser Can You Answer This School-level Maths Puzzle Without Using A Calculator Social Media Viral Rst

Brain Teaser: ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕ್ಯಾಲ್ಕುಲೆಟರ್‌ ಬಳಸದೆ ಉತ್ತರ ಹೇಳ್ಬೇಕು; ನಿಮ್ಮಿಂದ ಸಾಧ್ಯನಾ ನೋಡಿ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾದ ಸರಳ ಗಣಿತದ ಸೂತ್ರವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಯಾಕೆಂದರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಬೇಕು. ಇದು ನಿಜಕ್ಕೂ ಚಾಲೆಂಜ್‌ ಅನ್ನಿಸೋದು ಸುಳ್ಳಲ್ಲ.

ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕಾಲ್ಕುಲೆಟರ್‌ ಬಳಸದೇ ಉತ್ತರ ಹೇಳ್ಬೇಕು
ಇಲ್ಲಿದೆ ಕೂಡಿಸಿ, ಭಾಗಿಸುವ ಸುಲಭ ಗಣಿತ; ಆದ್ರೆ ಕಾಲ್ಕುಲೆಟರ್‌ ಬಳಸದೇ ಉತ್ತರ ಹೇಳ್ಬೇಕು

ನಿಮ್ಮ ಮನಸ್ಸು ಸದಾ ಕ್ರಿಯಾಶೀಲವಾಗಿ ಇರಬೇಕು ಅಂತಿದ್ರೆ ನೀವು ಆಗಾಗ ಬ್ರೈನ್‌ ಟೀಸರ್‌, ಗಣಿತದ ಪಜಲ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು. ಇದು ನಮ್ಮ ಮೆದುಳನ್ನು ಒಂದಿಷ್ಟು ಹೊತ್ತಿನ ಕಾಲ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಕಣ್ಣು ಹಾಗೂ ಮೆದುಳು ಎರಡೂ ಚುರುಕಾಗುವುದು ಸುಳ್ಳಲ್ಲ. ನಿಮ್ಮಲ್ಲಿ ನಿಮ್ಮ ಕುಶಾಗ್ರಮತಿಯನ್ನೂ ಗುರುತಿಸುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಬ್ರೈನ್‌ ಟೀಸರ್‌ಗಳನ್ನು ಹಂಚಿಕೊಳ್ಳಲಾಗುತ್ತದೆ. ಇದಕ್ಕೆ ನೀವು ಉತ್ತರ ಕಂಡುಕೊಳ್ಳುವುದು ಮಾತ್ರವಲ್ಲ, ನಿಮ್ಮ ಸ್ನೇಹಿತರಿಗೂ ಉತ್ತರ ಹೇಳುವಂತೆ ಚಾಲೆಂಜ್‌ ಮಾಡಬಹುದು.

Math Quiz, Game and Puzzles ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿತ್ತು. ಈ ಪುಟದಲ್ಲಿ ಆಗಾಗ ಆಪ್ಟಿಕಲ್‌ ಇಲ್ಯೂಷನ್‌ಗಳು, ಬ್ರೈನ್‌ ಟೀಸರ್‌ಗಳು, ಗಣಿತದ ಪಜಲ್‌ಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಈ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರ ಕಂಡುಕೊಳ್ಳುತ್ತೀರಿ ಎಂಬುದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಇತ್ತೀಚಿನ ಅವರ ಬ್ರೈನ್‌ ಟೀಸರ್‌ನಲ್ಲಿ 2+2÷2X2 ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ.

ಇಂದು (ಮಾರ್ಚ್‌ 12) ಬೆಳಿಗ್ಗೆ ಈ ಪೋಸ್ಟ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಈಗಾಗಲೇ ಹಲವರು ಲೈಕ್‌, ಕಾಮೆಂಟ್‌, ಶೇರ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಿದ್ದಾರೆ. ಸಾಕಷ್ಟು ಮಂದಿ 4 ಎಂದು ಉತ್ತರ ಹೇಳಿದ್ದಾರೆ. ಅವರ ಕಥೆ ಬಿಡಿ, ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು? ನೀವು ನಿಜಕ್ಕೂ ಗಣಿತದಲ್ಲಿ ಎಕ್ಸ್‌ಫರ್ಟ್‌ ಆದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಸೂತ್ರಕ್ಕೆ ಉತ್ತರ ಏನು ಹೇಳಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 9=90 ಆದ್ರೆ, 3= ಎಷ್ಟು? ಗಣಿತದಲ್ಲಿ ಪಂಟರಾದ್ರೆ ಪೆನ್ನು-ಪೇಪರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ

ಇತ್ತೀಚಿಗೆ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದರಲ್ಲಿ ಒಂದು ಗಣಿತದ ಸೂತ್ರವಿದ್ದು, 3ರ ಮೌಲ್ಯ ಎಷ್ಟು ಎಂಬುದನ್ನು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಪೆನ್ನು-ಪೇಪರ್‌ ಬಳಸದೇ ಅದಕ್ಕೆ ಉತ್ತರ ಕಂಡುಹಿಡಿಯಲಯ ಸಾಧ್ಯವೇ? ಟ್ರೈ ಮಾಡಿ.

Brain Teaser: 9ರಲ್ಲಿ 5 ಗುಣಿಸಿ 8 ಕಳೆದು 6 ರಿಂದ ಭಾಗಿಸಿದ್ರೆ ಎಷ್ಟಾಗುತ್ತೆ? ಗಣಿತ ಸುಲಭ ಅನ್ನೋರು ಉತ್ತರ ಹೇಳಿ

ನಂಗೆ ಗಣಿತ ಅಂದ್ರೆ ಇಷ್ಟ, ಗಣಿತದ ಸೂತ್ರಗಳನ್ನು ಬಿಡಿಸೋದು ನೀರು ಕುಡಿದಷ್ಟೇ ಸುಲಭ ಅನ್ನೋರಿಗಾಗಿ ಇಲ್ಲೊಂದು ಪಜಲ್‌ ಇದೆ. ಇದಕ್ಕೆ ಉತ್ತರ ಹೇಳಿದ್ರೆ ನೀವು ಖಂಡಿತ ಗಣಿತದಲ್ಲಿ ಜಾಣರು

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ